Published : Jun 08, 2026, 05:09 AM ISTUpdated : Jun 08, 2026, 10:56 PM IST

India Latest News Live: ಆಹಾರದಲ್ಲಿ ಸಿಕ್ಕಿತು ಕೀಟ, ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶ

ಸಾರಾಂಶ

ಚೆನ್ನೈ: ತಮಿಳುನಾಡು ಸಿಎಂ ವಿಜಯ್‌ ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ಅವರು ರಾಜೀನಾಮೆ ನೀಡಿದ್ದ ತಿರುಚ್ಚಿ ಪೂರ್ವದಿಂದ ಜನಪ್ರಿಯ ನಟ ರಾಘವ ಲಾರೆನ್ಸ್‌ ಕಣಕ್ಕಿಳಿಯಬಹುದು ಎನ್ನುವ ಗುಸುಗುಸು ರಾಜಕೀಯ ವಲಯದಲ್ಲಿ ಜೋರಾಗಿದೆ. ಹೀಗಾಗಿ ಈ ಬಗ್ಗೆ ನಟ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಜೂ.11ಕ್ಕೆ ಮಹತ್ವದ ನಿರ್ಧಾರ ಪ್ರಕಟಿಸಿವುದಾಗಿ ಹೇಳಿಕೊಂಡಿದ್ದಾರೆ.

‘ಮಾಧ್ಯಮ ಮಿತ್ರರು ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಊಹಾಪೋಹಗಳನ್ನು ಪರಿಹರಿಸಬೇಕೆಂದು ನಾನು ನಿರ್ಧರಿಸಿದ್ದೇನೆ. ಜೂ.10ರ ತನಕ ಬೆಂಜ್‌ ಸಿನಿಮಾದ ಚಿತ್ರೀಕರಣವಿದೆ. ಅದಾದ ಬಳಿಕ ಜೂ.11ರ 9.30ಕ್ಕೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ನಿರ್ಧಾರ ಪ್ರಕಟಿಸುತ್ತೇನೆ’ ಎಂದಿದ್ದಾರೆ.

ಚುನಾವಣೆಯಲ್ಲಿ ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿವಿಕೆ ಮುಖ್ಯಸ್ಥ ವಿಜಯ್‌ ಎರಡರಲ್ಲಿಯೂ ಗೆದ್ದಿದ್ದರು. ಆ ಬಳಿಕ ನಿಯಮಗಳ ಪ್ರಕಾರ ತಿರುಚ್ಚಿಗೆ ರಾಜೀನಾಮೆ ನೀಡಿ ಪೆರಂಬೂರು ಉಳಿಸಿಕೊಂಡಿದ್ದರು.

ಕೆಲ ದಿನಗಳ ಹಿಂದೆ ನಟಿ ತ್ರಿಶಾ ಕೃಷ್ಣನ್‌ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು ಅಂತಲೂ ವದಂತಿ ಹಬ್ಬಿತ್ತು.

10:56 PM (IST) Jun 08

ಆಹಾರದಲ್ಲಿ ಸಿಕ್ಕಿತು ಕೀಟ, ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶ

ಬಿರಿಯಾನಿಯಲ್ಲಿ ಸತ್ತ ಕೀಟ ಸಿಕ್ಕಿತ್ತು. ರೊಚ್ಚಿಗೆದ್ದ ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದ. ಪರಿಣಾಮ ಗ್ರಾಹಕನಿಗೆ ಐದು ಭಾನುವಾರ ಒಟ್ಟು 10 ಹೈದರಾಬಾದಿ ಚಿಕನ್ ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶಿಸಿದೆ.

 

Read Full Story

10:04 PM (IST) Jun 08

Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್‌ - ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್‌ ಆಗಲು ಸಿಕ್ತು ಟ್ರಿಕ್‌

ಜೊಮ್ಯಾಟೊದ ಪ್ಲಾಟ್‌ಫಾರ್ಮ್ ಶುಲ್ಕ ಮತ್ತು ಕಮಿಷನ್ ತಪ್ಪಿಸಲು ಗ್ರಾಹಕರು ಹಾಗೂ ರೆಸ್ಟೋರೆಂಟ್‌ಗಳು '1 ರೋಟಿ ಟ್ರಿಕ್' ಎಂಬ ಹೊಸ ಉಪಾಯವನ್ನು ಬಳಸುತ್ತಿದ್ದಾರೆ. ಆ್ಯಪ್‌ನಲ್ಲಿ ಸಣ್ಣ ಆರ್ಡರ್ ಮಾಡಿ, ನೇರವಾಗಿ ರೆಸ್ಟೋರೆಂಟ್‌ಗೆ ಕರೆ ಮಾಡಿ ದೊಡ್ಡ ಆರ್ಡರ್ ನೀಡುವ ಟ್ರಿಕ್‌ ಮಾಡುತ್ತಿದ್ದಾರೆ.

