ಉತ್ತರಪ್ರದೇಶದ ಗೋರಖ್ಪುರದ ಗ್ರಾಮವೊಂದರಲ್ಲಿ ದುರ್ಗಾ ಪೂಜೆಯ ಪ್ರಸಾದ ಸೇವಿಸಿದ 450ಕ್ಕೂ ಹೆಚ್ಚು ಮಂದಿ ಆತಂಕದಿಂದ ರೇಬಿಸ್ ಲಸಿಕೆ ಪಡೆದಿದ್ದಾರೆ. ಪ್ರಸಾದ ತಯಾರಿಸಲು ಬಳಸಿದ ಹಾಲು ನೀಡಿದ್ದ ಹಸು ರೇಬಿಸ್ನಿಂದ ಮೃತಪಟ್ಟಿದೆ ಎಂಬ ಶಂಕೆಯೇ ಈ ಆತಂಕಕ್ಕೆ ಕಾರಣವಾಗಿದೆ.
ದುರ್ಗಾ ಪೂಜೆಯ ವೇಳೆ ಮೊಸರು ಹಾಲಿನಿಂದ ತಯಾರಿಸಿದ ಪ್ರಸಾದ ಸೇವಿಸಿದ ಗ್ರಾಮಸ್ಥರು ಬಳಿಕ ರೇಬಿಸ್ ಹರಡಿದ ಸುದ್ದಿಗೆ ಆತಂಕಗೊಂಡು ಸುಮಾರು 450ಕ್ಕೂ ಹೆಚ್ಚು ಮಂದಿ ರೇಬಿಸ್ ಲಸಿಕೆ ಪಡೆದ ವಿಚಿತ್ರ ಘಟನೆ ಉತ್ತರಪ್ರದೇಶದ ಗೋರಖ್ಪುರದ ದಾದಿ ಖಾಸ್ ಎಂಬ ಗ್ರಾಮದಲ್ಲಿ ನಡೆದಿದೆ.
ಹಾಲು, ಮಜ್ಜಿಗೆ, ಮೊಸರಿನಿಂದ ರೇಬಿಸ್ ಹರಡುತ್ತಾ? ದೇವರ ಪ್ರಸಾದಕ್ಕೂ ರೇಬಿಸ್ಗೂ ಏನು ಸಂಬಂಧ? ಅಸಲಿಗೆ ಅಲ್ಲಿ ನಡೆದ ಘಟನೆ ಏನು ಅನ್ನೋದು ತಿಳಿದರೆ ನಿಮಗೂ ಶಾಕ್ ಆಗುತ್ತದೆ.
ಹಾಗಾದ್ರೆ 450 ಮಂದಿ ರೇಬಿಸ್ ಲಸಿಕೆ ಪಡಿದ್ದೇಕೆ?
ಘಟನೆಯ ಹಿಂದಿನ ಕಾರಣ ಬಹಳ ವಿಚಿತ್ರವಾಗಿದೆ. ಆಗಿದ್ದೇನೆಂದರೆ, ಇತ್ತೀಚೆಗೆ ನವರಾತ್ರಿ ಹಬ್ಬದ ವಿಶೇಷವಾಗಿ ಗ್ರಾಮದಲ್ಲಿ ದುರ್ಗಾ ಪೂಜಾ ಕಾರ್ಯಕ್ರಮ ನಡೆದಿದೆ. ದೇವರಿಗೆ ಮತ್ತು ಕಾರ್ಯಕ್ರಮಕ್ಕೀ ಬಂದ ಭಕ್ತರಿಗೆ ಪ್ರಸಾದ ಮಾಡಲಾಗಿತ್ತು. ಪ್ರಸಾದ ತಯಾರಿಸಲು ಹಸು ಸಾಕಿದ್ದ ಒಂದು ಮನೆಯಿಂದ ಹಾಲು, ಮೊಸರು ತರಿಸಲಾಗಿತ್ತು. ಆದರೆ ಹಾಲು ಕೊಟ್ಟಿದ್ದ ಹಸು ದಿಢೀರ್ ಅನಾರೋಗ್ಯದಿಂದ ಮೃತಪಟ್ಟಿದೆ. ಅದು ರೇಬಿಸ್ ಕಾಯಿಲೆಯಿಂದ ಬಳಲುತ್ತಿತ್ತು ಎಂಬ ಸುದ್ದಿ ಗ್ರಾಮಸ್ಥರಿಗೆ(ಪ್ರಸಾದ ತಿಂದಿದ್ದವರರು) ತಿಳಿದು ಆತಂಕವಾಗಿದೆ.
