Published : Jun 11, 2026, 06:43 AM ISTUpdated : Jun 11, 2026, 08:37 PM IST

Karnataka News Live: ಮೊದಲ ನೀತಿ ಆಯೋಗದ ಸಭೆಯಲ್ಲೇ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್; ಸಿದ್ದುಗಿಂತ ವಿಭಿನ್ನ ಹೆಜ್ಜೆ!

ಸಾರಾಂಶ

ಬೆಂಗಳೂರು: ಮಳೆ ಅಭಾವದಿಂದಾಗಿ ರಾಜ್ಯದಲ್ಲಿ ಪೂರ್ವ ಮುಂಗಾರಿನ ಬಿತ್ತನೆ ಪ್ರಮಾಣದಲ್ಲಿ ಭಾರೀ ಕುಂಠಿತವಾಗಿದೆ. ಒಟ್ಟಾರೆ 2.78 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಇಲಾಖೆ ಬಿತ್ತನೆ ಗುರಿ ಹೊಂದಿದ್ದು, ಆದರೆ 1.62 ಲಕ್ಷ ಹೆಕ್ಟೇರ್‌ನಲ್ಲಿ(ಶೇ.58) ಮಾತ್ರ ಬಿತ್ತನೆಯಾಗಿದೆ.

51 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತುವ ಗುರಿ ಇತ್ತಾದರೂ 38 ಸಾವಿರ ಹೆಕ್ಟೇರ್‌ನಲ್ಲಿ (ಶೇ.74) ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ 1.51 ಲಕ್ಷ ಹೆಕ್ಟೇರ್‌ನಲ್ಲಿ ಆಹಾರ ಧಾನ್ಯ ಬಿತ್ತನೆ ಅಂದಾಜಿದ್ದು. ಇದಕ್ಕೆ ಬದಲಾಗಿ 77 ಸಾವಿರ ಹೆಕ್ಟೇರ್‌(ಶೇ.51)ನಲ್ಲಿ ಬಿತ್ತನೆಯಾಗಿದೆ. ಸೂರ್ಯಕಾಂತಿ, ಶೇಂಗಾ ಸೇರಿ 26 ಸಾವಿರ ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳ ಬೆಳೆ ಬೆಳೆಯುವ ಅಂದಾಜಿತ್ತು. ಆದರೆ, 16 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿ ಶೇ.42 ರಷ್ಟು ಸಾಧನೆಯಾಗಿದೆ.

ಪೂರ್ವ ಮುಂಗಾರಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 16 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, 28 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.175 ರಷ್ಟು ಸಾಧನೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 6 ಸಾವಿರ ಹೆಕ್ಟೇರ್‌(ಶೇ.71), ಚಾಮರಾಜನಗರ 28 ಸಾವಿರ ಹೆಕ್ಟೇರ್‌(ಶೇ.55), ಮೈಸೂರಿನ 1.63 ಲಕ್ಷ ಹೆಕ್ಟೇರ್‌ ಗುರಿ ಪೈಕಿ ಶೇ.54 ರಷ್ಟು ಬಿತ್ತನೆಯಾಗಿದೆ. ಆದರೆ ಇನ್ನುಳಿದ ಜಿಲ್ಲೆಗಳಲ್ಲಿ ಬಿತ್ತನೆ ಬಹಳಷ್ಟು ಕಡಿಮೆಯಾಗಿದೆ.

08:37 PM (IST) Jun 11

ಮೊದಲ ನೀತಿ ಆಯೋಗದ ಸಭೆಯಲ್ಲೇ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್; ಸಿದ್ದುಗಿಂತ ವಿಭಿನ್ನ ಹೆಜ್ಜೆ!

ಮುಖ್ಯಮಂತ್ರಿಯಾದ ನಂತರ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ನೇತೃತ್ವದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಂತ ಭಿನ್ನವಾದ ಈ ನಡೆಯ ಮೂಲಕ, ಅವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ.
Read Full Story

07:53 PM (IST) Jun 11

ಸೊಸೆ ಮಧು ಗೌಡ ಪ್ರಗ್ನೆಂಟ್;‌ ಮಗನ ಅಫೇರ್; ಕನ್ನಡ ಯುಟ್ಯೂಬರ್‌ ನಿಖಿಲ್‌ ರವೀಂದ್ರಗೆ ಗೂಸ ಕೊಟ್ಟ ತಾಯಿ!‌ ಸತ್ಯ ಬೇರೆ ಇದೆ

Youtuber Madhu Gowda: ಕನ್ನಡದ ಯುಟ್ಯೂಬರ್‌ ನಿಖಿಲ್‌, ನಿಶಾ, ಮಧು ಈ ಬಾರಿ ಜಗಳ ಆಡಿಕೊಂಡಿರೋ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು, ಈಗ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇದರ ಹಿಂದಿನ ಸತ್ಯ ಬೇರೆಯೇ ಇದೆ.

 

Read Full Story

07:38 PM (IST) Jun 11

ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆ - ಡಿಪಿಆರ್ ವರದಿ ಸಿದ್ಧ, ಕಲಬುರಗಿಗೆ ಸಿಗಲಿದೆ ಹೈ-ಸ್ಪೀಡ್ ನಿಲ್ದಾಣ!

ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಪೂರ್ಣಗೊಂಡಿದೆ. ಈ ಹೈ-ಸ್ಪೀಡ್ ಕಾರಿಡಾರ್ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣವನ್ನು ಸಂಪರ್ಕಿಸಲಿದ್ದು, ಕಲಬುರಗಿಯಲ್ಲಿ ಪ್ರಮುಖ ನಿಲ್ದಾಣದೊಂದಿಗೆ ಪ್ರಯಾಣದ ಸಮಯವನ್ನು ಕೇವಲ 3 ಗಂಟೆಗಳಿಗೆ ಇಳಿಸಲಿದೆ.
Read Full Story

07:10 PM (IST) Jun 11

ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭಿಸಲು ಒತ್ತಾಯ, 16 ಗಂಟೆಗಳ ರಸ್ತೆ ಪ್ರಯಾಣಕ್ಕೆ ಮುಕ್ತಿ ಸಿಗುವುದೇ?

ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ವಿಸ್ತರಿಸಲು ಸ್ಥಳೀಯ ಸಂಘಟನೆಗಳು ಸ್ಟಾರ್ ಏರ್ ಸಂಸ್ಥೆಯೊಂದಿಗೆ ಚರ್ಚಿಸಿವೆ. ಈ ಸೇವೆ ಆರಂಭವಾದರೆ 16 ಗಂಟೆಗಳ ಪ್ರಯಾಣದ ಅವಧಿ ತಪ್ಪಲಿದ್ದು, ಪ್ರವಾಸೋದ್ಯಮ ಮತ್ತು ವಾಣಿಜ್ಯಕ್ಕೆ ಅನುಕೂಲವಾಗಲಿದೆ. ಜಾಗತಿಕ ಇಂಧನ ಬೆಲೆ ಏರಿಕೆಯ ಕಾರಣ ಸದ್ಯಕ್ಕೆ ವಿಳಂಬವಾದರೂ, ಸಂಸ್ಥೆಯು ಸಕಾರಾತ್ಮಕ ಭರವಸೆ ನೀಡಿದೆ.
Read Full Story

06:50 PM (IST) Jun 11

Shocking Secret - ಚಂದನ್ ಶೆಟ್ಟಿ ಶಾಕಿಂಗ್ ಸೀಕ್ರೆಟ್ ಬಹಿರಂಗ.. ಈ ಆಲ್‌ರೌಂಡರ್ ಮುಂಗೈನಲ್ಲಿ ಏನಿದೆ ಗೊತ್ತಾ?!

ಅವರ ಎರಡು ಕೈಗಳ ಮೇಲೆ ಇಬ್ಬರು ಜಾಗತಿಕ ಮಟ್ಟದ ದಿಗ್ಗಜರ ಟ್ಯಾಟೂಗಳಿವೆ. ಈ ಟ್ಯಾಟೂಗಳು ಕೇವಲ ಸ್ಟೈಲ್‌ಗಾಗಿ ಹಾಕಿಸಿಕೊಂಡದ್ದಲ್ಲ, ಅದರ ಹಿಂದೆ ಒಂದು ಅದ್ಭುತವಾದ ಕಾರಣ ಇದೆ. ಇಷ್ಟೂ ದಿನ ಕಾಪಾಡಿಕೊಂಡಿದ್ದ ಆ ಸೀಕ್ರೆಟ್ ಏನು ನೋಡಿ..!

Read Full Story

06:37 PM (IST) Jun 11

3.5 ಲಕ್ಷ ರೂಪಾಯಿ Fridge ತಗೊಂಡ ಮಂಗಳೂರಿನ 'ಮಧ್ಯಮ ಕುಟುಂಬ'; ಅದ್ರ ವಿಶೇಷತೆ ನೋಡಿದ್ರೆ ದಂಗಾಗ್ತೀರಾ!

Madhyama Kutumba Youtube Channel: ಮಂಗಳೂರು ಮೂಲದ ಮಧ್ಯಮ ಕುಟುಂಬ ಎಂಬ ಯುಟ್ಯೂಬ್‌ ಚಾನೆಲ್‌ನವರು ಹೊಸ ಮನೆಗೆ ಕಾಲಿಟ್ಟು, ಕೆಲ ತಿಂಗಳುಗಳು ಕಳೆದಿವೆ. ಈಗ ಅವರು ಹೊಸ ಫ್ರಿಡ್ಜ್‌ ತಗೊಂಡಿದ್ದು, ಇದರ ಬೆಲೆ ಹಾಗೂ ಫೀಚರ್‌ ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ.

 

Read Full Story

06:23 PM (IST) Jun 11

ಗದಗ - ಈ ಊರಿನಲ್ಲಿ ಯಾರೇ ಮೃತಪಟ್ಟರು ಮನೆ ಮುಂದೆ ಹಾಜರಾಗೋ ನಾಯಿ, ಸ್ಮಶಾನದವರೆಗೂ ಬಂದು ವಿಧಿವಿಧಾನದಲ್ಲಿ ಭಾಗಿ!

ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಬೀದಿ ನಾಯಿಯೊಂದು ವಿಶಿಷ್ಟ ವರ್ತನೆಯಿಂದ ಗಮನ ಸೆಳೆದಿದೆ. ಗ್ರಾಮದಲ್ಲಿ ಯಾರೇ ಮೃತಪಟ್ಟರೂ, ಈ ಶ್ವಾನವು ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ವಿಧಿವಿಧಾನಗಳು ಮುಗಿಯುವವರೆಗೂ ಸ್ಮಶಾನದಲ್ಲಿಯೇ ಇರುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ನಡವಳಿಕೆಯನ್ನು ಪ್ರದರ್ಶಿಸುತ್ತಿರುವ ಈ ಮೂಕಪ್ರಾಣಿಯ ಸಂಸ್ಕಾರ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
Read Full Story

05:55 PM (IST) Jun 11

Photos - ಮನೆಯಲ್ಲಿ‌ ಪವರ್‌ಫುಲ್ ರುದ್ರ ಪಾರಾಯಣ, ಮೃಜ್ಯುಂಜಯ ಯಾಗ ಮಾಡಿದ ಜೊತೆ ಜೊತೆಯಲಿ ನಟ ಅನಿರುದ್ಧ ಜತ್ಕರ್

Jothe Jotheyali Serial Actor Aniruddha: ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ್‌ ಜತ್ಕರ್‌ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಈ ಸುಂದರ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

05:50 PM (IST) Jun 11

ಧರ್ಮಸ್ಥಳ - 26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ - ಸತೀಶ್ ಆಗಿ ಹೋದವನು ಸಲೀಂ ಆಗಿ ಬಂದ ಕಥೆ!

ಧರ್ಮಸ್ಥಳದಲ್ಲಿ 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸತೀಶ್, ಸಲೀಂ ಅಬ್ದುಲ್ ಅನ್ಸಾರಿ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಬದುಕು ಕಟ್ಟಿಕೊಂಡ ಬಳಿಕ ಮತ್ತೆ ಹುಟ್ಟೂರಿಗೆ ಮರಳಿದ್ದಾರೆ. ತಾಯಿ-ಮಗನ ಭಾವುಕ ಮಿಲನದ ಸಂಪೂರ್ಣ ಕಥೆ ಇಲ್ಲಿದೆ.

Read Full Story

05:42 PM (IST) Jun 11

ಕಾಡುಗೋಡಿ ಮಗು ವೆನ್ನೆಲಾ ಹತ್ಯೆ ಪ್ರಕರಣ - ತಾಯಿ ಪ್ರಿಯಾಂಕ ಕೊನೆಗೂ ಸಕಲೇಶಪುರದಲ್ಲಿ ಬಂಧನ

ಬೆಂಗಳೂರಿನಲ್ಲಿ ಪುಟ್ಟ ಮಗು ವೆನ್ನೆಲಾಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಯಿ ಪ್ರಿಯಾಂಕಳನ್ನು, ನಾಲ್ಕು ದಿನಗಳ ಸತತ ಕಾರ್ಯಾಚರಣೆಯ ನಂತರ ಕಾಡುಗೋಡಿ ಪೊಲೀಸರು ಹಾಸನದ ಸಕಲೇಶಪುರದಲ್ಲಿ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಮಕ್ಕಳ ರಕ್ಷಣಾ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದೆ.
Read Full Story

05:28 PM (IST) Jun 11

ಅಭಿಮಾನಿಗಳು ಶ್ರುತಿ ಎಂದು ಕರೆಯುವ ನಟಿಯ ನಿಜವಾದ ಹೆಸರು ಬೇರೆ - ಬದಲಿಸಿದ್ದು ಕರ್ನಾಟಕದ ಕುಳ್ಳ!

ಕನ್ನಡದ ಜನಪ್ರಿಯ ನಟಿ ಶ್ರುತಿ ಅವರ ನಿಜವಾದ ಹೆಸರು ಗಿರಿಜಾ ಎಂಬುದು ನಿಮಗೆ ಗೊತ್ತಿತ್ತಾ? ಗಿರಿಜಾ ಹೇಗೆ ಶ್ರುತಿ ಆದರು, ಅವರ 175ನೇ ಸಿನಿಮಾ 'ಮದರ್'ವರೆಗೆ ನಡೆದ ಸಿನಿ ಪಯಣದ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

05:09 PM (IST) Jun 11

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್? ಷಡ್ಯಂತ್ರಕ್ಕೆ ಕೇರಳದಿಂದ 200 ಕೋಟಿ ಬಜೆಟ್‌!

