MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕನ್ನಡ ಚಿತ್ರಕ್ಕೆ ಎಂಟ್ರಿ ಕೊಟ್ಟ ನಟಿ ಐಶ್ವರ್ಯಾ ರಾಜೇಶ್.. ಈ ಪರಭಾಷೆ ಬೆಂಕಿ ಚೆಂಡು ಏನು ಅಂತ ಗೊತ್ತು ತಾನೆ?

ಕನ್ನಡ ಚಿತ್ರಕ್ಕೆ ಎಂಟ್ರಿ ಕೊಟ್ಟ ನಟಿ ಐಶ್ವರ್ಯಾ ರಾಜೇಶ್.. ಈ ಪರಭಾಷೆ ಬೆಂಕಿ ಚೆಂಡು ಏನು ಅಂತ ಗೊತ್ತು ತಾನೆ?

ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಕೆಲವು ಪ್ರಮುಖ ನಟರು ಕೂಡ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ.

2 Min read
Author : Shriram Bhat
Published : Jun 11 2026, 12:08 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ತಮಿಳು 'ಕನಾ' ಸುಂದರಿ! ಐಶ್ವರ್ಯಾ ರಾಜೇಶ್ ಸ್ಯಾಂಡಲ್‌ವುಡ್ ಪಾದಾರ್ಪಣೆ: ಈ ಬಾರಿ ಪಕ್ಕಾ ಲೇಡಿ ಓರಿಯೆಂಟೆಡ್ ಮ್ಯಾಜಿಕ್!

ಬೆಂಗಳೂರು: ಕನ್ನಡ ಚಿತ್ರರಂಗದ ಮಟ್ಟ ಸದ್ಯ ಗ್ಲೋಬಲ್ ಲೆವೆಲ್‌ಗೆ ಬೆಳೆದಿದೆ. ಕೆಜಿಎಫ್, ಕಾಂತಾರ ಬಳಿಕ ಸ್ಯಾಂಡಲ್‌ವುಡ್ ಕಡೆಗೆ ಪರಭಾಷಾ ತಾರೆಯರು ಕುತೂಹಲದಿಂದ ನೋಡುತ್ತಿದ್ದಾರೆ. ಈಗ ಆ ಸಾಲಿಗೆ ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ, ನ್ಯಾಚುರಲ್ ಆಕ್ಟಿಂಗ್‌ಗೆ ಹೆಸರಾದ ಐಶ್ವರ್ಯಾ ರಾಜೇಶ್ (Aishwarya Rajesh) ಸೇರ್ಪಡೆಯಾಗಿದ್ದಾರೆ. ದಶಕಗಳಿಂದ ಕನ್ನಡಿಗರು ಕಾಯುತ್ತಿದ್ದ ಈ ಸುದ್ದಿ ಈಗ ಅಧಿಕೃತವಾಗಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Insatgram

ದೊಡ್ಡ ಬ್ರೇಕಿಂಗ್: ಅನಿವಾಸಿ ಕನ್ನಡಿಗನ ಸಾರಥ್ಯದಲ್ಲಿ ಐಶ್ವರ್ಯಾ ಪಯಣ!

