ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆಗೆ, ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಈ ಈವೆಂಟ್‌ಗೆ ನಟಿ ನಯನತಾರಾ ಆಗಮಿಸಿದ್ದಾರೆ.

Nayanthara entry for Toxic Trailer Event at Bengaluru: ಟಾಕ್ಸಿಕ್ ಟ್ರೇಲರ್‌ ಈವೆಂಟ್‌ಗೆ ನಟಿ ನಯನತಾರಾ ಆಗಮನ!

ಇಂದು, ಅಂದರೆ 08 ಆಗಸ್ಟ್ 2026ರ ಸಾಯಂಕಾಲ ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ನಡೆಯಲಿರುವುದು ಗೊತ್ತೇ ಇದೆ. ಅದಕ್ಕೆ ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಸೇರಿದಂತೆ ಇಡೀ ಚಿತ್ರತಂಡ ಹಾಜರಾಗಿದೆ. ಟ್ರೇಲರ್ ಈವೆಂಟ್‌ಗೆ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿರುವ ನಟಿ ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಸುದೇವ್ ನಾಯರ್, ಅಕ್ಷಯ್ ಬೆಂಗಳೂರಿಗೆ ಬೆಳಿಗ್ಗೆಯೇ ಬಂದಿದ್ದಾರೆ. ಇದೀಗ ನಟಿ ನಯನತಾರಾ ಅವರ ಆಗಮನವಾಗಿದೆ.

ಹೌದು, ಇಂದು ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಏರಿಯಾದಲ್ಲಿರುವ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಈವೆಂಟ್ ನಡೆಯಲಿದ್ದು, ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಟ್ರೇಲರ್ ಲಾಂಚ್ ಅಂದ್ರೆ ಸುಮ್ನೆನಾ? ಇದು ಕನ್ನಡದ ಹುಡುಗ, ಕೆಜಿಎಫ್ ರಾಕಿ ಭಾಯ್ ನಟನೆಯ, ಹಾಲಿವುಡ್ ರೇಂಜ್‌ನ ಸಿನಿಮಾ ಟ್ರೇಲರ್ ಲಾಂಚ್ ಈವೆಂಟ್. ಅದಕ್ಕಾಗಿ ಇಡೀ ಚಿತ್ರತಂಡ ಸೇರುವುದು ಖಂಡಿತ ಎನ್ನಲಾಗುತ್ತಿದೆ. ಅನಿವಾರ್ಯ ಕಾರಣದಿಂದ ಯಾರೋ ಒಬ್ಬಿಬ್ಬರು ಗೈರಾಗಬಹುದು ಅಷ್ಟೇ!

ಒಟ್ಟಿನಲ್ಲಿ, ಯಶ್ ನಟನೆ, ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್; ಸಿನಿಮಾ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಕಾರಣ, ಕೆಜಿಎಫ್‌ ಸಿನಿಮಾ ತೆರೆಗೆ ಬಂದು, ಸಾಕಷ್ಟು ವರ್ಷಗಳ ಗ್ಯಾಪ್ ಬಳಿಕ ಯಶ್ ಅವರು ಅದಕ್ಕಿಂತ ಎಷ್ಟೋ ಪಟ್ಟು ಬಿಗ್ ಪ್ರಾಜೆಕ್ಟ್ ಮೂಲಕ ಮತ್ತೊಮ್ಮೆ ಸ್ಕ್ರೀನ್ ಮೇಲೆ ಸಿನಿಮಾ ಪ್ರೇಕ್ಷಕರಿಗೆ ತಮ್ಮ ದರ್ಶನ ಕೊಡುತ್ತಿದ್ದಾರೆ. ಜೊತೆಗೆ, ಈ ಮೊದಲಿನ ಯಶ್ ನಟನೆಯ ಕೆಜಿಎಫ್ ಸರಣಿಗೆ ಹೋಲಿಸಿದರೂ ಕೂಡ ಟಾಕ್ಸಿಕ್ ಸಿನಿಮಾ ಎಲ್ಲಾ ದೃಷ್ಟಿಯಿಂದಲೂ ಇನ್ನೂ ಹೆಚ್ಚಿನ ಸದ್ದು ಮಾಡಲಿರುವ ಸಿನಿಮಾ ಎಂಬುದು ಶತಃಸಿದ್ಧ. ಬಿಗ್ ಬಜೆಟ್, ಬಿಗ್ ಸ್ಟಾರ್ ಕಾಸ್ಟ್‌ ಜೊತೆಗೆ, ಇದು ಕೆಜಿಎಫ್ ತರಹ ಪ್ಯಾನ್ ಇಂಡಿಯಾ ಅಲ್ಲದ, ಪ್ಯಾನ್ ವರ್ಲ್ಡ್‌ ಸಿನಿಮಾ.

ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆಗೆ, ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಜೊತೆಗೆ, ಇಂದಿನ ಈವೆಂಟ್‌ಗೆ ಹಾಜರಾಗಲು ಚಿತ್ರತಂಡದ ಹಲವು ಕಲಾವಿದರು ಬೆಂಗಳೂರಿಗೆ ಆಗಮಿಸಿದ್ದಾರೆ. ನಟಿಯರಾದ ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಈ ಎಲ್ಲಾ ಐವರು ಸುಂದರಿಯರು ಆಗಮಿಸಿ ಟಾಕ್ಸಿಕ್ ಟ್ರೇಲರ್‌ ಈವೆಂಟ್‌ಗೆ ಗ್ಲಾಮರ್ ಕಳೆ ತಂದಿದ್ದಾರೆ. ನಟರಾದ ಸುದೇವ್ ನಾಯರ್, ಅಕ್ಷಯ್ ಒಬೆರಾಯ್ ಕೂಡ ಇದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.