ಹಸುವಿಗೆ ರೇಬಿಸ್ ಕಾಯಿಲೆ ಇತ್ತು ಎಂಬ ಸುದ್ದಿ ಗ್ರಾಮದಲ್ಲಿ ಹಬ್ಬಿದ್ದರಿಂದ ಪ್ರಸಾದ ಸೇವಿಸಿದ್ದ ನೆರೆಯ 'ಗೋವಿಂದಪುರ' ಗ್ರಾಮದ ನಿವಾಸಿಗಳು ಕೂಡ ಲಸಿಕೆ ಪಡೆದಿದ್ದಾರೆ. 'ಎಕನಾಮಿಕ್ ಟೈಮ್ಸ್' ವರದಿಯ ಪ್ರಕಾರ. ಸತ್ತ ಹಸುವನ್ನು ಪರೀಕ್ಷೆ ಮಾಡಿದಾಗ ಅದು (ಹುಚ್ಚು ನಾಯಿ ರೋಗ) ಕಾಯಿಲೆಯಿಂದ ಸತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯು ಲಸಿಕಾ ಶಿಬಿರವನ್ನು ಆಯೋಜಿಸಿತ್ತು. ನಿಜವಾಗಿಯೂ ಹಸುವಿಗೆ ರೇಬಿಸ್ ಕಾಯಿಲೆ ಇತ್ತ ಎಂಬ ಬಗ್ಗೆಯೂ ದೃಢಪಟ್ಟಿಲ್ಲ. ಸೇವಿಸಿದವರಿಗೂ ರೇಬಿಸ್ ಕಾಯಿಲೆ ಬಂದಿದೆ ಎಂದರ್ಥವಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಈ ಲಸಿಕೆಗಳನ್ನು ನೀಡಲಾಗಿದೆ.
ಹಸು ಅನಾರೋಗ್ಯದಿಂದ ಬಳಲುತ್ತಿತ್ತು
ವರದಿಗಳ ಪ್ರಕಾರ ಅ.20, ಮಂಗಳವಾರದಂದು ಹಸುವನ ಆರೋಗ್ಯವೂ ಹದಗೆಟ್ಟಿತ್ತು. ಹಸು ಅನಾರೋಗ್ಯಕ್ಕೊಳಗಾಗಿರುವುದು ಗಮನಿಸಿದ ನವಮಿ ಯಾದವ್ ಖಾಸಗಿ ಪಶುವೈದ್ಯರನ್ನು ಹಾಗೂ ಸ್ಥಳೀಯ ಪಶು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು. ಆಗ ಹಸುವಿಗೆ ನಾಯಿ ಕಚ್ಚಿರಬಹುದು ಎಂದು ಪಶುವೈದ್ಯರು ಶಂಕಿಸಿದ್ದರು. ಹಸು ನಾಯಿಯಂತೆ ಬೊಗಳುವುದು ಗಮನಿಸಿದಾಗ ಹುಚ್ಚುನಾಯಿ ಕಡಿತದಿಂದ ಹೀಗಾಗಿರಬಹುದು ಎಂಬ ವೈದ್ಯರ ಶಂಕೆ ವ್ಯಕ್ತಪಡಿಸಿದ್ದರು.
ಆದರೆ ಇದೇ ಹಸುವಿನಿಂದ ಪಡೆದ ಹಾಲು ಮೊಸರಿನಿಂದ ತಯಾರಿಸಿದ ನೈವೇದ್ಯ(ಪ್ರಸಾದ್ ದೇವಿ) ಪ್ರಸಾದ ಸೇವಿಸಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಹಸುವಿನ ಮಾಲೀಕರು ಇದೇ ಹಸುವಿನ ಹಾಲು ಎರಡು ಅಂಗಡಿಗಳಿಗೆ ಮತ್ತು ಹಲವು ಮನೆಗಳಿಗೆ ಹಾಕುತ್ತಿದ್ದರು. ರೇಬಿಸ್ ಕಾಯಿಲೆ ಹರಡುವ ಆತಂಕದಿಂದ ವೈದ್ಯರ ಸಲಹೆ ಪಡೆಯಲು, ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಗ್ರಾಮಸ್ಥರು ಮುಂದಾದರು. ಗ್ರಾಮದಲ್ಲೆಲ್ಲ ಆತಂಕ ಮನೆಮಾಡಿದ್ದ ಹಿನ್ನೆಲೆ ಆರೋಗ್ಯ ಇಲಾಖೆಯೇ ಖುದ್ದಾಗಿ ಅ.21ರಂದು ದಾಡಿ ಖಾಸ್(ದಾಡಿ ಖಾಸ್) ಗ್ರಾಮದಲ್ಲಿ ಲಸಿಕಾ ಶಿಬಿರ ಆಯೋಜಿಸಿದ್ದರು.
ಅಧಿಕಾರಿಗಳು ಹೇಳುವ ಪ್ರಕಾರ ಮಂಗಳವಾರದಂದು ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಸುಮಾರು 50 ಮಂದಿ ರೇಬಿಸ್ ತಡೆಗಟ್ಟುವ ಲಸಿಕೆಯನ್ನು ಪಡೆದಿದ್ದರು. ಬುಧವಾರ ನಡೆದ ಶಿಬಿರದಲ್ಲಿ ಇನ್ನೂ 400 ಮಂದಿಗೆ ಲಸಿಕೆ ನೀಡಲಾಗಿದ್ದು ಈವರೆಗೆ ಒಟ್ಟು ಫಲಾನುಭವಿಗಳ ಸಂಖ್ಯೆ ಸುಮಾರು 450ಕ್ಕೆ ತಲುಪಿದೆ.
