LIVE NOW
Published : Jun 22, 2026, 05:07 AM ISTUpdated : Jun 22, 2026, 10:34 PM IST

Karnataka Latest News Live: Bike Rear Seat - ಬೈಕ್‌ಗಳ ಹಿಂಬದಿ ಸೀಟ್ ಯಾಕೆ ಎತ್ತರ ಇರುತ್ತೆ? ಸ್ಟೈಲ್ ಅಲ್ಲ, ಇದರ ಹಿಂದಿದೆ ದೊಡ್ಡ ಸೈನ್ಸ್

ಸಾರಾಂಶ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ದೊಡ್ಡ ಪ್ರಮಾಣದ ಹಣದ ಆಮಿಷ ಒಡ್ಡಿದ್ದರಿಂದ ಕೆಲವರು ಅಡ್ಡ ಮತದಾನ ಮಾಡಿದ್ದಾರೆ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಇಂತಹ ಮುಖ್ಯಮಂತ್ರಿ ಇದ್ದಾಗ ಪಕ್ಷವು ಅತ್ಯಂತ ಜಾಗರೂಕತೆಯಿಂದ ಇರಬೇಕಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನದ ಕುರಿತು ಪಕ್ಷದ ವತಿಯಿಂದ ತನಿಖೆಗೆ ಸಮಿತಿ ರಚಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬೆಳವಣಿಗೆ ಬಿಜೆಪಿಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.

Bike Rear Seat

10:34 PM (IST) Jun 22

Bike Rear Seat - ಬೈಕ್‌ಗಳ ಹಿಂಬದಿ ಸೀಟ್ ಯಾಕೆ ಎತ್ತರ ಇರುತ್ತೆ? ಸ್ಟೈಲ್ ಅಲ್ಲ, ಇದರ ಹಿಂದಿದೆ ದೊಡ್ಡ ಸೈನ್ಸ್

Bike Rear Seat: ಹಿಂಬದಿ ಸೀಟ್ ಎತ್ತರವಾಗಿರೋದೇಕೆ ಗೊತ್ತಾ? ಸ್ಟೈಲ್ ಅಂದುಕೊಂಡ್ರೆ ತಪ್ಪು, ಇದರ ಹಿಂದೆ ಇದೆ ಸಖತ್ ಸೈನ್ಸ್! ಬೈಕ್‌ಗಳಲ್ಲಿ ಸವಾರನ ಸೀಟಿಗಿಂತ ಹಿಂಬದಿ ಸೀಟ್ ಸ್ವಲ್ಪ ಎತ್ತರದಲ್ಲಿರುವುದನ್ನು ನೀವು ಗಮನಿಸಿರಬಹುದು.

Read Full Story

09:45 PM (IST) Jun 22

HDK vs DKS - 'ವಿಧಾನಸೌಧಕ್ಕೆ ಅಲ್ಲ, ಬಿಡದಿಗೆ ಬನ್ನಿ' - ಸಿಎಂ ಡಿಕೆಶಿಗೆ ಎಚ್‌ಡಿಕೆ ತಿರುಗೇಟು

Bidadi Township Project: ವಿಧಾನಸೌಧಕ್ಕೆ ಬರುವ ಬದಲು, ಯೋಜನೆಯಿಂದ ನೇರವಾಗಿ ಪರಿಣಾಮಕ್ಕೆ ಒಳಗಾಗುತ್ತಿರುವ ಜನರ ಮಧ್ಯೆ ಚರ್ಚೆ ನಡೆಸೋಣ ಎಂದು ಡಿಕೆಶಿಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Read Full Story

08:55 PM (IST) Jun 22

Bidadi Township Row - 'ನನ್ನ ಆಫೀಸಿಗೆ ಬನ್ನಿ' - ಮೊದಲ ಬಾರಿ ಎಚ್‌ಡಿಕೆಗೆ ಪತ್ರ ಬರೆದ ಸಿಎಂ ಡಿಕೆಶಿ

Bidadi Township Row: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಯೋಜನೆ ಕುರಿತು ನಡೆಯುತ್ತಿರುವ..

Read Full Story

08:42 PM (IST) Jun 22

ನಿರ್ಮಾಪಕರಿಗೆ ಶಿಕ್ಷಣ ಅಗತ್ಯ - Actor Sathish Ninasam ಮಾತಿಗೆ ಕೆನಲಿ ಕೆಂಡವಾದ ನಿರ್ಮಾಪಕರು!

