Published : Aug 27, 2026, 05:44 AM ISTUpdated : Aug 27, 2026, 11:42 PM IST

Karnataka Latest News Live: Yash Toxic Day 2 Collection - ವಿದೇಶದಲ್ಲಿ ಹೌಸ್‌ಫುಲ್, 2ನೇ ದಿನ ‘ಟಾಕ್ಸಿಕ್’ ಕಲೆಕ್ಷನ್‌ಗೆ ಏನಾಯ್ತು?

ಸಾರಾಂಶ

ಧಾರವಾಡ: ನಾನು ಸಚಿವನಾಗಿದ್ದಾಗ ನನ್ನ ಮೇಲೆಯೂ ಆಪಾದನೆ ಬಂದಾಗ ಡಿ.ಕೆ.ಶಿವಕುಮಾರ್‌ ಅವರು ನನ್ನ ರಾಜೀನಾಮೆಗೆ ಪ್ರತಿಭಟಿಸಿದ್ದರು. ಈ ಹಿಂದೆ ಕೆ.ಜೆ.ಜಾರ್ಜ್‌ ಸಹ ರಾಜೀನಾಮೆ ನೀಡಿದ್ದು, ಸಚಿವ ನಾಗೇಂದ್ರ ವಿಷಯದಲ್ಲಿ ಏತಕ್ಕೆ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಆಪಾದನೆ ಬಂದಾಗ ಸ್ವತಃ ರಾಜೀನಾಮೆ ನೀಡಿದ್ದು, ನಂತರ ನಿಷ್ಕಳಂಕ ಎಂದು ಹೊರಗಡೆ ಬಂದಿದ್ದೇನೆ. ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಶಾಮೀಲಾಗಿರುವುದು ತನಿಖೆಯಲ್ಲಿ ಹೊರಬಂದಿದ್ದರೂ ಸಿಎಂ ಅವರ ರಾಜೀನಾಮೆ ಪಡೆಯುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

Yash Toxic

11:42 PM (IST) Aug 27

Yash Toxic Day 2 Collection - ವಿದೇಶದಲ್ಲಿ ಹೌಸ್‌ಫುಲ್, 2ನೇ ದಿನ ‘ಟಾಕ್ಸಿಕ್’ ಕಲೆಕ್ಷನ್‌ಗೆ ಏನಾಯ್ತು?

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ. ಭಾರತದಲ್ಲಿ ಕಲೆಕ್ಷನ್ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೂ, ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಹೌಸ್‌ಫುಲ್ ಶೋಗಳು ಮುಂದುವರಿದಿದೆ.

Read Full Story

10:59 PM (IST) Aug 27

Cricket - ಶ್ರೀಲಂಕಾ ಸರಣಿ ಮುಕ್ತಾಯ; ಮತ್ತೆ ಮೈದಾನಕ್ಕಿಳಿಯುವುದು ಎಂದು ಟೀಮ್ ಇಂಡಿಯಾ? ಡಿಸೆಂಬರ್‌ವರೆಗೆ ಪ್ಯಾಕ್ ಆಗಿದೆ ಶೆಡ್ಯೂಲ್!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ನಂತರ, ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಡುವಿಲ್ಲದ ವೇಳಾಪಟ್ಟಿ ಎದುರಾಗಿದೆ. ಸೆಪ್ಟೆಂಬರ್‌ನಿಂದ ಫೆಬ್ರವರಿ 2027ರವರೆಗೆ ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಸರಣಿಗಳನ್ನು ಆಡಲಿದೆ. ಈ ಸರಣಿಗಳು, ವಿಶೇಷವಾಗಿ ಟೆಸ್ಟ್ ಪಂದ್ಯಗಳು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿವೆ.
Read Full Story

10:53 PM (IST) Aug 27

ವಿಶ್ವನಾಯಕ ಯಶ್ ಮತ್ತು ಟಾಕ್ಸಿಕ್ ಎಂಬ ಮಾಯಾವಾಸ್ತವ - ಕೋಟಿಗಿಂತ ಕಥೆ ಮುಖ್ಯವೇ?

‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಬಳಿಕ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ದೊಡ್ಡ ಬಜೆಟ್‌, ಬಾಕ್ಸ್ ಆಫೀಸ್ ಹಾಗೂ ಪ್ಯಾನ್ ಇಂಡಿಯಾ ಮಾರುಕಟ್ಟೆಯ ಬಗ್ಗೆ ಚರ್ಚೆ ಶುರುವಾಗಿದೆ. KGF ಕನ್ನಡ ಸಿನಿಮಾಗೆ ಹೊಸ ಮಾರುಕಟ್ಟೆ ತೆರೆದರೂ, ಅದರ ಯಶಸ್ಸಿನ ಸೂತ್ರವನ್ನು ಹುಡುಕುವುದು ಸರಿಯೇ?

Read Full Story

10:19 PM (IST) Aug 27

ಕಸ್ತೂರಿ ರಂಗನ್ ವರದಿ ಸಾರಸಗಟು ತಿರಸ್ಕಾರಕ್ಕೆ ಯದುವೀರ್ ಅಸಮಾಧಾನ; ಸರ್ಕಾರದ ವಿರುದ್ಧ ವಾಗ್ದಾಳಿ

ಕಸ್ತೂರಿ ರಂಗನ್ ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ.

Read Full Story

10:18 PM (IST) Aug 27

Flood - ಮೋದಿ ಜೀ ನಮ್ಮನ್ನು ಕಾಪಾಡಿ; ಟಿಬೆಟ್ ದುರಂತದ ನಡುವೆ ಕಣ್ಣೀರಿಡುತ್ತಾ ಭಾರತಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಸುನೀತಾ!

