Published : Aug 08, 2026, 06:49 AM ISTUpdated : Aug 08, 2026, 11:24 PM IST

Karnataka Latest News Live: ತಾಯಿಯ ಪ್ರೀತಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಮರಿಗಳನ್ನು ರಕ್ಷಿಸಲು ಗೋಡೆ ಏರಿದ ಬೆಕ್ಕು; ಆಮೇಲೆನಾಯ್ತು?

ಸಾರಾಂಶ

ಬೆಂಗಳೂರು: ರಾಜಕೀಯ ನಾಯಕರಿಗೆ ನಾಲಿಗೆ ಹಿಡಿತದಲ್ಲಿರಬೇಕು. ರಾಜಕಾರಣಿಗಳು ಜನಪರ ನೀತಿಗಳ ಮತ್ತು ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ರಾಜಕೀಯ ನಾಯಕರ ಪರಸ್ಪರ ಆರೋಪಗಳನ್ನು ಕೇಳುವುದಕ್ಕೆ ಜನ ಆಸಕ್ತರಾಗಿಲ್ಲ ಎಂದು ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. ಕಲಬುರಗಿಯ ಜಿಲ್ಲಾಧಿಕಾರಿ ‘ಫೌಝಿಯಾ ತರನ್ನುಮ್‌ ಪಾಕಿಸ್ತಾನದವರೋ ಅಥವಾ ಭಾರತದವರೋ ಎಂಬ ಬಗ್ಗೆ ನನಗೆ ಖಚಿತವಿಲ್ಲ’ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. 

ಜನ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತನಾಡದ ರಾಜಕಾರಣಿಗಳು, ಪರಸ್ಪರ ನಿಂದನೆ ಮತ್ತು ಕೀಳು ಮಾತು ಆಡಿ ಪ್ರಕರಣಗಳ ದಾಖಲೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ಅಧೀನ ನ್ಯಾಯಾಲಯಗಳಲ್ಲಿ 10 ವರ್ಷಗಳಿಂದ ಕೊಲೆ, ಸುಲಿಗೆಯಂಥ ಅಪರಾಧ ಪ್ರಕರಣಗಳ ವಿಚಾರಣೆ ಬಾಕಿ ಹೆಚ್ಚಾಗುತ್ತಿದೆ ನ್ಯಾಯಪೀಠ ತಿಳಿಸಿತು.

11:24 PM (IST) Aug 08

ತಾಯಿಯ ಪ್ರೀತಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಮರಿಗಳನ್ನು ರಕ್ಷಿಸಲು ಗೋಡೆ ಏರಿದ ಬೆಕ್ಕು; ಆಮೇಲೆನಾಯ್ತು?

ಎತ್ತರದ ಗೋಡೆಯೊಂದರ ಸಣ್ಣ ರಂಧ್ರ ಅಥವಾ ಸಂದಿಯಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿರುವುದು ಕಾಣಿಸುತ್ತದೆ. ಕೆಳಗೆ ಇಳಿಯಲೂ ಸಾಧ್ಯವಾಗದೆ, ಮೇಲಕ್ಕೂ ಹೋಗಲಾಗದೆ ಅವು ಅಸಹಾಯಕವಾಗಿ ಕೂಗುತ್ತಿರುತ್ತವೆ.

Read Full Story

10:42 PM (IST) Aug 08

ಸಾಲು ಸಾಲು ಸೋಲು... ಅರುಣಾಚಲಕ್ಕೆ ಹೋದ ನಟಿ ಶ್ರೀಲೀಲಾ - ವಿಶೇಷ ಪೂಜೆ, ಅಷ್ಟಕ್ಕೂ ಏನಾಯ್ತು?

Sreeleela Arunachalam: ಗೆಲುವು-ಸೋಲಿನ ಲೆಕ್ಕಾಚಾರವನ್ನು ಬದಿಗಿಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ, ಇದೀಗ ಅರುಣಾಚಲೇಶ್ವರನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read Full Story

10:29 PM (IST) Aug 08

Viral - ಮಕ್ಕಳಿಗೆ ಏನ್ ತಿನ್ನಿಸಲಿ? ಇಡೀ ದಿನದ ಕಷ್ಟದ ಹಣ ಕಳುವಾಗಿ ಕಣ್ಣೀರಿಟ್ಟ ಐಸ್‌ಕ್ರೀಂ ವ್ಯಾಪಾರಿ, ಆಮೇಲೆ ಆಗಿದ್ದೇ ಪವಾಡ!