Read Full Story

09:49 PM (IST) Jun 08

ಯುಟ್ಯೂಬ್​ನಲ್ಲಿ ಹೋಮ್​ ಟೂರ್​ ಮಾಡಿಸಿದ್ಲು - ಬೆಳಗಾಗೋಷ್ಟರಲ್ಲಿ 10 ಲಕ್ಷದ ಚಿನ್ನಾಭರಣ ನಾಪತ್ತೆಯಾಯ್ತು

ಮಧ್ಯಪ್ರದೇಶದ ಯೂಟ್ಯೂಬರ್ ರಚನಾ ಗುರ್ಜರ್, ತಮ್ಮ ಮನೆಯ ಹೋಮ್ ಟೂರ್ ವಿಡಿಯೋ ಮಾಡಿ ಆಭರಣಗಳನ್ನು ಪ್ರದರ್ಶಿಸಿದ್ದರು. ಇದೇ ವಿಡಿಯೋವನ್ನು ನೋಡಿದ ಕಳ್ಳರು ಮನೆಗೆ ನುಗ್ಗಿ, ಕುಟುಂಬವನ್ನು ಕೋಣೆಯಲ್ಲಿ ಬಂಧಿಸಿ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ್ದಾರೆ.
Read Full Story

09:49 PM (IST) Jun 08

ಇನ್ಮುಂದೆ ಆಕ್ಟೀವಾ ಮರೆತುಬಿಡಿ - ಭಾರತಕ್ಕೆ ಬರ್ತಿದೆ ಹೊಂಡಾದ ಹೊಸ ಅಡ್ವೆಂಚರ್ ಮ್ಯಾಕ್ಸಿ ಸ್ಕೂಟರ್

ಹೊಂಡಾ ಕಂಪನಿಯು ಭಾರತದಲ್ಲಿ 'ಹೊಂಡಾ ಎಡಿವಿ 160' ಎಂಬ ಹೊಸ ಪ್ರೀಮಿಯಂ ಅಡ್ವೆಂಚರ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಪವರ್‌ಫುಲ್ ಇಂಜಿನ್, ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಸ್ಕೂಟರ್, ಯಮಹಾ ಏರಾಕ್ಸ್ 155 ನಂತಹ ವಾಹನಗಳಿಗೆ ಪೈಪೋಟಿ ನೀಡಲಿದೆ.
Read Full Story

09:42 PM (IST) Jun 08

Thank You Meet - ಹಿಟ್ ಅಥವಾ ಫ್ಲಾಪ್? 'ಪೆದ್ದಿ' ಬಗ್ಗೆ ರಾಮ್ ಚರಣ್‌ಗೆ ಇದ್ದ ಭಯ ಏನು?

ರಾಮ್ ಚರಣ್‌ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ 'ಥ್ಯಾಂಕ್ ಯು ಮೀಟ್' ಆಯೋಜಿಸಿತ್ತು. ಈ ವೇಳೆ 'ಪೆದ್ದಿ' ಯಶಸ್ಸಿನ ಬಗ್ಗೆ ರಾಮ್ ಚರಣ್ ಆಡಿದ ಮಾತುಗಳು ವೈರಲ್ ಆಗಿವೆ.

Read Full Story

09:14 PM (IST) Jun 08

ಮತ್ತೆ ಅಮೇರಿಕಾಗೆ ಹಾರಿರೋ ಯಶ್; USA ಸುತ್ತಾಡಿ ರಾಕಿಂಗ್ ಸ್ಟಾರ್ ಮಾಡ್ತಿರೋ ಪ್ಲಾನ್ ಏನ್ ಗೊತ್ತಾ?

ಕಳೆದ 20 ದಿನಗಳಿಂದ ಅಮೇರಿಕಾದಲೇ ಬೀಡು ಬಿಟ್ಟಿರುವ ಯಶ್ ಹಾಲಿವುಡ್ ನಲ್ಲಿ ಟಾಕ್ಸಿಕ್ ರಿಲೀಸ್ ಮಾಡೊಕೆ ನಿರಂತರವಾಗಿ ಹಾಲಿವುಡ್ ನಿರ್ಮಾಪಕರು, ವಿತರಕರ ಜೊತೆ ಸಾಲು ಸಾಲು ಮೀಟಿಂಗ್ ಮಾಡುತ್ತಿದ್ದಾರೆ. ಹೋಗಿರುವ ಕೆಲಸವನ್ನು ಸಕ್ಸಸ್ ಮಾಡಿಕೊಂಡು ಬರಲೇ ಬೇಕು ಅಂತ ಯಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

Read Full Story

09:07 PM (IST) Jun 08

ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್ - ಅತೀ ಕಡಿಮೆ ದರದ ಪ್ಲ್ಯಾನ್‌ನಲ್ಲಿ ಇಡೀ ವರ್ಷ ಅನ್‌ಲಿಮಿಟೆಡ್ ಕಾಲಿಂಗ್!

ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ₹1,849 ಕ್ಕೆ ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲಿಂಗ್ ಪ್ರಯೋಜನವನ್ನು ನೀಡುತ್ತದೆ, ಆದರೆ ಇದರಲ್ಲಿ ಯಾವುದೇ ಡೇಟಾ ಸೌಲಭ್ಯ ಇರುವುದಿಲ್ಲ. 