ಚೀನಾ-ನೇಪಾಳ ಗಡಿಯ ಸಮೀಪ ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಹಿಮಪಾತದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯ ಯಾತ್ರಿಕರು ಪ್ರವಾಹದಲ್ಲಿ ಸಿಲುಕಿದ್ದಾರೆ. ಉಸಿರಾಟದ ತೊಂದರೆ, ಆಹಾರ-ನೀರಿನ ಕೊರತೆಯಿಂದ ಬಳಲುತ್ತಿರುವ ಯಾತ್ರಿಕರು, ತಮ್ಮನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
Read Full Story

10:09 PM (IST) Aug 27

ಎಷ್ಟು ಮುದ್ದಾಗಿದ್ದಾರೆ ನೋಡಿ, ಎರಡು ಕಣ್ಣು ಸಾಲದು - ನಟಿ ನಭಾ ನಟೇಶ್ ಓಣಂ ಲುಕ್ ವೈರಲ್

ನಟಿ ನಭಾ ನಟೇಶ್ ಅವರ ಓಣಂ ಸ್ಪೆಷಲ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ಸೀರೆಯಲ್ಲಿ ಸಿಂಪಲ್ ಹಾಗೂ ಎಲಿಗಂಟ್ ಆಗಿ ಕಾಣಿಸಿಕೊಂಡಿರುವ ನಭಾ ನಟೇಶ್ ಅವರ ಫೋಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Read Full Story

09:21 PM (IST) Aug 27

ಭಾರತದಲ್ಲಿ ವಿಮೆ, ನೇಪಾಳದಲ್ಲಿ ಸಾವು; ಕುಟುಂಬಕ್ಕೆ ಸಿಗುತ್ತಾ ಕೋಟ್ಯಂತರ ರೂ., ಟರ್ಮ್ ಇನ್ಶೂರೆನ್ಸ್? ಇಲ್ಲಿದೆ ಸಂಪೂರ್ಣ ಲೆಕ್ಕ!

ವಿದೇಶದಲ್ಲಿ (ಉದಾ: ನೇಪಾಳ) ಭಾರತೀಯ ಪ್ರವಾಸಿಗರು ಮೃತಪಟ್ಟರೆ, ಅವರ ಟರ್ಮ್ ಇನ್ಶುರೆನ್ಸ್ ಹಣವನ್ನು ಕ್ಲೈಮ್ ಮಾಡಬಹುದು. ಮೃತದೇಹ ಸಿಗದಿದ್ದರೂ, ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ಸರ್ಕಾರದ ವಿಶೇಷ ಮಾರ್ಗಸೂಚಿಗಳ ಅಡಿಯಲ್ಲಿ ಕ್ಲೈಮ್ ಇತ್ಯರ್ಥಪಡಿಸಲು ಅವಕಾಶವಿದೆ.

Read Full Story

08:47 PM (IST) Aug 27

Success Story - 71 ಬಾರಿ ವರ್ಗಾವಣೆಯಾದರೂ ಮಂಡಿಯೂರದ ಐಎಎಸ್‌/ಐಪಿಎಸ್‌ ಆಫೀಸರ್ಸ್‌; ಅದರಲ್ಲೊಬ್ಬ ಕನ್ನಡತಿ!

ಭಾರತದ ಪ್ರಾಮಾಣಿಕ ಐಎಎಸ್/ಐಪಿಎಸ್ ಅಧಿಕಾರಿಗಳಾದ ಪ್ರದೀಪ್ ಕಸ್ನಿ, ಅಶೋಕ್ ಖೇಮ್ಕಾ, ಮತ್ತು ಕರ್ನಾಟಕದ ಡಿ. ರೂಪಾ ಅವರಂತಹವರು ಭ್ರಷ್ಟಾಚಾರದ ವಿರುದ್ಧ ನಿಂತಿದ್ದಕ್ಕೆ ಪದೇ ಪದೇ ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದಾರೆ. 71 ಬಾರಿ ವರ್ಗಾವಣೆಗೊಂಡರೂ ತಮ್ಮ ನಿಷ್ಠೆಯಿಂದ ಹಿಂದೆ ಸರಿಯದ ಈ ಅಧಿಕಾರಿಗಳ ಹೋರಾಟದ ಕಥೆಯು ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸುತ್ತದೆ.
Read Full Story

08:37 PM (IST) Aug 27

ಆನೇಕಲ್ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ವಿರುದ್ಧ ಸಿಡಿದೆದ್ದ ಉದ್ಯಮಿ ಕಿರಣ್ ಮಜುಂದಾರ್-ಶಾ!

ಬೆಂಗಳೂರಿನ ಆನೇಕಲ್ ಮತ್ತು ಹುಸ್ಕೂರು-ಸರ್ಜಾಪುರ ರಸ್ತೆಗಳ ದುಸ್ಥಿತಿಯ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಮತ್ತು ಶಾಸಕ ಬಿ. ಶಿವಣ್ಣ ನಡುವೆ ತೀವ್ರ ವಾಕ್ಸಮರ ನಡೆದಿದೆ. ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದೇನೆ ಎಂದು ಕಿರಣ್ ಹೇಳಿದರೆ, ಮೂಲಸೌಕರ್ಯಕ್ಕೆ ಸಿಎಸ್‌ಆರ್ ನಿಧಿ ಬಳಸಲಿ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.
Read Full Story

08:36 PM (IST) Aug 27

ರಾಯನನ್ನು ಕೊಲ್ಲುವುದಷ್ಟೇ ಟಿಕೆಟ್‌ನ ಉದ್ದೇಶವಾಗಿತ್ತಾ? ‘ಟಾಕ್ಸಿಕ್’ ಕ್ಲೈಮ್ಯಾಕ್ಸ್ ಅರ್ಥವೇನು?