ಅಸ್ಸಾಂನಲ್ಲಿ, ದಿನದ ಗಳಿಕೆ ಕಳೆದುಕೊಂಡು ಮಕ್ಕಳ ಊಟದ ಚಿಂತೆಯಲ್ಲಿ ಕಣ್ಣೀರಿಡುತ್ತಿದ್ದ ಐಸ್‌ಕ್ರೀಂ ವ್ಯಾಪಾರಿಗೆ ಅಪರಿಚಿತರೊಬ್ಬರು ಸಹಾಯ ಮಾಡಿದ್ದಾರೆ. ಆತನಿಗೆ ಊಟ ಕೊಡಿಸಿ, ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

10:23 PM (IST) Aug 08

ಯಶ್‌ ‘ಟಾಕ್ಸಿಕ್‌’ ನೋಡಿ ಫ್ಯಾನ್ಸ್‌ ಫಿದಾ - ನೆಟ್ಟಿಗರು ಮಾತ್ರ ‘KGF on Steroids’ ಅಂತಿದ್ದಾರೆ!

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯ ಈ ಟ್ರೇಲರ್‌ನಲ್ಲಿ ಯಶ್‌ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

09:33 PM (IST) Aug 08

Cricket - 8 ವರ್ಷಗಳ ಪ್ರೀತಿ, ತನಗಿಂತ 7 ವರ್ಷ ಕಿರಿಯ ಕ್ರಿಕೆಟರ್ ಜೊತೆ ಮದುವೆ! ಯಾರು ಗೊತ್ತಾ ಈ ಖ್ಯಾತ ನಟಿ?

ಟೀಮ್ ಇಂಡಿಯಾದ ಉದಯೋನ್ಮುಖ ಕ್ರಿಕೆಟಿಗ ಮತ್ತು ಕಿರುತೆರೆ ನಟಿಯೊಬ್ಬರು 8 ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ರಹಸ್ಯವಾಗಿಟ್ಟು ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಅವರಿಬ್ಬರ ನಡುವೆ 7 ವರ್ಷಗಳ ವಯಸ್ಸಿನ ಅಂತರವಿದ್ದರೂ, ಈ ಜೋಡಿ ಈಗ ಒಂದಾಗಿದ್ದು, ಕ್ರಿಕೆಟ್ ಮತ್ತು ಸಿನಿಮಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.

Read Full Story

09:03 PM (IST) Aug 08

ರಾಕಿ ಬಳಗಕ್ಕೆ ಯಶ್‌ 'ರಾಕಿಂಗ್‌' ಗಿಫ್ಟ್‌.. - 'ಟಾಕ್ಸಿಕ್‌' ಬಗ್ಗೆ ಮೊದಲ ಬಾರಿಗೆ ಮೌನ ಮುರಿದ 'ಅಣ್ತಮ್ಮ'

ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಯಲ್ಲಿ ಯಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್‌’ ಬಳಿಕ ಯಶ್‌ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾ ಇದೀಗ ಬಿಡುಗಡೆ ಹೊಸ್ತಿಲಲ್ಲಿದೆ.

Read Full Story

08:50 PM (IST) Aug 08

UPI ಪಾವತಿಗಳ ಮೇಲೆ ಚಾರ್ಜ್? ಕೇಂದ್ರ ಸರ್ಕಾರದಿಂದ ಬಿಗ್ ಅಪ್‌ಡೇಟ್!

ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಗೊಂದಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಸಾಮಾನ್ಯ ಬಳಕೆದಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಯುಪಿಐ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

Read Full Story

08:28 PM (IST) Aug 08

Toxic Trailer Launch - ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್; 'ಯಶ್ ನನ್ನ ತಮ್ಮ.. ನಾನು ಮಾಡಿದಷ್ಟೇ ಖುಷಿ ಆಗಿದೆ' ಎಂದ 'ಕರುನಾಡ ಚಕ್ರವರ್ತಿ'

ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಿದೆ. ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿ ‘ಯಶ್ ನನ್ನ ತಮ್ಮ.. ನಾನು ಈ ಸಿನಿಮಾ ಮಾಡಿದಷ್ಟೇ ಖುಷಿ ಆಗಿದೆ..’ ಎಂದರು. ಇನ್ನೂ ಏನಂದ್ರು? ಈ ಸ್ಟೋರಿ ನೋಡಿ..

Read Full Story

08:26 PM (IST) Aug 08

ಕಿಯಾರಾ, ನಯನತಾರಾ ಜೊತೆ ಯಶ್‌ ಸಂಬಂಧವೇನು? ‘ಟಾಕ್ಸಿಕ್‌’ನಲ್ಲಿ ರಾಕಿಂಗ್‌ ಸ್ಟಾರ್‌ ಟ್ರಿಪಲ್‌ ರೋಲ್‌?

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಟ್ರೇಲರ್‌ ಕೊನೆಗೂ ಬಿಡುಗಡೆಯಾಗಿದೆ. ಬಹುಕಾಲದಿಂದ ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಈ ಟ್ರೇಲರ್‌, ಸಿನಿಮಾದ ಕರಾಳ ಜಗತ್ತಿನ ಒಂದು ಝಲಕ್‌ ತೋರಿಸಿದೆ.