Actor Sathish Ninasam Press Conference: ಇತ್ತೀಚೆಗೆ ಅಯೋಗ್ಯ 2 ಸಿನಿಮಾದ ಹಾಡಿನ ರಿಲೀಸ್‌ ಆಗಿದೆ. ಆ ವೇಳೆ ಕನ್ನಡ ಸಿನಿಮಾಗಳ ಅಳಿವು ಉಳಿವಿನ ಬಗ್ಗೆ ಸತೀಶ್‌ ನೀನಾಸಂ ಅವರು ಮಾತನಾಡುತ್ತ, ನಿರ್ಮಾಪಕರಿಗೆ ಎಜ್ಯುಕೇಶನ್‌ ಬೇಕು ಎಂದಿದ್ದಾರೆ. ಈ ಬಗ್ಗೆ ದೊಡ್ಡ ಚರ್ಚೆ ಆಗಿದ್ದು,

Read Full Story

07:49 PM (IST) Jun 22

Ishaani Krishna - ತಾತ ತೀರಿಕೊಂಡ ಮೇಲೆ ಆ ಯೋಚನೆ ಬಂತು, ನಾನು ಲಕ್ಕಿ ಎಂದ ನಟಿ ಇಶಾನಿ!

Ishaani Krishna: ನಟಿ ಇಶಾನಿ ಕೃಷ್ಣ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಂದೆ ಕೃಷ್ಣಕುಮಾರ್ ಅವರ ಸೋಲೊಪ್ಪದ ಗುಣ ಹಾಗೂ ತಾಯಿಯ ಸಮರ್ಪಣಾ ಮನೋಭಾವ ತಮಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.

Read Full Story

07:22 PM (IST) Jun 22

Kodagu - 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಟ ಇರಲ್ಲ - ಸಿದ್ದರಾಮಯ್ಯ ವಿರುದ್ಧ ಯದುವೀರ್ ವಾಗ್ದಾಳಿ

Yaduveer Wadiyar: ಕಾಂಗ್ರೆಸ್ ಗೆ ಉಸಿರಾಡುವುದಕ್ಕೆ ದೇಶದಲ್ಲಿ ಇರುವುದು ಇದೊಂದೇ ರಾಜ್ಯ. 28 ರಲ್ಲಿ ಚುನಾವಣೆಯಲ್ಲಿ ಅದು ಕೂಡ ಇಲ್ಲದಂತೆ ಆಗುವ ಆತಂಕ ಅವರಿಗೆ ಇದೆ. ಆ ಮಾಹಿತಿ ಅವರಿಗೆ ಈಗಾಗಲೇ ಗೊತ್ತಾಗಿದೆ.

Read Full Story

06:34 PM (IST) Jun 22

Chanakya Niti - ಗಂಡ-ಹೆಂಡತಿ ಮಧ್ಯೆ ಯಾಕೆ ದೂರ ಜಾಸ್ತಿಯಾಗುತ್ತೆ? ಚಾಣಕ್ಯ ಹೇಳಿದ್ರು 4 ಕಾರಣಗಳು!

Chanakya Niti: ನಿಮ್ಮ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ಮಧ್ಯೆ ಅಂತರ ಹೆಚ್ಚಾಗ್ತಿದ್ರೆ, ಹುಷಾರಾಗಿರಿ. ಯಾಕಂದ್ರೆ, ಆಚಾರ್ಯ ಚಾಣಕ್ಯರು ಇದಕ್ಕೆ ನಾಲ್ಕು ಮುಖ್ಯ ಕಾರಣಗಳನ್ನು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

06:08 PM (IST) Jun 22

Chikkamagaluru - ಪೊಲೀಸ್ ವಿಚಾರಣೆ, ತಾಯಿಗೆ ಸಂದೇಶ, ನಂತರ ಆತ್ಮ*ಹ*ತ್ಯೆ - ಚಂದನ್ ಸಾವಿಗೆ ಕಾರಣವೇನು?

Breaking News Karnataka:  ಪೊಲೀಸ್ ವಿಚಾರಣೆಯ ನಂತರ ಯುವಕನೊಬ್ಬ ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಡ್ಲೂರು  ಗ್ರಾಮದಲ್ಲಿ ನಡೆದಿದೆ.

Read Full Story

06:05 PM (IST) Jun 22

ಅರ್ಜಿ ಹಾಕುವವರೆಗೂ ಗೃಹಲಕ್ಷ್ಮಿ, ಗೃಹಜ್ಯೋತಿ ನಿಲ್ಲತ್ತಾ? ಅರ್ಜಿ ಸಲ್ಲಿಕೆ ಯಾವಾಗ? ಸರ್ಕಾರದ ಸ್ಪಷ್ಟನೆ

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿನ ಅಕ್ರಮಗಳನ್ನು ತಡೆಯಲು ಸರ್ಕಾರವು ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಸದ್ಯದ ಫಲಾನುಭವಿಗಳಿಗೆ ಸೌಲಭ್ಯಗಳು ಮುಂದುವರೆಯಲಿವೆ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

Read Full Story

05:53 PM (IST) Jun 22

Anekal - ಸಿನಿಮಾ ಸ್ಟೈಲ್‌ನಲ್ಲಿ ಲಾರಿ ದರೋಡೆ - 24 ಗಂಟೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

Anekal: ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದ ರಾಬರಿ ದೃಶ್ಯವೊಂದು ಇದೀಗ ನಿಜ ಜೀವನದಲ್ಲೂ ನಡೆದಿದ್ದು, ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಗ್ಯಾಂಗ್‌ನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಬಂಧಿಸಿದ್ದಾರೆ.

