ಇಂದು ಬೆಂಗಳೂರಿನಲ್ಲಿ ನಡೆದ ಟಾಕ್ಸಿಕ್ ಈವೆಂಟ್‌ನ ಕೇಂದ್ರಬಿಂದುವಾಗಿ ರಾಕಿಂಗ್ ಸ್ಟಾರ್ ಯಶ್ 'ಕಿಂಗ್' ಆಗಿ ಮಿಂಚಿದ್ದಾರೆ. ಇಡೀ ಟಾಕ್ಸಿಕ್ ಟೀಮ್ ಅವರಿಗೆ ಸಾಥ್ ಕೊಟ್ಟಿದೆ. ಟ್ರೇಲರ್ ರಿಲೀಸ್ ಬಳಿಕ 'ಟಾಕ್ಸಿಕ್' ಸಿನಿಮಾ ಮತ್ತಷ್ಟು ಅಪಾರ ನಿರೀಕ್ಷೆ ಸೃಷ್ಟಿಸಿದೆ. ಟಾಕ್ಸಿಕ್ ಚಿತ್ರವು 08 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.
Yash Toxic Trailer Launch-Rocking Star Yash Toxic Movie Trailre Sound-Toxic Movie Global Reaction to Know here. ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಜಗತ್ತೇ ನಿಬ್ಬೆರಗಾಗಿದೆ!
ಇಂದು, ಅಂದರೆ 08 ಆಗಸ್ಟ್ 2026ರಂದು ಇದೀಗ ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ (Toxic Trailre Launch) ಬಿಡುಗಡೆ ಆಗಿದೆ. ಈ ಮಹಾನ್ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಆಗಮಿಸಿದ್ದರು. ಸಾಯಂಕಾಲ 7 ಗಂಟೆ 1 ನಿಮಿಷಕ್ಕೆ ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಟ್ರೇಲರ್ ಲಾಂಚ್ ಆಗಿದೆ. ಟಾಕ್ಸಿಕ್ ಚಿತ್ರದ ನಾಯಕನಟ ಯಶ್, ನಿರ್ದೇಶಕಿ ಗೀತೂ ಮೋಹನ್‌ದಾಸ್, ನಟಿಯರಾದ ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾನಿ ಹಾಗೂ ನಟರಾದ ವಿವೇಕ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಇಡೀ ಟಾಕ್ಸಿಕ್ ಟೀಮ್ ಅಲ್ಲಿ ಹಾಜರಾಗಿದ್ದಾರೆ.
ಟ್ರೇಲರ್‌ನಲ್ಲಿ ಏನಿದೆ?
ಯಶ್ ನಟನೆ, ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಟ್ರೇಲರ್ ಅತ್ಯದ್ಭುತ ಎನ್ನುವಂತಿದೆ. ರಿಚ್ ಮೇಕಿಂಗ್, ಹಾಲಿವುಡ್ ಟಚ್ ಹೊಂದಿರುವ ಕನ್ನಡದ ಸಿನಿಮಾ ಟಾಕ್ಸಿಕ್, ಬಿಗ್ ಬಜೆಟ್ ಹಾಗೂ ಬಹುತಾರಾಗಣದ ಮೂಲಕ ಗಮನ ಸೆಳೆಯುತ್ತಿದೆ. ನಮ್ಮ ಕನ್ನಡದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಇಡೀ ಟ್ರೇಲರ್‌ನಲ್ಲಿ ನಿರೀಕ್ಷೆ ಮೀರಿ ಹೈಲೈಟ್ ಆಗಿದ್ದಾರೆ. ಜೊತೆಗೆ, ಇಡೀ ಟ್ರೇಲರ್‌ನಲ್ಲಿ ಮಿಂಚಿದ್ದಾರೆ.
ಟ್ರೇಲರ್ ಸಂಗೀತ, ದೃಶ್ಯಗಳು 'ವಾರೆವ್ಹಾ' ಎನ್ನುವಂತಿವೆ. ನೇಚರ್, ಮರುಭೂಮಿ, ಗಗನಚುಂಬಿ ಕಟ್ಟಡಗಳು ಹೀಗೆ ಎಲ್ಲವೂ ಇರುವ ಟ್ರೇಲರ್ ಭಾರೀ ಹೈಪರ್ ಆಗಿದೆ. ಯಶ್ ಅವರ ದ್ವಿಪಾತ್ರದ ಲುಕ್ ಹಾಗೂ ಅಟಿಟ್ಯೂಡ್ ಎಲ್ಲವನ್ನೂ ಕಟ್ಟಿಕೊಟ್ಟಿದೆ. ಕನ್ನಡದ ನಟ ಈ ಮಟ್ಟಿಗೆ ಜಾಗತಿಕವಾಗಿ ಮಿಂಚಲು ಸಾಧ್ಯ, ಮಿಂಚುತ್ತಿದ್ದಾರೆ ಎಂಬುದನ್ನು ಟಾಕ್ಸಿಕ್ ಟ್ರೇಲರ್ ಮೂಲಕ ಕನ್ನಡದ ಕುವರ ಯಶ್ ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ. ಸಿನಿಮಾ ಟ್ರೇಲರ್ ಮೇಕಿಂಗ್ ಈ ಚಿತ್ರದ ಬಿಗ್ ಬಜೆಟ್ ಹಾಗೂ ರಿಚ್‌ನೆಸ್ ಬಗ್ಗೆ ಹೇಳುವುದು ಮಾತ್ರವಲ್ಲ, ಇಡೀ ಸಿನಿಮಾಗೆ ಯಶ್ ಅವರೇ ಕಿಂಗ್ ಎನ್ನುವುದನ್ನು ಗ್ಯಾರಂಟಿ ಕಾರ್ಡ್ ಸಮೇತ ಎನ್ನುವಂತೆ ಹೇಳುತ್ತಿದೆ.