Read Full Story

08:07 PM (IST) Aug 08

ರಾಯನಾ? ರುಮಿನಾ? ಯಶ್‌ ಡಾರ್ಕ್‌ ‘ಟಾಕ್ಸಿಕ್‌’ ಟ್ರೇಲರ್‌ ನೋಡಿದ್ರೆ ಈ ಪ್ರಶ್ನೆ ಖಂಡಿತ ಕಾಡುತ್ತೆ!

ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾದ ಟ್ರೇಲರ್‌ ಕೊನೆಗೂ ಬಿಡುಗಡೆಯಾಗಿದೆ. ಯಶ್‌ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸಿನಿಪ್ರಿಯರಲ್ಲೂ ಟ್ರೇಲರ್‌ ಭಾರೀ ಕುತೂಹಲ ಮೂಡಿಸಿದೆ.

Read Full Story

07:52 PM (IST) Aug 08

Yash Toxic Trailer Launch - ಯಶ್ 'ಟಾಕ್ಸಿಕ್' ಟ್ರೇಲರ್; 'ಇಟ್ಸ್ ಟೈಮ್- ಐ ಆಮ್ ಕಮಿಂಗ್; ಅಪ್ಪ-ಮಗನ ಆಟ ಶುರು!

ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, 8 ಆಗಸ್ಟ್ 2026ರಂದು ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ.

Read Full Story

07:49 PM (IST) Aug 08

ಶಿವಗಂಗೆ ಬೆಟ್ಟಕ್ಕೆ ಬಂದಿದ್ದ 31ರ ಹರೆಯದ ಉದ್ಯಮಿ ಪುತ್ರ ನಾಪತ್ತೆ, ಶಾಂತಲಾ ಡ್ರಾಪ್‌ನಲ್ಲಿ ಶೋಧ

ದಕ್ಷಿಣ ಕಾಶಿ ಎಂದೇ ಗುರುತಿಸಿಕೊಂಡಿರುವ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದಿದ್ದ ಉದ್ಯಮಿಯ ಪುತ್ರ ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟದ ಶಾಂತಾಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

Read Full Story

07:48 PM (IST) Aug 08

‘ಟಾಕ್ಸಿಕ್‌’ ಟ್ರೇಲರ್‌ನಲ್ಲಿ ಯಶ್‌ ಆ್ಯಕ್ಷನ್‌ಗೆ ಗಾಬರಿಗೊಂಡ ಪ್ರೇಕ್ಷಕರು - ಮಹಿಳಾ ಪಾತ್ರಗಳ ಬಗ್ಗೆ ಮತ್ತೆ ಚರ್ಚೆ!

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಹುಟ್ಟುಹಾಕಿದೆ.

Read Full Story

07:47 PM (IST) Aug 08

Iran - ಮೊಜ್ತಬಾ ಸ್ಥಿತಿ ಗಂಭೀರ! ಇರಾನ್‌ನ ಆಡಳಿತ ಯಾರ ಕೈಗೆ? ಅಧಿಕಾರದ ಪೈಪೋಟಿಯಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ!

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳ ನಂತರ, ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ. ಸಂವಿಧಾನದ ಪ್ರಕಾರ, 'ತಜ್ಞರ ಸಭೆ'ಯು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದು, ಈ ರೇಸ್‌ನಲ್ಲಿ ಹಲವು ಪ್ರಮುಖರಿದ್ದಾರೆ. ಈ ರಾಜಕೀಯ ಅಸ್ಥಿರತೆಯಲ್ಲಿ ಸೇನಾಪಡೆ IRGCಯ ಪಾತ್ರವೂ ನಿರ್ಣಾಯಕವಾಗುವ ಸಾಧ್ಯತೆಯಿದೆ.
Read Full Story

07:15 PM (IST) Aug 08

Success Story - ಐಐಟಿ ಇಲ್ಲ, ಕ್ಯಾಂಪಸ್ ಪ್ಲೇಸ್‌ಮೆಂಟ್ ಇಲ್ಲ! ಆದರೂ ಫ್ರೆಶರ್ ಆಗಿ ಬರೋಬ್ಬರಿ ₹38 ಲಕ್ಷದ ಪ್ಯಾಕೇಜ್ ಪಡೆದ ಪ್ರತಿಭೆ!

ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯ ಪದವಿ ಅಥವಾ ಕ್ಯಾಂಪಸ್ ನೇಮಕಾತಿ ಇಲ್ಲದೆ, ಯುವತಿಯೊಬ್ಬಳು ಫ್ರೆಶರ್ ಆಗಿ ₹38 ಲಕ್ಷ ವಾರ್ಷಿಕ ವೇತನದ ಉದ್ಯೋಗ ಪಡೆದಿದ್ದಾಳೆ. ಇಂಟರ್ನ್‌ಶಿಪ್‌ಗಳು ಮತ್ತು ಸ್ವಂತ ಪರಿಶ್ರಮದಿಂದ ಯಶಸ್ಸು ಸಾಧಿಸಿದ ಆಕೆಯ ಕಥೆಯು, ಕೌಶಲ್ಯದ ಮಹತ್ವವನ್ನು ಸಾರುತ್ತಾ ಅನೇಕರಿಗೆ ಸ್ಫೂರ್ತಿ ನೀಡಿದೆ.
Read Full Story

07:10 PM (IST) Aug 08

Yash Toxic Trailer Launch - 'ಟಾಕ್ಸಿಕ್' ಟ್ರೇಲರ್ ಲಾಂಚ್; ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'.. ಹಾಲಿವುಡ್ ರೇಂಜ್ ಮೇಕಿಂಗ್!

ಇಂದು ಬೆಂಗಳೂರಿನಲ್ಲಿ ನಡೆದ ಟಾಕ್ಸಿಕ್ ಈವೆಂಟ್‌ನ ಕೇಂದ್ರಬಿಂದುವಾಗಿ ರಾಕಿಂಗ್ ಸ್ಟಾರ್ ಯಶ್ 'ಕಿಂಗ್' ಆಗಿ ಮಿಂಚಿದ್ದಾರೆ. ಇಡೀ ಟಾಕ್ಸಿಕ್ ಟೀಮ್ ಅವರಿಗೆ ಸಾಥ್ ಕೊಟ್ಟಿದೆ. ಟ್ರೇಲರ್ ರಿಲೀಸ್ ಬಳಿಕ 'ಟಾಕ್ಸಿಕ್' ಸಿನಿಮಾ ಮತ್ತಷ್ಟು ಅಪಾರ ನಿರೀಕ್ಷೆ ಸೃಷ್ಟಿಸಿದೆ. ಟಾಕ್ಸಿಕ್ ಚಿತ್ರವು 08 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.

Read Full Story

06:53 PM (IST) Aug 08

Toxic Trailer Launch - ಟಾಕ್ಸಿಕ್ ಟ್ರೇಲರ್‌ ಲಾಂಚ್‌- ಬೆಂಗಳೂರಿಗೆ ಬಂದಿಳಿದ 'ಲೇಡಿ ಸೂಪರ್ ಸ್ಟಾರ್' ನಯನತಾರಾ

ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆಗೆ, ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಈ ಈವೆಂಟ್‌ಗೆ ನಟಿ ನಯನತಾರಾ ಆಗಮಿಸಿದ್ದಾರೆ.

Read Full Story

06:35 PM (IST) Aug 08

ಚಳಿ, ಹಿಮ, ಗಡ್ಡೆಗಟ್ಟುವ ಸಮುದ್ರ.. ಆದರೂ ಪೆಂಗ್ವಿನ್‌ಗಳಿಗೆ ಏನೂ ಆಗಲ್ಲ - ಏನಿದರ ರಹಸ್ಯ?

ಅಂಟಾರ್ಕ್ಟಿಕಾ ಎಂದರೆ ನೆನಪಾಗುವುದೇ ಹಿಮ, ಕೊರೆಯುವ ಚಳಿ ಮತ್ತು ಗಡ್ಡೆಗಟ್ಟಿಸುವ ಗಾಳಿ. ಇದು ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದ್ದು, ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್‌ 50 ಡಿಗ್ರಿ..

Read Full Story

06:16 PM (IST) Aug 08

‘ಆ ನಟಿಯ ಮೃತದೇಹ ನೋಡಿದಾಗ ತಲೆ ಇರಲಿಲ್ಲ; ಜೀವನ ಅಂದರೆ ಇಷ್ಟೇನಾ ಅನಿಸಿತು’ - ನಟಿ ಪ್ರೇಮಾ ಭಾವುಕ ನೆನಪು

ನಟಿ ಪ್ರೇಮಾ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ನಾಯಕಿಯಾಗಿ ಬಹುಬೇಡಿಕೆಯಲ್ಲಿದ್ದ ಅವರು, ಸದ್ಯ ಸಿನಿಮಾಗಳ ಸಂಖ್ಯೆಯನ್ನು ಕೊಂಚ ಕಡಿಮೆ ಮಾಡಿದ್ದಾರೆ.

Read Full Story

05:57 PM (IST) Aug 08

ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ, ಪಿಒಪಿ, ರಾಸಾಯನಿಕ ಗಣೇಶ ವಿಗ್ರಹ ನಿಷೇಧ

ಗಣೇಶ ಹಬ್ಬದ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಆರಂಭದಲ್ಲಿ ಖಡಕ್ ಮಾರ್ಗಸೂಚಿ ಪ್ರಕಟಿಸಿದೆ. ಕೆಲ ಪ್ರಮುಖ ನಿರ್ಬಂಧನೆ, ನಿಷೇಧಗಳನ್ನು ಹೇರಲಾಗಿದೆ.

