ಮುಖದಲ್ಲಾಗುವ ಈ ಬದಲಾವಣೆ ಫ್ಯಾಟಿ ಲಿವರ್ ಸಮಸ್ಯೆಯ ಆರಂಭಿಕ ಚಿಹ್ನೆಗಳು
Fatty Liver Symptoms: ಈ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಗಮನಿಸಿದರೆ ಫ್ಯಾಟಿ ಲಿವರ್ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬಹುದು. ಇಲ್ಲಿ ಆರಂಭಿಕ ಚಿಹ್ನೆಗಳನ್ನು ವಿವರಿಸುತ್ತೇವೆ. ನೀವು ಈ ಲಕ್ಷಣಗಳನ್ನು ಗಮನಿಸಿದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.

ಸ್ಪಷ್ಟವಾಗಿ ಗೋಚರಿಸುತ್ತವೆ ಲಕ್ಷಣಗಳು
ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆಗಳು ಸಾಮಾನ್ಯವಾಗಿದೆ. ಯಕೃತ್ತಿನಲ್ಲಿ ಅಂದರೆ ಲಿವರ್‌ನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾದಾಗ ಫ್ಯಾಟಿ ಲಿವರ್ ಸಮಸ್ಯೆಗಳು ಉಂಟಾಗುತ್ತವೆ. ಫ್ಯಾಟಿ ಲಿವರ್ ಸಮಸ್ಯೆ ಪ್ರಾರಂಭವಾದಾಗ, ದೇಹದಲ್ಲಿ ಯಾವುದೇ ಲಕ್ಷಣಗಳು ಅಥವಾ ಬದಲಾವಣೆಗಳು ಕಾಣದ ಕಾರಣ ನಾವು ಹೆಚ್ಚಾಗಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಸಮಸ್ಯೆಯನ್ನು ನಿರ್ಲಕ್ಷಿಸುತ್ತೇವೆ. ನಂತರ ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಫ್ಯಾಟಿ ಲಿವರ್ ಸಮಸ್ಯೆ ಪ್ರಾರಂಭವಾದಾಗ ಅದರ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಆರೋಗ್ಯ ತಜ್ಞರು ನಂಬುತ್ತಾರೆ. ಈ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಗಮನಿಸಿದರೆ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬಹುದು. ಇಲ್ಲಿ ಆರಂಭಿಕ ಚಿಹ್ನೆಗಳನ್ನು ವಿವರಿಸುತ್ತೇವೆ. ನೀವು ಇದನ್ನು ಗುರುತಿಸಿದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
ಕಣ್ಣುಗಳಲ್ಲಿ ಹಳದಿ ಬಣ್ಣ
ಆರೋಗ್ಯ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ಸಮಸ್ಯೆ ಪ್ರಾರಂಭವಾದಾಗ ಅದರ ಪರಿಣಾಮಗಳು ನಮ್ಮ ಕಣ್ಣುಗಳ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನಮ್ಮ ಕಣ್ಣುಗಳು ಬಿಳಿ ಬಣ್ಣಕ್ಕೆ ಬದಲಾಗಿ ಹಳದಿ ಬಣ್ಣದಲ್ಲಿ ಕಾಣಿಸಬಹುದು. ಕೆಲವೊಮ್ಮೆ ಈ ಬಣ್ಣವು ಸಾಕಷ್ಟು ಲೈಟಾಗಿರುತ್ತದೆ, ಇದರಿಂದಾಗಿ ಸಮಸ್ಯೆಯನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ.
ತುಟಿ ಬಣ್ಣದಲ್ಲಿ ಬದಲಾವಣೆ
ನಿಮ್ಮ ತುಟಿಗಳು ಸ್ವಲ್ಪ ಬಣ್ಣ ಕಳೆದುಕೊಂಡರೆ ಅಥವಾ ನೀಲಿ ಬಣ್ಣಕ್ಕೆ ತಿರುಗಿದರೆ ನೀವು ಜಾಗರೂಕರಾಗಿರಬೇಕು. ಇದು ಸಂಭವಿಸುತ್ತಿದ್ದರೆ, ಅದು ನಿಮ್ಮ ಯಕೃತ್ತಿನ ಕಾರ್ಯನಿರ್ವಹಣೆಯಲ್ಲಿನ ಸಮಸ್ಯೆಯ ಸಂಕೇತವಾಗಿರಬಹುದು.
ಮುಖದಲ್ಲಿ ಊತ
ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ಕಣ್ಣುಗಳ ಕೆಳಗೆ ಅಥವಾ ಕೆನ್ನೆಗಳಲ್ಲಿ ಇದ್ದಕ್ಕಿದ್ದಂತೆ ಊತ ಕಂಡುಬಂದರೆ, ಅದು ನಿಮಗೆ ಫ್ಯಾಟಿ ಲಿವರ್ ಇದೆ ಎಂಬುದರ ಸೂಚನೆಯಾಗಿರಬಹುದು. ಈ ಲಕ್ಷಣಗಳು ಕಂಡುಬಂದರೆ ಜಾಗರೂಕರಾಗಿರುವುದು ಉತ್ತಮ.
ಮುಖದಲ್ಲಿ ಬಿಳಚುವಿಕೆ
ನಿಮ್ಮ ಮುಖದಲ್ಲಿ ಹಳದಿ ಬಣ್ಣ ಕಂಡುಬಂದರೆ ಅದು ಫ್ಯಾಟಿ ಲಿವರ್ ಸಮಸ್ಯೆಯನ್ನು ಸಹ ಸೂಚಿಸುತ್ತದೆ. ನಿಮ್ಮ ಮುಖವು ಸಾಮಾನ್ಯವಾಗಿಲ್ಲದೆ ಹಳದಿ ಬಣ್ಣ ಹೊಂದಿದ್ದರೆ ಅದು ಲಿವರ್ ಸಮಸ್ಯೆಯನ್ನು ಸೂಚಿಸುತ್ತದೆ. ಹಾಗಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಚರ್ಮದ ಅತಿಯಾದ ಎಣ್ಣೆಯುಕ್ತತೆ
ಆರೋಗ್ಯ ತಜ್ಞರ ಪ್ರಕಾರ, ಅತಿಯಾದ ಎಣ್ಣೆಯುಕ್ತ ಚರ್ಮವು ಫ್ಯಾಟಿ ಲಿವರ್ ಸಮಸ್ಯೆಯನ್ನು ಸಹ ಸೂಚಿಸುತ್ತದೆ. ನಿಮ್ಮ ಮುಖವು ಅತಿಯಾಗಿ ಎಣ್ಣೆಯುಕ್ತವಾಗುತ್ತಿದ್ದರೆ ಅಥವಾ ಮೊಡವೆಗಳು ಕಾಣಿಸಿಕೊಳ್ಳುತ್ತಿದ್ದರೆ ನೀವು ಸಮಯಕ್ಕೆ ಸರಿಯಾಗಿ ಜಾಗರೂಕರಾಗಿರಬೇಕು.