ಧರ್ಮಸ್ಥಳದ 'ಬುರುಡೆ ಪ್ರಕರಣ'ದ ಪ್ರಮುಖ ಆರೋಪಿ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಕ್ಷೇತ್ರದ ವಿರುದ್ಧ 200 ಕೋಟಿ ರೂಪಾಯಿಗಳ ಬೃಹತ್ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾನೆ. ಈ ಸಂಚಿನಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳನ್ನು ಉಲ್ಲೇಖಿಸಿದ್ದು, ಎಸ್‌ಐಟಿ ತನಿಖೆಯ ವಿಳಂಬವನ್ನು ಪ್ರಶ್ನಿಸಿದ್ದಾನೆ.
Read Full Story

04:40 PM (IST) Jun 11

ದರ್ಶನ್​ ಬಂಧನಕ್ಕೆ 2 ವರ್ಷ - ಸೆಂಟ್ರಲ್​ ಜೈಲಿನ ಬಿಗ್​ ಬ್ರೇಕಿಂಗ್​! ಪವಿತ್ರಾ ಗೌಡ ಆತ್ಮಚರಿತ್ರೆ ಆರಂಭ-ಮುಂದೇನು

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ-1 ಪವಿತ್ರಾ ಗೌಡ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಚರಿತ್ರೆ ಬರೆಯುತ್ತಿದ್ದಾರೆ ಎನ್ನಲಾಗಿದೆ. ಈ ಆತ್ಮಕಥೆಯಲ್ಲಿ ಅವರು ದರ್ಶನ್ ಜೊತೆಗಿನ ಸಂಬಂಧ ಮತ್ತು ಪ್ರಕರಣದ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಾರೆಯೇ ಎಂಬ ಕುತೂಹಲ ಕಾಡುತ್ತಿದೆ.

Read Full Story

04:36 PM (IST) Jun 11

ಅಬ್ಬಬ್ಬಾ.. ಸಿನಿಮಾ ನನ್ನ ಮೊದಲ ಪ್ರೀತಿ ಎನ್ನುವ ಕಿಚ್ಚ ಸುದೀಪ್ ಒಪ್ಪಿಕೊಂಡಿರುವ ಸಿನಿಮಾಗಳ ಸಂಖ್ಯೆ ಎಷ್ಟು?

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜೂನ್ 26ರಿಂದ ‘ಬಿಲ್ಲಾ ರಂಗ ಬಾಷಾ’ ಶೂಟಿಂಗ್ ಆರಂಭವಾಗಲಿದ್ದು, ಒಟ್ಟಿಗೆ 4 ಹೊಸ ಸಿನಿಮಾಗಳಿಗೆ ಒಪ್ಪಿಗೆ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

Read Full Story

03:16 PM (IST) Jun 11

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ನಮ್ಮ ಮೆಟ್ರೋಗೆ ವಿಸ್ತರಿಸಲು BMCA ಒತ್ತಾಯ

ರಾಜ್ಯ ಸರ್ಕಾರದ ಉಚಿತ ಬಸ್ ಪಾಸ್ ಯೋಜನೆಯನ್ನು ಬೆಂಗಳೂರಿನ ನಮ್ಮ ಮೆಟ್ರೋಗೂ ವಿಸ್ತರಿಸಬೇಕೆಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ (BMCA) ಒತ್ತಾಯಿಸಿದೆ. ಈ ಸೌಲಭ್ಯವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುವುದಲ್ಲದೆ, ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಪ್ರೋತ್ಸಾಹಿಸಿ, ನಗರದ ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಸಂಘವು ಪ್ರತಿಪಾದಿಸಿದೆ.
Read Full Story

02:55 PM (IST) Jun 11

ಪವನ್ ಕಲ್ಯಾಣ್ ಅವರ ಮೊದಲ ಹೆಸರು ಏನಿತ್ತು, ಬದಲಾಗಿದ್ದು ಹೇಗೆ? ಇದರ ಹಿಂದಿದೆ ಭಾರೀ ಸೀಕ್ರೆಟ್!

ಕಲ್ಯಾಣ್ ಅವರ ಮೂಲ ಹೆಸರಿನ ನಾಮಕರಣ ನಡೆದಿದ್ದು ಪವಿತ್ರ ತಿರುಮಲದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ. ಅಂದು ಅವರಿಗೆ ಇಟ್ಟ ಹೆಸರು 'ಶ್ರೀ ಕಲ್ಯಾಣ್ ಕುಮಾರ್'. ಎಷ್ಟೋ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ, ಅವರ ಮನೆಯವರು ಮತ್ತು ಆಪ್ತರು ಇಂದಿಗೂ ಅವರನ್ನು ಪ್ರೀತಿಯಿಂದ 'ಕಲ್ಯಾಣ್' ಎಂದೇ ಕರೆಯುತ್ತಾರೆ.

