- Home
- Entertainment
- Grace Antony: 8 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ; ಏನ್ ಬಿಟ್ಟು ಏನ್ ತಿಂದ್ರು- ಸೀಕ್ರೆಟ್ ಇಲ್ಲಿದೆ ನೋಡಿ!
Grace Antony: 8 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ; ಏನ್ ಬಿಟ್ಟು ಏನ್ ತಿಂದ್ರು- ಸೀಕ್ರೆಟ್ ಇಲ್ಲಿದೆ ನೋಡಿ!
ಒಂದು ಕಾಲದಲ್ಲಿ 80 ಕೆಜಿ ತೂಕವಿದ್ದ ಗ್ರೇಸ್ ಆಂಟನಿ ಈಗ ಕೇವಲ 65 ಕೆಜಿ ತೂಕಕ್ಕೆ ಇಳಿದಿದ್ದಾರೆ. ಆದರೆ ಈ 15 ಕೆಜಿ ಇಳಿಸುವ ಹಾದಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲವಂತೆ. ‘ಈ ಎಂಟು ತಿಂಗಳ ಪ್ರಯಾಣ ಕಣ್ಣೀರು ಮತ್ತು ಕಷ್ಟಗಳಿಂದ ಕೂಡಿತ್ತು’ ಎಂದಿರುವ ಗ್ರೇಸಿ, ಡಯಟ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಬಣ್ಣದ ಲೋಕದಲ್ಲಿ ಮಿನುಗಬೇಕೆಂದರೆ ಕೇವಲ ನಟನೆ ಗೊತ್ತಿದ್ದರೆ ಸಾಲದು, ಜೊತೆಗೆ ಫಿಟ್ನೆಸ್ ಕೂಡ ಅಷ್ಟೇ ಮುಖ್ಯ. ಇದನ್ನೇ ಮಂತ್ರವಾಗಿರಿಸಿಕೊಂಡ ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟಿ ಗ್ರೇಸ್ ಆಂಟನಿ (Grace Antony) ಈಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. 'ಪರಂದು ಪೋ' ಸಿನಿಮಾದ ಮೂಲಕ ತನ್ನ ನೈಜ ನಟನೆಯಿಂದ ಕನ್ನಡಿಗರ ಮನಗೆದ್ದಿದ್ದ ಈ ಬೆಡಗಿ, ಈಗ ತನ್ನ ಹೊಸ ಲುಕ್ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಕೇವಲ 8 ತಿಂಗಳಲ್ಲಿ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡು ಈಗ 'ಸಪೂರ ಸುಂದರಿ'ಯಾಗಿ ಮಿಂಚುತ್ತಿದ್ದಾರೆ!
80 ರಿಂದ 65 ಕೆಜಿಗೆ: ಇದು ಬರೀ ತೂಕ ಇಳಿಕೆಯಲ್ಲ, ಮೌನ ಹೋರಾಟ!
ಒಂದು ಕಾಲದಲ್ಲಿ 80 ಕೆಜಿ ತೂಕವಿದ್ದ ಗ್ರೇಸ್ ಆಂಟನಿ ಈಗ ಕೇವಲ 65 ಕೆಜಿ ತೂಕಕ್ಕೆ ಇಳಿದಿದ್ದಾರೆ. ಆದರೆ ಈ 15 ಕೆಜಿ ಇಳಿಸುವ ಹಾದಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲವಂತೆ. ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಗ್ರೇಸ್, "ಈ ಎಂಟು ತಿಂಗಳ ಪ್ರಯಾಣ ಕಣ್ಣೀರು ಮತ್ತು ಕಷ್ಟಗಳಿಂದ ಕೂಡಿತ್ತು. ನೂರಾರು ಬಾರಿ ನನ್ನನ್ನೇ ನಾನು ಅನುಮಾನಿಸಿಕೊಂಡಿದ್ದೆ. 'ನನ್ನಿಂದ ಇದು ಸಾಧ್ಯವೇ?' ಎಂದು ಅತ್ತು ಸುಮ್ಮನಾದ ದಿನಗಳೂ ಇವೆ. ಆದರೆ ಸೋಲೊಪ್ಪಿಕೊಳ್ಳದ ಛಲ ನನ್ನನ್ನು ಇಂದು ಇಲ್ಲಿ ತಂದು ನಿಲ್ಲಿಸಿದೆ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಏನೋ ಬಿಟ್ಟು ಏನೋ ತಿಂದ್ರು? ಇಲ್ಲಿದೆ ಅಸಲಿ ಗುಟ್ಟು!
ಗ್ರೇಸ್ ಆಂಟನಿ ಅವರ ಈ ಅದ್ಭುತ ಬದಲಾವಣೆಯ ಹಿಂದೆ ಒಂದು ಕಟ್ಟುನಿಟ್ಟಾದ 'ಡಯಟ್ ಪ್ಲಾನ್' ಇದೆ. ಸಾಮಾನ್ಯವಾಗಿ ಭಾರತೀಯರ ಊಟದಲ್ಲಿ ಅನ್ನ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಗ್ರೇಸ್ ಮಾಡಿದ್ದೇ ಬೇರೆ! ಅವರು ತಮ್ಮ ನೆಚ್ಚಿನ 'ಬಿಳಿ ಅನ್ನ' (White Rice) ತಿನ್ನುವುದನ್ನೇ ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರೆ. ಇದು ಅವರ ತೂಕ ಇಳಿಕೆಯಲ್ಲಿ ದೊಡ್ಡ ಮ್ಯಾಜಿಕ್ ಮಾಡಿದೆ.