Read Full Story

05:51 PM (IST) Aug 08

Daddy's Home.. ಯಶ್‌ 'ಟಾಕ್ಸಿಕ್‌' ಟ್ರೇಲರ್‌ ಲಾಂಚ್‌ಗೆ ಭರ್ಜರಿ ಸಿದ್ಧತೆ - ಕಾರ್ಯಕ್ರಮದ ವಿಶೇಷತೆಗಳೇನು?

‘ಟಾಕ್ಸಿಕ್‌’ ಟ್ರೇಲರ್‌ ಲಾಂಚ್‌ ಅನ್ನು ಸಾರ್ವಜನಿಕ ಕಾರ್ಯಕ್ರಮವಾಗಿ ಆಯೋಜಿಸಿಲ್ಲ. ಇದು ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಆಯ್ದ ಅತಿಥಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

Read Full Story

05:30 PM (IST) Aug 08

ಪ್ರಿಯಾಂಕ ಉಪೇಂದ್ರ 'ಡಿಟೆಕ್ಟಿವ್ ತೀಕ್ಷ್ಣ' ಸಿನಿಮಾ ಹೇಗಿದೆ? ಚುರುಕು ಬುದ್ಧಿ, ಹರಿತ ಫೈಟ್‌, ಸಕತ್ ತನಿಖೆ

Detective Teekshana: ‘ಇಲ್ಲಿ ಲಾಜಿಕ್‌ ವರ್ಕೌಟ್‌ ಆಗಲ್ಲ, ಮ್ಯಾಜಿಕ್‌ ನಡೆಯಬೇಕು’. ಕುಖ್ಯಾತ ಕೇಸೊಂದನ್ನು ಬಗೆಹರಿಸಲು ತಿಣುಕಾಡುವಾಗ ಡಿಟೆಕ್ಟಿವ್‌ ತೀಕ್ಷ್ಣ ಹೇಳುವ ಡೈಲಾಗ್‌ ಇದು. ಲೈಫಲ್ಲೂ ಎಷ್ಟೋ ಸಲ ಹೀಗಾಗುತ್ತದೆ.

Read Full Story

05:15 PM (IST) Aug 08

Life Today Review - ಪ್ರೀತಿಗೆ ದೂರವಿದ್ದ ಯುವಕನನ್ನು ಆಕೆ ಪ್ರೀತಿಯಲ್ಲಿ ಬೀಳಿಸಿದಳು - ಮುಂದೆ ಏನಾಯ್ತು?

Life Today Review: ಮೊದಲಾರ್ಧ ಪ್ರೇಮದಲ್ಲಿ ಕಳೆಯುತ್ತದೆ. ಆಮೇಲೆ ಕೊಂಚ ವಿಷಾದ. ನಂತರದ್ದು ಹಾವು ಏಣಿಯಾಟ. ಬದುಕು ಏರುಪೇರಿನ ಹಾದಿ. ಘರ್ಷಣೆಯಲ್ಲಿಯೇ ಬಹುತೇಕ ದ್ವಿತೀಯಾರ್ಧ ಮುಗಿಯುತ್ತದೆ.

Read Full Story

05:07 PM (IST) Aug 08

ಯಶ್ ಈಗ ಜಗತ್ತೇ ಲವ್ ಮಾಡೋ ನಟ.. ಆದ್ರೆ, ಕೆಜಿಎಫ್ ರಿಲೀಸ್ ವೇಳೆ ಭಾರೀ 'ಹೈಡ್ರಾಮಾ' ನಡೆದಿತ್ತು! ಅದೇನು ನೋಡಿ..

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಜಗತ್ತೇ ಕೊಂಡಾಡುವ ನಟ. ಆದರೆ, ಕೆಜಿಎಫ್ ಸಿನಿಮಾ ಬಿಡುಗಡೆ ವೇಳೆ ನಡೆದ ಹೈಡ್ರಾಮಾ ನಡೆದಿತ್ತು. ಕಾರಣ, ಅಂದು ನಟ ಯಶ್ ಅವರು ಕನ್ನಡ ಸಿನಿಜಗತ್ತಿನ 'ರಾಜಾಹುಲಿ' ಮಾತ್ರ ಆಗಿ ಮಿಂಚುತ್ತಿದ್ದರು. ಅದೇನು ಆಗಿತ್ತು ನೋಡಿ..!

Read Full Story

05:05 PM (IST) Aug 08

Pichchar Review - ನಾಯಕನಿಗೆ ಕುಟುಂಬವೇ ಇಲ್ಲ.. ನಾಯಕಿಗೆ ಮಾತ್ರ ದೊಡ್ಡ ಕುಟುಂಬ ಬೇಕು!