Read Full Story

08:55 PM (IST) Jun 08

'ವರದನಾಯಕ' ಬ್ಯೂಟಿ ಕುಡಿಯೋ ಈ ಜ್ಯೂಸ್ ಇದೆಯಲ್ಲಾ... ಆರೋಗ್ಯಕ್ಕೆ ಚಿನ್ನವಿದ್ದಂತೆ - ರೆಸಿಪಿ ಇಲ್ಲಿದೆ

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಲೈಫ್‌ಸ್ಟೈಲ್ ಕಂಟೆಂಟ್ ಪೋಸ್ಟ್ ಮಾಡುವ ನಟಿ ಸಮೀರಾ, ಇತ್ತೀಚೆಗೆ ಬಾಳೆದಿಂಡಿನ ಜ್ಯೂಸ್ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ನೀವು ಓದಿದ್ದು ಸರಿ.

Read Full Story

08:54 PM (IST) Jun 08

ಕೇಂದ್ರ ಸರ್ಕಾರದ ಖಜಾನೆ ತುಂಬಿಸಿದ ಎಸ್‌ಬಿಐ, ₹8,813 ಕೋಟಿ ಹಣದ ಚೆಕ್‌ ನೀಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ!

ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌ಬಿಐ, 2025-26ರ ಹಣಕಾಸು ವರ್ಷದ ದಾಖಲೆಯ ಆರ್ಥಿಕ ಸಾಧನೆಗಾಗಿ ಕೇಂದ್ರ ಸರ್ಕಾರಕ್ಕೆ ₹8,813 ಕೋಟಿಗಳ ಬೃಹತ್ ಲಾಭಾಂಶವನ್ನು ನೀಡಿದೆ. ಬ್ಯಾಂಕ್ ಈ ವರ್ಷ ₹80,032 ಕೋಟಿ ನಿವ್ವಳ ಲಾಭ ಗಳಿಸಿದ್ದು, ವಸೂಲಾಗದ ಸಾಲದ ಪ್ರಮಾಣದಲ್ಲಿಯೂ ಗಣನೀಯ ಸುಧಾರಣೆ ಕಂಡಿದೆ.
Read Full Story

08:30 PM (IST) Jun 08

ಚಿತ್ರರಂಗದ ವಿರುದ್ಧ ಭುಗಿಲೆದ್ದ ನಟಿಯರ ಆಕ್ರೋಶ, 'ಪೆದ್ದಿ' ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ; ಆದ್ರೆ.. ಎಂಡ್ ಆಯ್ತಾ ವಿವಾದ?

ವಿವಾದ ಎದ್ದು ಪರಿಸ್ತಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಪೆದ್ದಿ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಸನಾ ಈಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಕಥೆಯ ಡಿಮ್ಯಾಂಡ್ ಹಾಗೂ ಹಳ್ಳಿಯ ನೇಟಿವಿಟಿಗೆ ತಕ್ಕಂತೆ ಆ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ವಿನಃ ಯಾವುದೇ ಕೆಟ್ಟ ಉದ್ದೇಶದಿಂದಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Read Full Story

07:39 PM (IST) Jun 08

ನನ್ನ ಜೊತೆ ಮಲಗು ಅಂದ್ರು, ನಾನು ದುರ್ಗಿ ಆದೆ - ಶಾಕಿಂಗ್ ಸತ್ಯ ಬಿಚ್ಚಿಟ್ಟ ಖ್ಯಾತ ಆ್ಯಂಕರ್!

ಖ್ಯಾತ ನಿರೂಪಕಿ ರಂಜಿನಿ ಹರಿದಾಸ್ ತಮ್ಮ ವೃತ್ತಿ ಬದುಕಿನಲ್ಲಿ ಎದುರಾದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಒಂಟಿಯಾಗಿ ಬದುಕುತ್ತಿರುವುದಕ್ಕೆ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದೇನೆ, ಕಷ್ಟಪಟ್ಟು ದುಡಿದು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ರಂಜಿನಿ ಹೇಳಿದ್ದಾರೆ.

Read Full Story

07:33 PM (IST) Jun 08

ಸಿಎಂ ವಿಜಯ್ ಟೀಕಿಸಿದ ಖ್ಯಾತ ಯೂಟ್ಯೂಬರ್ ಮರಿದಾಸ್ ಬಂಧನ, ಸಿಡಿದೆದ್ದ ತಮಿಳುನಾಡು ಬಿಜೆಪಿ!

