ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಿದೆ. ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿ ‘ಯಶ್ ನನ್ನ ತಮ್ಮ.. ನಾನು ಈ ಸಿನಿಮಾ ಮಾಡಿದಷ್ಟೇ ಖುಷಿ ಆಗಿದೆ..’ ಎಂದರು. ಇನ್ನೂ ಏನಂದ್ರು? ಈ ಸ್ಟೋರಿ ನೋಡಿ..
Toxic Trailer Launch- Chief Guest Shivarajkumar- Shivarajkumar statement about Rocking Star Yash: ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿದ ಶಿವಣ್ಣ- ಯಶ್ ನನ್ನ ತಮ್ಮ.. ತುಂಬಾ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾನೆ- ನಟ ಶಿವಣ್ಣ ಹೇಳಿಕೆ.
ಇಂದು, 08 ಆಗಸ್ಟ್ 2026ರಂದು ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಿದೆ. ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿ ಖುಷಿಯಿಂದ ಮಾತನ್ನಾಡಿದ್ದಾರೆ. ನಟ ಶಿವಣ್ಣ ಅವರು 'ಯಶ್ ನನ್ನ ತಮ್ಮ.. ನಾನು ಈ ಸಿನಿಮಾ ಮಾಡಿದಷ್ಟೇ ಖುಷಿ ಆಗಿದೆ.. ಕನ್ನಡಿಗರಾಗಿ ಈ ಮಟ್ಟಕ್ಕೆ ಹೋಗಿದ್ದು ನಮಗೆ ದೊಡ್ಡ ಖುಷಿ ತಂದಿದೆ... ಯಶ್ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾರೆ.. ಈ ಟ್ರೈಲರ್ ನೋಡಿ ತುಂಬಾ ಖುಷಿ ಆಯ್ತು..' ಎಂದಿದ್ದಾರೆ.
'ಟಾಕ್ಸಿಕ್' ಟ್ರೇಲರ್ ಬಿಡುಗಡೆಗೆ ಯಶ್ ಪತ್ನಿ ರಾಧಿಕಾ ಪಂಡಿತ್ ಹಾಜರಾಗಿ ಪಕ್ಕದಲ್ಲೇ ಕುಳಿತು ಸಾಥ್ ಕೊಟ್ಟಿದ್ದಾರೆ. ಈ ಈವೆಮಟ್‌ನ ಮುಖ್ಯ ಅತಿಥಿಯಾಗಿ ಭಾಗಿಯಾಗಿರುವ ಕನ್ನಡದ ಹಿರಿಯ ನಟ ಶಿವಣ್ಣ ಸೇರಿದಂತೆ, ಟಾಕ್ಸಿಕ್ ಚಿತ್ರದ ನಟಿಯರಾದ ನಯನತಾರಾಮ ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಈ ಕಾರ್ಯಕ್ರಮದ ಉದ್ದಕ್ಕೂ ಸಖತ್ ಮಿಂಚುತ್ತಿದ್ದರು. ಟಾಕ್ಸಿಕ್ ಚಿತ್ರದ 5 ನಟಿಯರೂ ಪರಸ್ಪರ ಕುಶಲೋಪರಿ ಮಾಡುತ್ತಿದ್ದುದು ವೇದಿಕೆಯಲ್ಲಿ ಕಂಡುಬಂತು. ಇನ್ನು ಟಾಕ್ಸಿಕ್ ಚಿತ್ರದ ನಟರಾದ ವಿವೇಕ್ ಒಬೆರಾಯ್, ಸುದೇವ್ ನಾಯರ್ ಸಹ ಹಾಜರಾಗಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿದ್ದಾರೆ.
ಯಶ್ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಬಳಿಕ 'ಇಟ್ಸ್ ಟೈಮ್- ಐ ಆಮ್ ಕಮಿಂಗ್' ಎನ್ನುವ ಡೈಲಾಗ್ ಭಾರೀ ವೈರಲ್ ಅಗುತ್ತಿದೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಟಾಕ್ಸಿಕ್ ಟ್ರೇಲರ್ 4 ನಿಮಿಷ 38 ಸೆಕೆಂಡ್ ಅವಧಿಯದ್ದಾಗಿದೆ. ಈ ಟ್ರೇಲರ್‌ನಲ್ಲಿ ತಂದೆ-ಮಗನ ಸೆಂಟಿಮೆಂಟ್ಸ್ ಇದೆ, ಐವರು ನಾಯಕಿಯರ ವಿಭಿನ್ನ ಪಾತ್ರವಿದೆ, ಕಥೆಯ ತಿರಳು ತಿಳಿಯಲಾಗದಿದ್ದರೂ ಎಲ್ಲೋ ಒಮದು ಕಡೆ ಇದು ಪ್ರೀತಿ ಹಾಗೂ ಮೋಸದ ಬಲೆಯ ಕಥೆ ಎಂಬ ಸಂದೇಹಕ್ಕೆ ದಾರಿ ಮಾಡಿಕೊಟ್ಟಿದೆ. ಟ್ರೇಲರ್‌ನಲ್ಲಿ ನಾಯಕ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಲುಕ್ ಹಾಗೂ ಮ್ಯಾನರಿಸಂ ಮೂಲಕ ಇಡೀ ಟ್ರೇಲರ್ ಅವರಿಸಿರುವುದು ಅರ್ಥವಾಗುವಂತಿದೆ.
