KA-18 Kannada Movie: ಶೀರ್ಷಿಕೆಯಿಂದಲೇ ಗಮನ ಸೆಳೆದ ‘ಕೆಎ-18’ ಚಿತ್ರಕ್ಕೆ ಮುಹೂರ್ತ ಆಗಿದೆ. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
ಶೀರ್ಷಿಕೆಯಿಂದಲೇ ಗಮನ ಸೆಳೆದ ‘ಕೆಎ-18’ ಚಿತ್ರಕ್ಕೆ ಮುಹೂರ್ತ ಆಗಿದೆ. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ನಟ ಮನೋಜ್ ಕ್ಯಾಮೆರಾ ಆನ್ ಮಾಡಿದರು. ಹಿರೇಮಗಳೂರಿನ ಎ.ಟಿ.ಎಂ.ಮಂಜು ನಿರ್ಮಾಣ ಮಾಡುವ ಜೊತೆಗೆ ನಾಯಕನಾಗಿ ನಟಿಸುತ್ತಿರುವ ಚಿತ್ರವಿದು. ಮೋಹನ್ ಚಿಕ್ಕಿ ಚಿತ್ರದ ನಿರ್ದೇಶಕರು. ಉತ್ತರಕಾಂಡ ಮೂಲದ ಸೋನಿಯಾ ರಾವುತ್ ಸಹ ನಿರ್ಮಾಣದ ಜೊತೆಗೆ ಒಂದು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಮೋಹನ್ ಚಿಕ್ಕಿ, ‘ಗೆಳೆಯ ನಿರ್ದೇಶಕ ಆರ್ಯ ಮಹೇಶ್ ಸಹಕಾರ ಎಂದಿಗೂ ಮರೆಯಲಾಗದು. ನಿರ್ಮಾಪಕರು ಹೇಳಿದ ಒಂದು ಏಳೆಯನ್ನು ಬಳಸಿಕೊಂಡು ಅದನ್ನು ವಿಸ್ತಾರ ಮಾಡಿಕೊಳ್ಳಲಾಗಿದೆ. ಚಿತ್ರವು ಎರಡು ಪಾತ್ರಗಳ ಸುತ್ತ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುವ ಘಟನೆಯಲ್ಲಿ ನಾಲ್ಕೈದು ಎಲಿಮೆಂಟ್ಸ್ ಬರುತ್ತದೆ. ಚಿಕ್ಕಮಗಳೂರು ಸ್ಥಳದಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲು ಯೋಜನೆ ಹಾಕಲಾಗಿದೆ’ ಎಂದರು.
ನಟಿ ತನಿಷಾ ಕುಪ್ಪಂಡ, ಅಂಕಿತಾ ಹೆಸರಿನಲ್ಲಿ ಕಾಡು ದಾರಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಪಯಣಿಸುವಾಗ ಸಣ್ಣ ಪುಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡುತ್ತಾರೆ ಎಂಬುದನ್ನು ಹೇಳ ಹೊರಟಿದ್ದಾರೆ ಎಂದರು.
ರಕ್ಷಣೆ ಸಿಗುತ್ತದಾ?
ಶಾಲೆ ಕಾಲೇಜು ದಿನಗಳಿಂದಲೂ ನಾಟಕ ಪ್ರೇಮಿ. ಅಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹುಚ್ಚು ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. 2000 ಇಸವಿಯಲ್ಲಿ ಅಪ್ಪನೊಂದಿಗೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಅಲ್ಲಿ ನೋಡಿದಂತ ಘಟನೆಯನ್ನು ನಿರ್ದೇಶಕರಿಗೆ ಹೇಳಿದೆ. ಈ ಸ್ಥಳ ಹಾಗೂ ಆ ಸ್ಥಳದ ಮಧ್ಯೆ ಮೂಲಭೂತ ಸೌಕರ್ಯವಿಲ್ಲದ ಹಾದಿಯಲ್ಲಿ ಮುಖ್ಯ ಕಾರಣವನ್ನು ಸಂಶೋಧನೆ ಮಾಡಲು ಹೋಗುತ್ತಿದ್ದಾಗ ಒಂದಷ್ಟು ಅಡಚಣೆಗಳು ಬರುತ್ತದೆ. ಕೊನೆಗೆ ಅದರಿಂದ ರಕ್ಷಣೆ ಸಿಗುತ್ತದಾ? ಇಲ್ಲವಾ ಎಂಬುದನ್ನು ಹೇಳ ಹೊರಟದ್ದೀವೆ. ಅಲ್ಲದೆ ಮೂಢನಂಬಿಕೆ ಅಂಶವನ್ನು ತೆಗೆದುಕೊಳ್ಳಲಾಗಿದೆ ಎಂದು ಎ.ಟಿ.ಎಂ.ಮಂಜು ಹೇಳಿದರು. ತನಿಷಾ ಕುಪ್ಪಂಡ, ದೀಪು, ವರ್ಧನ್, ವಿಜಿ, ಪೂಜಾ ಮುಖ್ಯ ಪಾತ್ರಧಾರಿಗಳು. ಮುಂಜಾನೆ ಮಂಜು ಕ್ಯಾಮೆರಾ ಚಿತ್ರಕ್ಕಿದೆ.