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಯೂಟ್ಯೂಬರ್ ಮರಿದಾಸ್ ಅವರನ್ನು ಚೆನ್ನೈ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಆರೋಪಿಸಿದೆ. ಈ ಹಿಂದೆ ಕೂಡ ಮರಿದಾಸ್ ವಿವಾದಾತ್ಮಕ ಹೇಳಿಕೆಗಳಿಗಾಗಿ ಬಂಧನಕ್ಕೊಳಗಾಗಿದ್ದರು.
Read Full Story

07:16 PM (IST) Jun 08

'ಕ್ಯಾಮೆರಾ ಆ್ಯಂಗಲ್ ಸರಿ ಇಲ್ಲದಿದ್ರೆ ನೋ ಹೇಳಿ' ಎಂದಿದ್ದ ಜಾನ್ವಿ - 'ಪೆದ್ದಿ' ಚಿತ್ರದಿಂದ ಮತ್ತೆ ಟ್ರೋಲ್!

ಹೊಸ ಸಿನಿಮಾ 'ಪೆದ್ದಿ'ಯಲ್ಲಿ ಜಾನ್ವಿ ಕಪೂರ್ ಅವರನ್ನು ಕೇವಲ ಒಂದು ವಸ್ತುವಿನಂತೆ ತೋರಿಸಲಾಗಿದೆ ಎಂಬ ಟೀಕೆಗಳು ಜೋರಾಗಿವೆ. ಇದರ ಬೆನ್ನಲ್ಲೇ, ಮಹಿಳೆಯರ ದೇಹವನ್ನು ಅವರ ಅನುಮತಿಯಿಲ್ಲದೆ ಚಿತ್ರೀಕರಿಸುವುದರ ವಿರುದ್ಧ ಅವರು ಹಿಂದೆ ನೀಡಿದ್ದ ಹೇಳಿಕೆಗಳು ಮತ್ತೆ ಚರ್ಚೆಗೆ ಬಂದಿವೆ.

Read Full Story

07:04 PM (IST) Jun 08

ಶಿಲ್ಪಾ ಶೆಟ್ಟಿ ಬಳಿ ಒಟ್ಟೂ ಎಷ್ಟು ಆಸ್ತಿ ಇದೆ ಗೊತ್ತಾ? ಈ ಸೀಕ್ರೆಟ್ ಇಲ್ಲಿದೆ.. ನೀವು ಗೆಸ್ ಮಾಡಿರೋದು ಸರಿನಾ ನೋಡಿ!

ಮಂಗಳೂರಿನಿಂದ ಹೊರಟ ಈ ಪ್ರತಿಭೆ ಇಂದು ದೇಶದ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮ ಮತ್ತು ವ್ಯವಹಾರ ಜ್ಞಾನದಿಂದ ಶಿಲ್ಪಾ ಶೆಟ್ಟಿ ಇಂದು 'ಸಕ್ಸಸ್' ಎಂಬ ಪದಕ್ಕೆ ಪರ್ಯಾಯವಾಗಿದ್ದಾರೆ. ಇವರಿಗೆ ಜನ್ಮದಿನದ ಶುಭಾಶಯಗಳ ಸುರಿಮಳೆ ಆಗುತ್ತಿದೆ.

Read Full Story

06:15 PM (IST) Jun 08

ಶಿಲ್ಪಾ ಶೆಟ್ಟಿ ಮತ್ತೆ ಅದೇನೋ ಮಾಡೋ ಆಸೆ ಆಗಿದ್ಯಂತೆ.. ಏನದು ಶಿಲ್ಪಾ ಶೆಟ್ಟಿಯ 'ಸೀಕ್ರೆಟ್' ಆಸೆ?

ಶಿಲ್ಪಾ ಶೆಟ್ಟಿ ಇತ್ತೀಚೆಗೆ ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಕೇಡಿ: ದಿ ಡೆವಿಲ್' ಚಿತ್ರದಲ್ಲಿ ಸತ್ಯವತಿ ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ವೆಬ್ ಸರಣಿ ಹಾಗೂ 'ಮಾ ಹೈ ನಾ' ಎಂಬ ಅಡುಗೆ ಶೋ ಮೂಲಕವೂ ಸಕ್ರಿಯರಾಗಿದ್ದಾರೆ. ಈಗ ಅವರ ಆಸೆ ಏನು ನೋಡಿ..!

Read Full Story

05:18 PM (IST) Jun 08

ಅಫ್ಘಾನ್ ಸದ್ದಡಗಿಸಿದ ಭಾರತ - ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿದೊಡ್ಡ ಗೆಲುವು ದಾಖಲಿಸಿದ ಟೀಂ ಇಂಡಿಯಾ

ಶುಭ್‌ಮನ್ ಗಿಲ್ ಮತ್ತು ಕೆ ಎಲ್ ರಾಹುಲ್ ಅವರ ಶತಕಗಳ ನೆರವಿನಿಂದ ಭಾರತ, ಆಫ್ಘಾನಿಸ್ತಾನ ವಿರುದ್ಧ ಇನ್ನಿಂಗ್ಸ್ ಹಾಗೂ 300 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಟೀಂ ಇಂಡಿಯಾ ತನ್ನ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿತು. ಪಾದಾರ್ಪಣೆ ಪಂದ್ಯದಲ್ಲೇ ಮಾನವ್ ಸುತಾರ್ 6 ವಿಕೆಟ್ ಪಡೆದು ಮಿಂಚಿದರು.
Read Full Story

