ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಆರ್‌ಎಸ್‌ಎಸ್‌ ನೋಂದಣಿ ಕುರಿತು ಪ್ರಿಯಾಂಕ ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಣ್ಣ ಅಂಗಡಿಗಳಿಗೂ ನೋಂದಣಿ ಕಡ್ಡಾಯವಿರುವಾಗ, ಆರ್‌ಎಸ್‌ಎಸ್‌ನಂತಹ ದೊಡ್ಡ ಸಂಸ್ಥೆ ಯಾಕೆ ನೋಂದಣಿಯಾಗಿಲ್ಲ ಮತ್ತು ಅದರ ಹಣಕಾಸಿನ ಮೂಲ ಯಾವುದು ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು: ಸಣ್ಣ ಕಿರಾಣಿ ಅಂಗಡಿ, ಪಂಕ್ಚರ್‌ ಅಂಗಡಿ ಮಾಡಬೇಕೆಂದರೂ ನೋಂದಣಿಯಾಗಬೇಕು. ಹಾಗೆಯೇ, ಆರ್‌ಎಸ್‌ಎಸ್‌ನಂತಹ ದೊಡ್ಡ ಸಂಸ್ಥೆ ನೋಂದಣಿ ಮಾಡಬೇಕಲ್ಲವೇ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಪ್ರಶ್ನಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್‌ ಕುರಿತ ಪ್ರಿಯಾಂಕ ಖರ್ಗೆ ಹೇಳಿಕೆಯನ್ನು ಈ ರೀತಿ ಸಮರ್ಥಿಸಿಕೊಂಡರು. ಸಂವಿಧಾನ, ಕಾನೂನು ಎಲ್ಲರಿಗೂ ಒಂದೇ. ನಮ್ಮದೂ ಒಂದು ಸಂಸ್ಥೆಯಿದೆ. ಹಾಗಾದರೆ, ನಾವು ನೋಂದಣಿ ಮಾಡಿಕೊಳ್ಳುವುದಿಲ್ಲ ಎಂದರೆ ಒಪ್ಪಲಾಗುತ್ತದೆಯೇ? ಆರ್‌ಎಸ್‌ಎಸ್‌ಗೆ ಸೇರಿದ ಶಿಕ್ಷಣ ಸಂಸ್ಥೆ ಸೇರಿ ಇನ್ನಿತರ ಸಂಸ್ಥೆಗಳಿಗೆ ಹಣ ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬ ಲೆಕ್ಕ ಇಡಬೇಕಲ್ಲ ಎಂದರು.

ಇದನ್ನೂ ಓದಿ: ಮೋದಿಗೆ ಧೈರ್ಯವಿದ್ದರೆ 12 ವರ್ಷ ಸಾಧನೆ ಹೇಳಿಕೊಳ್ಳಲಿ: RSS ನವ್ರು ದೇಶದ್ರೋಹಿಗಳು ಎಂದ ಪ್ರಿಯಾಂಕ್‌

ಖಾತೆ ಗೊಂದಲ ಇಲ್ಲ:

ಸರ್ಕಾರದಲ್ಲಿ ಖಾತೆ ವಿಚಾರದಲ್ಲಿನ ಯಾವುದೇ ಗೊಂದಲವಿಲ್ಲ, ಅವೆಲ್ಲ ಮಾಧ್ಯಮಗಳ ಸೃಷ್ಟಿ. ಹಾಗೇನಾದರೂ ಸಮಸ್ಯೆಯಿದ್ದರೂ ಹೈಕಮಾಂಡ್‌ ನಾಯಕರು ಬಗೆಹರಿಸುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಇದನ್ನೂ ಓದಿ: Priyank Kharge challenges RSS: ವಿಷ ಸರ್ಪಕ್ಕೆ ಹಾಲೆರೆಯಲು ಸಾಧ್ಯವೇ?: ಆರೆಸ್ಸೆಸ್‌ ಪ್ರಿಯಾಂಕ್‌ ಖರ್ಗೆ ಸವಾಲೇನು?