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಕೊನೆಯಲ್ಲಿ ಏನಾಯ್ತು? ಅಪ್ಪ-ಮಗನ ಪಾತ್ರದಲ್ಲಿರೋ ರಾಯ ಮತ್ತು ಟಿಕೆಟ್ ನಡುವೆ ದೊಡ್ಡ ಫೈಟ್ ನಡೆಯುತ್ತೆ. ತನ್ನನ್ನ ಬಿಟ್ಟು ಹೋದ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳೋಕೆ ಟಿಕೆಟ್ ಬರ್ತಾನೆ. ಕೊನೆಗೆ, ಆತ ತನ್ನ ಅಪ್ಪನನ್ನ ಕೊಂದನಾ? ಇಲ್ವಾ? ಇಲ್ಲಿದೆ ಉತ್ತರ.

Read Full Story

07:58 PM (IST) Aug 27

Toxic ನಂತರ ಯಶ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ - ರಾಕಿಂಗ್ ಸ್ಟಾರ್ ಮುಂದಿನ ಹೆಜ್ಜೆ ಇದೇ

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ಭಾರತದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಭರ್ಜರಿ ಓಪನಿಂಗ್ ಪಡೆದಿದೆ. KGF ಸರಣಿ ಮೂಲಕ ಪ್ಯಾನ್-ಇಂಡಿಯಾ ಸ್ಟಾರ್ ಆಗಿರುವ ಯಶ್ ಇದೀಗ ನಿತೇಶ್ ತಿವಾರಿ ನಿರ್ದೇಶನದ..

Read Full Story

07:35 PM (IST) Aug 27

ಮಲಗಿದ್ದ ಪತ್ನಿಯ ಕುತ್ತಿಗೆ ಹಿಚುಕಿ ಜೀವ ತೆಗೆದ.. 'ಹೃದಯಾಘಾತ' ಎಂದು ಕತೆ ಕಟ್ಟಿದ್ದ ಪತಿ ಲಾಕ್ ಆಗಿದ್ದೇಗೆ?

ಕುಡಿದ ಮತ್ತಿನಲ್ಲಿ ಬಂದು ಮಲಗಿದ್ದ ಪತ್ನಿಯ ಜೀವ ತೆಗೆದು ಹೃದಯಾಘಾತದ ನಾಟಕ ಕಟ್ಟಿದ್ದ ಪತಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ನಂತರ ಪ್ರಕರಣ ಬಯಲಾಗಿದ್ದು ಹೇಗೆ? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

07:01 PM (IST) Aug 27

ಮಂಡ್ಯದಲ್ಲಿ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಚೀಲ ತೆರೆದಾಗ ಸಿಕ್ಕಿದ್ದು ಲಕ್ಷ ಲಕ್ಷ ಹಣ - ಕೊನೆಗೆ ಏನಾಯ್ತು?

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಮ್ಮ ಅವರ ಮನೆ ಸ್ವಚ್ಛಗೊಳಿಸುವ ವೇಳೆ ₹3.5 ಲಕ್ಷ ನಗದು ಪತ್ತೆಯಾಗಿದೆ. ಚೀಲಗಳಲ್ಲಿ ತುಂಬಿದ್ದ ಚಿಲ್ಲರೆ ಹಾಗೂ ನೋಟುಗಳನ್ನು ಸ್ವಯಂಸೇವಕರು ಎಣಿಸಿದಾಗ ಲಕ್ಷಾಂತರ ಹಣ ಇರುವುದು ಬೆಳಕಿಗೆ ಬಂದಿದೆ.

Read Full Story

06:42 PM (IST) Aug 27

ಪ್ರತಿ ಪ್ರಯಾಣಿಕನಿಗೆ ಮೆಟ್ರೋಗಿಂತ ಆರು ಪಟ್ಟು ದುಬಾರಿ ಆಗಲಿದೆ ಹೆಬ್ಬಾಳದ ಚಿಕ್ಕ ಸುರಂಗ ರಸ್ತೆ - IISc ವರದಿ

ಹೆಬ್ಬಾಳ ಜಂಕ್ಷನ್‌ನಲ್ಲಿ ಉದ್ದೇಶಿತ ಚಿಕ್ಕ ಸುರಂಗ ರಸ್ತೆ ಯೋಜನೆಯು ಸಂಚಾರ ದಟ್ಟಣೆಗೆ ಕೇವಲ ತಾತ್ಕಾಲಿಕ ಪರಿಹಾರ ನೀಡಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಅಧ್ಯಯನ ವರದಿಯು ತಿಳಿಸಿದೆ. ಈ ಯೋಜನೆಯು ಪ್ರತಿ ಪ್ರಯಾಣಿಕನಿಗೆ ಮೆಟ್ರೋಗಿಂತ 6 ಪಟ್ಟು ದುಬಾರಿಯಾಗಿದೆ.

