ಪಾಕ್ ಜಿಂದಾಬಾದ್ ಅಂದ್ರೆ ಢಮ್ ಅಷ್ಟೆ,ಮಾತು ಕೇಳದಿದ್ರೆ ಬುಲ್ಡೋಜರ್, ಯತ್ನಾಳ್ ಬೆಂಕಿ ಭಾಷಣ ಮಾಡಿದ್ದಾರೆ. ಹನುಮಧ್ವಜ ವಿವಾದದ ಮೂಲಕ ಭಾರಿ ಸದ್ದು ಮಾಡಿದ ಕೆರಗೋಡಿನಲ್ಲಿ ಯತ್ನಾಳ್ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿ ಭಾಷಣ ಮಾಡಿದ್ದಾರೆ.
ಕೆರಗೋಡು (ಅ.12) ಹನುಮಧ್ವಜ ವಿವಾದ ಮೂಲಕ ಭಾರಿ ಸದ್ದು ಮಾಡಿದ ಮಂಡ್ಯದ ಕೆರಗೋಡಿನಲ್ಲಿ ಇಂದು ಅದ್ಧೂರಿಯಾಗಿ ಗಣೇಶ ವಿಸರ್ಜನೆ ನಡೆದಿದೆ. ಕೆರಗೋಡಿನ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ ಹಿಂದೂ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೆರಗೋಡು ಹಿಂದೂ ಬಾಂಧವರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಹೂಮಳೆ ಸ್ವಾಗತದ ಮೂಲಕ ಯತ್ನಾಳ್ ಬರಮಾಡಿಕೊಳ್ಳಲಾಗಿತ್ತು. ಕೆರಗೋಡಿನ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ಸರ್ಕಾರ ಬಂದರೆ ಹನುಮಧ್ವಜ ಹಾರಿಸಿಯೇ ಹಾರಿಸ್ತೀವಿ ಎಂದು ಗುಡುಗಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಅಂದರೆ ಢಮ್ ಢಮ್ ಅಷ್ಟೆ
ಕೆರಗೋಡಿನಲ್ಲಿ ಯತ್ನಾಳ್ ಬೆಂಕಿ ಭಾಷಣ ಇದೀಗ ಭಾರಿ ಸದ್ದು ಮಾಡುತ್ತಿದೆ. ಯಾವನಾದರೂ ಪಾಕಿಸ್ತಾನ ಜಿಂದಾಬಾದ್ ಅಂದರೆ ಢಮ್ ಡಮ್ ಅಷ್ಟೇ ಎಂದು ಯತ್ನಾಳ್ ಗುಡುಗಿದ್ದಾರೆ. ನಮ್ಮ ಮಾತು ಕೇಳದಿದ್ದರೆ ಬುಲ್ಡೋಜರ್ ಬರುತ್ತೆ. ಮುಸ್ಲಿಂರು ನಾವು ಹೇಳಿದ್ದನ್ನ ಕೇಳಿಕೊಂಡು ಇರಬೇಕು ಎಂದು ಯತ್ನಾಳ್ ಹೇಳಿದ್ದಾರೆ. ನಮ್ಮ ಪೊಲೀಸರ ಕೈಗೆ ಎಕೆ 47 ಕೊಡುತ್ತೇವೆ. ಪೊಲೀಸರು ಕೊಡೋ ಎಟಿಗೆ ಕುಂಟುತಾ ಬರಬೇಕು ಎಂದು ಯತ್ನಾಳ್ ಎಚ್ಚರಿಸಿದ್ದಾರೆ.