Read Full Story

05:40 PM (IST) Jun 22

ಕಾಗದದ ಮೇಲಷ್ಟೇ ಉಳಿದ ಯೋಜನೆಗಳು - ಸಣ್ಣ ಜಲವಿದ್ಯುತ್ ವಲಯದಲ್ಲಿ ಕರ್ನಾಟಕ ನಂ.1 ಆಗಿದ್ದರೂ ನೂರಾರು ಪ್ರಾಜೆಕ್ಟ್ ರದ್ದು!

ನವೀಕರಿಸಬಹುದಾದ ಇಂಧನದಲ್ಲಿ, ವಿಶೇಷವಾಗಿ ಸಣ್ಣ ಜಲವಿದ್ಯುತ್ ಯೋಜನೆಗಳ ಸ್ಥಾಪನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೂ, ನೂರಾರು ಯೋಜನೆಗಳು ರದ್ದಾಗಿವೆ. ಖಾಸಗಿ ಸಂಸ್ಥೆಗಳಿಗೆ ಹಂಚಿಕೆಯಾಗಿದ್ದ ಈ ಯೋಜನೆಗಳು, ಶಾಸನಬದ್ಧ ಅನುಮತಿ ಪಡೆಯಲು ವಿಫಲವಾದ ಕಾರಣ ಮತ್ತು ರಾಜಕೀಯ ನಂಟಿನ ಆರೋಪಗಳ ನಡುವೆ ಕಾಗದದ ಮೇಲಷ್ಟೇ ಉಳಿದು, ಸರ್ಕಾರದ ಕ್ರಮಕ್ಕೆ ಗುರಿಯಾಗಿವೆ.
Read Full Story

05:13 PM (IST) Jun 22

Muhurta - ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡ್ತಾರೆ... ಕೆಎ-18ನಲ್ಲಿ ಆ ರಹಸ್ಯ ಬಿಚ್ಚಿಟ್ಟ ತನಿಷಾ ಕುಪ್ಪಂಡ!

KA-18 Kannada Movie: ಶೀರ್ಷಿಕೆಯಿಂದಲೇ ಗಮನ ಸೆಳೆದ ‘ಕೆಎ-18’ ಚಿತ್ರಕ್ಕೆ ಮುಹೂರ್ತ ಆಗಿದೆ. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ಅವರು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

Read Full Story

04:35 PM (IST) Jun 22

ಹಣವಂತರಿಗೆ ಗಾಳ ಹಾಕ್ತಿದ್ದ ಕಿರುತೆರೆ ನಟಿ ಅರೆಸ್ಟ್; ಆಭರಣ ಬಿಡಿಸೋ ನೆಪದಲ್ಲಿ ಲಕ್ಷ ಲಕ್ಷ ವಂಚಿಸುತ್ತಿದ್ದ ‘ಕಿಲಾಡಿ’ ವನಿತಾ

ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಣವಂತರನ್ನು ವಂಚಿಸುತ್ತಿದ್ದ ವನಿತಾ ಎಂಬಾಕೆಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತನ್ನ ಆಭರಣ ಅಡವಿಟ್ಟಿದ್ದು, ಬಿಡಿಸಿಕೊಳ್ಳಲು ಹಣ ಬೇಕೆಂದು ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಈಕೆ ಪರಾರಿಯಾಗುತ್ತಿದ್ದಳು. 

Read Full Story

04:28 PM (IST) Jun 22

ನನ್ನದು ಒಂದೇ ಒಂದು ಆಸೆ...... ಭಾವನಾತ್ಮಕ ಪತ್ರ ಬರೆದು ತುಮಕೂರಿನಲ್ಲಿ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು!

ತುಮಕೂರಿನ ಎಸ್‌ಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ವೆಂಕಟೇಶ್, ಬಿಸಿಎಂ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ, ತನ್ನ ಕುಟುಂಬದ ಐದು ಮಂದಿ ಸದಾ ಒಟ್ಟಾಗಿರಬೇಕೆಂಬ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುಟುಂಬ ಕಲಹದ ಶಂಕೆಯನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

04:24 PM (IST) Jun 22

Sathish Ninasam - ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾದ 'ಅಯೋಗ್ಯ 2' ನಟ; ನೀನಾಸಂ ಸತೀಶ್ ವಿರುದ್ಧ ಕ್ರಮ?

ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಮೂರ್ತಿ ಹಾಗು ಪಧಾದಿಕಾರಿಗಳು ಭಾಗಿಯಾಗಿರುವ ಸಭೆಯಲ್ಲಿ ಇದೀಗ ಈ ನಟ ತಾವು ಆಡಿರುವ ಮಾತಿಗೆ ಸ್ಪಷ್ಟನೆ ಕೊಡಬೇಕಾಗಿದೆ. ಈ ವಿವಾದ ಇಲ್ಲಿಗೇ ತಣ್ಣಗಾಗುತ್ತದೆಯಾ? ಅಥವಾ, ಇನ್ನೇನೋ ಆಗಿ ಬೆಂಕಿ ಹೊತ್ತಿಕೊಳ್ಳಲಿದೆಯಾ? ಮುಂದೇನಾಗಲಿದೆ ಎಂಬ ಕುತೂಹಲವಂತೂ ಸೃಷ್ಟಿಯಾಗಿದೆ.

Read Full Story

04:16 PM (IST) Jun 22

ಬೆಂಗಳೂರು ಸಬರ್ಬನ್ ರೈಲಿಗೆ ಯುರೋಪಿಯನ್ ತಂತ್ರಜ್ಞಾನದ ಸ್ಪರ್ಶ; ಮೆಟ್ರೋ ಮಾದರಿ ಕೈಬಿಟ್ಟು ‘ETCS’ ಸಿಗ್ನಲಿಂಗ್‌ಗೆ ಸಜ್ಜಾದ ಕೆ-ರೈಡ್‌

ಬೆಂಗಳೂರಿನ 148 ಕಿ.ಮೀ. ಉಪನಗರ ರೈಲು ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸಿಬಿಟಿಸಿ ಸಿಗ್ನಲಿಂಗ್ ಬದಲು ಅತ್ಯಾಧುನಿಕ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ETCS) ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಹೈ-ಸ್ಪೀಡ್ ಕಾರಿಡಾರ್‌ಗಳಾಗಿ ವಿಸ್ತರಿಸುವ ದೃಷ್ಟಿಯಿಂದ ಕೆ-ರೈಡ್ ಈ ನಿರ್ಧಾರ ಕೈಗೊಂಡಿದೆ. 

Read Full Story

04:11 PM (IST) Jun 22

Trailer ಕಟ್ ಮಾಡಲು ಹೆದರಿದ ಸಿಂಪಲ್ ಸುನಿ, ಮಾಧವನ್‌ಗೂ ಅಚ್ಚರಿ - ‘ಮೋಡ ಕವಿದ ವಾತಾವರಣ’ದಲ್ಲಿ ಏನಿದೆ?

Simple Suni ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಜೂನ್ 26ಕ್ಕೆ ಬಿಡುಗಡೆಯಾಗುತ್ತಿದೆ. ಶೀಲಮ್, ಮೋಕ್ಷ ಕುಶಾಲ್, ಸಾತ್ವಿಕಾ ನಟಿಸಿರುವ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ನಟ ಮಾಧವನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

02:51 PM (IST) Jun 22

ನಾನು ಕೊನೇವರೆಗೂ ಸೋಲು ಒಪ್ಕೊಳ್ಳಲ್ಲ; ಪಾಕ್‌ ಮ್ಯಾಚ್‌ನ ಮಂತ್ರದಿಂದ ಹೊಸ ಹೆಜ್ಜೆ ಇಟ್ಟ Virat Kohli

Cricketer Virat Kohli: ಕ್ರಿಕೆಟ್‌ ಲೋಕದ ದಿಗಗ್ಜ ವಿರಾಟ್ ಕೊಹ್ಲಿ ಈಗ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಬರೋದಿಲ್ಲ ಎಂದು ಹೇಳಿರುವ ಅವರು 'ಒನ್8' (One8) ಅನ್ನು 'ಅಗಿಲಿಟಾಸ್' (Agilitas) ಕ್ರೀಡಾ ಬ್ರಾಂಡ್ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದ್ದಾರೆ.