Read Full Story

06:35 PM (IST) Aug 27

ಅಭಿಮಾನಿಗಳಿಗೆ ಸಿಹಿ ಸುದ್ದಿ - ಮದುವೆಗೂ ಮುನ್ನ ನಟ ಚಿಕ್ಕಣ್ಣನಿಂದ ಬಿಗ್ ಅನೌನ್ಸ್‌ಮೆಂಟ್

‘ಉಪಾಧ್ಯಕ್ಷ’ ಚಿತ್ರದ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಲಕ್ಷ್ಮೀಪುತ್ರ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 27ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.

Read Full Story

06:17 PM (IST) Aug 27

ತುಮಕೂರಿನಲ್ಲಿ HAL-SAFRAN ಕಂಪನಿಯಿಂದ ಜಂಟಿಯಾಗಿ ಅರಾವಳಿ ಹೆಲಿಕಾಪ್ಟರ್‌ ಇಂಜಿನ್‌ ನಿರ್ಮಾಣ

HAL ಮತ್ತು ಯುರೋಪಿನ ಸಾಫ್ರಾನ್ (Safran) ಭಾರತದಲ್ಲೇ 'ಅರಾವಳಿ' ಎಂಜಿನ್‌ಗಳನ್ನು ತಯಾರಿಸಲು ಜಂಟಿ ಉದ್ಯಮ ಸ್ಥಾಪಿಸಿವೆ. ಈ ಶಕ್ತಿಶಾಲಿ ಎಂಜಿನ್‌ಗಳು ಸೇನೆಯ ಮುಂದಿನ ಪೀಳಿಗೆಯ 13-ಟನ್ ತೂಕದ IMRH ಮತ್ತು ನೌಕಾಪಡೆಯ DBMRH ಹೆಲಿಕಾಪ್ಟರ್‌ಗಳಿಗೆ ಶಕ್ತಿ ತುಂಬಲಿವೆ.

Read Full Story

06:06 PM (IST) Aug 27

ಬೋನು ಸಿದ್ಧ, ಹುಲಿ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ - ತೆಂಬಾದಲ್ಲಿ ಮುಂದೇನಾಗುತ್ತೆ?

ಗಂಗಾವತಿಯ ತೆಂಬಾ ಅರಣ್ಯದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದೆ. ಇದೀಗ ಅರಣ್ಯ ಇಲಾಖೆ ಬೋನು ಇಟ್ಟು ಕಾಯುತ್ತಿದೆ. ಆಕಳಿನ ಕಳೇಬರದ ಬಳಿ ಮತ್ತೆ ಹುಲಿ ಬರುವ ನಿರೀಕ್ಷೆಯಲ್ಲಿರುವ ಅಧಿಕಾರಿಗಳು, ಇನ್ನೆರಡು-ಮೂರು ದಿನಗಳಲ್ಲಿ ಹುಲಿ ಬೋನಿಗೆ ಬೀಳಬಹುದು ಎಂದು ಅಂದಾಜಿಸಿದ್ದಾರೆ. ಅಷ್ಟಕ್ಕೂ ಹುಲಿ ಸೆರೆಯಾಗುತ್ತಾ?

Read Full Story

05:54 PM (IST) Aug 27

‘ನಾನು ಬರೆದಿದ್ದು ಒಂದು, ಎಡಿಟ್ ಮಾಡಿದ್ದು ಇನ್ನೊಂದು’ - Toxic ನಿರ್ದೇಶಕಿ ಹಳೆಯ ವಿಡಿಯೋ ವೈರಲ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿ ಪ್ರೇಕ್ಷಕರಿಂದ ಡಿವೈಡ್‌ಡ್ ಟಾಕ್ ಪಡೆದುಕೊಳ್ಳುತ್ತಿದೆ. ಈ ನಡುವೆ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

Read Full Story

05:41 PM (IST) Aug 27

Viral - ವ್ಯವಸ್ಥೆ ವಿರುದ್ಧ ಪ್ರತಿಭಟಿಸಿದ ಪುಟ್ಟ ಮನಸ್ಸು! ಪೊಲೀಸ್ ಕಸ್ಟಡಿಯಿಂದ ಪ್ರೆಸ್‌ಕಾನ್ಫರೆನ್ಸ್‌ವರೆಗೆ; ದೇಶದ ಗಮನ ಸೆಳೆದ 6 ವರ್ಷದ ಆದಿತ್ಯ!

ಬಿಹಾರದ ಪಟ್ನಾದಲ್ಲಿ ನಡೆದ ಬಿಪಿಎಸ್‌ಸಿ ಪರೀಕ್ಷಾ ಅಕ್ರಮದ ವಿರುದ್ಧ ಕೇವಲ ಆರು ವರ್ಷದ ಆದಿತ್ಯ ಕುಮಾರ್ ಎಂಬ ಬಾಲಕ ಧ್ವನಿ ಎತ್ತಿದನು. ಪೊಲೀಸರಿಂದ ಬಂಧನಕ್ಕೊಳಗಾದರೂ, ಬಿಡುಗಡೆಯಾದ ನಂತರ ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿ, ಭ್ರಷ್ಟ ವ್ಯವಸ್ಥೆಯ ವಿರುದ್ಧ ತನ್ನ ಹೋರಾಟದ ಮೂಲಕ ಇಡೀ ದೇಶದ ಗಮನ ಸೆಳೆದನು.
Read Full Story

05:28 PM (IST) Aug 27

ಕೊಲಂಬೊ ಟೆಸ್ಟ್‌ ಡ್ರಾನಲ್ಲಿ ಅಂತ್ಯ; ಶ್ರೀಲಂಕಾ ಎದುರು ಟೆಸ್ಟ್ ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ!