05:10 PM (IST) Jun 08

ಯಶ್ 'ಟಾಕ್ಸಿಕ್' ಸೆಟ್‌ನಲ್ಲಿ ಗೀತು ಮೋಹನ್‌ದಾಸ್ ಖಡಕ್ ಅವತಾರ - ಹುಟ್ಟುಹಬ್ಬಕ್ಕೆ BTS ವಿಡಿಯೋ ರಿಲೀಸ್

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಚಿತ್ರತಂಡ ತೆರೆಮರೆಯ ದೃಶ್ಯಗಳ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಗೀತು ಅವರ ಖಡಕ್ ನಿರ್ದೇಶನದ ಶೈಲಿ ಮತ್ತು ಸೃಜನಶೀಲತೆ ಎದ್ದು ಕಾಣುತ್ತಿದೆ.

Read Full Story

04:53 PM (IST) Jun 08

ಆರ್‌ಸಿಬಿ ಸೇರುವುದು ನನ್ಗೆ ಇಷ್ಟವಿರಲಿಲ್ಲ, 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟಿದಾರ್ ಸ್ಫೋಟಕ ಹೇಳಿಕೆ

ಆರ್‌ಸಿಬಿ ತಂಡ ಸೇರಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ ಎಂದು ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ. ತಂಡಕ್ಕೆ 2 ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡಿರುವ ರಜತ್ ಪಾಟಿದಾರ್ ಯಾವ ತಂಡ ಸೇರಿಕೊಳ್ಳಲು ಬಯಸಿದ್ದರು.

Read Full Story

04:43 PM (IST) Jun 08

ನೀನೇ ನನ್ನ ಶಕ್ತಿ, ನನ್ನ ನಂಬಿಕೆ - ಕೆಡಿ ನಟಿ ಹುಟ್ಟುಹಬ್ಬಕ್ಕೆ ರಾಜ್ ಕುಂದ್ರಾ ಭಾವುಕ ಪೋಸ್ಟ್!

ಪತ್ನಿ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಉದ್ಯಮಿ ರಾಜ್ ಕುಂದ್ರಾ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ನನ್ನ ಜೀವನದ ಶಕ್ತಿ, ನಂಬಿಕೆ ಮತ್ತು ಸ್ಥಿರತೆ ಎಂದು ಹೇಳಿರುವ ಅವರು, ಕಷ್ಟದ ಸಮಯದಲ್ಲಿ ದೇವತೆಯಂತೆ ಜೊತೆಗಿದ್ದವಳು ಎಂದು ಹೊಗಳಿದ್ದಾರೆ.

Read Full Story

04:40 PM (IST) Jun 08

ಮುಂಬೈ ಇಂಡಿಯನ್ಸ್‌ನಲ್ಲಿ ಮಹಾ ಸಂಚಲನ; ಫ್ರಾಂಚೈಸಿ ಮಾತು ಕೇಳಿ ಮುಂಬೈ ತಂಡವನ್ನು ಅನ್‌ಫಾಲೋ ಮಾಡಿದ್ರಾ ಸ್ಟಾರ್ ಕ್ರಿಕೆಟಿಗ?

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ತೋರಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹಾ ಸಂಚಲನ ಶುರುವಾಗಿದ್ದು, ಸ್ಟಾರ್ ಕ್ರಿಕೆಟಿಗ ತಂಡ ತೊರೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

 

Read Full Story

04:36 PM (IST) Jun 08

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್,10 ಟಿಎಂಸಿ ಸಂಸದರಿಂದ ಬಿಜೆಪಿ ನಾಯಕರ ಭೇಟಿ

ಮಮತಾ ಬ್ಯಾನರ್ಜಿ ಇಂಡಿ ಒಕ್ಕೂಟ ಸಭೆಯಲ್ಲಿ ಪಾಲಿಗೊಂಡ ಬೆನ್ನಲ್ಲೇ ಇತ್ತ ಟಿಎಂಸಿಯ 10 ಬಂಡಾಯ ಸಂಸದರು ನೇರವಾಗಿ ಬಿಜೆಪಿ ನಾಯಕರ ಭೇಟಿಯಾಗಿ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಟಿಎಂಸಿಯ 10 ವಿಕೆಟ್ ಪತನವಾಗುವ ಸಾಧ್ಯತೆ ಇದೆ.

Read Full Story

04:31 PM (IST) Jun 08

ನಾನೊಬ್ಬ ಹೆದರುಪುಕ್ಲ ಮದ್ರಾಸಿ, ಅದಕ್ಕೇ ಹೆಂಡ್ತಿಗೆ ಮೋಸ ಮಾಡಿಲ್ಲ - ನಟ ಮಾಧವನ್ ಹೇಳಿಕೆ ವೈರಲ್!

