ಸನಾತನ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಆಟವಾಡುವ ಆರ್‌ಎಸ್‌ಎಸ್ ನಾಯಕರಂತಹ ಕಪಟಿಗಳಿಂದ ಜನರು ಎಚ್ಚರವಹಿಸಬೇಕು ಎಂದು ಶಾಸಕ ನರೇಂದ್ರಸ್ವಾಮಿ ಆರೋಪಿಸಿದ್ದಾರೆ. ಸಂಘದ ಕಾನೂನುಬದ್ಧತೆ ಮತ್ತು ಸಂವಿಧಾನ ಗೌರವವನ್ನು ಪ್ರಶ್ನಿಸಿ. ಸಂಘದ ಚಟುವಟಿಕೆಗಳನ್ನು ನಿಷೇಧ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಮಂಡ್ಯ (ಅ.12): ನಮ್ಮ ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆ ಕೆಲವು ನಾಯಕರು ಸನಾತನ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಆಟ ಆಡುತ್ತಿದ್ದಾರೆ. ಜನರು ಇಂತಹ 'ಕಪಟಿಗಳಿಂದ' ಎಚ್ಚರಿಕೆ ವಹಿಸಬೇಕು. ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಚಟುವಟಿಕೆಗಳಿಗೆ ಕಡಿವಾಣ ಹಾಕುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ವಿಷಯ ಇದೀಗ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಈ ಕುರಿತು ಮಾತನಾಡಿ, ಆರ್‌ಎಸ್‌ಎಸ್ ಯಾವತ್ತೂ ಕಾನೂನಿನ ಅಡಿಯಲ್ಲಿ ಬಂದಿಲ್ಲ. ಆರ್‌ಎಸ್‌ಎಸ್ ಅಧಿಕೃತವಾದ ಸಂಸ್ಥೆಯೇ? ಯಾವ ಆಕ್ಟ್‌ನಲ್ಲಿ ಅದು ಗುರುತಿಸಿಕೊಂಡಿದೆ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ ಬೃಹತ್ತಾಗಿ ಬೆಳೆದಿರುವ ಸಂಸ್ಥೆಯಾಗಿದ್ದರೂ, ಅದರ ಕಾನೂನು ಮಾನ್ಯತೆಯ ಕುರಿತು ಸ್ಪಷ್ಟತೆ ಇಲ್ಲ. ಆರ್‌ಎಸ್‌ಎಸ್ ಚಟುವಟಿಕೆಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಲು ಸಾಕಷ್ಟು ಸಾಕ್ಷ್ಯಗಳಿವೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲನೊಬ್ಬ ಸನಾತನ ಧರ್ಮದ ಬಗ್ಗೆ ಮಾಡಿದ ಪ್ರತಿಪಾದನೆಯ ಕುರಿತು ಉಲ್ಲೇಖಿಸಿ, ಆತ ಒಬ್ಬ ಆರ್‌ಎಸ್‌ಎಸ್‌ನವನು ಎಂದು ಕಾಣಿಸುತ್ತಿದ್ದಾನೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಮತ್ತು ಬದ್ಧತೆಯನ್ನು ನಾವು ಪ್ರಶ್ನೆ ಮಾಡಬೇಕಿದೆ ಎಂದರು.