ಇಷ್ಟು ದಿನ ತಮಿಳು ಮತ್ತು ತೆಲುಗಿನಲ್ಲಿ ಸಂಚಲನ ಮೂಡಿಸುತ್ತಿದ್ದ ಐಶ್ವರ್ಯಾ ರಾಜೇಶ್ ಅವರನ್ನು ಕನ್ನಡಕ್ಕೆ ಕರೆತರುತ್ತಿರುವುದು ಅನಿವಾಸಿ ಭಾರತೀಯ (NRI) ಅಮೋಘ್ ವಿಜಯ್. 2016ರಲ್ಲಿ ಅಮೆರಿಕಕ್ಕೆ ಹಾರಿ ಅಲ್ಲಿಯೇ ನೆಲೆಸಿದ್ದರೂ, ಅಮೋಘ್ ಅವರ ಎದೆಯಲ್ಲಿ ಕನ್ನಡ ಸಿನಿಮಾದ ಕನಸು ಹಾಗೆಯೇ ಇತ್ತು. ಹಲವು ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಪಳಗಿದ್ದ ಅವರು, ಈಗ ಐಶ್ವರ್ಯಾ ರಾಜೇಶ್ ಅವರಂತಹ ಸ್ಟಾರ್ ನಟಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಯುಎಸ್‌ಎ ಮೂಲದ ಖ್ಯಾತ ನಿರ್ಮಾಣ ಸಂಸ್ಥೆ ‘ಮ್ಯಾವ್ರಿಕ್ ಪ್ರೊಡಕ್ಷನ್ಸ್’ (Mvrick Productions) ಈ ಚಿತ್ರಕ್ಕೆ ಭಾರಿ ಬಂಡವಾಳ ಹೂಡುತ್ತಿರುವುದು ವಿಶೇಷ.

Related Articles

Related image1
ಭಿಕ್ಷುಕ ಎಂದು ರಜನಿಕಾಂತ್‌ಗೆ 10 ರೂ. ಕೊಟ್ಟಿದ್ದ ಮಹಿಳೆ ಈ ನಟ ಕಾರು ಹತ್ತಿ ಹೊರಟಾಗ ಕಾಲು ಹಿಡಿದು ಹೇಳಿದ್ದೇನು?
Related image2
ಡಿಕೆಶಿ ಹೇಳಿಕೆ ಬಳಿಕ ನಟ ದರ್ಶನ್ ಫ್ಯಾನ್ಸ್ ಪರಿಸ್ಥಿತಿ ಹೇಗಾಗಿದೆ ಗೊತ್ತಾ? 'ಹೀಗಾಗಿದೆ' ಅಂತ ಹೇಳಬಹುದಾ..?!
36
Image Credit : Insatgram

ಇದು ಬರೀ ಸಿನಿಮಾವಲ್ಲ, ಮಹಿಳಾ ಶಕ್ತಿಯ ಅನಾವರಣ!

ಐಶ್ವರ್ಯಾ ರಾಜೇಶ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ ಎಂದರೆ ಅಲ್ಲಿ ನಟನೆಗೆ ಜಾಗ ಇದ್ದೇ ಇರುತ್ತದೆ. ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವುದು ಒಂದು ಪಕ್ಕಾ 'ಮಹಿಳಾ ಪ್ರಧಾನ' (Female Centric) ಕಥೆ. ತಮಿಳಿನ 'ಕಾಕ ಮುಟ್ಟೈ'ನಲ್ಲಿ ಬಡ ತಾಯಿಯಾಗಿ, 'ಕನಾ' ಚಿತ್ರದಲ್ಲಿ ಕ್ರಿಕೆಟ್ ಆಟಗಾರ್ತಿಯಾಗಿ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿದ್ದ ಈ ನಟಿ, ಕನ್ನಡದಲ್ಲೂ ಅಂತಹದ್ದೇ ಪ್ರಬಲ ಪಾತ್ರದ ಮೂಲಕ ಅಬ್ಬರಿಸಲಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲೂ ಏಕಕಾಲಕ್ಕೆ ತೆರೆಗೆ ಬರಲಿದೆ.

46
Image Credit : Insatgram

ವದಂತಿಗಳಿಗೆ ಬಿದ್ದಿತು ತೆರೆ!

ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಐಶ್ವರ್ಯಾ ರಾಜೇಶ್ ಹೆಸರು ಜೋರಾಗಿ ಕೇಳಿಬರುತ್ತಿತ್ತು. ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ‘ಉತ್ತರಕಾಂಡ’ ಅಥವಾ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾಗಳಲ್ಲಿ ಐಶ್ವರ್ಯಾ ನಾಯಕಿಯಾಗಬಹುದು ಎಂಬ ಗುಸುಗುಸು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿತ್ತು. ಆದರೆ ಈಗ ಅಮೋಘ್ ವಿಜಯ್ ಚಿತ್ರದ ಮೂಲಕ ಅವರು ಅಧಿಕೃತವಾಗಿ ಸ್ಯಾಂಡಲ್‌ವುಡ್ ಮೆಟ್ಟಿಲು ಹತ್ತುತ್ತಿರುವುದು ಖಚಿತವಾಗಿದೆ.