Read Full Story

01:29 PM (IST) Jun 11

ಶಿಕ್ಷಣ ಏನೇ ಇರಲಿ, ನಮ್ಮ ಮೆಟ್ರೋದಲ್ಲಿ 500ಕ್ಕೂ ಅಧಿಕ ಉದ್ಯೋಗ - 2.06 ಲಕ್ಷ ಮಾಸಿಕ ವೇತನ

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 2026 ರಲ್ಲಿ 500ಕ್ಕೂ ಹೆಚ್ಚು ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟಿಸಿದೆ. ನಿರ್ವಹಣಾಕಾರರು, ರೈಲು ನಿರ್ವಾಹಕರು, ಮತ್ತು ಎಂಜಿನಿಯರ್‌ಗಳಂತಹ ಹುದ್ದೆಗಳಿಗೆ ಐಟಿಐ, ಡಿಪ್ಲೊಮಾ, ಮತ್ತು ಪದವಿ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು, ಇದರಲ್ಲಿ 2.06 ಲಕ್ಷದವರೆಗೆ ವೇತನವಿದೆ.
Read Full Story

12:53 PM (IST) Jun 11

ಗೃಹಲಕ್ಷ್ಮಿ ಹಣ ಸ್ಥಗಿತ - 4.30 ಲಕ್ಷ ಫಲಾನುಭವಿಗಳು ಪಟ್ಟಿಯಿಂದ ಔಟ್! IT, GST ಪೈಲ್ ಮಾಡಿದ ಕುಟುಂಬಕ್ಕೆ ಶಾಕ್!

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, 4.30 ಲಕ್ಷಕ್ಕೂ ಹೆಚ್ಚು ಅಪಾತ್ರ ಮಹಿಳೆಯರನ್ನು ಕೈಬಿಡಲಾಗಿದೆ. ಮೃತಪಟ್ಟವರು ಮತ್ತು ಐಟಿ/ಜಿಎಸ್‌ಟಿ ಪಾವತಿದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಇನ್ಮುಂದೆ ಇವರ ಖಾತೆಗೆ ಮಾಸಿಕ 2,000 ರೂ. ಜಮೆಯಾಗುವುದಿಲ್ಲ.
Read Full Story

12:29 PM (IST) Jun 11

ಬೆಂಗಳೂರಿಗೆ ಬಂತು BMTC 'ಚಕ್ರ' - ಲಕ್ಷಾಂತರ ಮಂದಿ ವರ್ಷಗಳ ಕನಸು ನನಸಾಯ್ತು- ರೂಟ್​ ಹೀಗಿದೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ಜಿಗಣಿ, ಆನೇಕಲ್ ಮತ್ತು ಚಂದಾಪುರ ಪ್ರದೇಶದ ನಿವಾಸಿಗಳ ಅನುಕೂಲಕ್ಕಾಗಿ 'ಚಕ್ರ-3' ಎಂಬ ಹೊಸ ವೃತ್ತಾಕಾರದ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಇದೇ 15ರಿಂದ ಆರಂಭವಾಗಲಿರುವ ಈ ಸೇವೆಯು, 4 ಬಸ್‌ಗಳೊಂದಿಗೆ ದಿನಕ್ಕೆ 28 ಟ್ರಿಪ್‌ಗಳನ್ನು ನಡೆಸಲಿದ್ದು, ಈ ಭಾಗದ ಲಕ್ಷಾಂತರ ಜನರ ಪ್ರಯಾಣದ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿದೆ.
Read Full Story

12:27 PM (IST) Jun 11

ಮಾಳವ್ವ ಹೋಟೆಲ್‌ನಲ್ಲಿ ಊಟಕ್ಕಿಲ್ಲ ಲೆಕ್ಕ; ಇವರೇ ಇಲ್ಲಿ ಜನರಿಗೆ ಅನ್ನಪೂರ್ಣೇಶ್ವರಿ

Viral Video: ಸುಮಾರು 40 ವರ್ಷಗಳಿಂದ ಮಾಳವ್ವ ಎಂಬುವವರು ಹೋಟೆಲ್ ನಡೆಸುತ್ತಿದ್ದಾರೆ. ರುಚಿಕರವಾದ ತಿಂಡಿಗಳಿಗೆ ಮಾತ್ರವಲ್ಲದೆ, ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡಿ, ಜನರ ಪ್ರೀತಿಗೆ ಪಾತ್ರರಾಗಿ 'ಅನ್ನಪೂರ್ಣೇಶ್ವರಿ' ಎನಿಸಿಕೊಂಡಿದ್ದಾರೆ.

Read Full Story

12:09 PM (IST) Jun 11

1978ರ ಸ್ಕೂಲ್ ಮಾರ್ಕ್ಸ್ ಕಾರ್ಡ್ ವೈರಲ್; ವಿಭಿನ್ನ, ವಿಶೇಷತೆಯ ಕೊಪ್ಪಳ ಶಾಲೆಯ ಅಂಕಪಟ್ಟಿ

1978ರ 9ನೇ ತರಗತಿಯ ಅಂಕಪಟ್ಟಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲ್ಲಿಕಾರ್ಜುನ್ ಮೇಟಿ ಎಂಬುವವರು ತಮ್ಮ ಅಂಕಪಟ್ಟಿಯನ್ನು ಹಂಚಿಕೊಂಡು, ಅಂದಿನ ದಿನಗಳಲ್ಲಿ ಹೆಚ್ಚು ಅಂಕಗಳ ಒತ್ತಡವಿರಲಿಲ್ಲ ಮತ್ತು ಪಾಸ್ ಆಗುವುದೇ ದೊಡ್ಡ ಸಂಭ್ರಮವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
Read Full Story

12:08 PM (IST) Jun 11

ಕನ್ನಡ ಚಿತ್ರಕ್ಕೆ ಎಂಟ್ರಿ ಕೊಟ್ಟ ನಟಿ ಐಶ್ವರ್ಯಾ ರಾಜೇಶ್.. ಈ ಪರಭಾಷೆ ಬೆಂಕಿ ಚೆಂಡು ಏನು ಅಂತ ಗೊತ್ತು ತಾನೆ?

ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಕೆಲವು ಪ್ರಮುಖ ನಟರು ಕೂಡ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ.

Read Full Story

12:06 PM (IST) Jun 11

ಕೊಟ್ಟಿಯೂರಿಗೆ ಹೊರಟಿದ್ದ ಕರ್ನಾಟಕ ಪ್ರವಾಸಿಗರಿದ್ದ ಟೆಂಪೊ ಕಣ್ಣೂರು ಬಳಿ ಅಪಘಾತ, 20 ಜನರಿಗೆ ಗಾಯ

ಕೇರಳದ ಕೊಟ್ಟಿಯೂರಿಗೆ ತೆರಳುತ್ತಿದ್ದ ಕರ್ನಾಟಕದ ಪ್ರವಾಸಿಗರಿದ್ದ ಟೆಂಪೊ ಟ್ರಾವೆಲರ್ ಕಣ್ಣೂರು ಬಳಿ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ವಯನಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

11:55 AM (IST) Jun 11

Gruhalakshmi Scheme - ಉತ್ತರ ಕನ್ನಡದಲ್ಲಿ ಬರೋಬ್ಬರಿ 6 ಸಾವಿರಕ್ಕೂ ಹೆಚ್ಚು ಅನರ್ಹರು ಪತ್ತೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರ ಮರುಪರಿಶೀಲನೆ ನಡೆಸುತ್ತಿದೆ. ಆದಾಯ ತೆರಿಗೆ ಪಾವತಿಸುವ 6,380 ಮಂದಿಯನ್ನು ಗುರುತಿಸಲಾಗಿದ್ದು, ಈಗಾಗಲೇ ಮೃತಪಟ್ಟ 5,243 ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.
Read Full Story

11:41 AM (IST) Jun 11

Gruhalakshmi scheme - ಬಳ್ಳಾರಿಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 4,225 ಅನರ್ಹರು ಪತ್ತೆ! ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ?

ಬಳ್ಳಾರಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ 4,225 ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆದಾಯ ತೆರಿಗೆ ಪಾವತಿದಾರರು ಮತ್ತು ಮೃತಪಟ್ಟವರ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತಿರುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರಿಶೀಲನೆ ವೇಳೆ ಪತ್ತೆಹಚ್ಚಲಾಗಿದೆ.
Read Full Story

11:34 AM (IST) Jun 11

ಕಾಡುಗೋಡಿ ಮಗು ಹತ್ಯೆ ಪ್ರಕರಣ - ಕಾರಲ್ಲಿ ಮಗಳ ಹೆಣ ಇಟ್ಟುಕೊಂಡೇ ಕೋಲಾರದಲ್ಲಿ ಪ್ರಿಯಕರನೊಂದಿಗೆ ತಾಯಿಯ ಬರ್ತಡೇ ಆಚರಣೆ!

ಬೆಂಗಳೂರಿನಲ್ಲಿ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗಳನ್ನು ತಾಯಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಮಗುವಿನ ಶವವನ್ನು ಕಾರಿನಲ್ಲಿಟ್ಟುಕೊಂಡೇ ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮಗುವಿನ ತಂದೆ ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ಮರುತನಿಖೆಯಲ್ಲಿ ಈ ಸ್ಫೋಟಕ ಸತ್ಯ ಬಯಲಾಗಿದೆ.
Read Full Story

11:07 AM (IST) Jun 11

ಆರ್‌ಎಸ್‌ಎಸ್ ನೋಂದಣಿ ಮಾಡಿಸಬೇಕು - ಪ್ರಿಯಾಂಕ್ ಹೇಳಿಕೆ ಸಮರ್ಥಿಸಿದ ಎಂಬಿ ಪಾಟೀಲ್!

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಆರ್‌ಎಸ್‌ಎಸ್‌ ನೋಂದಣಿ ಕುರಿತು ಪ್ರಿಯಾಂಕ ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಣ್ಣ ಅಂಗಡಿಗಳಿಗೂ ನೋಂದಣಿ ಕಡ್ಡಾಯವಿರುವಾಗ, ಆರ್‌ಎಸ್‌ಎಸ್‌ನಂತಹ ದೊಡ್ಡ ಸಂಸ್ಥೆ ಯಾಕೆ ನೋಂದಣಿಯಾಗಿಲ್ಲ ಮತ್ತು ಅದರ ಹಣಕಾಸಿನ ಮೂಲ ಯಾವುದು ಎಂದು ಅವರು ಪ್ರಶ್ನಿಸಿದ್ದಾರೆ.
Read Full Story

10:41 AM (IST) Jun 11

ದಾವಣಗೆರೆ - ಕುಕ್ಕವಾದ ಅರಣ್ಯದಲ್ಲಿ ಕಬ್ಬಿಣದ ಅದಿರು ದಂಧೆ ಬಯಲು! ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ನಾಲ್ವರು ಅರೆಸ್ಟ್, ಓರ್ವ ಪರಾರಿ!

