MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮಾಳವ್ವ ಹೋಟೆಲ್‌ನಲ್ಲಿ ಊಟಕ್ಕಿಲ್ಲ ಲೆಕ್ಕ; ಇವರೇ ಇಲ್ಲಿನ ಜನರಿಗೆ ಅನ್ನಪೂರ್ಣೇಶ್ವರಿ

ಮಾಳವ್ವ ಹೋಟೆಲ್‌ನಲ್ಲಿ ಊಟಕ್ಕಿಲ್ಲ ಲೆಕ್ಕ; ಇವರೇ ಇಲ್ಲಿನ ಜನರಿಗೆ ಅನ್ನಪೂರ್ಣೇಶ್ವರಿ

Viral Video: ಸುಮಾರು 40 ವರ್ಷಗಳಿಂದ ಮಾಳವ್ವ ಎಂಬುವವರು ಹೋಟೆಲ್ ನಡೆಸುತ್ತಿದ್ದಾರೆ. ರುಚಿಕರವಾದ ತಿಂಡಿಗಳಿಗೆ ಮಾತ್ರವಲ್ಲದೆ, ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡಿ, ಜನರ ಪ್ರೀತಿಗೆ ಪಾತ್ರರಾಗಿ 'ಅನ್ನಪೂರ್ಣೇಶ್ವರಿ' ಎನಿಸಿಕೊಂಡಿದ್ದಾರೆ.

2 Min read
Author : Mahmad Rafik
Published : Jun 11 2026, 12:27 PM IST
Share this Photo Gallery
  • FB
  • TW
  • Linkdin
  • Whatsapp
16
ಮಾಳವ್ವ ಹೋಟೆಲ್
Image Credit : Mr.Chaaraniga FB

ಮಾಳವ್ವ ಹೋಟೆಲ್

ಕೆಲವೊಂದು ಹೋಟೆಲ್‌ಗಳು ಕೇವಲ ಹಣಕ್ಕೆ ಆಹಾರವನ್ನು ಸರಬರಾಜು ಮಾಡಲ್ಲ. ಬದಲಿಗೆ ಸುತ್ತಲಿನ ಹಳ್ಳಿಗಳ ಜನರು ಹೋಟೆಲ್‌ಗಳ ಜೊತೆ ಅವಿನಾಭ ಸಂಬಂಧ ಹೊಂದಿರುತ್ತಾರೆ. ಅಂತಹುವುದೇ ಒಂದು ಹೋಟೆಲ್ ನಮ್ಮ ಕನಕಗಿರಿಯಲ್ಲಿ ನಿಮಗೆ ಸಿಗುತ್ತದೆ. ಕನಕಗಿರಿ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಯವರಿಗೆ ಮಾಳವ್ವ ಹೋಟೆಲ್ ಅಂದ್ರೆ ಏನು ಒಂದು ರೀತಿಯ ಖುಷಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕನಕಗಿರಿಯಲ್ಲಿರುವ ಹೋಟೆಲ್
Image Credit : Mr.Chaaraniga FB

ಕನಕಗಿರಿಯಲ್ಲಿರುವ ಹೋಟೆಲ್

Mr.Chaaraniga ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಳವ್ವ ಹೋಟೆಲ್‌ ವಿಡಿಯೋ ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಾಳವ್ವ ಅವರ ಮಾತುಗಳಲ್ಲಿ ತಾಯಿ ಎಷ್ಟು ಸಿಂಪಲ್ ಅನ್ನೋದು ಗೊತ್ತಾಗುತ್ತದೆ. ಸುಮಾರು 40 ವರ್ಷಗಳಿಂದ ಕನಕಗಿರಿಯಲ್ಲಿ ಹೋಟೆಲ್ ನಡೆಸಿಕೊಂಡು ಬಂದಿದ್ದಾರೆ. ವಯಸ್ಸು ಎಷ್ಟು ಅಂತ ಕೇಳಿದ್ರೆ, ನನಗೆ ನನ್ನ ಮಕ್ಕಳು ವಯಸ್ಸು ಸಹ ಗೊತ್ತಿಲ್ಲ. ಗಣತಿಗೆ ಬಂದವರು ವಯಸ್ಸು ಕೇಳಿದ್ರೆ ನೀವೇ ಬರೆದುಕೊಳ್ಳಿ ಎಂದು ಹೇಳುತ್ತಾರೆ.