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಫಾಲೋ ಆನ್‌ಗೆ ಸಿಲುಕಿದ್ದ ಲಂಕಾ ಪರ ಸೋನಲ್ ದಿನುಶಾ ಅಜೇಯ ಶತಕ ಸಿಡಿಸಿ ತಂಡವನ್ನು ಸೋಲಿನಿಂದ ಪಾರುಮಾಡಿದರು. ಈ ಡ್ರಾನ ಹೊರತಾಗಿಯೂ, ಭಾರತವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.
Read Full Story

05:28 PM (IST) Aug 27

ಅಂದು ಸಿದ್ದರಾಮಯ್ಯ, ಪರಮೇಶ್ವರ್ ಭೇಟಿ; ವ್ಯವಸ್ಥೆ ವಿರುದ್ಧ ಯುದ್ಧ ಸಾರಿ ಗೆದ್ದಿದ್ದ ರಾಬಿಯಾ, ಮಕ್ಕಳಿಗೆ ವಿಷವಿಟ್ಟು ಸಾವನ್ನಪ್ಪಿದ್ದೇಕೆ?

ನಿವೇಶನಕ್ಕಾಗಿ ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡಿ ಗೆದ್ದಿದ್ದ ಶಿರಾ ಮೂಲದ ರುಬಿಯಾ, ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಸೂರು ಪಡೆದಿದ್ದರೂ, ಈ ದುರಂತ ಅಂತ್ಯ ಕಂಡಿದ್ದೇಕೆ?

Read Full Story

05:20 PM (IST) Aug 27

ನಾನೊಬ್ಬ ಡಿಬಾಸ್ ಫ್ಯಾನ್‌ ಆಗಿ ಹೇಳ್ತಿದ್ದೀನಿ.. ಯಶ್ Toxic ಬಗ್ಗೆ ಸೋನು ಗೌಡ ಸ್ಫೋಟಕ ಹೇಳಿಕೆ!

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಕಿಸೋರ ವಿರುದ್ಧ ಸೋನು ಶ್ರೀನಿವಾಸ್ ಗೌಡ ಕಿಡಿಕಾರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿರೋ ಅವರು, ಟಾಕ್ಸಿಕ್ ಅರ್ಥ ಆಗಲ್ಲ ಅನ್ನೋರೆಲ್ಲ ಧಾರಾವಾಗಿ ನೋಡೋಕೆ ಲಾಯಕ್ ಎಂದು ಜರಿದಿದ್ದಾರೆ.

Read Full Story

05:01 PM (IST) Aug 27

ಯಶ್ ‘ಟಾಕ್ಸಿಕ್’ ಬಗ್ಗೆ ಆರ್ಯವರ್ಧನ್ ಗುರೂಜಿ ಹೇಳಿದ್ದ ಭವಿಷ್ಯ ನಿಜವಾಯ್ತಾ? ಈಗ ಭಾರೀ ಚರ್ಚೆ

‘ಟಾಕ್ಸಿಕ್’ ರಿಲೀಸ್ ಬೆನ್ನಲ್ಲೇ ಆರ್ಯವರ್ಧನ್ ಗುರೂಜಿ ಅವರ ಹಳೆಯ ಭವಿಷ್ಯದ ವಿಡಿಯೋ ವೈರಲ್ ಆಗಿದೆ. ‘ಸಿನಿಮಾ ಆವರೇಜ್ ಆಗಿರಲಿದೆ’ ಎಂದಿದ್ದ ಅವರ ಮಾತನ್ನು ಇದೀಗ ಚಿತ್ರದ ಮಿಶ್ರ ಪ್ರತಿಕ್ರಿಯೆಯೊಂದಿಗೆ ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ.

Read Full Story

04:45 PM (IST) Aug 27

ವರಮಹಾಲಕ್ಷ್ಮಿ ಪೂಜೆ ಹೇಗೆ ಮಾಡಬೇಕು? ChatGPT ಮೊರೆ ಹೋದ ‘ಆಸೆ’ ನಟಿ ಅಭಿಜ್ಞಾ ಭಟ್

ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಸಂಪ್ರದಾಯವೇ ಇಲ್ಲ. ಆದರೂ ‘ಆಸೆ’ ಧಾರಾವಾಹಿ ಖ್ಯಾತಿಯ ನಟಿ ಅಭಿಜ್ಞಾ ಭಟ್ ಈ ಬಾರಿ ಮೊದಲ ಬಾರಿಗೆ ಈ ಹಬ್ಬವನ್ನು ಆಚರಿಸಿದ್ದಾರೆ. ಅಷ್ಟಕ್ಕೂ ಪೂಜೆಯ ವಿಧಿವಿಧಾನಗಳನ್ನು ಹೇಗೆ ತಿಳಿದುಕೊಂಡರು?

Read Full Story

04:35 PM (IST) Aug 27

EPFO - 25 ವರ್ಷ ಸೇವೆ ಸಲ್ಲಿಸಿದರೆ ನಿಮಗೆಷ್ಟು ಸಿಗುತ್ತೆ ಪೆನ್ಷನ್? ನೀವೆ ಲೆಕ್ಕಹಾಕಲು, ಇಲ್ಲಿದೆ ಸರಳ ಸೂತ್ರ!