ದಾವಣಗೆರೆ ಜಿಲ್ಲೆಯ ಚನ್ನಗಿರಿ ವಲಯ ವ್ಯಾಪ್ತಿಯ ಕುಕ್ಕವಾಡ ಮೀಸಲು ಅರಣ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಕಬ್ಬಿಣದ ಅದಿರು ದಂಧೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

Read Full Story

10:05 AM (IST) Jun 11

Kogilu layout eviction case - ಸರ್ಕಾರ ಮನೆ ಕೊಟ್ಟರೂ ಸ್ಥಳ ಬಿಡದ ಕೋಗಿಲು ನಿವಾಸಿಗಳು!ಅಧಿಕಾರಿಗಳಿಗೆ ಹೊಸ ತಲೆನೋವು

ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ಮನೆ ತೆರವು ಪ್ರಕರಣದಲ್ಲಿ, ಸಂತ್ರಸ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿದರೂ ಅವರು ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

Read Full Story

09:53 AM (IST) Jun 11

ರಾತ್ರಿ 2 ಗಂಟೆಗೆ ಹಾಸ್ಟೆಲ್‌ ನುಗ್ಗಿದವನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಹುಡುಗಿಯರು

ಚಿಕ್ಕಮಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ಗೆ ಮಧ್ಯರಾತ್ರಿ ನುಗ್ಗಿದ್ದ ಯುವಕನನ್ನು ವಿದ್ಯಾರ್ಥಿನಿಯರೇ ಧೈರ್ಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನದ ಉದ್ದೇಶದಿಂದ ಬಂದಿದ್ದ ಆರೋಪಿ ಈ ಹಿಂದೆಯೂ ಇದೇ ರೀತಿ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದ್ದು, ಈ ಘಟನೆಯು ಹಾಸ್ಟೆಲ್ ಭದ್ರತೆಯ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.

Read Full Story

09:31 AM (IST) Jun 11

ತಿಪಟೂರು ಶಾಸಕ ಕೆ. ಷಡಕ್ಷರಿ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು; ಆರೋಗ್ಯ ‌ಸ್ಥಿತಿ ಗಂಭೀರ

ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ K ಷಡಕ್ಷರಿ ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಾಣಿಸಿಕೊಂಡಿದೆ. ಇಬ್ಬರ ಉಪಸ್ಥಿತಿಯಲ್ಲಿ ಷಡಕ್ಷರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ.

Read Full Story

09:16 AM (IST) Jun 11

ಬಿಜೆಪಿಯ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಝಾಕೀರ್‌ಗೆ ಮಧ್ಯಂತರ ಜಾಮೀನು; 18ನೇ ಆರೋಪಿ

ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ 18ನೇ ಆರೋಪಿ ಝಾಕೀರ್ ಸವಣೂರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹತ್ಯೆಯ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದ ಈತನನ್ನು 2022ರ ಜುಲೈನಲ್ಲಿ ಬಂಧಿಸಲಾಗಿತ್ತು.
Read Full Story

09:05 AM (IST) Jun 11

ಮೀನಕಳಿಯದಲ್ಲಿ ಕಡಲ್ಕೊರೆತ ತಡೆಗೆ ಸ್ಯಾಂಡ್‌ಬ್ಯಾಗ್; ಮರವಂತೆ ಮಾದರಿ ಬ್ರೇಕ್ ವಾಟರ್‌ಗೆ ಒತ್ತಾಯ

ಮಂಗಳೂರಿನ ಮೀನಕಳಿಯದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ತಾತ್ಕಾಲಿಕವಾಗಿ ಸ್ಯಾಂಡ್‌ಬ್ಯಾಗ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಸ್ಥಳೀಯ ಮೀನುಗಾರರು ಈ ತಾತ್ಕಾಲಿಕ ಪರಿಹಾರದ ಬದಲು ಮರವಂತೆ ಮಾದರಿಯ ಶಾಶ್ವತ ಬ್ರೇಕ್-ವಾಟರ್ ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
Read Full Story

08:50 AM (IST) Jun 11

Belagavi - ಹೆಮ್ಮಡಾಗೆ ಹೊಸ ಬಸ್ ಸೇವೆ ಆರಂಭ, ಇತ್ತ ಖಾನಾಪುರದ ಹಲವು ಗ್ರಾಮಗಳ ನಿರೀಕ್ಷೆ

ಖಾನಾಪುರದಿಂದ ಹೆಮ್ಮಡಗಾ ಗ್ರಾಮಕ್ಕೆ ಹೊಸ ಬಸ್ ಸೇವೆ ಆರಂಭವಾಗಿದ್ದು, ಇದು ಪ್ರತಿನಿತ್ಯ ಎರಡು ಟ್ರಿಪ್ ಸಂಚರಿಸಲಿದೆ. ಇದೇ ವೇಳೆ, ಹತ್ತರಗುಂಜಿ ಮತ್ತು ಮಾಚಾಳಿ-ಸಾತನಾಳಿ ಸೇರಿದಂತೆ ಹಲವು ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
Read Full Story

08:39 AM (IST) Jun 11

ಬಿಜೆಪಿ ಮುಖಂಡನ ಪುತ್ರನಿಂದ ಪುತ್ತೂರು ಯುವತಿಗೆ ವಂಚನೆ - ರಾಜೀ ಸಂಧಾನಕ್ಕೆ ಪ್ರಸ್ತಾಪ

ಪುತ್ತೂರಿನ ಬಿಜೆಪಿ ಮುಖಂಡರ ಪುತ್ರ ಕೃಷ್ಣಾ ಜೆ. ರಾವ್‌ ವಿರುದ್ಧದ ಅತ್ಯಾ*ಚಾರ ಪ್ರಕರಣದಲ್ಲಿ, ಆರೋಪಿ ಪರ ವಕೀಲರು ರಾಜಿ ಸಂಧಾನದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಾಲಯ, ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಲು ಸೂಚಿಸಿದ್ದು, ಸಂತ್ರಸ್ತೆಗೆ ಜೀವನಾಂಶ ಪಾವತಿಸಲು ಆದೇಶಿಸಿದೆ.

Read Full Story

08:25 AM (IST) Jun 11

ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ, ಶೀಘ್ರವೇ ಪರಿಹಾರ - ಸಂಸದ CN ಮಂಜುನಾಥ್

ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಅವರು ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸೂಚಿಸಿದ್ದಾರೆ. ಸುಮಾರು ₹70 ಕೋಟಿ ವೆಚ್ಚದ ಈ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Read Full Story

08:12 AM (IST) Jun 11

Belagavi - ಬೆಳಗಾವಿ ನಮ್ಮದೆನ್ನಲು ವಿಳಂಬವೇಕೆ? ಡಿಸಿ ಹೇಳಿದರೂ ಪತ್ರ ಬರೆಯದ ಪಾಲಿಕೆ!

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವು ಅಂಗೀಕಾರದ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನೀಡಿದ್ದ ಸೂಚನೆಯನ್ನು ಮಹಾನಗರ ಪಾಲಿಕೆ ಪಾಲಿಸಿಲ್ಲ. ಸಚಿವ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ನಡೆದ ಸಭೆಯ ನಿರ್ಧಾರಕ್ಕೂ ಬೆಲೆ ಸಿಕ್ಕಿಲ್ಲ. ಈ ಆಡಳಿತಾತ್ಮಕ ನಿರ್ಲಕ್ಷ್ಯವು ಕನ್ನಡಪರ ಸಂಘಟನೆಗಳ ಅಸಮಾಧಾನ.

Read Full Story

08:05 AM (IST) Jun 11

ನಿಧಿ ಆಸೆಗಾಗಿ ಮೂಕಬಸವೇಶ್ವರ, ಈಶ್ವರ ಮೂರ್ತಿಯುಳ್ಳ ದೇವಸ್ಥಾನ ಕೆಡವಿದ ನಾಲ್ವರ ಬಂಧನ

ನಿಧಿ ಆಸೆಗಾಗಿ ಪುರಾತನ ಮೂಕಬಸವೇಶ್ವರ ಹಾಗೂ ಈಶ್ವರ ದೇವಸ್ಥಾನವನ್ನು ಕೆಡವಿ, ಜೆಸಿಬಿಯಿಂದ ನೆಲ ಅಗೆದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read Full Story

07:50 AM (IST) Jun 11

ಶಾಲಾ ಆರಂಭ 15 ನಿಮಿಷ ಮುಂದೂಡಿ, ಮುಕ್ತಾಯದ ಸಮಯದಲ್ಲಿ ಬದಲಾವಣೆ ಬೇಡ; ಶಿಕ್ಷಕರ ಮನವಿ

ಶಾಲಾ ಆರಂಭದ ಸಮಯವನ್ನು 15 ನಿಮಿಷಗಳ ಕಾಲ ಮುಂದೂಡಿ, ಆದ್ರೆ ಶಾಲಾ ಮುಕ್ತಾಯದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Read Full Story

07:43 AM (IST) Jun 11

Bengaluru crime - ಕೆಲಸಕ್ಕಿದ್ದ ಮನೆಯಲ್ಲಿ ₹25 ಲಕ್ಷ ಹಣದೋಚಿದ್ದ ನೇಪಾಳ ದಂಪತಿ ಬಂಧನ; ಕಳ್ಳತನ ಬಳಿಕ ಏನು ಮಾಡಿದ್ರು ನೋಡಿ!

ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳಿ ದಂಪತಿ ₹25 ಲಕ್ಷ ಹಣವನ್ನು ದೋಚಿದ್ದಾರೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಅಮೃತಹಳ್ಳಿ ಪೊಲೀಸರು ಆರೋಪಿಗಳನ್ನು ಕೆಂಗೇರಿ ಬಳಿ ಬಂಧಿಸಿ, ಕದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.
Read Full Story

More Trending News