Actor Sathish Ninasam Press Conference: ಇತ್ತೀಚೆಗೆ ಅಯೋಗ್ಯ 2 ಸಿನಿಮಾದ ಹಾಡಿನ ರಿಲೀಸ್‌ ಆಗಿದೆ. ಆ ವೇಳೆ ಕನ್ನಡ ಸಿನಿಮಾಗಳ ಅಳಿವು ಉಳಿವಿನ ಬಗ್ಗೆ ಸತೀಶ್‌ ನೀನಾಸಂ ಅವರು ಮಾತನಾಡುತ್ತ, ನಿರ್ಮಾಪಕರಿಗೆ ಎಜ್ಯುಕೇಶನ್‌ ಬೇಕು ಎಂದಿದ್ದಾರೆ. ಈ ಬಗ್ಗೆ ದೊಡ್ಡ ಚರ್ಚೆ ಆಗಿದ್ದು,

Actor Sathish Ninasam Press Conference: ‘ಅಯೋಗ್ಯ 2 ಚಿತ್ರದ ಆಡಿಯೋ ಕಾರ್ಯಕ್ರಮದಲ್ಲಿ ‘ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದ ಮೇಲೂ ಯಾಕೆ ಸಿನಿಮಾ ಮಾಡಬೇಕು? ನಿರ್ಮಾಪಕರಿಗೆ ಶಿಕ್ಷಣದ ಅವಶ್ಯಕತೆ ಇದೆ’ ಎಂದು ನಟ ಸರೀಶ್‌ ನೀನಾಸಂ ಅವರು ಹೇಳಿದ್ದರು. ಈ ಮಾತು ದೊಡ್ಡ ಚರ್ಚೆ ಆಯ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಡಿಯೋ ಮಾಡಿ ಕ್ಷಮೆ ಕೇಳಿದ್ರು! 

ನಿರ್ಮಾಪಕರ ಬಗ್ಗೆ ತಾನು ಹೇಳಿದ ಮಾತಿಗೆ ನಟ ಸತೀಶ್‌ ನೀನಾಸಂ ಅವರು ವಿಡಿಯೋ ಮಾಡಿ ಕ್ಷಮೆಯಾಚನೆ ಕೂಡ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಸತೀಶ್‌ ನೀನಾಸಂ, ‘ನಿರ್ಮಾಪಕರು ಶಿಕ್ಷಣ ಕಲಿತು ಚಿತ್ರರಂಗಕ್ಕೆ ಬರಲಿ ಎಂದು ಹೇಳಿದ ಮಾತಿನ ಅರ್ಥ ಶಾಲೆಯ ಶಿಕ್ಷಣವಲ್ಲ. ಬದಲಿಗೆ ಕತೆ, ನಿರ್ಮಾಣದ ಪ್ರಕ್ರಿಯೆ, ಹೂಡಿಕೆ ಇತ್ಯಾದಿಗಳ ಬಗ್ಗೆ ಚಿತ್ರರಂಗಕ್ಕೆ ಬರುತ್ತಿರುವ ಹೊಸ ನಿರ್ಮಾಪಕರಿಗೆ ತಿಳುವಳಿಕೆ ಅಗತ್ಯ ಎನ್ನುವ ಹಿನ್ನೆಲೆಯಲ್ಲಿ ನಾನು ‘ಎಜುಕೇಷನ್‌’ ಎನ್ನುವ ಪದ ಬಳಸಿದ್ದೇನೆ. ಆದರೂ ನನ್ನ ಮಾತುಗಳಿಂದ ನಿರ್ಮಾಪಕರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತಿದ್ದೇನೆ’ ಎಂದಿದ್ದಾರೆ.

ಇನ್ನೂ ಸತೀಶ್‌ ನೀನಾಸಂ ಅವರ ಹೇಳಿಕೆಯನ್ನು ಖಂಡಿಸಿ ಸೋಮವಾರ ನಿರ್ಮಾಪಕರ ಸಂಘ ಕೂಡ ಪತ್ರಿಕಾಗೋಷ್ಟಿ ಕರೆದಿತ್ತು. ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ ಹಾಗೂ ಪ್ರಮುಖರಾದ ಭಾ ಮ ಹರೀಶ್‌, ನಂದಿಹಾಳು, ಅವಿನಾಶ್‌ ಶೆಟ್ಟಿ, ಟೇಶಿ ವೆಂಕಟೇಶ್‌, ಮಾಲತಿ ಗೌಡ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು. 

ಸುದ್ದಿಗೋಷ್ಠಿಯಲ್ಲಿ ಏನಾಯ್ತು?

ಪತ್ರಿಕಾಗೋಷ್ಟಿಗೂ ಆಗಮಿಸಿದ್ದ ಸತೀಶ್‌ ನೀನಾಸಂ, ‘ಯಾರನ್ನೂ ನೋಯಿಸುವ ವ್ಯಕ್ತಿತ್ವ ನನ್ನದಲ್ಲ. ನಿರ್ಮಾಪಕರು ಇದ್ದರೆನೇ ಚಿತ್ರರಂಗ. ನಾನು ಕೂಡ ನಿರ್ಮಾಪಕನಾಗಿ ಸೋತವನು. ಆ ಸೋಲಿನಿಂದ ಕಲಿಯಲು ನನಗೇ ಸಾಕಷ್ಟು ಸಮಯ ಬೇಕಾಯಿತು. ಹೊಸ ನಿರ್ಮಾಪಕರುಗಳು ಚಿತ್ರರಂಗಕ್ಕೆ ಬಂದು ನಷ್ಟ ಅನುಭವಿಸಬಾರದು ಎಂಬ ಕಾಳಜಿಯಿಂದ ಆ ಮಾತು ಹೇಳಿದ್ದೇನೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಏನಾಯ್ತು?

“ಸತೀಶ್‌ ನೀನಾಸಂ ಅವರ ಮಾತಿನಲ್ಲಿ ತಪ್ಪೇನಿದೆ’ ಎಂದು ಪತ್ರಕರ್ತರು ಪ್ರಶ್ನಿಸಿದ್ದರಿಂದ ನಿರ್ಮಾಪಕರ ಸಂಘದ ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕರಿಗೂ ಹಾಗೂ ಮಾಧ್ಯಮಗಳ ನಡುವೆ ಮಾತಿನ ಚಕಮಕಿ ನಡೆಯಿತು. ‘ನಿರ್ಮಾಪಕರ ಮೇಲಿನ ಕಾ‍ಳಜಿಯಿಂದ ಹೇಳಿರುವ ಮಾತುಗಳನ್ನು ಖಂಡಿಸುವ ನಿರ್ಮಾಪಕರ ಸಂಘ, ಚಿತ್ರರಂಗದ ಮನವಿ ಮೇರೆಗೆ ಏಕದರ ಟಿಕೆಟ್‌ ರೇಟು ನಿಗದಿ ಮಾಡಿದ್ದರ ವಿರುದ್ಧ ಕೋರ್ಟ್‌ಗೆ ಹೋದ ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡುವುದಿಲ್ಲ ಯಾಕೆ’ ಎನ್ನುವ ಮಾಧ್ಯಮಗಳ ಪ್ರಶ್ನೆ ತೀವ್ರ ಚರ್ಚೆಗೆ ಕಾರಣವಾಯಿತು.