ಈ ಲಸಿಕಾ ಅಭಿಯಾನವನ್ನು ಫಾರ್ಮಾಸಿಸ್ಟ್ ಸಿದ್ಧಾರ್ಥ್ ಸಿಂಗ್ ನೇತೃತ್ವದ ಆರೋಗ್ಯ ಇಲಾಖೆಯ ತಂಡವು ನಡೆಸಿತು. ಲಸಿಕೆಯ ಅಗತ್ಯವಿರುವ ಜನರಿಗೆ ಆಗುವಷ್ಟು ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿಯ ಪ್ರಕಾರ ರೇಬಿಸ್ ಸೋಂಕಿನ ಅಪಾಯವಿರಬಹುದು ಎಂದು ಆತಂಕಗೊಂಡಿರುವ ಜನರು ವೈದ್ಯರನ್ನು ಸಂಪರ್ಕಿಸಬೇಕು, ರೇಬೀಸ್ ಲಸಿಕೆ ಪಡೆದು ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಫಾಲೋ ಮಾಡಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಅಮರೇಂದ್ರ ಠಾಕೂರ್ ಸಲಹೆ ನೀಡಿದ್ದಾರೆ.
ರೇಬೀಸ್ ಹಾಲು ಅಥವಾ ಪ್ರಸಾದದ ಮೂಲಕ ಹರಡುತ್ತದೆಯೇ?
ರೇಬೀಸ್ ಒಂದು ವೈರಸ್ ಕಾಯಿಲೆಯಾಗಿದ್ದು ಸೋಂಕಿತ ಪ್ರಾಣಿಯ ಲಾಲಾರಸವು ದೇಹವನ್ನು ಪ್ರವೇಶಿಸಿದಾಗ, ಸಾಮಾನ್ಯವಾಗಿ ಕಚ್ಚುವುದರಿಂದ ಹರಡುತ್ತದೆ. ರೇಬಿಸ್ ಸೋಂಕು ಇರುವ ಪ್ರಾಣಿಯ ಲಾಲಾರಸವು ಗಾಯ, ಕಣ್ಣು, ಮೂಗು ಅಥವಾ ಬಾಯಿಯೊಂದಿಗೆ ಸಂಪರ್ಕಕ್ಕೆ ಬಂದರೆ ಸಹ ಸೋಂಕು ಸಂಭವಿಸಬಹುದು. ಆದರೆ ಹಾಲನ್ನು ಮಾತ್ರ ಸೇವಿಸುವುದು ರೇಬೀಸ್ ಬರುತ್ತದೆ ಎಂದಿಲ್ಲ. ಗ್ರಾಮಸ್ಥರು ಪ್ರಸಾದವನ್ನು ತಿನ್ನುವ ಮೂಲಕ ರೇಬೀಸ್ ಸೋಂಕಿಗೆ ಒಳಗಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಇದೊಂದು ಮುನ್ನೆಚ್ಚರಿಕೆ ಕ್ರಮವಾಗಿದೆ.
ರೇಬೀಸ್ ಸೋಂಕು ಇರುವ ಪ್ರಾಣಿಯ ಹಾಲು ಸೇವಿಸಬಾರದು
ರೇಬೀಸ್ ಇದೆ ಎಂದು ಕಂಡುಬರುವ ಪ್ರಾಣಿಯಿಂದ ಹಾಲು, ಇತರ ಉತ್ಪನ್ನಗಳನ್ನು ಸೇವಿಸದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ರೇಬೀಸ್ ಲಕ್ಷಣಗಳು ಕಂಡುಬಂದಲ್ಲಿ ಸ್ವಂತವಾಗಿ ಮನೆ ಮದ್ದು ತೆಗೆದುಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸಿ ಸಲಹೆ, ಚಿಕಿತ್ಸೆ ಪಡೆಯುವುದು ಒಳ್ಳೆಯದದು.
ಹಸುವಿನಲ್ಲಾದ ಕೆಲ ಲಕ್ಷಣಗಳು ಅನುಮಾನ ಹುಟ್ಟಿಸಿದವು
ಹಸುವಿನ ಲಕ್ಷಣಗಳು ರೇಬೀಸ್ನ ಅನುಮಾನವನ್ನು ಹುಟ್ಟುಹಾಕಿದವು. ಆದರೆ ರೋಗಲಕ್ಷಣಗಳು ಇವೆ ಎಂದ ಮಾತ್ರಕ್ಕೆ ರೋಗ ಇದೆ ಎಂದು ಹೇಳಲು ಬರುವುದಿಲ್ಲ. ರೋಗವನ್ನು ದೃಢಪಡಿಸಲು ಪಶುವೈದ್ಯಕೀಯ ಪರೀಕ್ಷೆ ಮುಖ್ಯ.