ಖಾಸಗಿ ವಲಯದ ನೌಕರರಿಗೆ ಇಪಿಎಸ್ ಅಡಿಯಲ್ಲಿ ಸಿಗುವ ಮಾಸಿಕ ಪಿಂಚಣಿಯನ್ನು ಒಂದು ನಿರ್ದಿಷ್ಟ ಸೂತ್ರದ ಮೂಲಕ ಲೆಕ್ಕ ಹಾಕಲಾಗುತ್ತದೆ. ನಿಮ್ಮ ಪಿಂಚಣಿ ಪಡೆಯಬಹುದಾದ ವೇತನ ಮತ್ತು ಸೇವಾ ಅವಧಿಯನ್ನು ಆಧರಿಸಿ, ನಿವೃತ್ತಿಯ ನಂತರ ನಿಮಗೆ ಎಷ್ಟು ಹಣ ಸಿಗುತ್ತದೆ ಎಂಬುದನ್ನು ಈ ಲೇಖನವು ಸರಳವಾಗಿ ವಿವರಿಸುತ್ತದೆ.
Read Full Story

04:22 PM (IST) Aug 27

'ಪೊಲೀಸ್ ರಾಜ್ಯವಾಗಲು ಬಿಡುವುದಿಲ್ಲ..' ವೈಟ್‌ಫೀಲ್ಡ್ ಪೊಲೀಸರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌

ತಮ್ಮದಲ್ಲದ ಪ್ರಕರಣದಲ್ಲಿ ಮೂಗು ತೋರಿಸಿದ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರ ವಿರುದ್ಧ ಹೈಕೋರ್ಟ್‌ ಗರಂ ಆಗಿದೆ. ಅಲ್ಲದೇ ಭಾರೀ ದಂಡವನ್ನು ಪೊಲೀಸರ ಜೇಬಿನಿಂದಲೇ ತೆತ್ತಬೇಕು ಎಂದು ಆದೇಶ ನೀಡಿದೆ. ಅಷ್ಟಕ್ಕೂ ಏನಿದು ಕೇಸ್ ಅನ್ನೋ ವಿವರ ಈ ಸ್ಟೋರಿಯಲ್ಲಿದ್ದೆ.

Read Full Story

04:21 PM (IST) Aug 27

113 ವರ್ಷಗಳ ದಾಖಲೆ ಬ್ರೇಕ್! ಪ್ರಭಾಸ್, ಅಲ್ಲು ಅರ್ಜುನ್, ಶಾರುಖ್ ಹಿಂದಿಕ್ಕಿ ಇತಿಹಾಸ ಬರೆದ ಯಶ್

ಕೆಜಿಎಫ್ 2 ಬಳಿಕ ಭರ್ಜರಿ ಆರಂಭ ಪಡೆದಿರುವ ಯಶ್ ಅವರ 'ಟಾಕ್ಸಿಕ್' ಸಿನಿಮಾ, ಮೊದಲ ದಿನವೇ ವಿಶ್ವಾದ್ಯಂತ 140 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ, ಬಿಡುಗಡೆಯಾದ ಮೊದಲ ದಿನವೇ ನೂರು ಕೋಟಿ ಗಳಿಸಿದ ಎರಡು ಸಿನಿಮಾಗಳನ್ನು ನೀಡಿದ ಭಾರತದ ಏಕೈಕ ನಟ ಎಂಬ ಐತಿಹಾಸಿಕ ದಾಖಲೆಯನ್ನು ಯಶ್ ಬರೆದಿದ್ದಾರೆ.
Read Full Story

04:18 PM (IST) Aug 27

‘ಹೊಸ ಇತಿಹಾಸ ಕೆತ್ತಲಿ’ - ಯಶ್ ಟಾಕ್ಸಿಕ್ ಬಗ್ಗೆ ಯೋಗರಾಜ್ ಭಟ್ ಹೇಳಿದ ಮಾತಿನ ಅರ್ಥವೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶಕ ಯೋಗರಾಜ್ ಭಟ್ ವಿಶೇಷ ಶುಭಹಾರೈಕೆ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ‘ಜೈ ಟಾಕ್ಸಿಕ್, ಜೈ ಚಿತ್ರತಂಡ, ಜೈ ಯಶ್’ ಎಂದು ಬರೆದಿರುವ ಅವರು, ‘ಟಾಕ್ಸಿಕ್ ಹೊಸ ಇತಿಹಾಸ ಕೆತ್ತಲಿ’ ಎಂದು ಹಾರೈಸಿದ್ದಾರೆ.

Read Full Story

04:07 PM (IST) Aug 27

Paper Leak - ಗರ್ಲ್‌ಫ್ರೆಂಡ್‌ಗಾಗಿ ಪ್ರಶ್ನೆಪತ್ರಿಕೆ ತಂದಿದ್ದ ಭೂಪ, ಬ್ರೇಕಪ್ ನಂತರ ರಹಸ್ಯ ಬಯಲು! ಮುಂದೆ ಆಗಿದ್ದೇನು?

ಗೆಳತಿಯೊಂದಿಗಿನ ಪ್ರೇಮ ಸಂಬಂಧ ಮುರಿದುಬಿದ್ದಿದ್ದರಿಂದ ಮನನೊಂದ ವ್ಯಕ್ತಿಯೊಬ್ಬ, ತಾನೇ ಆಕೆಗಾಗಿ ಸೋರಿಕೆ ಮಾಡಿದ್ದಇನ್ಸ್‌ಪೆಕ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಯ ರಹಸ್ಯವನ್ನು ಬಯಲು ಮಾಡಿದ್ದಾನೆ. ಈ ಹಗರಣದ ತನಿಖೆ ನಡೆಸಿದ ಮುಂಬೈ ಕ್ರೈಂ ಬ್ರಾಂಚ್, ಅಧಿಕಾರಿಗಳು ಸೇರಿದಂತೆ ಆರು ಜನರನ್ನು ಬಂಧಿಸಿದ್ದು, ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ.

