Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಎರಡನೇ ವಾರ ಎಲಿಮಿನೇಶನ್ ನಡೆಯಲಿದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಆದರೆ ಕಿಚ್ಚ ಸುದೀಪ್ ಅವರು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಇದು ಅಂತಿಂಥ ಸರ್ಪ್ರೈಸ್ ಅಲ್ಲವೇ ಅಲ್ಲ!
ಶೋ ಶುರುವಾಗಿ ಮೂರನೇ ವಾರ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನ ಮೊದಲ ಫಿನಾಲೆ ನಡೆಯಲಿದೆ. ಆಗ ಮಾಸ್ ಎಲಿಮಿನೇಶನ್ ನಡೆಯಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಫಿನಾಲೆ ನಡೆಯುವ ಮೊದಲೇ ಈಗ ಇರುವ ಸ್ಪರ್ಧಿಗಳಲ್ಲಿ ಮುಕ್ಕಾಲು ಭಾಗ ಸ್ಪರ್ಧಿಗಳು ಹೊರಗಡೆ ಬರಲಿದ್ದಾರೆ ಎಂದು ಕಿಚ್ಚ ಸುದೀಪ್ ಸುಳಿವು ನೀಡಿದ್ದರು. ಆದರೆ ಈಗ ಈ ವಾರ ಎಲಿಮಿನೇಶನ್ ಇಲ್ಲ ಎಂದು ಹೇಳಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ತಂದಿದೆ.
ಪೋಸ್ಟ್ ಏನು?
ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಬಿಗ್ ಬಾಸ್ ಮನೆಯಲ್ಲೇ ಉಳಿಸಲು, JioHotstar appನಲ್ಲಿ ವೋಟ್ ಮಾಡಿ ಎಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅಲ್ಲಿ ನಿರೂಪಕಿ ಜಾಹ್ನವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ, ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್, ಅಶ್ವಿನಿ ಎಸ್, ಎಸ್, ರಾಶಿಕಾ ಶೆಟ್ಟಿ, ಮಂಜು ಭಾಷಿಣಿ ಅವರು ನಾಮಿನೇಟ್ ಆಗಿದ್ದರು. ಆದರೆ ಜಿಯೋಹಾಟ್‌ಸ್ಟಾರ್ ಆಪ್‌ನಲ್ಲಿ ಮಾತ್ರ ಫೈನಲಿಸ್ಟ್ ಎಂದು ಹೇಳಲಾಗಿತ್ತು.
ಹೊರಗಡೆ ಯಾರು ಹೋಗ್ತಿದ್ರು?
ಕೊನೆಯದಾಗಿ ಸ್ಪಂದನಾ ಸೋಮಣ್ಣ ಹಾಗೂ ಮಾಳು ನಿಪನಾಳ ಅವರು ಹೊರಗಡೆ ಹೋಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಮನೆಯಿಂದ ಹೊರಗಡೆ ಹೋಗ್ತೀವಿ ಎಂದು ಸ್ಪಂದನಾ ಬೇಸರ ಕೂಡ ಮಾಡಿಕೊಂಡಿದ್ದರು. ಆದರೆ ಅವರಿಗೆ ದೊಡ್ಡ ಶಾಕ್ ಸಿಕ್ಕಿದೆ.
ಕಿಚ್ಚ ಸುದೀಪ್ ನೀಡಿದ ಸ್ಪಷ್ಟನೆ ಏನು?
“ಜನರು ಮನೆಯಿಂದ ಹೊರಗಡೆ ಹೋಗಬೇಕು ಅಂತ ವೋಟ್ ಮಾಡಿಲ್ಲ, ಫಿನಾಲೆಗೆ ಹೋಗಬೇಕು ಅಂತ ವೋಟ್ ಮಾಡಿದ್ದಾರೆ. ನೀವು ಈಗ ಫಿನಾಲೆಯ ಫೈನಲಿಸ್ಟ್ ಆಗಿದ್ದೀರಿ, ನೀವು ಮೂರನೇ ಫೈನಲಿಸ್ಟ್ ಜೋಡಿ ಎಂದುಕೊಳ್ಳಿ. ನಿಮಗೆ ಮುಂದಿನ ವಾರ ಇಮ್ಯುನಿಟಿ ಸಿಗತ್ತೆ” ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಮಾಳು ನಿಪನಾಳ ಏನಂದ್ರು?
ಮಾಳು ನಿಪನಾಳ ಅವರು “ಎರಡನೇ ವಾರಕ್ಕೆ ನನಗೆ ಇಲ್ಲಿ ಇಷ್ಟವಾಗುತ್ತಿಲ್ಲ, ಸೆಟ್ ಆಗ್ತಿಲ್ಲ, ಉತ್ತರ ಕರ್ನಾಟಕದವರು, ನಾನು ಹೊರಗಡೆ ಹೋಗಬೇಕು” ಎಂದು ಹೇಳಿದ್ದರು. ಈಗ ಅವರು ಕಿಚ್ಚ ಸುದೀಪ್ ಮಂದೆ ಕ್ಷಮೆ ಕೇಳಿದ್ದು, “ನಾನು ಯಾವಾಗಲೂ ಮನೆಯಿಂದ ದೂರ ಇರುವವನಲ್ಲ, ಈಗಲೇ ದೂರ ಇರೋದು, ಆದರೆ ಮುಂದೆ ಈ ರೀತಿ ಮಾತನಾಡೋದಿಲ್ಲ, ಹೊರಗಡೆ ಹೋಗೋ ಮಾತನಾಡಲ್ಲ” ಎಂದು ಹೇಳಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಆರಂಭದಲ್ಲಿ ಲಾಂಚ್ ಟೈಮ್‌ನಲ್ಲಿ ವೀಕ್ಷಕರ ಮತಗಳ ಆಧಾರದ ಮೇಲೆ ಮಾಳು ನಿಪನಾಳ ಹಾಗೂ ಸ್ಪಂದನಾ ಸೋಮಣ್ಣ ಅವರನ್ನು ಜಂಟಿ ಮಾಡಲಾಗಿತ್ತು. ಇಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಇಬ್ಬರಿಗೂ ಶಿಕ್ಷೆ ಆಗುವುದು.
ಅಂದಹಾಗೆ ಈಗಾಗಲೇ ಆರ್‌ಜೆ ಅಮಿತ್, ಕರಿಬಸಪ್ಪ ಅವರು ಎಲಿಮಿನೇಟ್ ಆಗಿದ್ದಾರೆ.