Pichchar Review: ಎಲ್ಲಾ ಸಂಬಂಧಗಳು ಇರುವ ದೊಡ್ಡ ಕುಟುಂಬ ಬೇಕು ಎನ್ನುವ ನಾಯಕಿ, ಎಲ್ಲರಿಂದಲೂ ದೂರವಾಗಿರುವ ನಾಯಕ. ಈ ಇಬ್ಬರು ಪ್ರೀತಿಯಲ್ಲಿ ಗೆಲ್ಲುವುದಕ್ಕೆ ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ ಎಂಬುದೇ ಚಿತ್ರದ ಕತೆ.

Read Full Story

04:54 PM (IST) Aug 08

ಬಾಸ್‌ ಸಿನಿಮಾ ಹೇಗಿದೆ? ‘ನಾವೇ ಕೊಲೆ ಮಾಡಿದ್ದು’ ಎಂದ ನಾಲ್ವರು - ಮುಂದೇನಾಗುತ್ತೆ?

Boss Movie Review: ಬೆಂಗಳೂರಿನ ಮೋರಿ ಪಕ್ಕದಲ್ಲಿ ಮೃತ ದೇಹವೊಂದನ್ನು ನಾಯಿಗಳು ಕಚ್ಚಿಸುತ್ತಿರುವುದನ್ನು ಮೋರಿ ಪಕ್ಕದಲ್ಲೇ ಇದ್ದ ಅಪಾರ್ಟ್‌ಮೆಂಟ್‌ನ ಭದ್ರಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

Read Full Story

04:50 PM (IST) Aug 08

ಬೆಂಗಳೂರು-ಮೆಜೆಸ್ಟಿಕ್ ಬಳಿ ಯಶ್ ಹವಾ; ರಾಕಿಂಗ್ ಸ್ಟಾರ್ ನೋಡಲು ನೂರಾರು ಜನ ಫ್ಯಾನ್ಸ್ ಆಗಮನ!

ಯಶ್ ಬರುತ್ತಿರೋ ಹಿನ್ನೆಲೆ ಮಾಲ್ ಹೊರಗಡೆ ಸೇರಿರೋ ಅಭಿಮಾನಿಗಳು 'ಯಶ್‌.. ಯಶ್‌ ಎಂದು ಕನವರಿಸುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಕನ್ನಡದ ಸ್ಟಾರ್ ನಟ, ಕನ್ನಡ ಭಾಷೆಯ ಪ್ಯಾನ್ ವರ್ಲ್ಡ್‌ ಸಿನಿಮಾ ಟಾಕ್ಸಿಕ್‌ನ ಟ್ರೇಲರ್ ಲಾಂಚ್‌ಗೆ ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಎಎಂಬಿ ಮಾಲ್ ಸಾಕ್ಷಿಯಾಗಲಿದೆ.

Read Full Story

04:42 PM (IST) Aug 08

Mobile - ಸ್ಯಾಮ್‌ಸಂಗ್ ಫೋನ್ ಈಗ ಬರಿ ಅರ್ಧ ಬೆಲೆಗೆ? ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ವಿವರ ಇಲ್ಲಿದೆ!

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಫ್ಲಿಪ್‌ಕಾರ್ಟ್ ಭಾರಿ ಇಳಿಕೆ ಮಾಡಿದೆ. ನೇರ ರಿಯಾಯಿತಿ, ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಕೊಡುಗೆಗಳನ್ನು ಬಳಸಿಕೊಂಡು ಈ ಪ್ರೀಮಿಯಂ ಫೋನನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವುದು ಹೇಗೆಂದು ಈ ಲೇಖನ ವಿವರಿಸುತ್ತದೆ.
Read Full Story

04:41 PM (IST) Aug 08

Ayogya 2 Review - ಸತೀಶ್ ನೀನಾಸಂ ಕೊಡೊ ಕೊನೆಯ ಟ್ವಿಸ್ಟ್ ಇಡೀ ಕತೆಯನ್ನೇ ಬದಲಿಸುತ್ತಾ?

Ayogya 2 Movie Review: ಅಯೋಗ್ಯ 1 ಚಿತ್ರದ ಮುಂದುವರಿದ ಭಾಗ ಇದು. ಆರಂಭದಲ್ಲಿಯೇ ಭಾಗ 1ರ ಕತೆಯನ್ನು ಹೇಳುತ್ತಾರಾದ್ದರಿಂದ ನೇರವಾಗಿ ಭಾಗ 2 ನೋಡುವವರಿಗೆ ಕತೆ ಮಿಸ್ ಆಗುವ ಚಾನ್ಸ್‌ ಇಲ್ಲ.

Read Full Story

04:23 PM (IST) Aug 08

ಬೆಂಗಳೂರಿನ 29 ಸ್ಥಗಳಲ್ಲಿದ್ದ ಅಕ್ರಮ ಬಾಂಗ್ಲಾದೇಶಿಗಳ ಮೇಲೆ ಪೊಲೀಸ್ ದಾಳಿ, 1909 ಮಂದಿ ವಶ

ಬೆಂಗಳೂರಿನ 29 ಕಡೆ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶಿಗಳ ವಿರುದ್ದ ಪೊಲೀಸರು ದಾಳಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಈ ದಾಳಿ ನಡೆದಿದ್ದು ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.

Read Full Story

04:13 PM (IST) Aug 08

Bengaluru - ಹೆಂಡಿತಿ ರೀಲ್ಸ್ ನೋಡುತ್ತಾಳೆ ಅಂತ ಕೊಲೆಗೈದು ಮೂಟೆ ಕಟ್ಟಿದ ಗಂಡ; ಆರೋಪಿ ಸಿಕ್ಕಿದ್ದೇ ರೋಚಕ!

ತನಿಖೆ ಸಂದರ್ಭದಲ್ಲಿ ಆರೋಪಿ ಕೊಲೆಯ ಹಿಂದಿನ ಕಾರಣ ರಿವೀಲ್ ಮಾಡಿದ್ದು, 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದನಂತೆ. ಆದರೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಬಳಿಕ ಆಕೆ ಗಂಡನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಳು ಅಂತ ಹೇಳಿದ್ದನಂತೆ.

Read Full Story

02:23 PM (IST) Aug 08

ಮುದುಕ-ಮುದುಕಿಯಾದ ಅಮೂಲ್ಯ ಗೌಡ & ನಿರಂಜನ್; ರಿಷಿ ಸರ್ ಎಷ್ಟು ರೊಮ್ಯಾಂಟಿಕ್ ಅಲ್ಲವಾ?

'ಕಮಲಿ' ಸೀರಿಯಲ್ ಖ್ಯಾತಿಯ ಅಮೂಲ್ಯ ಗೌಡ ಮತ್ತು ನಿರಂಜನ್ ಇದೀಗ ನಿಜ ಜೀವನದಲ್ಲೂ ಜೋಡಿಯಾಗಿದ್ದಾರೆ. ತೆಲುಗು ರಿಯಾಲಿಟಿ ಶೋ ಒಂದರಲ್ಲಿ ನಿರಂಜನ್, ಅಮೂಲ್ಯಾಗೆ ಕಾಲ್ಗೆಜ್ಜೆ ತೊಡಿಸಿ, ಉಂಗುರ ನೀಡಿ ಎಲ್ಲರ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಈ ಕ್ಷಣಕ್ಕೆ ಅಮೂಲ್ಯ ಭಾವುಕರಾಗಿದ್ದಾರೆ.
Read Full Story

02:02 PM (IST) Aug 08

ಯಶ್ ಟಾಕ್ಸಿಕ್ ಟ್ರೇಲರ್ ಲಾಂಚ್‌ಗೆ ಮುಖ್ಯ ಅತಿಥಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್!

ಕನ್ನಡದ ನಟ ಯಶ್ ಅವರು ಕೆಜೆಎಫ್ ಬಳಿಕ ಇಡೀ ಜಗತ್ತು ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ ‘ಟಾಕ್ಸಿಕ್’ ಪ್ಯಾನ್ ವರ್ಲ್ಡ್ ಸಿನಿಮಾ ಮೂಲಕ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸುತ್ತಿದ್ದಾರೆ. ಇಂದಿನ ಟ್ರೇಲರ್‌ ಲಾಂಚ್‌ ಮುಖ್ಯ ಅತಿಥಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್.

Read Full Story

01:25 PM (IST) Aug 08

ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸುನಿಲ್ ಜೋಶಿ ಶಹಬ್ಬಾಶ್.. ಬೆಂಗಳೂರಿನ 233 ಅಂಗಡಿಗಳ ತೆರವಿಗೆ ಜೈ ಎಂದ ಮಾಜಿ ಕ್ರಿಕೆಟಿಗ

ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಏನಂದ್ರು ಜೋಶಿ?

Read Full Story

01:05 PM (IST) Aug 08

ಯಶ್ 'ಟಾಕ್ಸಿಕ್' ಟ್ರೇಲರ್ ಲಾಂಚ್ ಮುಹೂರ್ತ 7 - 01PM; ಈ ಟೈಮ್ ಹಿಂದಿರೋ ಸೀಕ್ರೆಟ್ ಏನ್ ಗೊತ್ತಾ?

ಇಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಕುತೂಹಲದ ಜೊತೆಜೊತೆಗೆ ಬಹಳಷ್ಟು ನಿರೀಕ್ಷೆಯನ್ನೂ ಜಗತ್ತಿನಾದ್ಯಂತ ಹುಟ್ಟುಹಾಕಿದೆ. ಜೊತೆಗೆ, ಟೈಮಿಂಗ್ಸ್- 7:01 ಸೀಕ್ರೆಟ್ ಇಲ್ಲಿದೆ ನೋಡಿ..