27 ವರ್ಷಗಳಿಂದ ದಾಂಪತ್ಯ ಜೀವನದಲ್ಲಿರುವ ನಟ ಆರ್.ಮಾಧವನ್, ತಾವೇಕೆ ಪತ್ನಿ ಸರಿತಾಗೆ ಎಂದಿಗೂ ಮೋಸ ಮಾಡಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ. 'ನಾನೊಬ್ಬ ಹೆದರುಪುಕ್ಲ ಮದ್ರಾಸಿ' ಎಂದು ಹೇಳಿಕೊಂಡಿರುವ ಅವರು, ತಮ್ಮ ನಿಷ್ಠೆಗೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

Read Full Story

03:33 PM (IST) Jun 08

ದೇಶದ 2ನೇ ಬುಲೆಟ್ ರೈಲು ಯೋಜನೆ ಘೋಷಿಸಿದ ಸಚಿವ ಅಶ್ವಿನಿ ವೈಷ್ಣವ್, 20 ಗಂಟೆಗಳ ಪ್ರಯಾಣ ಇನ್ಮುಂದೆ ಕೇವಲ 6 ಗಂಟೆ!

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದ ಎರಡನೇ ಬುಲೆಟ್ ರೈಲು ಯೋಜನೆಯನ್ನು ಘೋಷಿಸಿದ್ದಾರೆ. ಈ ರೈಲು ದೆಹಲಿಯನ್ನು ಲಖನೌ, ವಾರಾಣಸಿ, ಮತ್ತು ಪಟನಾ ಮೂಲಕ ಪಶ್ಚಿಮ ಬಂಗಾಳದ ಸಿಲಿಗುರಿಗೆ ಸಂಪರ್ಕಿಸಲಿದೆ. ಈ ಯೋಜನೆಯಿಂದಾಗಿ 20 ಗಂಟೆಗಳ ಪ್ರಯಾಣದ ಸಮಯವು ಕೇವಲ 6 ಗಂಟೆಗಳಿಗೆ ಇಳಿಕೆಯಾಗಲಿದೆ.
Read Full Story

01:41 PM (IST) Jun 08

'ಬೇಕಿದ್ರೆ ಆಯ್ಕೆ ಮಾಡಲಿ...' - BCCI ಆಯ್ಕೆ ಸಮಿತಿಗೆ ನೇರವಾಗಿ ಟಾಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್..!

ಬೆಂಗಳೂರು: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮತ್ತೊಮ್ಮೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರನ್ನು ಕಡೆಗಣಿಸಲಾಗಿದೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿಗೆ ರಜತ್ ಪಾಟೀದಾರ್ ಟಾಂಗ್ ಕೊಟ್ಟಿದ್ದಾರೆ.

 

Read Full Story

01:03 PM (IST) Jun 08

ಭಾರತೀಯ ರೈಲ್ವೆಯ ಡಿಜಿಟಲ್ ಕ್ರಾಂತಿ - 4 ದಶಕಗಳ ಹಳೆಯ ಬುಕಿಂಗ್ ವ್ಯವಸ್ಥೆಗೆ ಗುಡ್‌ಬೈ, ಆಗಸ್ಟ್‌ನಿಂದ ಹೊಸ ನಿಯಮ ಜಾರಿ!

ಭಾರತೀಯ ರೈಲ್ವೆಯು ತನ್ನ 40 ವರ್ಷ ಹಳೆಯ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು (PRS) ಆಗಸ್ಟ್‌ನಿಂದ ಸಂಪೂರ್ಣವಾಗಿ ನವೀಕರಿಸುತ್ತಿದೆ. ಈ ಹೊಸ ವ್ಯವಸ್ಥೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿ ಟಿಕೆಟ್ ಬುಕಿಂಗ್ ಅನ್ನು ವೇಗವಾಗಿ ಮತ್ತು ಸುಲಭವಾಗಿಸಲಿದೆ. 

Read Full Story

12:48 PM (IST) Jun 08

ಹಿತಶತ್ರುಗಳ ಬಗ್ಗೆ ಮಾತನ್ನಾಡಿದ ಸಮಂತಾ, ಬಳಿಕ ನಟಿ ಸಾಯಿ ಪಲ್ಲವಿ ಹೆಸರು ಹೇಳಿದ್ದು ಏಕೆ? ಅಲ್ಲಿರೋದು ಬೇರೆ ಗುಟ್ಟು!

'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಸಹ-ನಿರ್ಮಾಪಕಿಯಾಗಿದ್ದು, ರಾಜ್ ನಿಡಿಮೋರು ಮತ್ತು ಹಿಮಾಂಕ್ ರೆಡ್ಡಿ ಅವರೊಂದಿಗೆ ಸೇರಿ ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವು 2026 ರ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Read Full Story

12:03 PM (IST) Jun 08

'ಪೆದ್ದಿ' ವಿವಾದ - ಜಾನ್ವಿ ಕಪೂರ್‌ ಪರ ನಿಂತು, ಚಿತ್ರರಂಗ ಮುಟ್ಟಿ ನೋಡಿಕೊಳ್ಳುವಂತೆ ಪೋಸ್ಟ್ ಮಾಡಿದ ನವ ನಟಿ!