ಯಶ್ ಕನಸಿನ ಬಿಗ್ ಬಜೆಟ್ ಸಿನಿಮಾ ‘ಟಾಕ್ಸಿಕ್’
ಕನ್ನಡಿಗ ನಟ, ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಬಿಗ್ ಬಜೆಟ್ ಸಿನಿಮಾ 'ಟಾಕ್ಸಿಕ್'. ಈ ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಬಹಳಷ್ಟು ಸೌಂಡ್ ಮಾಡಿವೆ. ಇಂದು ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ಭಾರೀ ಸೌಂಡ್ ಮಾಡತೊಡಗಿದೆ. ಈ ಟ್ರೇಲರ್ ನೋಡಿದರೆ ಸಿನಿಮಾ ಮೇಕಿಂಗ್ ಹಾಗೂ ರಿಚ್‌ನೆಸ್ ಬಗ್ಗೆ ಯಾರೇ ಆದರೂ ಊಹೆ ಮಾಡಬಹುದು. ಟ್ರೇಲರ್‌ನಲ್ಲಿ ಯಶ್ ಅವರ ಲುಕ್ ಹಾಗೂ ನಟನೆ ಸಿನಿಮಾದ ಕಥೆ ಪೂರ್ತಿಯಾಗಿ ಹೇಳದಿದ್ದರೂ, ಕಥೆಯಲ್ಲಿ ಗಟ್ಟಿತನ ಇದೆ, ಸಾಕಷ್ಟು ಸಸ್ಪೆನ್ಸ್ ಇದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿವೆ. ಐದು ನಟಿಯರ ಕಾದಾಟ, ಲವ್ ಸೆಂಟಿಮೆಂಟ್ಸ್ ಜೊತೆಗೆ ಅನೇಕ ನಟರ ಕೈಚಳಕ ಕೂಡ ಟ್ರೇಲರ್‌ನಲ್ಲಿ ಬಂದುಹೋಗಿದೆ. ಈ ಎಲ್ಲಾ ಅಂಶಗಳನ್ನು ನೋಡಿದ ಸಿನಿರಸಿಕರಿಗೆ ಸಿನಿಮಾ ನೋಡಲೇಬೇಕು ಎಂಬ ಕುತೂಹಲ ಸಾವಿರಪಟ್ಟು ಹೆಚ್ಚಾಗಿದೆ.
ಒಟ್ಟಿನಲ್ಲಿ, ಕನ್ನಡದ ನಟ ಯಶ್ ಅವರು ತಾವು ದೊಡ್ಡ ಕನಸು ಕಂಡಿರುವಂತೆ, 'ಕೆಜಿಎಫ್' ಸಿನಿಮಾ ಬಳಿಕ ಇಡೀ ಜಗತ್ತು 'ಟಾಕ್ಸಿಕ್' ಚಿತ್ರದ ಮೂಲಕ ಜಗತ್ತು ಮತ್ತೆ ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ ಟಾಕ್ಸಿಕ್ ಎಂಬ ಪ್ಯಾನ್ ವರ್ಲ್ಡ್ ಸಿನಿಮಾಗೆ ನಾಯಕರಾಗಿ ಇಡೀ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಟಾಕ್ಸಿಕ್ ಈವೆಂಟ್‌ನ ಕೇಂದ್ರಬಿಂದುವಾಗಿ ರಾಕಿಂಗ್ ಸ್ಟಾರ್ ಯಶ್ 'ಕಿಂಗ್' ಆಗಿ ಮಿಂಚಿದ್ದಾರೆ. ಇಡೀ ಟಾಕ್ಸಿಕ್ ಟೀಮ್ ಅವರಿಗೆ ಸಾಥ್ ಕೊಟ್ಟಿದೆ.
ಟ್ರೇಲರ್ ರಿಲೀಸ್ ಬಳಿಕ 'ಟಾಕ್ಸಿಕ್' ಸಿನಿಮಾ ಮತ್ತಷ್ಟು ಅಪಾರ ನಿರೀಕ್ಷೆ ಸೃಷ್ಟಿಸಿದೆ. ಟಾಕ್ಸಿಕ್ ಚಿತ್ರವು 08 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಟಾಕ್ಸಿಕ್ ಚಿತ್ರದ ಯಶ್ ನಟನೆಯ 'ರಾಮಾಯಣ' ಕೂಡ ಬಿಡುಗಡೆ ಆಗಲಿದೆ. ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಟ್ರೇಲರ್ ನೋಡಿ.. ಎಂಜಾಯ್ ಮಾಡಿ..