Read Full Story

02:42 PM (IST) Jun 22

ಕೊಪ್ಪಳದ ಅಂಜನಾದ್ರಿ - ಹನುಮನ ಜನ್ಮಭೂಮಿ ವಿವಾದ, ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಹನುಮಂತನ ಜನ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆ ಕರ್ನಾಟಕ ಹೈಕೋರ್ಟ್‌ಗೆ ಹಿಂತಿರುಗಿಸಿದೆ. ಕರ್ನಾಟಕದ ಕಿಷ್ಕಿಂಧೆ, ಆಂಧ್ರದ ತಿರುಮಲ ಮತ್ತು ಕರ್ನಾಟಕದ ಗೋಕರ್ಣದ ನಡುವೆ ಹನುಮನ ನಿಜವಾದ ಜನ್ಮಸ್ಥಳ ಯಾವುದು 

Read Full Story

01:28 PM (IST) Jun 22

ಬಿಜೆಪಿ ಧರ್ಮಸ್ಥಳ ಸಭೆಗೆ ಹಿರಿಯರ ವಿರೋಧ, ಕುದುರೆ ವ್ಯಾಪಾರ ಮಾಡಿದವರು ಬಂದು ಪ್ರಮಾಣ ಮಾಡ್ಲಿ ಎಂದ ಆರ್ ಅಶೋಕ್

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನವು ಬಿಜೆಪಿಯಲ್ಲಿ ತೀವ್ರ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದು, ಈ ವಿವಾದ ಇದೀಗ ದೆಹಲಿ ಹೈಕಮಾಂಡ್ ಅಂಗಳ ತಲುಪಿದೆ. ಈ ಬೆಳವಣಿಗೆಗಳ ಬಗ್ಗೆ ಮೈತ್ರಿಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದಾರೆ.
Read Full Story

01:19 PM (IST) Jun 22

ಬಿಎಂಟಿಎಸಿ, ಕೆಎಸ್​ಆರ್​ಟಿಸಿ ಟಿಕೆಟ್​ ದರ ಮತ್ತಷ್ಟು ಏರಿಕೆ? ಹಿಂದಿಗಿಂತಲೂ ದುಬಾರಿ? ಎಷ್ಟಾಗಲಿದೆ ರೇಟ್​

ಶಕ್ತಿ ಯೋಜನೆ, ಇಂಧನ ದರ ಏರಿಕೆ ಮತ್ತು ಸರ್ಕಾರದ ಬಾಕಿ ಅನುದಾನದಿಂದಾಗಿ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಈ ನಷ್ಟವನ್ನು ಸರಿದೂಗಿಸಲು, ಅಧಿಕಾರಿಗಳು ಶೇಕಡಾ 25 ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
Read Full Story

12:54 PM (IST) Jun 22

ಅರಣ್ಯ ಇಲಾಖೆ ಜಾಣ ಕುರುಡು - ಆನೆ ಹಿಂಡು ಇರೋ ಜಾಗದಲ್ಲಿ ಬಿರಿಯಾನಿ, ಕಸದ ರಾಶಿ - ಪಿಕ್‌ನಿಕ್‌ ಸ್ಪಾಟ್‌ ಆದ Kabini Backwaters!

ಒಂದು ಕಾಲದಲ್ಲಿ ವನ್ಯಜೀವಿಗಳ ಸ್ವರ್ಗವಾಗಿದ್ದ ಕಬಿನಿ ಹಿನ್ನೀರು, ಇಂದು ಬೇಜವಾಬ್ದಾರಿ ಪ್ರವಾಸಿಗರಿಂದ ಕಸದ ತೊಟ್ಟಿಯಾಗುತ್ತಿದೆ. ಪ್ರವಾಸಿಗರು ಕಾಡಂಚಿನಲ್ಲಿ ಅಡುಗೆ ಮಾಡಿ, ಮೋಜು-ಮಸ್ತಿ ಮಾಡುತ್ತಿರುವುದು ಪರಿಸರ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತಿದೆ.

Read Full Story

12:36 PM (IST) Jun 22

ಕಾಫಿ ನಗರಿಯಲ್ಲಿ ಚಹಾ ಅಧಿಪತ್ಯ - ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!

ಇನ್‌ಸ್ಟಾಮಾರ್ಟ್ ವರದಿಯ ಪ್ರಕಾರ, ಬೆಂಗಳೂರು ಈಗ ಭಾರತದ 'ಟೀ ರಾಜಧಾನಿ'ಯಾಗಿ ಹೊರಹೊಮ್ಮಿದೆ, ಮುಂಬೈ ಮತ್ತು ಹೈದರಾಬಾದ್‌ಗಳನ್ನು ಹಿಂದಿಕ್ಕಿದೆ. ನಗರದಲ್ಲಿ ಸಾಂಪ್ರದಾಯಿಕ ಶುಂಠಿ ಚಹಾದ ಜೊತೆಗೆ, ಪೀಚ್ ಟೀ, ಕೊಂಬುಚಾದಂತಹ ಹೊಸ ಟ್ರೆಂಡ್‌ಗಳು ಮತ್ತು 'ರೆಡಿ ಟು ಡ್ರಿಂಕ್' ಆಯ್ಕೆಗಳು ಜನಪ್ರಿಯವಾಗುತ್ತಿವೆ.
Read Full Story

12:16 PM (IST) Jun 22

Grace Antony - 8 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ; ಏನ್ ಬಿಟ್ಟು ಏನ್ ತಿಂದ್ರು- ಸೀಕ್ರೆಟ್ ಇಲ್ಲಿದೆ ನೋಡಿ!

ಒಂದು ಕಾಲದಲ್ಲಿ 80 ಕೆಜಿ ತೂಕವಿದ್ದ ಗ್ರೇಸ್ ಆಂಟನಿ ಈಗ ಕೇವಲ 65 ಕೆಜಿ ತೂಕಕ್ಕೆ ಇಳಿದಿದ್ದಾರೆ. ಆದರೆ ಈ 15 ಕೆಜಿ ಇಳಿಸುವ ಹಾದಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲವಂತೆ. ‘ಈ ಎಂಟು ತಿಂಗಳ ಪ್ರಯಾಣ ಕಣ್ಣೀರು ಮತ್ತು ಕಷ್ಟಗಳಿಂದ ಕೂಡಿತ್ತು’ ಎಂದಿರುವ ಗ್ರೇಸಿ, ಡಯಟ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

Read Full Story

12:09 PM (IST) Jun 22

ಮಳೆ ಬರದಿದ್ದರೆ ಬೆಂಗಳೂರಿಗೆ ತೀವ್ರ ಜಲ ಕಂಟಕ - ಕಾವೇರಿ ನೀರಿಗಾಗಿ ಜಲಮಂಡಳಿ ಭವಿಷ್ಯದ ಹೆಜ್ಜೆ!

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ದುರ್ಬಲ ಮುಂಗಾರಿನಿಂದಾಗಿ ಜಲಸಂಕಷ್ಟದ ಆತಂಕ ಎದುರಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಭವಿಷ್ಯದ ಬರವನ್ನು ತಡೆಯಲು ಜಲಮಂಡಳಿಯು ಕಾವೇರಿ ಪ್ರಾಧಿಕಾರಕ್ಕೆ 9.56 ಟಿ.ಎಂ.ಸಿ ನೀರನ್ನು ಕಾಯ್ದಿರಿಸಲು ಮನವಿ ಮಾಡಿದೆ. ಮಳೆ ಬಾರದಿದ್ದರೆ ಸೆಪ್ಟೆಂಬರ್‌ನಿಂದ ನೀರಿನ ಅಭಾವ ತೀವ್ರಗೊಳ್ಳುವ ಸಾಧ್ಯತೆಯಿದೆ.
Read Full Story

11:32 AM (IST) Jun 22

ಹಳಿಯಾಳ ತಾಲೂಕಿನ ಗ್ರಾಮವನ್ನೇ ನಡುಗಿಸಿದ ಸ್ಪೋಟ - ಮನೆಯಲ್ಲಿ ನಾಡಬಾಂಬ್ ಬ್ಲಾಸ್ಟ್?

ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಕಾಡುಪ್ರಾಣಿಗಳ ಬೇಟೆಗಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸ್ಫೋಟಗೊಂಡಿರಬಹುದೆಂದು ಶಂಕಿಸಲಾಗಿದೆ. 

Read Full Story

10:51 AM (IST) Jun 22

ಬಿಜೆಪಿಗೆ ಡಿವಿ ಸದಾನಂದ ಗೌಡ ಬಿಗ್ ಶಾಕ್; ‘ಪ್ರೆಸ್ಟೀಜ್ ಅಪಾರ್ಟ್‌ಮೆಂಟ್’ ರಹಸ್ಯ ಸಭೆ ಬಯಲು ಮಾಡಿದ ಮಾಜಿ ಸಿಎಂ!

ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನದ ಹಿಂದೆ ನಡೆದ 'ಅಪಾರ್ಟ್‌ಮೆಂಟ್ ರಹಸ್ಯ ಸಭೆ'ಯ ಬಗ್ಗೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ತಮ್ಮ ಎಚ್ಚರಿಕೆಯ ಹೊರತಾಗಿಯೂ ರಾಜ್ಯ ನಾಯಕರ ಉದಾಸೀನತೆ ಮತ್ತು ಆಂತರಿಕ ವೈಫಲ್ಯದಿಂದಲೇ ಪಕ್ಷಕ್ಕೆ ಮುಖಭಂಗವಾಗಿದೆ ಎಂದಿದ್ದಾರೆ.

Read Full Story

10:12 AM (IST) Jun 22

Bengaluru Trains - ಟಿಕೆಟ್‌ ಸಿಗ್ತಿಲ್ಲ, ಹೆಚ್ಚು ಟ್ರೇನ್‌ ಇಲ್ಲ ಎನ್ನೋರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ!

Bengaluru Tumakur quadruple rail: ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗುತ್ತಿದ್ದರೂ, ಜನರಿಗೆ ತೊಂದರೆ ಆಗುತ್ತಲೇ ಇದೆ. ಈಗ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸುಮಾರು 6,000 ಕೋಟಿ ರೂ. ವೆಚ್ಚದ ಬೆಂಗಳೂರು-ತುಮಕೂರು ಚತುಷ್ಪಥ ರೈಲು ಮಾರ್ಗದ ಬಗ್ಗೆ ಮಾತನಾಡಿದ್ದಾರೆ. 

Read Full Story

08:29 AM (IST) Jun 22

ದುರ್ಬಲ ಮುಂಗಾರು ನಡುವೆಯೇ 7 ದಿನ ರಾಜ್ಯದಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿ-ಮಳೆ

ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದಾರೆ. ಮಳೆಗಾಗಿ ಹೂವಿನಹಡಗಲಿಯ ಇಟ್ಟಿಗಿ ಗ್ರಾಮದಲ್ಲಿ ಕತ್ತೆಗಳ ಮದುವೆ ಹಾಗೂ ವಿಜಯಪುರದ ಮುತ್ತಗಿ ಗ್ರಾಮದಲ್ಲಿ ಗೊಂಬೆಗಳ ಮದುವೆಯಂತಹ ಸಾಂಪ್ರದಾಯಿಕ ಆಚರಣೆಗಳ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
Read Full Story

07:50 AM (IST) Jun 22

ಯಲ್ಲಾಪುರದಲ್ಲಿ H1N1 ಜ್ವರಕ್ಕೆ ವ್ಯಕ್ತಿ ಸಾವು - ಲಕ್ಷಣಗಳು ಮತ್ತು ಚಿಕಿತ್ಸೆಯ ಮಾಹಿತಿ

ಯಲ್ಲಾಪುರ ತಾಲೂಕಿನ ವ್ಯಕ್ತಿಯೊಬ್ಬರು ಇನಫ್ಲೂಯೆಂಜಾ ಎ (H1N1) ವೈರಲ್ ಜ್ವರದಿಂದ ಮೃತಪಟ್ಟಿದ್ದಾರೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೈದ್ಯರು ಜ್ವರದ ತೀವ್ರ ಲಕ್ಷಣಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
Read Full Story

06:54 AM (IST) Jun 22

ಬಿಡದಿ ಟೌನ್‌ಶಿಪ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಪಾದಯಾತ್ರೆಗೆ ಭರ್ಜರಿ ಜನ ಸ್ಪಂದನೆ

ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ನಮ್ಮ ಭೂಮಿ-ನಮ್ಮ ಹಕ್ಕು' ಘೋಷಣೆಯೊಂದಿಗೆ ಬೃಹತ್ ಪಾದಯಾತ್ರೆ ನಡೆಯಿತು. ಈ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಿಖಿಲ್, ರೈತರ ಭೂಮಿ ಉಳಿಸಲು ಕಾನೂನು ಹೋರಾಟಕ್ಕೂ ಸಿದ್ಧ ಎಂದರು. ಪಾದಯಾತ್ರೆ ವೇಳೆ ಯೋಜನೆ ಪರ-ವಿರೋಧ ಬಣಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
Read Full Story

06:47 AM (IST) Jun 22

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ - ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಬಿಜೆಪಿ ಮತ್ತು ಮೋದಿ ಸರ್ಕಾರದಿಂದ ದೇಶ ಹಾಳಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದಿರುವ ಅವರು, ರಾಮಮಂದಿರದ ನಿಧಿ ಮತ್ತು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
Read Full Story

06:41 AM (IST) Jun 22

Mysuru - ಅಕ್ರಮ ಬಾಂಗ್ಲರೆಂದು ಪ್ರಯಾಣಿಕರನ್ನು ಪರಿಶೀಲಿಸಿದ 6 ಮಂದಿ ವಿರುದ್ಧ ಕೇಸ್‌

ಮೈಸೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಶಂಕೆಯ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೈಲು ಪ್ರಯಾಣಿಕರನ್ನು ತಡೆದು ಪರಿಶೀಲಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ, ಪ್ರಯಾಣಿಕರು ಅಕ್ರಮ ವಲಸಿಗರಲ್ಲ ಎಂದು ಖಚಿತಪಡಿಸಿದ ನಂತರ, ಪರಿಶೀಲನೆ ನಡೆಸಿದ 6 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Read Full Story

06:32 AM (IST) Jun 22

15,500 ಅಡಿ ಎತ್ತರದ ಶಿಖರ ಏರಿದ ಸೃಷ್ಟಿ ಮೇಟಿ; ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ

ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು ಉತ್ತರಾಖಂಡದಲ್ಲಿ 15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಎನ್‌ಸಿಸಿ ಕೆಡೆಟ್ ಆಗಿರುವ ಅವರು, ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ತಮ್ಮ ಗ್ರಾಮ, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
Read Full Story

06:20 AM (IST) Jun 22

ಜಮೀನಿಗೆ ತೆರಳಲು ಸ್ವಂತ ಹಣದಲ್ಲಿ 3.5 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿಕೊಂಡ ರೈತರು

ಕುರುಗೋಡಿನ ಮುಷ್ಟಗಟ್ಟೆ ಕಾಲುವೆ ವ್ಯಾಪ್ತಿಯ ರೈತರು, ತಮ್ಮ ಜಮೀನುಗಳಿಗೆ ಹೋಗುವ ಸರ್ವಿಸ್ ರಸ್ತೆ ಹಾಳಾಗಿದ್ದರಿಂದ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವಯಂ ಪ್ರೇರಿತರಾಗಿದ್ದಾರೆ. ಸುಮಾರು 150 ರೈತರು ಒಟ್ಟಾಗಿ ₹3 ಲಕ್ಷ ಸಂಗ್ರಹಿಸಿ, 3.5 ಕಿ.ಮೀ. ಉದ್ದದ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಂಡು ಮಾದರಿಯಾಗಿದ್ದಾರೆ.
Read Full Story

05:52 AM (IST) Jun 22

ಗ್ಯಾರಂಟಿ ಸಮಿತಿಯಲ್ಲಿ 55000 ಕಾಂಗ್ರೆಸ್ಸಿಗರಿಗೆ ಹುದ್ದೆ; ಡಿಕೆ ಮಾಸ್ಟರ್‌ಸ್ಟ್ರೋಕ್‌!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಈ ಸಮಿತಿಗಳು ಕಾರ್ಯಕರ್ತರಿಗೆ ಅಧಿಕಾರ ನೀಡುವುದಲ್ಲದೆ, ಗ್ಯಾರಂಟಿ ಫಲಾನುಭವಿಗಳ ದಾಖಲೆಗಳನ್ನು ಮರುಪರಿಶೀಲನೆ ಮಾಡುವ ಜವಾಬ್ದಾರಿ ಹೊರಲಿವೆ.
Read Full Story

05:42 AM (IST) Jun 22

ಬಿಕೆ ಪಟ್ಟಾಭಿಷೇಕದಲ್ಲಿ ಕಾಂಗ್ರೆಸ್‌ ನಾಯಕರಿಂದ ಶಪಥ; ಮಿಷನ್‌ ಎಲೆಕ್ಷನ್‌ 2028 & 2029

ಬಿ.ಕೆ.ಹರಿಪ್ರಸಾದ್‌ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಪದಗ್ರಹಣ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ನೂತನ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಿದರು. 2028ರ ರಾಜ್ಯ ಹಾಗೂ 2029ರ ಕೇಂದ್ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಶಪಥವನ್ನು ನಾಯಕರು ಮಾಡಿದರು.
Read Full Story

05:33 AM (IST) Jun 22

Karnataka BJP - ಅಡ್ಡಮತದಾನದ ತಲ್ಲಣ - ಹೈಕಮಾಂಡ್ ಅಂಗಳಕ್ಕೆ ರಾಜ್ಯ ಬಿಜೆಪಿ ನಾಯಕರು

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನದ ಬಗ್ಗೆ ವರದಿ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ದೆಹಲಿಗೆ ತೆರಳಲಿದ್ದಾರೆ. ಈ ಗಂಭೀರ ಬೆಳವಣಿಗೆಯ ಕುರಿತು ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಹೈಕಮಾಂಡ್ ನಾಯಕರಿಗೆ ವಿವರಣೆ ನೀಡಲಿದ್ದಾರೆ.
Read Full Story

05:24 AM (IST) Jun 22

ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಬೇಡ - . ವಿಜಯೇಂದ್ರ ನಿರ್ಧಾರಕ್ಕೆ ಬಿಜೆಪಿಯಲ್ಲಿ ಅಪಸ್ವರ

ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನದ ಹಿನ್ನೆಲೆಯಲ್ಲಿ, ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಆಣೆ-ಪ್ರಮಾಣ ಮಾಡಲು ಹೊರಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರಾದ ಪ್ರಹ್ಲಾದ್ ಜೋಶಿ ಮತ್ತು ಎಸ್. ಸುರೇಶ್‌ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

Read Full Story

More Trending News