ಇಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಕುತೂಹಲದ ಜೊತೆಜೊತೆಗೆ ಬಹಳಷ್ಟು ನಿರೀಕ್ಷೆಯನ್ನೂ ಜಗತ್ತಿನಾದ್ಯಂತ ಹುಟ್ಟುಹಾಕಿದೆ. ಜೊತೆಗೆ, ಟೈಮಿಂಗ್ಸ್- 7:01 ಸೀಕ್ರೆಟ್ ಇಲ್ಲಿದೆ ನೋಡಿ..
Toxic Trailer Launch 7:01 PM- Know the Secret behind this time Here: ಯಶ್ ನಟನೆಯ ಟಾಕ್ಸಿಕ್ ಟ್ರೇಲರ್ ಲಾಂಚ್ ಮಹೂರ್ತ 7:01ರ ಹಿಂದಿನ ಸೀಕ್ರೆಟ್ ಇಲ್ಲಿದೆ ನೋಡಿ!
ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಇಂದು ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ನಡೆಯಲಿದೆ ಅಂತ ಬಹಳಷ್ಟು ಜನರಿಗೆ ಗೊತ್ತಿದೆ. ಯಶ್ ಅವರ ಕನಸಿನ ಕೂಸು ಟಾಕ್ಸಿಕ್ ಚಿತ್ರವು ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಹೊಂದಿರುವ ಪ್ಯಾನ್ ವರ್ಲ್ಡ್ ಸಿನಿಮಾ. ಈ ಕಾರಣಕ್ಕೆ ಜಗತ್ತೇ ಈ ಸಿನಿಮಾ ಬಗ್ಗೆ ತೀವ್ರ ಕುತೂಹಲ ಹಾಗೂ ನಿರೀಕ್ಷೆ ಇಟ್ಟುಕೊಂಡಿದೆ. ಟಾಕ್ಸಿಕ್ ಟ್ರೇಲರ್ ಇಂದು ಸಾಯಂಕಾಲ 7:01 ಕ್ಕೆ ಬಿಡುಗಡೆ ಆಗಲಿದೆ. ಹಾಗಿದ್ದರೆ ಈ ಟೈಂ ವಿಶೇಷತೆ ಏನು?
ಹೌದು, ಯಶ್ ನಟನೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಆಗೋದು 7 ಗಂಟೆ 01 ನಿಮಿಷಕ್ಕೆ. ನಟ ಯಶ್ ಅವರ ಬರ್ತ್‌ಡೇ 8ರ ದಿನಾಂಕದಂದು. ಯಶ್ ಅವರ ಲಕ್ಕಿ ನಂಬರ್ 8. ಇದೇ ಕಾರಣಕ್ಕೆ ಯಶ್ ಅವರು ತಮ್ಮ ಟಾಕ್ಸಿಕ್ ಟ್ರೇಲರ್ ಲಾಂಚ್ ಟೈಂ ಅನ್ನು (7+1=8) ಕ್ಕೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. '8 ಗಂಟೆಗೇ ಇಟ್ಟುಕೊಳ್ಳಬಹುದಿತ್ತು ಅಲ್ವಾ?' ಅಂತ ಕೆಲವರು ಕೇಳಬಹುದು. ಆದರೆ, 8 ಗಂಟೆಗೆ ಇಟ್ಟರೆ ಅದು ಬಂದು ಹೋಗುವವರಿಗೆ ತುಂಬಾ ಲೇಟ್ ಆಗಿಬಿಡುತ್ತೆ ಎಂಬ ಕಾರಣ ಇರಬಹುದು ಅಲ್ವಾ?
ಇನ್ನು, 8 ಅಂದ್ರೆ ಇನ್ಫಿನಿಟಿ ಅಂತ ಸನಾತನ ಧರ್ಮ, ಯೋಗ-ಆಧ್ಯಾತ್ಮ ಶಾಸ್ತ್ರ ಹೇಳುತ್ತೆ.. ಇಂಗ್ಲಿಷ್‌ನಲ್ಲಿ "Infinity" ಎಂದರೆ ಕನ್ನಡದಲ್ಲಿ "ಅನಂತ" (Anantha) ಅಥವಾ "ಅನಂತತೆ" (Ananthate) ಎಂದು ಅರ್ಥ. ಇದರ ಅರ್ಥ 'ಕೊನೆಯಿಲ್ಲದ' ಅಥವಾ 'ಮಿತಿಯಿಲ್ಲದ' ಎಂದಾಗುತ್ತದೆ. ಅಂದರೆ, 'ಅಂತ್ಯವಿಲ್ಲದ' ಎಂದರ್ಥ. ಇದೇ ಕಾರಣಕ್ಕೆ ಯಶ್ ಅವರು ಈ ಟೈಂ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಾತಿನಲ್ಲಿ ಒಳ್ಳೆಯ ಲಾಜಿಕ್ ಅಂತೂ ಇದೆ.
ಹೌದು, ಯಶ್ ಅವರು ಏನನ್ನೇ ಮಾಡುವಾಗಲೀ ಸಮಗ್ರತೆ ಬಗ್ಗೆ ಯೋಚಿಸುತ್ತಾರೆ, ಪ್ಲಾನ್ ಮಾಡುತ್ತಾರೆ ಎಂಬ ಮಾತಿಗೆ. ಅವರು ಮಾಡುವ ಪ್ರತಿಯೊಂದು ಪ್ರಾಜೆಕ್ಟ್ ಹಿಂದೆ ಸಾಕಷ್ಟು ಲೆಕ್ಕಾಚಾರ ಅಡಗಿರುತ್ತದೆ. ಅದು ಸಿನಿಮಾದ ಮುಹೂರ್ತ ಇರಬಹುದು ಅಥವಾ ಟೀಸರ್, ಟ್ರೇಲರ್ ಹಾಗು ಸಾಂಗ್ ರಿಲೀಸ್ ಇರಬಹುದು. ಅವರು ಯುನಿಕ್ಯೂ ಡೇಟ್ ಹಾಗೂ ಟೈಂ ಸೆಲೆಕ್ಟ್ ಮಾಡೋದಂತೂ ಖಂಡಿತ. ಈ ಕಾರಣಕ್ಕೇ ನಟ ಯಶ್ ಅವರು ವಿಭಿನ್ನ ಹಾಗೂ ವಿಶೇಷ ಆಗಿದ್ದಾರೆ ಎನ್ನಲೂಬಹುದು! ಏನಂತೀರಾ?
ಒಟ್ಟಿನಲ್ಲಿ, ಇಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಕುತೂಹಲದ ಜೊತೆಜೊತೆಗೆ ಬಹಳಷ್ಟು ನಿರೀಕ್ಷೆಯನ್ನೂ ಜಗತ್ತಿನಾದ್ಯಂತ ಹುಟ್ಟುಹಾಕಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಆಗಲಿದೆ. ಅದನ್ನು ಇಡೀ ಜಗತ್ತು ವೀಕ್ಷಿಸಲಿದೆ. ಯಶ್ ಇಷ್ಟಪಟ್ಟಿರುವ ಟೈಂನಲ್ಲಿ, ಯಶ್ ತಾಯ್ನೆಲದಲ್ಲೇ ಈ ಟ್ರೇಲರ್ ಬಿಡುಗಡೆ ಆಗುತ್ತಿರುವುದು ಇನ್ನೂ ವಿಶೇಷ ಎನ್ನಲೇಬೇಕು.