Read Full Story

12:58 PM (IST) Aug 08

Bengaluru Crime News - ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ; ಡುಪ್ಲೆಕ್ಸ್ ಮನೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ, ವರ್ಷದ ಹಿಂದೆ ಸಾವನ್ನಪ್ಪಿರುವ ಶಂಕೆ

ಬೆಂಗಳೂರಿನ ಬಾಗಲಕುಂಟೆಯಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 57 ವರ್ಷದ ಮಹಿಳೆಯ ಅಸ್ಥಿಪಂಜರ ಅವರ ಮನೆಯಲ್ಲಿ ಪತ್ತೆಯಾಗಿದೆ. ಸುಮಾರು ಒಂದು ವರ್ಷದ ಹಿಂದೆ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

Read Full Story

12:52 PM (IST) Aug 08

ಪೊಲೀಸರಿಗೇ ಚಾಲೆಂಜ್ ಹಾಕಿದ ಭೂಪ​ - 25 ಬಾಂಗ್ಲಾದವರ ಕಳಿಸಿದ್ದೇನೆ, ಪತ್ತೆ ಹಚ್ಚಿ ಎಂದು ವಿಡಿಯೋ- ಬಳಿಕ ಏನಾಯ್ತು

ವ್ಯಕ್ತಿಯೊಬ್ಬ, 25 ಬಾಂಗ್ಲಾದೇಶಿಯರನ್ನು ಬೆಂಗಳೂರಿಗೆ ಕಳುಹಿಸಿದ್ದು, ಅವರು ಪೊಲೀಸರು ಮತ್ತು ರಾಜಕಾರಣಿಗಳನ್ನು ಟಾರ್ಗೆಟ್ ಮಾಡುತ್ತಾರೆ ಎಂದು ವಿಡಿಯೋ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಿಸಿಬಿ ಪೊಲೀಸರು ಆತನನ್ನು ಮಂಡ್ಯದ ಸಂತೋಷ್ ಕುಮಾರ್ ಎಂದು ಗುರುತಿಸಿದ್ದು, ಆತ ನಂತರ ಕ್ಷಮೆಯಾಚಿಸಿದ್ದಾನೆ.

Read Full Story

12:29 PM (IST) Aug 08

ನೀಲಿ ಮತ್ತು ಕಿತ್ತಳೆ ಲೈನ್​ ಮೆಟ್ರೋ ಬಗ್ಗೆ BMRCL ಬಿಗ್​ ಅಪ್​ಡೇಟ್ - ಇವುಗಳ ಕಾರ್ಯಾರಂಭ ಯಾವಾಗ

ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್-ವಿಮಾನ ನಿಲ್ದಾಣ ನೀಲಿ ಮಾರ್ಗದ ಕಾಮಗಾರಿ ಶೇ. 72.75ರಷ್ಟು ಪೂರ್ಣಗೊಂಡಿದ್ದು, 2026-27ರ ನಡುವೆ ಹಂತ ಹಂತವಾಗಿ ತೆರೆಯುವ ನಿರೀಕ್ಷೆಯಿದೆ. ಆದರೆ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಅನುಮೋದನೆ ಬಾಕಿ ಇರುವುದರಿಂದ 3ನೇ ಹಂತದ ಆರೆಂಜ್ ಮಾರ್ಗವು ಕೇವಲ ಶೇ. 3.6ರಷ್ಟು ಪ್ರಗತಿ ಸಾಧಿಸಿದೆ.
Read Full Story

12:23 PM (IST) Aug 08

Satish Jarkiholi - ದೆಹಲಿ ಭೇಟಿ ಬಳಿಕ ಜಾರಕಿಹೊಳಿ ಮಹತ್ವದ ಹೇಳಿಕೆ! ಹೊರಟ್ಟಿಗೆ ಬೆದರಿಕೆ ಹಾಕಲಾಯ್ತೇ?

ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ದೆಹಲಿ ಭೇಟಿ ಸಹಜ ಎಂದಿದ್ದು, ಸೋಮವಾರದೊಳಗೆ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಸಚಿವ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯಗೆ ಒತ್ತಾಯಿಸಿದರು. ಸಭಾಪತಿ ಹೊರಟ್ಟಿಯವರಿಗೆ ಬೆದರಿಕೆ ಆರೋಪ ತಳ್ಳಿಹಾಕಿದರು.

Read Full Story

12:03 PM (IST) Aug 08

Namma Metro - ಬೆಂಗಳೂರಿನ ವಾಹನ ಸವಾರರಿಗೆ ಗುಡ್‌ನ್ಯೂಸ್; ಈ ಮಾರ್ಗದಲ್ಲಿ ಟ್ರಾಫಿಕ್ ತಲೆನೋವಿಗೆ ಶೀಘ್ರವೇ ಪರಿಹಾರ!

ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ.

Read Full Story

More Trending News