ತ್ರಿವರ್ಣ ಧ್ವಜ ಪಕ್ಕದಲ್ಲೇ ಹನುಮ ಧ್ವಜ
ಕೆರಗೋಡಿನಲ್ಲಿ ಹನುಧ್ವಜ ಭಾರಿ ವಿವಾದ ಸೃಷ್ಟಿಸಿತ್ತು. ನಿಷೇಧಾಜ್ಞೆಗಳು ಜಾರಿಯಾಗಿತ್ತು. ಇದೀಗ ಅದೇ ಕೆರಗೋಡಿಲ್ಲಿ ನಿಂತು ಯತ್ನಾಳ್ ಭಾಷಣ ಮಾಡಿದ್ದಾರೆ. ನಮ್ಮದೇ ಸರ್ಕಾರ ರಚನೆಯಾಗಲಿದೆ. ನಾವು ಹನುಮ ಧ್ವಜ ಹಾರಿಸುತ್ತೇವೆ. ತ್ರಿವರ್ಣ ಧ್ವಜ ಪಕ್ಕದಲ್ಲೇ ಹುನುಮಧ್ವಜ ಹಾರಿಸುತ್ತೇವೆ ಎಂದು ಯತ್ನಾಳ್ ಗುಡುಗಿದ್ದಾರೆ.
ಉತ್ತರ ಪ್ರದೇಶದ ಬುಲ್ಡೋಜರ್ ಬಾಬಾ ನೋಡಿದ್ದೀರಲ್ಲ
ಕೆರಗೋಡಿನಲ್ಲಿ ಮಾತು ಕೇಳದವರಿಗೆ ಬುಲ್ಡೋಜರ್ ಉತ್ತರ ಎಂದು ಗುಡುಗಿದ ಯತ್ನಾಳ್, ಉತ್ತರ ಪ್ರದೇಶದ ಬುಲ್ಡೋಜರ್ ಬಾಬಾ ನೋಡಿದ್ದೀರಲ್ಲಾ ಎಂದು ಪ್ರಶ್ನನಿಸಿದ್ದರೆ. ಈ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶೈಲಿ ಆಡಳಿತ ನಡೆಸುತ್ತೇವೆ ಎಂದು ಯತ್ನಾಳ್ ಸೂಚಿಸಿದ್ದಾರೆ. ಇದೇ ವೇಳೆ ಬುಲ್ಡೋಜರ್ ಬೇಕಾ, ಬೇಡ್ವಾ ಎಂದು ಕೆರಗೋಡು ಗ್ರಾಮಸ್ಥರನ್ನು ಯತ್ನಾಳ್ ಪ್ರಶ್ನಿಸಿದ್ದಾರೆ.
ಕೆರಗೋಡಿಗೆ ಜೆಸಿಬಿಯಲ್ಲಿ ಎಂಟ್ರಿಕೊಟ್ಟಿದ್ದ ಯತ್ನಾಳ್
ಕೆರಗೋಡಿಗೆ ಬಸನಗೌಡಪಾಟೀಲ್ ಯತ್ನಾಳ್ ಜೆಸಿಬಿ ಮೂಲಕ ಎಂಟ್ರಿಕೊಟ್ಟಿದ್ದಾರೆ. ಜೆಸಿಬಿ ಪಕ್ಷ ಕಟ್ಟುತ್ತೇನೆ ಎಂದಿದ್ದ ಯತ್ನಾಳ್ ಇದೀಗ ಜೆಸಿಬಿ ಮೂಲಕ ಕೆರಗೋಡಿಗೆ ಎಂಟ್ರಿಕೊಟ್ಟಿದ್ದಾರೆ. ಮಂಡ್ಯದಿಂದ ಕಾಳಿಕಾಂಬ ದೇವಸ್ಥಾನದಿಂದ ಬೃಹತ್ ಜಾಥಾ ಮೂಲಕ ಕೆರಗೋಡಿಗೆ ಆಗಮಿಸಿದ ಯತ್ನಾಳ್‌ಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಯತ್ನಾಳ್ ಜೊತೆ ಹಿಂದು ಕಾರ್ಯಕರ್ತರ ಬೃಹತ್ ಬೈಕ್ ಜಾಥಾ ನಡೆಸಿದ್ದಾರೆ. ಕೆರಗೋಡಿನಲ್ಲಿ ಯತ್ನಾಳ್‌ಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದ್ದಾರೆ.