Related Articles

Related image1
ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!
Related image2
ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ
36
ಇಡ್ಲಿ, ಬೋಂಡಾ, ಮಿರ್ಚಿ ಬಜ್ಜಿ, ಅವಲಕ್ಕಿ, ಮಂಡಾಳು ಒಗ್ಗರಣೆ, ಉಪ್ಪಿಟ್ಟು, ಪುಲಾವ್ ಚಟ್ನಿ
Image Credit : Mr.Chaaraniga FB

ಇಡ್ಲಿ, ಬೋಂಡಾ, ಮಿರ್ಚಿ ಬಜ್ಜಿ, ಅವಲಕ್ಕಿ, ಮಂಡಾಳು ಒಗ್ಗರಣೆ, ಉಪ್ಪಿಟ್ಟು, ಪುಲಾವ್ ಚಟ್ನಿ

ಈ ಹೋಟೆಲ್‌ನಲ್ಲಿ ಬೆಳಗ್ಗೆ ಇಡ್ಲಿ, ಬೋಂಡಾ, ಮಿರ್ಚಿ ಬಜ್ಜಿ, ಅವಲಕ್ಕಿ, ಮಂಡಾಳು ಒಗ್ಗರಣೆ, ಉಪ್ಪಿಟ್ಟು, ಪುಲಾವ್ ಚಟ್ನಿ ಮಾಡುತ್ತಾರೆ. ಮಧ್ಯಾಹ್ನದ ನಂತರ ನಿಮಗೆ ಬಿಸಿ ಬಿಸಿ ಬಜ್ಜಿ ಮತ್ತು ಮಂಡಕ್ಕಿಯೂ ನಿಮಗೆ ಇಲ್ಲಿ ಸಿಗುತ್ತದೆ. ಮಾಳವ್ವ ಅಜ್ಜಿ ಕೇವಲ ಹೋಟೆಲ್ ನಡೆಸಿದ್ರೆ ಇಷ್ಟು ಫೇಮಸ್ ಅಗುತ್ತಿರಲಿಲ್ಲ. ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿಯೂ ಆಹಾರ ನೀಡುತ್ತಾರೆ.

46
ಊಟ ಮಾಡಿದ್ದ ನೆನಪು
Image Credit : Mr.Chaaraniga FB

ಊಟ ಮಾಡಿದ್ದ ನೆನಪು

ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇಲ್ಲಿ ಬೋಂಡಾ ಸ್ಪೆಷಲ್ ಉಪ್ಪಿಟ್ಟು. ನಾನು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಊಟ ಮಾಡಿದ್ದ ನೆನಪು, ಒಮ್ಮೆಯಂತೂ ಹಣವೇ ಇರಲಿಲ್ಲ. ಮರುದಿನ ನಾನಾಗಿಯೇ ಕೊಟ್ಟಾಗಲೇ ಹಣ ಪಡೆದುಕೊಂಡ್ರು. ಇವರು ನಮಗೆ ನಿಜವಾಗ್ಲೂ ಅನ್ನಪೂರ್ಣೇಶ್ವರಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಮಾಳವ್ವ ಅವರ ಹೋಟೆಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

56
ಕೈ ತುತ್ತು ತಿಂದಿದ್ದೀನಿ.
Image Credit : Mr.Chaaraniga FB

ಕೈ ತುತ್ತು ತಿಂದಿದ್ದೀನಿ.