Read Full Story

04:01 PM (IST) Aug 27

ಊಟದ ನಂತರ ಪ್ರತಿದಿನ ಬೆಲ್ಲ-ತುಪ್ಪ ತಿನ್ನಿ... ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

ಒಂದು ಪುಟ್ಟ ಬೆಲ್ಲದ ತುಂಡಿನಲ್ಲಿ ಎಷ್ಟೊಂದು ಶಕ್ತಿ ಇದೆ! ಇಂದೇ ಸಕ್ಕರೆ ಅಥವಾ ಆರ್ಟಿಫಿಶಿಯಲ್ ಸ್ವೀಟ್ಸ್‌ಗೆ ಬೈ-ಬೈ ಹೇಳಿ, ಈ ನೈಸರ್ಗಿಕ ಸಿಹಿಯನ್ನು ನಿಮ್ಮ ಊಟದ ಭಾಗವಾಗಿಸಿಕೊಳ್ಳಿ. ಆರೋಗ್ಯವೂ ಸಿಹಿ, ಜೀವನವೂ ಸಿಹಿ!

Read Full Story

02:59 PM (IST) Aug 27

ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ - ಸುದೀಪ್ ಪೋಸ್ಟ್ ಗುಟ್ಟೇನು?

ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಿದ್ದು, ಅಭಿಮಾನಿಗಳೊಂದಿಗೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, 'ಸಿಂಹ ಮುಂದಿನ ಬೇಟೆಗೆ ರೆಡಿ ಆಗ್ತಿದೆ' ಎಂಬ ಅವರ ಸಾಲುಗಳು, ಹೊಸ ಬಿಗ್ ಬಜೆಟ್ ಸಿನಿಮಾದ ಸುಳಿವು ನೀಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Read Full Story

02:57 PM (IST) Aug 27

Vijayapura - ಒಂದೇ ಕುಟುಂಬದ 6 ಮಂದಿ ಭೂತನಾಳ ಕೆರೆಗೆ ಹಾರಿದ ಕೇಸ್‌ಗೆ ಬಿಗ್‌ಟ್ವಿಸ್ಟ್; ಗಂಡನ ವಿಕೃತಿ ಬಯಲು?

ವಿಜಯಪುರದ ಭೂತನಾಳ ಕೆರೆಯಲ್ಲಿ ಐವರು ಮಕ್ಕಳೊಂದಿಗೆ ತಾಯಿ ಶೋಭಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಂಡ ಮಲಕಾರಿಯ ವಿಕೃತ ದೈಹಿಕ ಹಿಂಸೆ ಮತ್ತು ಆತನ ಅನೈತಿಕ ಸಂಬಂಧವೇ ಈ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎಂದು ಮೃತ ಶೋಭಾಳ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ.
Read Full Story

02:55 PM (IST) Aug 27

ಕಸ್ತೂರಿರಂಗನ್ ವರದಿ ಜನರು ಆತಂಕಪಡುವ ಅಗತ್ಯವಿಲ್ಲ - ಸಚಿವ ಮಧು ಬಂಗಾರಪ್ಪ

ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದ್ದು, ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ರಾಜ್ಯ ಸರ್ಕಾರ ಈ ವರದಿಯನ್ನು ಈಗಾಗಲೇ ತಿರಸ್ಕರಿಸಿದ್ದು, ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
Read Full Story

02:01 PM (IST) Aug 27

Gadag ನಿಲ್ದಾಣದಲ್ಲಿ ಶೇಂಗಾ ಮಾರೋ ತಿಪ್ಪಮ್ಮ ಅಜ್ಜಿಯ ಆದಾಯ, ಮಾಡಿದ ಆಸ್ತಿ ಎಷ್ಟು?

Gadag Railway Station: ಬೆಟಗೇರಿಯ ತಿಪ್ಪಮ್ಮ ಅಜ್ಜಿ ಕಳೆದ 30 ವರ್ಷಗಳಿಂದ ಗದಗ ರೈಲು ನಿಲ್ದಾಣದಲ್ಲಿ ಶೇಂಗಾ, ಹುರಿಗಡಲೆ ಮಾರಾಟ ಮಾಡುತ್ತಿದ್ದಾರೆ. ಪತಿಯ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತು, ಇಂದಿಗೂ ಸ್ವಾಭಿಮಾನದಿಂದ ಕೆಲಸ ಮಾಡುತ್ತಾರೆ.

Read Full Story

01:40 PM (IST) Aug 27

Kichch Sudeep - 'ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ' ಎಂದು ಕಿಚ್ಚ ಸುದೀಪ್ ಪೋಸ್ಟ್.. ಕಾರಣವೇನು ಗೊತ್ತಾ?

‘ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ನೆಡೆಸುವ ಕಾರ್ಯಕ್ರಮಗಳೇ ಆಶೀರ್ವಾದ. ಅದು ಸದಾ ಮುಂದುವರೆಯಲಿ. ಮತ್ತೆ ಭೇಟಿ ಆಗೋಣ. ನನ್ನನ್ನು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?’

ಕಿಚ್ಚ ಸುದೀಪ್ ತಮ್ಮ, ಹುಟ್ಟುಹಬ್ಬವನ್ನು ಫ್ಯಾನ್ ಜೊತೆ ಏಕೆ ಅಚರಿಸಿಕೊಳ್ಳುತ್ತಿಲ್ಲ? ಈ ಸ್ಟೋರಿ ನೋಡಿ..