ಒಂದೆಡೆ ವಿವಾದಗಳು ನಡೆಯುತ್ತಿದ್ದರೂ, 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಜೂನ್ 4 ರಂದು ಬಿಡುಗಡೆಯಾದ ಈ ಚಿತ್ರ ಈಗಾಗಲೇ ಜಾಗತಿಕವಾಗಿ 200 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಜಾನ್ವಿ ಕಪೂರ್ ಈ ವಿವಾದದ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Read Full Story

11:23 AM (IST) Jun 08

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ - ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ?

Gold Rate Today in Bengaluru: ಆಭರಣ ಖರೀದಿಸುವವರಿಗೆ ವಾರದ ಮೊದಲ ದಿನವಾದ ಸೋಮವಾರವೂ ಗುಡ್‌ ನ್ಯೂಸ್ ಸಿಕ್ಕಿದೆ. ಜೂನ್ ತಿಂಗಳಿನಲ್ಲಿ ನಿರಂತವಾಗಿ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಜೂನ್ 8ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

 

Read Full Story

10:40 AM (IST) Jun 08

'ನಾನು ಯಾರ ನೆರಳಲ್ಲೂ ಇರಲ್ಲ..' - ಭಾರತ ಟಿ20 ತಂಡದ ನಾಯಕನಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ!

ಬೆಂಗಳೂರು: ಭಾರತ ಟಿ20 ತಂಡದ ನೂತನ ನಾಯಕರಾಗಿ ಮುಂಬೈ ಮೂಲದ ಶ್ರೇಯಸ್ ಅಯ್ಯರ್ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನ್ನ ಆಟದ ಶೈಲಿಯನ್ನು ಬದಲಿಸಿಕೊಳ್ಳುವುದು ಇಲ್ಲ ಹಾಗೆಯೇ ಯಾರ ನೆರಳಿನಲ್ಲಿಯೂ ಇರಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

 

Read Full Story

09:52 AM (IST) Jun 08

ರನ್‌ವೇಯಲ್ಲಿ ಇಳಿಯುತ್ತಿದ್ದಂತೆ ಪತನವಾದ ವಿಮಾನ; ಭಯಾನಕ ದೃಶ್ಯ ನೋಡಿ ಬೆಚ್ಚಿದ ವಿಶ್ವ

ಡೊಮಿನಿಕನ್ ಗಣರಾಜ್ಯದ ಲಾ ರೊಮಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ತುರ್ತು ಲ್ಯಾಂಡಿಂಗ್ ವೇಳೆ ಪತನಗೊಂಡಿದೆ. ಟೆಕ್ಸಾಸ್‌ಗೆ ಹೊರಟಿದ್ದ ಈ ವಿಮಾನವು ರನ್‌ವೇಯಲ್ಲಿ ಇಳಿಯುವ ಮುನ್ನವೇ ಸ್ಪೋಟಗೊಂಡು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
Read Full Story

09:26 AM (IST) Jun 08

Breaking - ಫಿಲಿಪೈನ್ಸ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ - ಸುನಾಮಿ ಆತಂಕ, ಎಚ್ಚರಿಕೆ ಸಂದೇಶ

ಫಿಲಿಪೈನ್ಸ್‌ನ ಮಿಂಡಾನಾವೊದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಒಂದು ಗಂಟೆಯೊಳಗೆ ಮೂರು ಬಾರಿ ಭೂಮಿ ಕಂಪಿಸಿದೆ. ಈ ಭೂಕಂಪದ ಪರಿಣಾಮವಾಗಿ, ಫಿಲಿಪೈನ್ಸ್, ಇಂಡೋನೇಷ್ಯಾ ಮತ್ತು ಜಪಾನ್‌ನ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
Read Full Story

09:21 AM (IST) Jun 08

ದೀದಿ ಅವಧಿಯಲ್ಲಿ ಸುಲಿಗೆ ಮಾಡಿದ್ದ TMC ನಾಯಕನ ತಲೆ ಬೋಳಿಸಿ, ಶೂ ಹಾರ ಹಾಕಿ ಮೆರವಣಿಗೆ ಮಾಡಿದ ಜನ! ವಿಡಿಯೋ ವೈರಲ್

ಪಶ್ಚಿಮ ಬಂಗಾಳದಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಟಿಎಂಸಿ ನಾಯಕರು ಸಾರ್ವಜನಿಕರ ಆಕ್ರೋಶ ಮತ್ತು ಪೊಲೀಸ್ ಕ್ರಮವನ್ನು ಎದುರಿಸುತ್ತಿದ್ದಾರೆ. ಒಬ್ಬ ನಾಯಕನಿಗೆ ತಲೆ ಬೋಳಿಸಿ ಮೆರವಣಿಗೆ ಮಾಡಿದರೆ, ಮತ್ತೊಬ್ಬ ನಾಯಕ ಸೀರೆ ರಾಶಿಯಡಿ ಅಡಗಿ ಬಂಧನಕ್ಕೊಳಗಾಗಿದ್ದಾನೆ. ಇನ್ನೊಬ್ಬ ಕೌನ್ಸಿಲರ್ ಅಕ್ರಮವಾಗಿ ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸಿದ್ದಾರೆ.
Read Full Story