56
Image Credit : Insatgram

ಯಾವಾಗ ಶುರು ಶೂಟಿಂಗ್?

ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಕೆಲವು ಪ್ರಮುಖ ನಟರು ಕೂಡ ಅತಿಥಿ ಪಾತ್ರಗಳಲ್ಲಿ ಅಥವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿದೆ ಚಿತ್ರತಂಡ.

66
Image Credit : Insatgram

ಒಟ್ಟಿನಲ್ಲಿ, ಪರಭಾಷೆಯ ಸ್ಟಾರ್ ನಟಿಯರು ಕನ್ನಡ ಕಥೆಗಳ ಮೇಲೆ ಭರವಸೆ ಇಟ್ಟು ಬರುತ್ತಿರುವುದು ಖುಷಿಯ ವಿಚಾರ. ಅಮೋಘ್ ವಿಜಯ್ ಅವರ ವಿಭಿನ್ನ ಕಲ್ಪನೆ ಮತ್ತು ಐಶ್ವರ್ಯಾ ರಾಜೇಶ್ ಅವರ ಅಪ್ರತಿಮ ನಟನೆ ಬೆಳ್ಳಿತೆರೆಯ ಮೇಲೆ ಯಾವ ರೀತಿ ಧೂಳೆಬ್ಬಿಸಲಿದೆ ಎಂದು ಕಾದು ನೋಡಬೇಕಿದೆ. ಕನ್ನಡಕ್ಕೆ ಸುಸ್ವಾಗತ ಐಶ್ವರ್ಯಾ ರಾಜೇಶ್!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸ್ಯಾಂಡಲ್‌ವುಡ್
ಟಾಲಿವುಡ್
ಕಾಲಿವುಡ್
ಮನರಂಜನಾ ಸುದ್ದಿ
Latest Videos
Recommended Stories
Recommended image1
Rukmini Vasanth: ನಟಿ ರುಕ್ಮಿಣಿ ಫೇಕ್‌ ಅಶ್ಲೀಲ ವಿಡಿಯೋ ಪ್ರಕರಣ; ಸೈಬರ್ ಪೊಲೀಸರ ತನಿಖೇಲಿ ಶಾಕಿಂಗ್ ಮಾಹಿತಿ ರಿವೀಲ್!
Recommended image2
ಡಿಕೆಶಿ ಹೇಳಿಕೆ ಬಳಿಕ ನಟ ದರ್ಶನ್ ಫ್ಯಾನ್ಸ್ ಪರಿಸ್ಥಿತಿ ಹೇಗಾಗಿದೆ ಗೊತ್ತಾ? 'ಹೀಗಾಗಿದೆ' ಅಂತ ಹೇಳಬಹುದಾ..?!
Recommended image3
ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್​: ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ
Related Stories
Recommended image1
ಭಿಕ್ಷುಕ ಎಂದು ರಜನಿಕಾಂತ್‌ಗೆ 10 ರೂ. ಕೊಟ್ಟಿದ್ದ ಮಹಿಳೆ ಈ ನಟ ಕಾರು ಹತ್ತಿ ಹೊರಟಾಗ ಕಾಲು ಹಿಡಿದು ಹೇಳಿದ್ದೇನು?
Recommended image2
ಡಿಕೆಶಿ ಹೇಳಿಕೆ ಬಳಿಕ ನಟ ದರ್ಶನ್ ಫ್ಯಾನ್ಸ್ ಪರಿಸ್ಥಿತಿ ಹೇಗಾಗಿದೆ ಗೊತ್ತಾ? 'ಹೀಗಾಗಿದೆ' ಅಂತ ಹೇಳಬಹುದಾ..?!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved