Yaduveer Wadiyar: ಕಾಂಗ್ರೆಸ್ ಗೆ ಉಸಿರಾಡುವುದಕ್ಕೆ ದೇಶದಲ್ಲಿ ಇರುವುದು ಇದೊಂದೇ ರಾಜ್ಯ. 28 ರಲ್ಲಿ ಚುನಾವಣೆಯಲ್ಲಿ ಅದು ಕೂಡ ಇಲ್ಲದಂತೆ ಆಗುವ ಆತಂಕ ಅವರಿಗೆ ಇದೆ. ಆ ಮಾಹಿತಿ ಅವರಿಗೆ ಈಗಾಗಲೇ ಗೊತ್ತಾಗಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗು (ಜೂ.22): ಕಾಂಗ್ರೆಸ್ ಗೆ ಉಸಿರಾಡುವುದಕ್ಕೆ ದೇಶದಲ್ಲಿ ಇರುವುದು ಇದೊಂದೇ ರಾಜ್ಯ. 28 ರಲ್ಲಿ ಚುನಾವಣೆಯಲ್ಲಿ ಅದು ಕೂಡ ಇಲ್ಲದಂತೆ ಆಗುವ ಆತಂಕ ಅವರಿಗೆ ಇದೆ. ಆ ಮಾಹಿತಿ ಅವರಿಗೆ ಈಗಾಗಲೇ ಗೊತ್ತಾಗಿದೆ. ಆದ್ದರಿಂದಲೇ ಅವರು ಹೀಗೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಿಂದೂ ರಾಷ್ಟ್ರ ಮಾಡುವ ಉದ್ದೇಶ ಹೊಂದಿದೆ.

ಹಿಂದೂ ರಾಷ್ಟ್ರ ಮಾಡುವುದಕ್ಕೆ ಕೈಕಾರ್ಯಕರ್ತರು ಬಿಡಬಾರದು ಎಂದು ಸಿದ್ದರಾಮಯ್ಯ ಹೇಳಿರುವ ವಿಚಾರ ಮಡಿಕೇರಿಯಲ್ಲಿ ಮಾತನಾಡಿದ ಯದುವೀರ್ ಇದು ಅನಿರೀಕ್ಷಿತ ಹೇಳಿಕೆ ಏನು ಅಲ್ಲ, ಹಿಂದಿನಿಂದಲೂ ಅವರ ಮನೋಭಾವವೇ ಹಾಗೆ ಇದೆ. ಕಾಂಗ್ರೆಸ್ ನ ನಡವಳಿಕೆಯೇ ಯಾವಾಗಲೂ ಅಪಪ್ರಚಾರ ಮಾಡುವುದು ಎನ್ನುವುದು ನಮಗೂ ಗೊತ್ತಿದೆ. ಆದರೆ ಭಾರತೀಯ ಜನತಾ ಪಕ್ಷ ಸುರಕ್ಷಿತ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ.

ಪ್ರಧಾನಿ ಮೋದಿಯವರನ್ನು ದೇಶದ ಜನ ಒಪ್ಪಿದ್ದಾರೆ. ಹೀಗಾಗಿಯೇ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ನಮ್ಮ ಪಕ್ಷ ಎಲ್ಲಾ ಜನಾಂಗಗಳನ್ನು ಒಳಗೊಂಡು ಕೆಲಸ ಮಾಡುತ್ತಿದೆ. ಇಂದು ಹೆದ್ದಾರಿ, ರೈಲ್ವೇ ಹಾಗೂ ವಿಮಾನಯಾನ ಅಭಿವೃದ್ಧಿ ಆಗಿದೆ. ಇದನ್ನೆಲ್ಲ ಕೇವಲ ಹಿಂದುಗಳು ಮಾತ್ರವೇ ಬಳಕೆ ಮಾಡುತ್ತಾರೆಯೇ.? ಇವುಗಳಲ್ಲಿ ಹಿಂದೂಗಳು ಮಾತ್ರ ಓಡಾಡುತ್ತಾರೆಯೇ ಎಂದು ಪ್ರಶ್ನಿಸಿದ ಯದುವೀರ್ ಇವುಗಳಲ್ಲಿ ಎಲ್ಲಾ ಧರ್ಮಗಳ ಜನರು ಓಡಾಡುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಕೇವಲ ಅಪಪ್ರಚಾರ ಮಾಡುತ್ತದೆ ಅಷ್ಟೇ ಎಂದಿದ್ದಾರೆ.

ಸರ್ಕಾರ ನಿಮ್ಮದೇ ನಿರ್ಧಾರ ಕೈಗೊಳ್ಳಿ

ಬಿಡದಿ ಟೌನ್ ಶಿಪ್ ನಿರ್ಮಾಣ ಕೆಲಸ ಯಾರ ಸಮಯದಲ್ಲಿ ಆಯ್ತು ಎನ್ನುವುದು ಮುಖ್ಯವಲ್ಲ. ನಿಮ್ಮ ಸರ್ಕಾರವಿದೆ, ನೀವೆ ನಿರ್ಧಾರ ಮಾಡಿ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಬಿಡದಿ ಟೌನ್ ಶಿಪ್ ಆರಂಭವಾಗಿದ್ದೇ ಎಚ್ ಡಿಕೆ ಕಾಲದಲ್ಲಿ ಎಂದು ಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಅವರು ಜನರ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಾಗೆ ನೀವು ನಿರ್ಧಾರ ಮಾಡಿ.

ಹಿಂದೆ ಇದ್ದವರು, ಮುಂದೆ ಬರುವವರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಸರ್ಕಾರ, ಆಡಳಿತ ಅವರದ್ದೇ ಇದೆ. ಇಂದು ಜನರ ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ, ಆ ಅಭಿಪ್ರಾಯದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ. ಯಾರು ಹಿಂದೆ ಏನು ಮಾಡಿದರು ಮುಂದೆ ಏನ್ ಮಾಡ್ತಾರೆ ಎನ್ನುವ ಚರ್ಚೆ ಅವಶ್ಯಕತೆ ಇಲ್ಲ. ಆಡಳಿತ ಅವರ ಕೈಯಲ್ಲಿ ಇದೆ ಅವರು ನಿರ್ಧಾರ ತೆಗೆದುಕೊಳ್ಳಲಿ ಎಂದು ಮಡಿಕೇರಿಯಲ್ಲಿ ಸಿಎಂ ಡಿಕೆಶಿಗೆ ಸಂಸದಯ ಯದುವೀರ್ ಒಡೆಯರ್ ತಿರುಗೇಟು ನೀಡಿದರು.

ಇನ್ನು ಪರಿಷತ್ ಚುನಾವಣೆ ವೇಳೆಯಲ್ಲಿ ಅಡ್ಡ ಮತದಾನ ಮಾಡಿರುವವರಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯದುವೀರ್ ಪಕ್ಷ ಶಿಸ್ತುಕ್ರಮ ಕೈಗೊಳ್ಳುತ್ತದೆ. ಅದರ ವರದಿಗಾಗಿ ಈಗಾಗಲೇ ಸತ್ಯ ಶೋಧನೆ ಸಮಿತಿಯನ್ನು ರಚಿಸಲಾಗಿದೆ. ಸಿ ಟಿ ರವಿ ಅವರ ನೇತೃತ್ವದಲ್ಲಿ ಸಮಿತಿ ತನಿಖೆ ಮಾಡುತ್ತಿದೆ ಎಂದರು. ಅಡ್ಡಮತದಾನ ನಡೆದಿರುವುದು ಇದೇನು ಮೊದಲಲ್ಲ. ಬೇರೆ ಪಕ್ಷಗಳಲ್ಲೂ ಅಡ್ಡಮತದಾನ ನಡೆದಿವೆ.

ಈಗ ನಮ್ಮ ಪಕ್ಷದಲ್ಲೂ ಅಡ್ಡ ಮತದಾನ ನಡೆದಿದೆ. ನಾವು ಕ್ರಮ ತೆಗೆದುಕೊಳ್ಳಬೇಕಾಗಿದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಆಣೆ ಪ್ರಮಾಣಕ್ಕೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಅದು ಪಕ್ಷದ ಆಂತರಿಕ ವಿಚಾರವಾಗಿದ್ದು, ಏನು ಮಾಡಬೇಕು ಮಾಡಬಾರದು ಅಂತ ಪಕ್ಷ ನಿರ್ಧಾರ ಮಾಡುತ್ತದೆ. ಅದನ್ನೆಲ್ಲ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಯದುವೀರ್ ಒಡೆಯರ್ ಹೇಳಿದರು.