Read Full Story

01:26 PM (IST) Aug 27

ಬೆಂಗಳೂರು ಐಟಿ ಕೆಲಸ ಬಿಟ್ಟು ಮಂಗಳೂರಿಗೆ, ಕೃಷಿಯ ಲಾಭ ಕಂಡ ಸುಳ್ಯದ ಚೇತನ್ ಶೆಟ್ಟಿ, ರಂಬುಟಾನ್ ಮಾರಿ ಮನೆ ಕಟ್ಟಿದ ಟೆಕ್ಕಿ!

ಬೆಂಗಳೂರಿನ ಐಟಿ ಉದ್ಯೋಗ ತೊರೆದ ಚೇತನ್ ಶೆಟ್ಟಿ, ತಮ್ಮ ಪೂರ್ವಜರ ಜಮೀನಿನಲ್ಲಿ ಆಧುನಿಕ ಕೃಷಿ ಆರಂಭಿಸಿದರು. ಅಡಿಕೆ ಜೊತೆಗೆ ರಂಬುಟಾನ್, ಮ್ಯಾಂಗೋಸ್ಟೀನ್‌ನಂತಹ ವಿದೇಶಿ ಹಣ್ಣುಗಳನ್ನು ಬೆಳೆದು, ಸ್ಮಾರ್ಟ್ ಮಾರುಕಟ್ಟೆ ತಂತ್ರಗಳಿಂದ ವಾರ್ಷಿಕ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
Read Full Story

12:16 PM (IST) Aug 27

'ಸ್ಯಾಂಡಲ್‌ವುಡ್ ಶೈನಿಂಗ್' ಸೆಷನ್‌ನಲ್ಲಿ ಸಪ್ತಮಿ ಗೌಡ ಹೇಳಿದ್ದೇನು? 'ಪ್ಯಾನ್ ಇಂಡಿಯಾ ಸಿನಿಮಾ' ಸೀಕ್ರೆಟ್ ತೆರೆದಿಟ್ಟ ನಟಿ!

"ಸಿನಿಮಾ ಎಂಬುದು ಕೇವಲ ಭಾಷೆಯಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. 'ಕಾಂತಾರ' ಸಿನಿಮಾ ಗೆದ್ದಿದ್ದು ಅದರ ಮಣ್ಣಿನ ವಾಸನೆಯಿಂದ. ಶ್ರೀಮಂತ ಮತ್ತು ಬಡವನ ನಡುವಿನ ಸಂಘರ್ಷ ಜಗತ್ತಿನ ಯಾವುದೇ ಮೂಲೆಯ ಪ್ರೇಕ್ಷಕನಿಗೂ ಅರ್ಥವಾಗುತ್ತದೆ.

Read Full Story

11:30 AM (IST) Aug 27

ಬೆಂಗಳೂರಿನಲ್ಲಿ ಇನ್ಫಿನಿಯಾನ್ ಬೃಹತ್ ಹೂಡಿಕೆ - ₹752 ಕೋಟಿಗೆ ಕಚೇರಿ ಲೀಸ್‌ ಪಡೆದ ಜರ್ಮನ್ ಕಂಪೆನಿ!

ಜರ್ಮನಿಯ ಪ್ರಮುಖ ಸೆಮಿಕಂಡಕ್ಟರ್ ಸಂಸ್ಥೆ 'ಇನ್ಫಿನಿಯಾನ್ ಟೆಕ್ನಾಲಜೀಸ್', ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ₹752 ಕೋಟಿ ಮೌಲ್ಯದ ಬೃಹತ್ ಕಚೇರಿ ಜಾಗವನ್ನು 10 ವರ್ಷಗಳ ಅವಧಿಗೆ ಲೀಸ್‌ಗೆ ಪಡೆದುಕೊಂಡಿದೆ. ಈ ಹೂಡಿಕೆಯು ಭಾರತದಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ (R&D) ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ರೂಪಿಸುವ ಸಂಸ್ಥೆಯ ಗುರಿಯ ಭಾಗವಾಗಿದೆ.
Read Full Story

11:29 AM (IST) Aug 27

ಶಿವಮೊಗ್ಗ - ಪ್ರೇಮ ವೈಫಲ್ಯಕ್ಕೆ ನೊಂದು ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದ ಯುವತಿಯ ರಕ್ಷಣೆ

ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಬಳಿ ಪ್ರೇಮ ವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ನಾಲೆಗೆ ಹಾರಿ ಆತ್ಮ*ಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದಾರೆ.

Read Full Story

08:23 AM (IST) Aug 27

ಹಳ್ಳಿ ಪವರ್ ಶೋನಲ್ಲಿ ಸ್ಪರ್ಧಿಗಳು ಬಳಸೋ ಮೊಬೈಲ್ ಹೇಗಿರುತ್ತೆ? ರಿವೀಲ್ ಆಯ್ತು ಸೀಕ್ರೆಟ್

ಜೀ ಕನ್ನಡದ 'ಹಳ್ಳಿ ಪವರ್' ರಿಯಾಲಿಟಿ ಶೋ ಐಹೊಳೆಯಲ್ಲಿ ನಡೆಯುತ್ತಿದ್ದು, ಸಿಟಿ ಹುಡುಗಿಯರು ಹಳ್ಳಿ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಶೋನಲ್ಲಿ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳಿದ್ದು, ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story

More Trending News