ಅನ್ನದ ಬದಲು ಅವರ ಪ್ಲೇಟ್‌ನಲ್ಲಿ ಜಾಗ ಪಡೆದಿದ್ದು ಇವು:
ಓಟ್ಸ್ ಮತ್ತು ಗೋಧಿ ಬ್ರೆಡ್: ಬೆಳಗಿನ ಉಪಹಾರಕ್ಕೆ ಕಾರ್ಬೋಹೈಡ್ರೇಟ್ಸ್ ನಿಯಂತ್ರಿಸಲು ಇವುಗಳನ್ನು ಆಯ್ದುಕೊಂಡಿದ್ದಾರೆ.
ಸೇಬು ಮತ್ತು ತರಕಾರಿಗಳು: ಹಸಿವಾದಾಗಲೆಲ್ಲಾ ಜಂಕ್ ಫುಡ್ ತಿನ್ನುವ ಬದಲು ಫ್ರೆಶ್ ಸೇಬು ಮತ್ತು ಹಸಿರು ತರಕಾರಿಗಳನ್ನು ಸೇವಿಸುತ್ತಿದ್ದರು.
ಮೊಟ್ಟೆ: ಪ್ರೊಟೀನ್ ಕೊರತೆಯಾಗದಂತೆ ದಿನನಿತ್ಯದ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಿಕೊಂಡಿದ್ದರು.
ಬೆವರು ಹರಿಸದಿದ್ದರೆ ಫಿಟ್ನೆಸ್ ಅಸಾಧ್ಯ!
ಕೇವಲ ಆಹಾರ ನಿಯಂತ್ರಣವಷ್ಟೇ ಅಲ್ಲದೆ, ಗ್ರೇಸ್ ಆಂಟನಿ ದಿನವೂ ಮಿಸ್ ಮಾಡದೆ ವ್ಯಾಯಾಮ ಮಾಡುತ್ತಿದ್ದರು. ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುವುದು, ಯೋಗ ಮತ್ತು ಕಾರ್ಡಿಯೋ ವರ್ಕೌಟ್‌ಗಳ ಮೂಲಕ ತನ್ನ ದೇಹವನ್ನು ಸುಂದರವಾದ ಆಕಾರಕ್ಕೆ ತಂದಿದ್ದಾರೆ. "ನಾನು ಕಳೆದುಕೊಂಡಿದ್ದ ಆತ್ಮವಿಶ್ವಾಸ ಈಗ ಮರಳಿ ಬಂದಿದೆ" ಎಂದು ಹೇಳುವ ಗ್ರೇಸ್ ಅವರ ಈ ಸಾಧನೆ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ.
ಒಟ್ಟಿನಲ್ಲಿ, "ಆಸೆ ಪಟ್ಟಿದ್ದನ್ನು ತಿನ್ನೋದು ಬಿಟ್ಟು, ದೇಹಕ್ಕೆ ಬೇಕಾಗಿದ್ದನ್ನು ಮಾತ್ರ ತಿಂದರೆ" ಯಾರೂ ಕೂಡ ಗ್ರೇಸ್ ಆಂಟನಿಯಂತೆ ಫಿಟ್ ಆಗಬಹುದು ಅನ್ನೋದಕ್ಕೆ ಈ ನಟಿಯೇ ಸಾಕ್ಷಿ. ನೀವೂ ಕೂಡ ತೂಕ ಇಳಿಸಿಕೊಳ್ಳಲು ಪ್ಲಾನ್ ಮಾಡುತ್ತಿದ್ದರೆ, ಈಕೆಯ 'ರೈಸ್ ಫ್ರೀ' ಡಯಟ್ ಒಮ್ಮೆ ಟ್ರೈ ಮಾಡಬಹುದು!
ವಿಶೇಷ ಸೂಚನೆ: ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಹೇಳೋದಕ್ಕಷ್ಟೇ ಈ ಸುದ್ದಿ. ಪ್ರತಿ ವ್ಯಕ್ತಿಯ ದೇಹದ ಆಕಾರ, ಬಣ್ಣ ಹಾಗೂ ದೇಹದ ಪ್ರಕೃಥಿ ಬೇರೆಯದ್ದೇ ಆಗಿರುತ್ತದೆ. ಅವರವರ ದೇಹದ ಆರೋಗ್ಯವನ್ನು ಅನುಭವ ಹಾಗೂ ಪ್ರಯೋಗಗಳ ಮೂಲಕ ಸ್ವತಃ ಕಂಡುಕೊಳ್ಳಬೇಕಾಗುತ್ತದೆ. ನಿಮ್ಮನಿಮ್ಮ ವೈದ್ಯರು ಹಾಗೂ ಡಯಟೀಶನ್ ಸಲಹೆ ಪಡೆಯುವುದನ್ನು ಮರೆಯಬೇಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

