ನಗೋಯಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಪದಕ ಬೇಟೆ ಮುಂದುವರಿದಿದೆ. ಗುರುವಾರ ಭಾರತ ಒಂದೇ ದಿನ 7 ಚಿನ್ನ ಸೇರಿದಂತೆ ಬರೋಬ್ಬರಿ 26 ಪದಕಗಳನ್ನು ಬಾಚಿಕೊಂಡಿದೆ. ಸದ್ಯ 21 ಚಿನ್ನ, 26 ಬೆಳ್ಳಿ ಹಾಗೂ 41 ಕಂಚಿನೊಂದಿಗೆ ಒಟ್ಟು 88 ಪದಕ ಜಯಿಸಿರುವ ಭಾರತ, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.
ದಿನದ ಪ್ರಮುಖ ಆಕರ್ಷಣೆಯಾಗಿ ಎರಡೂ ಕೈಗಳಿಲ್ಲದ 19 ವರ್ಷದ ಆರ್ಚರಿ ಪಟು ಶೀತಲ್ ದೇವಿ ಮಿಂಚಿದರು. ಕೇವಲ 2 ಗಂಟೆಗಳ ಅಂತರದಲ್ಲಿ ಕಾಂಪೌಂಡ್ ಆರ್ಚರಿಯ ಮಿಶ್ರ ತಂಡ ಮತ್ತು ವೈಯಕ್ತಿಕ ವಿಭಾಗದಲ್ಲಿ 2 ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಮಹಿಳೆಯರ ತಂಡ ವಿಭಾಗದಲ್ಲೂ ಬೆಳ್ಳಿ ಗೆದ್ದು ಒಟ್ಟು 3 ಪದಕ ತಮ್ಮದಾಗಿಸಿಕೊಂಡರು.
ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಸುವರ್ಣ ರಾಜ್ ಚಿನ್ನ ಗೆದ್ದರೆ, ಪುರುಷರ ಹೈಜಂಪ್‌ನಲ್ಲಿ ಭಾರತ ಪದಕ ಕ್ಲೀನ್ ಸ್ವೀಪ್ ಸಾಧಿಸಿತು. ಶೈಲೇಶ್ ಕುಮಾರ್ (ಚಿನ್ನ), ವರುಣ್ ಭಾಟಿ (ಬೆಳ್ಳಿ), ರಾಹುಲ್ (ಕಂಚು) ಗೆದ್ದರು. 400 ಮೀಟರ್ ಓಟದಲ್ಲಿ ದಿಲೀಪ್ ಗವಿತ್ ಹಾಗೂ ಅಂಜನಾಬೆನ್ ಚಿನ್ನ ಗೆದ್ದರೆ, ಲಾಂಗ್‌ಜಂಪ್‌ನಲ್ಲಿ ಧರ್ಮರಾಜ್ ಸೊಲೈರಾಜ್ 7.15 ಮೀ. ದೂರ ಜಿಗಿದು ನೂತನ ಏಷ್ಯನ್ ದಾಖಲೆಯೊಂದಿಗೆ ಸ್ವರ್ಣ ಪದಕ ಮುಡಿಗೇರಿಸಿಕೊಂಡರು.
09:29 AM (IST) Oct 23
08:39 AM (IST) Oct 23
08:20 AM (IST) Oct 23
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕುರಿತು ಇನ್‌ಸ್ಟಾಗ್ರಾಂನಲ್ಲಿ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಈ ಪುಸ್ತಕವು ಇಟಲಿಯ ಬಾಲ್ಯ, ರಾಜೀವ್ ಗಾಂಧಿ ಭೇಟಿ, ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡ ರೀತಿ ಬಗ್ಗೆ ವಿವರಿಸುತ್ತದೆ.