ಜನರು ಕಪಟಿಗಳಿಂದ' ಎಚ್ಚರಿಕೆ ವಹಿಸಬೇಕು:
ಸನಾತನ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಕೆಲವರು ಆಟ ಆಡುತ್ತಿದ್ದಾರೆ. ಜನರು ಇಂತಹ 'ಕಪಟಿಗಳಿಂದ' ಎಚ್ಚರಿಕೆ ವಹಿಸಬೇಕು. ಸಂಘಟನೆಗಳ ಅಸಂವಿಧಾನಿಕ ನಡೆಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಜವಾಬ್ದಾರಿ. ನಮ್ಮ ಸರ್ಕಾರವು ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಗುರಿ ಹೊಂದಿದೆ. ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಸಚಿವರು ಮನವಿ ಕೊಟ್ಟಿರುವುದರಿಂದ ಕ್ಯಾಬಿನೆಟ್‌ನಲ್ಲಿ ಆ ಕುರಿತು ಖಂಡಿತವಾಗಿ ಚರ್ಚೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ಆರ್‌ಎಸ್‌ಎಸ್ ಸಂಘಟನೆ ನಾಯಕರು ಸನಾತನ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಕೆಲವರು ಆಟ ಆಡುತ್ತಿದ್ದಾರೆ. ಜನರು ಇಂತಹ 'ಕಪಟಿಗಳಿಂದ' ಎಚ್ಚರಿಕೆ ವಹಿಸಬೇಕು. ಸಂಘಟನೆಗಳ ಅಸಂವಿಧಾನಿಕ ನಡೆಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಜವಾಬ್ದಾರಿ. ನಮ್ಮ ಸರ್ಕಾರವು ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಗುರಿ ಹೊಂದಿದೆ. ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಸಚಿವರು ಮನವಿ ಕೊಟ್ಟಿರುವುದರಿಂದ ಕ್ಯಾಬಿನೆಟ್‌ನಲ್ಲಿ ಆ ಕುರಿತು ಖಂಡಿತವಾಗಿ ಚರ್ಚೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂಘಟನೆಯಲ್ಲಿ ತ್ರಿವರ್ಣ ಧ್ವಜಕ್ಕೆ ಮಾನ್ಯತೆ ಇದೆಯೇ?
ದೇಶದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಂತಹ ಪಕ್ಷಗಳು ನೋಂದಾಯಿತ (ರಿಜಿಸ್ಟರ್) ಸಂಸ್ಥೆಗಳಾಗಿವೆ. ಆದರೆ ಆರ್‌ಎಸ್‌ಎಸ್ ರಿಜಿಸ್ಟರ್ ಸಂಸ್ಥೆ ಅಲ್ಲ. 'ರಾಷ್ಟ್ರಧ್ವಜಕ್ಕೆ ಆರ್‌ಎಸ್‌ಎಸ್‌ನವರು ಯಾವತ್ತಾದರೂ ಮಾನ್ಯತೆ ಕೊಟ್ಟಿದ್ದಾರಾ? ತ್ರಿವರ್ಣಧ್ವಜ ನಮಗೆ ಭಾವನಾತ್ಮಕ ವಿಚಾರ. ಆದರೆ ಆರ್‌ಎಸ್‌ಎಸ್‌ನವರು ಏನನ್ನು ಹೇಳಿಕೊಡುತ್ತಿದ್ದಾರೆ? ಅವರು ಭಾರತ ಮಾತೆಯ ಕೈಯಲ್ಲಿ ಭಗವಾಧ್ವಜವನ್ನು ಹಿಡಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದದ್ದು, ಹೋರಾಟ ಮಾಡಿದ್ದು ತ್ರಿವರ್ಣ ಧ್ವಜದೊಂದಿಗೆ. ಅದನ್ನು ಗೌರವಿಸದವರ ವಿರುದ್ಧ ಏನು ಮಾತನಾಡುವುದು? ಆರ್‌ಎಸ್‌ಎಸ್ ಸಂವಿಧಾನವನ್ನು ಎಂದಾದರೂ ಗೌರವಿಸಿದೆಯೇ ಎಂದು ಪ್ರಶ್ನಿಸಿದರು.
ಇದೇ ವೇಳೆ, ಎಸ್‌ಡಿಪಿಐ ನಿಲುವಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ, 'ಅಸಂವಿಧಾನಿಕ ನಡೆ ಇರುವ ಎಲ್ಲಾ ಸಂಘಟನೆಗಳಿಗೂ ನಮ್ಮ ವಿರೋಧವಿದೆ. ಶಾಸಕ ಮುನಿರತ್ನ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಗಾಂಧಿ ಫೋಟೋ ಹಿಡಿದು ಬಿಜೆಪಿ ಪ್ರತಿಭಟಿಸಿರುವ ಕುರಿತು ಮಾತನಾಡಿದ ಅವರು, 'ಬಿಜೆಪಿಗೂ, ಗಾಂಧಿ, ಗಾಂಧಿ ತತ್ವ, ಸ್ವಾತಂತ್ರ್ಯಕ್ಕೂ ಏನು ಸಂಬಂಧ?' ಎಂದು ಪ್ರಶ್ನಿಸಿದರು.
