- Home
- Karnataka Districts
- Bengaluru Trains: ಟಿಕೆಟ್ ಸಿಗ್ತಿಲ್ಲ, ಹೆಚ್ಚು ಟ್ರೇನ್ ಇಲ್ಲ ಎನ್ನೋರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
Bengaluru Trains: ಟಿಕೆಟ್ ಸಿಗ್ತಿಲ್ಲ, ಹೆಚ್ಚು ಟ್ರೇನ್ ಇಲ್ಲ ಎನ್ನೋರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
Bengaluru Tumakur quadruple rail: ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗುತ್ತಿದ್ದರೂ, ಜನರಿಗೆ ತೊಂದರೆ ಆಗುತ್ತಲೇ ಇದೆ. ಈಗ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸುಮಾರು 6,000 ಕೋಟಿ ರೂ. ವೆಚ್ಚದ ಬೆಂಗಳೂರು-ತುಮಕೂರು ಚತುಷ್ಪಥ ರೈಲು ಮಾರ್ಗದ ಬಗ್ಗೆ ಮಾತನಾಡಿದ್ದಾರೆ.

ಜಾಗ ಗುರುತು ಮಾಡಬೇಕು
ಈ ಚತುಷ್ಪಥ ರಸ್ತೆಯ ಪ್ರಾಥಮಿಕ ಸಿದ್ಧತೆಗಳು ಅತ್ಯಂತ ವೇಗವಾಗಿ ಸಾಗುತ್ತಿವೆ ಎಂದು ಹೇಳಿದ್ದಾರೆ.
ಇಂದು ಪೆಟ್ರೋಲ್ ರೇಟ್ ಹೆಚ್ಚಾಗುತ್ತಲೇ ಇದೆ, ಹೀಗಾಗಿ ಬಸ್, ವೈಯಕ್ತಿಕ ವಾಹನಗಳಿಂದ ಒಂದಿಷ್ಟು ಟ್ರಾಫಿಕ್ ಜಾಮ್ ಆಗ್ತಿದೆ. ಇದರ ಜೊತೆಗೆ ಟ್ರೇನ್‌ನಲ್ಲಿ ಸಾಕಷ್ಟು ಜನರು ಓಡಾಟ ಮಾಡುತ್ತಿದ್ದರೂ ಕೂಡ ಜನ ದಟ್ಟಣೆ ಕಡಿಮೆ ಆಗುತ್ತಿಲ್ಲ. ಹೀಗಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಈ ಯೋಜನೆಗೆ ಒಂದಿಷ್ಟು ಜಮೀನು ಬೇಕು, ಇದನ್ನು ಗುರುತು ಮಾಡಬೇಕಿದೆ. ಮುಂದಿನ 5-6 ತಿಂಗಳೊಳಗೆ ಅಧಿಕೃತ ಭೂಸ್ವಾಧೀನ ಪ್ರಕ್ರಿಯೆಯು ಆರಂಭವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಈ ಯೋಜನೆಯಿಂದ ಏನು ಪ್ರಯೋಜನ?
ಈ ಚತುಷ್ಪಥ ಯೋಜನೆ ಸಾರಿಗೆ ಕಾರಿಡಾರ್‌ನ ಸಾಮರ್ಥ್ಯ, ಬಳಕೆಯನ್ನು ಗಣನೀಯವಾಗಿ ಹೆಚ್ಚು ಮಾಡಲಿದೆ. ಈಗ ಇರುವ ಹಳಿಗಳನ್ನು ನಾಲ್ಕು ಪಥಗಳನ್ನಾಗಿ ಮಾಡುವುದರಿಂದ, ದೂರದ ಊರುಗಳಿಗೆ ಹೋಗುವ ಎಕ್ಸ್‌ಪ್ರೆಸ್ ರೈಲು, ನಿತ್ಯ ಸಂಚರಿಸುವ ಪ್ರಾದೇಶಿಕ ಲೋಕಲ್ ಪ್ಯಾಸೆಂಜರ್ ರೈಲುಗಳು ಪ್ರತ್ಯೇಕವಾಗಿ ಹೋಗುತ್ತದೆ. ಇದರಿಂದ ಟ್ರೇನ್ ಲೇಟ್ ಆಗೋದಿಲ್ಲ.
ಟ್ರಾವೆಲ್ ಟೈಮ್ ಕಡಿಮೆ ಸಾಕು
ಈ ಯೋಜನೆ ಆದ್ಮೇಲೆ ಜನರಿಗೆ ಟ್ರಾವೆಲ್ ಟೈಮ್ ಕಡಿಮೆ ಆಗುತ್ತದೆ, ಹೀಗಾಗಿ ಸಾಕಷ್ಟು ಜನರು ಟ್ರೇನ್ ಮೇಲೆ ಅವಲಂಬಿತರಾಗಬಹುದು. ಈ ಎರಡು ನಗರಗಳ ನಡುವೆ ಹೆಚ್ಚಿನ ಆರ್ಥಿಕ ಬೆಳವಣಿಗೆ ಆಗಲಿದೆ.
ರೈಲ್ವೆ ಸಚಿವ ವಿ ಸೋಮಣ್ಣ ಏನಂದ್ರು?
ಸಚಿವ ವಿ. ಸೋಮಣ್ಣ ಈ ಬಗ್ಗೆ ಮಾತನಾಡಿ, "ಈ ಯೋಜನೆಗಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು (DPR) ರೆಡಿ ಮಾಡಿದ್ದೇವೆ. ರೈಲ್ವೆ ಇಲಾಖೆಯ ಉನ್ನತ ತಾಂತ್ರಿಕ ಸಮಿತಿಯು ಇದಕ್ಕೆ ಓಕೆ ಎಂದಿದೆ. ಇದಾದ ಬಳಿಕ ಕೇಂದ್ರ ಸಚಿವ ಸಂಪುಟ, ನೀತಿ ಆಯೋಗದ ಒಪ್ಪಿಗೆಗೆ ಹೋಗುತ್ತೆ. ಐದರಿಂದ ಆರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರು ಆಗಲಿದೆ" ಎಂದಿದ್ದಾರೆ.
ಓಡಾಡುವ ಜನರು ಹೆಚ್ಚು
ಈ ಯೋಜನೆ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಗಟ್ಟಿ ಮಾಡಲಿದೆ, ಇದರಿಂದ ಒಂದಿಷ್ಟು ಸಹಾಯ ಕೂಡ ಆಗಲಿದೆ. ಬೆಂಗಳೂರು ಹಾಗೂ ತುಮಕೂರು ಮಧ್ಯೆ ನಿತ್ಯ ಸಾಕಷ್ಟು ಜನರು ವಿಧ ವಿಧವಾದ ಉದ್ದೇಶಕ್ಕಾಗಿ ಹೋಗೋದುಂಟು. ಹೀಗಾಗೀ ಈ ಐಡಿಯಾ ಸಹಾಯ ಆಗಲಿದೆ.