ಇದೇ ವಿಡಿಯೋಗೆ ಕಮೆಂಟ್ ಮಾಡಿರುವ ಚೆನ್ನಪ್ಪ ಗೌಡ ಎಂಬವರು, ಇದು ನಮ್ಮ ಅಮ್ಮ. ನಾನು ಇವರ ಕೈ ತುತ್ತು ತಿಂದಿದ್ದೀನಿ. ಸುಮಾರು 23ವರ್ಷ ಕನಕಗಿರಿಯಲ್ಲಿ ಇದ್ದು ಶಿಕ್ಷಕನಾಗಿ ದುಡಿದು ಈಗ ನನ್ನ ಮೂಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದೀನಿ. ನನ್ನ ಕೊಪ್ಪಳ ಜಿಲ್ಲೆಯನ್ನು ಅನ್ನ ಕೊಟ್ಟಿದೆ ಜೀವನ ಕೊಟ್ಟಿದೆ. ಜನರ ಪ್ರೀತಿ ಕೊಟ್ಟಿದೆ missyou ಕೊಪ್ಪಳ ಎಂದು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಶಿವಾಜಿ ರಾವ್ ಎಂಬವರು, ಇವರು ನಮ್ಮ ಕನಕಗಿರಿಯ ದೊಡ್ಡಮ್ಮನವರು ಅಂತ ಹೇಳಿದ್ದಾರೆ.

ಇದನ್ನೂ ಓದಿ: 1978ರ ಸ್ಕೂಲ್ ಮಾರ್ಕ್ಸ್ ಕಾರ್ಡ್ ವೈರಲ್; ವಿಭಿನ್ನ, ವಿಶೇಷತೆಯ ಕೊಪ್ಪಳ ಶಾಲೆಯ ಅಂಕಪಟ್ಟಿ

66
ರುಚಿ ಶುಚಿ
Image Credit : Mr.Chaaraniga FB

ರುಚಿ ಶುಚಿ

ಮಾಳವ್ವ ತಾಯಿ ಫೋಟೋ ಹಂಚಿಕೊಂಡಿರುವ Mr.Chaaraniga, ಕನಕಗಿರಿ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದಾಗ ಊಟಕ್ಕೆ ಅಂಥ ಹೋದಾಗ ತಿಳಿದಿದ್ದು ಮಾಳವ್ವ ಹೋಟೆಲ್. ಅಜ್ಜಿ ಸುಮಾರು 40 ವರ್ಷದಿಂದ ನಡೆಸುತ್ತಿರುವ ಹೋಟೆಲ್. ಅಲ್ಲಿನ ರುಚಿ ಶುಚಿ ಬಗ್ಗೆ ಅಲ್ಲಿನ ಜನರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಮಕ್ಕಳು , ಶಿಕ್ಷಕರು ಮತ್ತು ಊರಿನ ಜನರೇ ಹೇಳಿದಾಹಾಗೆ ರುಚಿ ಮಾತ್ರ ಸೂಪರ್ ಎಂದು ಬರೆದುಕೊಂಡಿದ್ದಾರೆ. ನೀವು ಮಾಳವ್ವ ಹೋಟೆಲ್‌ಗೆ ಹೋಗಿದ್ರೆ ನಿಮ್ಮ ಅನುಭವವನ್ನು ಕಮೆಂಟ್ ಮಾಡಿ.

ಇದನ್ನೂ ಓದಿ: ಕಾಲಿಗೆ ಪೊರಕೆ ತಾಗಿದ್ದಕ್ಕೆ ಬೈದ ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಥಳಿಸಿದ ಮಹಿಳೆ!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕೊಪ್ಪಳ
ವೈರಲ್ ವಿಡಿಯೋ
ಹೋಟೆಲ್‌ಗಳು
Latest Videos
Recommended Stories
Recommended image1
1978ರ ಸ್ಕೂಲ್ ಮಾರ್ಕ್ಸ್ ಕಾರ್ಡ್ ವೈರಲ್; ವಿಭಿನ್ನ, ವಿಶೇಷತೆಯ ಕೊಪ್ಪಳ ಶಾಲೆಯ ಅಂಕಪಟ್ಟಿ
Recommended image2
ಕೊಟ್ಟಿಯೂರಿಗೆ ಹೊರಟಿದ್ದ ಕರ್ನಾಟಕ ಪ್ರವಾಸಿಗರಿದ್ದ ಟೆಂಪೊ ಕಣ್ಣೂರು ಬಳಿ ಅಪಘಾತ, 20 ಜನರಿಗೆ ಗಾಯ
Recommended image3
Gruhalakshmi scheme: ಬಳ್ಳಾರಿಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 4,225 ಅನರ್ಹರು ಪತ್ತೆ! ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ?
Related Stories
Recommended image1
ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!
Recommended image2
ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved