- Home
- Entertainment
- TV Talk
- ರಾಜಮಾತೆ ಅಶ್ವಿನಿ ಗೌಡಗೆ ' ಡವ್ ರಾಣಿ' ಕಿರೀಟ; ಸ್ಪರ್ಧಿಗಳು ಕೊಟ್ಟ ಕಾರಣ ಒಂದೊಂದು ಡೈರೆಕ್ಟ್ ಹಿಟ್
ರಾಜಮಾತೆ ಅಶ್ವಿನಿ ಗೌಡಗೆ ' ಡವ್ ರಾಣಿ' ಕಿರೀಟ; ಸ್ಪರ್ಧಿಗಳು ಕೊಟ್ಟ ಕಾರಣ ಒಂದೊಂದು ಡೈರೆಕ್ಟ್ ಹಿಟ್
Ashwini Gowda Dove Rani title: ಬಿಗ್‌ಬಾಸ್ ಕನ್ನಡ ಸೀಸನ್ 12ರ ಎರಡನೇ ವಾರದ ಸೂಪರ್ ಸಂಡೇ ಸಂಚಿಕೆಯಲ್ಲಿ, ಬಹುತೇಕ ಸ್ಪರ್ಧಿಗಳು ಅಶ್ವಿನಿ ಗೌಡ ಅವರಿಗೆ 'ಡವ್ ರಾಣಿ' ಎಂಬ ಕಿರೀಟವನ್ನು ತೊಡಿಸಿದ್ದಾರೆ.

ಡವ್ ರಾಣಿ ಕಿರೀಟ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಎರಡನೇ ವಾರದ ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಸಂಚಿಕೆಯಲ್ಲಿ ಬಹುತೇಕ ಸ್ಪರ್ಧಿಗಳು ಅಶ್ವಿನಿ ಗೌಡ ಅವರಿಗೆ 'ಡವ್ ರಾಣಿ' ಎಂಬ ಕಿರೀಟವನ್ನು ತೊಡಿಸಿದ್ದಾರೆ. ಈ ಕಿರೀಟ ಯಾಕೆ ನೀಡುತ್ತಿದ್ದೇವೆ ಎಂಬುದಕ್ಕೆ ಸ್ಪರ್ಧಿಗಳು ತಮ್ಮದೇ ಕಾರಣಗಳನ್ನು ನೀಡಿದ್ದಾರೆ.
ಕಿರೀಟ
ಸ್ಪರ್ಧಿಗಳ ಮುಂದೆ ಹಲವು ಕಿರೀಟಗಳನ್ನು ಇರಿಸಲಾಗಿದೆ. ಡವ್ ರಾಣಿ, ಬೇಜಾವಾಬ್ದಾರಿ ಸೇರಿದಂತೆ ಹಲವು ಸ್ಟಿಕ್ಕರ್ ಸಹ ನೀಡಲಾಗಿದೆ. ತಮ್ಮ ಆಯ್ಕೆಯ ಸ್ಟಿಕ್ಕರ್ ತೆಗೆದುಕೊಂಡು ಕಿರೀಟಕ್ಕೆ ಅಂಟಿಸಿ, ಅದನ್ನು ಸಹಸ್ಪರ್ಧಿಗೆ ನೀಡಬೇಕಾಗುತ್ತದೆ.
ಸಿಂಪತಿ ಕ್ರಿಯೇಟ್
ಕಿರೀಟದ ಮೇಲೆ 'ಡವ್ ರಾಣಿ' ಸ್ಟಿಕ್ಕರ್ ಅಂಟಿಸಿ ಕಾವ್ಯಾ ಅವರಿಗೆ ಅಶ್ವಿನಿ ಗೌಡ ನೀಡುತ್ತಾರೆ. ಟಾಯ್ಲೆಟ್ ಕ್ಲೀನ್ ಮಾಡೋಕೆ ಹೇಳಿದ್ರೆ ಅತ್ತು ಸಿಂಪತಿ ಕ್ರಿಯೇಟ್ ಮಾಡುತ್ತಾರೆ ಎಂದು ಅಶ್ವಿನಿ ಗೌಡ ಕಾರಣ ನೀಡುತ್ತಾರೆ. ಕಾಕ್ರೋಚ್ ಸುಧಿ ಮತ್ತು ಗಿಲ್ಲಿ ನಟ ಅವರಿಗೆ ಬೇಜಾವಾಬ್ದಾರಿ ಕಿರೀಟ ಸಿಕ್ಕಿದೆ. ಮಂಜು ಭಾಷಿಣಿ ಅವರಿಗೆ ಕುತಂತ್ರಿ ಕಿರೀಟ ನೀಡಲಾಗಿದೆ. ಈ ಮೂವರಿಗೆ ಯಾರು ಈ ಕಿರೀಟ ನೀಡಿದ್ದಾರೆ ಎಂಬುದನ್ನು ಪ್ರೋಮೋದಲ್ಲಿ ತೋರಿಸಲಾಗಿಲ್ಲ.
ಒಂದೊಂದು ಕಾರಣ ಮನಸ್ಸಿಗೆ ಡೈರೆಕ್ಟ್ ಹಿಟ್
ತಮ್ಮನ್ನು ಮನೆಯ ಅರಸಿ ಮತ್ತು ರಾಜಮಾತೆ ಎಂದು ಕರೆದುಕೊಳ್ಳುವ ಅಶ್ವಿನಿ ಗೌಡ ಅವರಿಗೆ ಹಲವರು 'ಡವ್ ರಾಣಿ' ಎಂಬ ಕಿರೀಟವನ್ನು ನೀಡಿದ್ದಾರೆ. ಈ ಕಿರೀಟ ನೀಡಿದ ಸ್ಪರ್ಧಿಗಳು ನೀಡಿದ ಒಂದೊಂದು ಕಾರಣಗಳನ್ನು ಕೇಳಿ ಸುದೀಪ್ ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆ ಪುಟ್ಟಿಯ ಪ್ರಯತ್ನಕ್ಕೆ ವೀಕ್ಷಕರ ಮೆಚ್ಚುಗೆ; ಸುದೀಪ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ತಬ್ಬಿಬ್ಬು
ಸ್ಪರ್ಧಿಗಳ ಪ್ರಕಾರ ಅಶ್ವಿನಿ ಗೌಡ 'ಡವ್ ರಾಣಿ' ಯಾಕೆ?
ಸ್ಪಂದನಾ ಸೋಮಣ್ಣ: ಜಗಳ ಆದ್ಮೇಲೆ ಅದನ್ನು ವಿಧ ವಿಧವಾಗಿ ಸ್ವಲ್ಪ ಡವ್ ಮಾಡಿಕೊಂಡು ಹೇಳುತ್ತಾರೆ.
ಗಿಲ್ಲಿ ನಟ: ಬೇಡದೇ ಇರೋ ವಿಷಯಗಳಿಗೂ ಮಧ್ಯೆ ಎಂಟ್ರಿ ಕೊಡುತ್ತಾರೆ. ಅದಕ್ಕೂ ಅವರಿಗೂ ಸಂಬಂಧವೇ ಇರಲ್ಲ.
ಮಂಜು ಭಾಷಿಣಿ: ನಾವು ಅನ್ನೋದೇ ನನ್ನ ತಲೆಯಲ್ಲಿರುತ್ತೆ ಅಂತ ಹೇಳ್ತಾರೆ. ಆದರೆ 'ನಾನು' ಅನ್ನೋದು ಅವರ ಮನಸ್ಸಿನಲ್ಲಿರುತ್ತೆ.
ಇದನ್ನೂ ಓದಿ: ಕನ್ನಡ ಮಾತನಾಡಲು ಬಿಗ್‌ಬಾಸ್ ತಡವರಿಸುವಂತೆ ಮಾಡಿದ್ದು ಮಲ್ಲಮ್ಮ; ಇದು ಹೇಗೆ ಸಾಧ್ಯ? ಕನ್ನಡತಿಯ ಮಾತು ಕೇಳಿ