ನಾಯಕಿಯರ ಪಾತ್ರಗಳು ವಿಭಿನ್ನವಾಗಿವೆ ಎಂಬ ಹಿಂಟ್ ಸಿಗುತ್ತದೆ. ತಾರಾ ಸುತಾರಿಯಾ ಹಾಗೂ ಕಿಯಾರಾ ಅಡ್ವಾನಿ ಇಬ್ಬರ ಪಾತ್ರಗಳೂ ರೊಮ್ಯಾಂಟಿಕ್ ಮೂಡ್ ಹಾಗೂ ಗ್ಲಾಮರಸ್ ಸೃಷ್ಟಿಸಿದ್ದರೆ ನಯನತಾರಾ ಹಾಗೂ ರುಕ್ಮಿಣಿ ವಸಂತ್ ಈ ಇಬ್ಬರ ಪಾತ್ರಗಳೂ ಅದಕ್ಕೆ ತದ್ವಿರುದ್ಧ ಎಂಬಂತೆ ಯಶ್ ಪಾತ್ರಕ್ಕೇ ಉಪದೇಶ ಮಾಡುವಂತೆ ಕಂಡುಬರುತ್ತಿವೆ. ಯಶ್ ಒಂದು ಹಂತದಲ್ಲಿ ಹೇಳುವ 'ಇಟ್ಸ್ ಟೈಂ ಐ ಆಮ್ ಕಮಿಂಗ್ (It's Time I'm Coming) ಡೈಲಾಗ್, ಹಿಂಸೆ ಮಿತಿಮೀರಿದಾಗ 'ಅವತಾರ ಎತ್ತುವಂತೆ' ಎನ್ನಿಸುತ್ತದೆ.
ಇಡೀ ಕಥೆಯಲ್ಲಿ ಹಿಂಸೆ ಕ್ರೌರ್ಯ ಹಾಗೂ ಸೆಂಟಿಮೆಂಟ್ ಒದಕ್ಕೊಂದು ಬೆಸೆದುಕೊಂಡಿದೆ ಎಂಬಂತೆ ಟ್ರೇಲರ್ ಫೀಲ್ ಕೊಡುತ್ತಿದೆ. ಅಪ್ಪ-ಮಗನ ಬಾಂಧವ್ಯವೇ ಒಂದು ಹಂತದಲ್ಲಿ ದ್ವೇಷಕ್ಕೆ ದಳ್ಳುರಿಗೆ ದಾರಿ ಆಗಿರುವಂತೆ ಎನ್ನಿಸುತ್ತಿದೆ. ನಾಯಕನ ಮುಖಕ್ಕೇ ಉಗಿಯುವ ನಾಯಕಿ, 'ಅನಾಗರೀಕ'ನ ಜೊತೆ ಮಾತನಾಡಲ್ಲ ಎನ್ನುವ ಇನ್ನೊಬ್ಬ ನಾಯಕಿ ಹೀಗೆ ಇಡೀ ಟ್ರೇಲರ್‌ನಲ್ಲಿ ಕಥೆ ವಿಭಿನ್ನವಾಗಿವೆ ಎನ್ನುವ ಊಹೆಗೆ ಪಕ್ಕಾ ಆಸ್ಪದ ಕೊಟ್ಟಿದೆ. ಮಿಕ್ಕಂತೆ, ಟ್ರೇಲರ್ ನೋಡಿ ಪಕ್ಕಾ ಕಥೆ ಊಹೆ ಮಾಡುವುದು ಕಷ್ಟ ಎನ್ನುವುದರ ಜೊತೆಗೆ, ಊಹೆ ಮಾಡಲೂಬಾರದು ಎನ್ನುವುದೇ ಸರಿ.
ಒಟ್ಟಿನಲ್ಲಿ, ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ. ಇಡೀ ಜಗತ್ತೇ ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ.


