ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ನಂತರ ಅವರ ಗಾಯದ ಬಗ್ಗೆ ಬಿಡುಗಡೆಯಾದ ವಿಡಿಯೋಗಳು ಭಾರಿ ಅನುಮಾನ ಮೂಡಿಸಿವೆ. ಗಾಯಗೊಂಡ ತೋಳಿನ ವಿಡಿಯೋ ಅವರ ಮುಖ ತೋರಿಸದೇ ರಿಲೀಸ್ ಮಾಡಲಾಗಿದ್ದು, ಇನ್ನೊಂದು ವಿಡಿಯೋದಲ್ಲಿ ಅದೇ ಜಾಗದಲ್ಲಿ ಬಿಪಿ ಚೆಕ್ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಅಸಲಿಗೆ ಅಂದು ಏನಾಯಿತು ಎಂಬುದು ಇನ್ನೂ ನಿಗೂಢವಾಗಿದೆ.
ಮುಂಬೈ: ನಟ ಟೈಗರ್ ಶ್ರಾಫ್ ಮೇಲೆ ಕಳೆದ ಭಾನುವಾರ ನಡೆದ ಗುಂಡಿನ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಬಗ್ಗೆ ತನಿಖೆ ಕೂಡ ಜೋರಾಗಿ ನಡೆದಿದ್ದು, ಇದಾಗಲೇ ಮೂವರನ್ನು ಅರೆಸ್ಟ್ ಕೂಡ ಮಾಡಲಾಗಿದೆ. ಗುಂಡಿನ ದಾಳಿಯಿಂದ ಟೈಗರ್ ಶ್ರಾಫ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎನ್ನಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಕೂಡ ನಟನ ಮನೆಗೆ ಹೋಗಿ ಸಮಾಧಾನ ಮಾಡಿದ್ದರು. ಸೆಲೆಬ್ರಿಟಿಗಳಿಗೆ ಭದ್ರತೆ ಒದಗಿಸಬೇಕು ಎನ್ನುವ ಕೂಗು ಕೂಡ ಜೋರಾಗಿ ಸಿನಿಮಾ ಇಂಡಸ್ಟ್ರಿಯ ವಲಯದಿಂದ ಬರುತ್ತಿದೆ.
ಇದರ ನಡುವೆಯೇ, ಘಟನೆ ನಡೆದ ಎರಡೇ ದಿನಕ್ಕೆ ವಕೀಲರೊಬ್ಬರು ನಟನನ್ನು ಭೇಟಿಯಾಗಲು ಹೋದಾಗ, ಅಲ್ಲಿ ಟೈಗರ್ ಶ್ರಾಫ್ಮೇಲೆ ಯಾವುದೇ ಬ್ಯಾಂಡೇಜ್ ಇರಲಿಲ್ಲ. ಅದೂ ಗುಂಡಿನಂಥ ದಾಳಿ ನಡೆದಾಗ ಅದು ಎರಡೇ ದಿನಗಳಲ್ಲಿ ಗುಣವಾಗುವುದು ಉಂಟೇ ಎಂದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೇ ಇದೆ. ಇದು ಯಾವಾಗ ಟ್ರೋಲ್ ಆಯಿತೋ, ಟೈಗರ್ ಶ್ರಾಫ್ ತಂಡದಿಂದ ಒಂದು ವಿಡಿಯೋ ಬಿಡುಗಡೆಯಾಗಿದೆ. ಇದರಲ್ಲಿ, ದಾಳಿಯ ನಂತರ ನಟನ ಗಾಯಗಳನ್ನು ತೋರಿಸುತ್ತದೆ. ಈ ಮಾರಣಾಂತಿಕ ಪರಿಸ್ಥಿತಿಯಲ್ಲಿ ಟೈಗರ್ ಬದುಕುಳಿದಿದ್ದಕ್ಕಾಗಿ ತಂಡವು ದೇವರಿಗೆ ಧನ್ಯವಾದಗಳನ್ನು ಅರ್ಪಿಸಿದೆ. ವೀಡಿಯೊ ಜೊತೆಗೆ, ಅವರು "ದೇವರು ಕರುಣಾಮಯಿ" ಎಂದು ಬರೆದಿದ್ದಾರೆ. ಅದರಲ್ಲಿ ಗನ್ಶಾಟ್ನಿಂದ ಉಂಟಾದ ಗಾಯವನ್ನು ತೋರಿಸಲಾಗಿದೆ. ಆದರೆ ಟೈಗರ್ ಶ್ರಾಫ್ ಮುಖವನ್ನು ಮಾತ್ರ ತೋರಿಸದೇ ಕೈ ಮಾತ್ರ ತೋರಿಸಿರುವುದರಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೇ ಇದೆ.
ಇನ್ನೊಂದು ವಿಡಿಯೋ ಶೇರ್
ಸಾಲದು ಎನ್ನುವುದಕ್ಕೆ ಇನ್ನೊಂದು ವಿಡಿಯೋ ಶೇರ್ ಮಾಡಲಾಗಿದೆ. ಅದರಲ್ಲಿ ವೈದ್ಯರು ಬಂದು ನಟನ ಬಿಪಿ ಚೆಕ್ ಮಾಡುತ್ತಿದ್ದಾರೆ. ಆದರೆ, ಈ ವಿಡಿಯೋ ಶೇರ್ ಮಾಡಿ ಮತ್ತೊಮ್ಮೆ ಟ್ರೋಲ್ಗೆ ಸಿಲುಕಿದ್ದಾರೆ ನಟ. ಮೊದಲ ವಿಡಿಯೋದಲ್ಲಿ ಅರ್ಥಾತ್ ಅವರ ತಂಡ ಶೇರ್ ಮಾಡಿದ್ದ ವಿಡಿಯೋದಲ್ಲಿ ತೋಳಿನ ಭಾಗದ ಮೇಲೆ ಬಲವಾದ ಗುಂಡಿನ ಗಾಯಗಳು ಇವೆ. ಆದರೆ ಬಿಪಿ ಚೆಕ್ ಮಾಡುವಾಗ ಯಾವುದೇ ಗಾಯ ಕಾಣಿಸುತ್ತಿಲ್ಲ, ಮಾತ್ರವಲ್ಲದೇ ಯಾವ ತೋಳಿನ ಜಾಗದಲ್ಲಿ ಬಲವಾದ ಗಾಯ ಎಂದು ತೋರಿಸಲಾಗಿತ್ತೋ ಅದೇ ಜಾಗದಲ್ಲಿ ಬಿಪಿ ಚೆಕ್ ಮಾಡಲು ಟೈಟ್ ಆಗಿರುವ ಬಿಪಿ ಉಪಕರಣ ಇಡಲಾಗಿದೆ. ಇದು ಹೇಗೆ ಸಾಧ್ಯ ಎನ್ನುವುದು ಟ್ರೋಲಿಗರ ಪ್ರಶ್ನೆ.
ಮೀಮ್ಸ್ಗಳ ಭರಾಟೆ
ಇದೇಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಗುಂಡಿನ ದಾಳಿಯ ಮೀಮ್ಸ್ ಭರಾಟೆ ಶುರುವಾಗಿದೆ. ಯುಟ್ಯೂಬರ್ಗಳು ತಾವೇ ಬ್ಯಾಂಡೇಜ್ ಕಟ್ಟಿಕೊಂಡು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ಅಸಲಿಗೆ ಅಂದು ಆಗಿದ್ದೇನು, ಟೈಗರ್ ಶ್ರಾಫ್ಗೆ ನಿಜವಾಗಿಯೂ ಏನಾಗಿದೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.