09:01 AM (IST) Jun 08

ಅಮೆರಿಕಾದಲ್ಲಿ ಪಿಜ್ಜಾ ಡೆಲಿವರಿಗೆ ತೆರಳಿದ್ದ ಭಾರತದ ಯುವಕ ಅನ್ಶುಲ್ ಮೇಲೆ ಗುಂಡಿನ ದಾಳಿ

ಅಮೆರಿಕದ ಫಿಲಡೆಲ್ಫಿಯಾದಲ್ಲಿ ತೆಲಂಗಾಣ ಮೂಲದ 28 ವರ್ಷದ ಅನ್ಶುಲ್ ಕುಂಚ ಎಂಬ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾರ್ಟ್-ಟೈಮ್ ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಅವರನ್ನು, ನಕಲಿ ಆರ್ಡರ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ.
Read Full Story

08:13 AM (IST) Jun 08

French Open 2026 - ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆದ್ದ ಜರ್ಮನಿ ಟೆನಿಸಿಗ ಅಲೆಕ್ಸಾಂಡರ್ ಜ್ವೆರೆವ್

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಫ್ರೆಂಚ್‌ ಓಪನ್ ಫೈನಲ್‌ನಲ್ಲಿ ಇಟಲಿಯ ಫ್ಲಾವಿಯೊ ಕೊಬೊಲಿ ಅವರನ್ನು ಮಣಿಸಿ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ರೋಚಕ ಐದು ಸೆಟ್‌ಗಳ ಪಂದ್ಯದಲ್ಲಿ ಜಯಗಳಿಸಿದ ಜ್ವೆರೆವ್, ನಾಲ್ಕನೇ ಫೈನಲ್ ಪ್ರಯತ್ನದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
Read Full Story

07:50 AM (IST) Jun 08

ಮಾನವ್ ಸ್ಪಿನ್ ಜಾದೂವಿಗೆ ಆಫ್ಘಾನಿಸ್ತಾನ ಕಂಗಾಲು! ಭಾರತದ ಹಿಡಿತದಲ್ಲಿ ಏಕೈಕ ಟೆಸ್ಟ್

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ, ಶುಭ್‌ಮನ್‌ ಗಿಲ್‌ ಅವರ ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 564 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಬಳಿಕ, ಚೊಚ್ಚಲ ಪಂದ್ಯವಾಡುತ್ತಿರುವ ಯುವ ಸ್ಪಿನ್ನರ್‌ ಮಾನವ್‌ ಸುತಾರ್‌ ಅವರ ಮಾರಕ ದಾಳಿಗೆ ಸಿಲುಕಿದ ಅಫ್ಘಾನಿಸ್ತಾನ, ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
Read Full Story

07:24 AM (IST) Jun 08

Ayodhya ರಾಮಮಂದಿರಕ್ಕೆ ದೇಣಿಗೆ ಬಂದ ಕೋಟ್ಯಂತರ ಹಣ ಕಾಣೆ - ಅಖಿಲೇಶ್‌ ಯಾದವ್ ಗಂಭೀರ ಆರೋಪ

ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ಕಾಣೆಯಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಮತ್ತೊಂದೆಡೆ, ಸ್ವಚ್ಛತೆಯ ಕಾರಣ ನೀಡಿ ಕಾಶಿ ನಗರದೊಳಗಿನ ಎಲ್ಲಾ ಮಾಂಸದಂಗಡಿಗಳನ್ನು ಹೊರಗೆ ಸ್ಥಳಾಂತರಿಸಲು ವಾರಾಣಸಿ ಪಾಲಿಕೆ ನಿರ್ಧರಿಸಿದೆ.
Read Full Story

07:09 AM (IST) Jun 08

ಕೇರಳದ ರಾಜಕೀಯವೇ ವಿಚಿತ್ರ - ಶಾಸಕ ರಾಜೀವ್‌ ಚಂದ್ರಶೇಖರ್‌ ಬಣ್ಣನೆ

ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಶಾಸಕರಾಗಿ ತಮ್ಮ ಮೊದಲ ವಿಧಾನಸಭೆ ಅಧಿವೇಶನದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇರಳದ ರಾಜಕೀಯ ಸಂಸ್ಕೃತಿಯು ಜನಸಾಮಾನ್ಯರ ನೈಜ ಸಮಸ್ಯೆಗಳಿಂದ ಸಂಪರ್ಕ ಕಡಿದುಕೊಂಡಿದ್ದು, ಅನಗತ್ಯ ವಿವಾದಗಳಲ್ಲೇ ಮುಳುಗಿದೆ ಎಂದು ಅವರು ಟೀಕಿಸಿದ್ದಾರೆ. 18 ವರ್ಷಗಳ ಸಂಸದೀಯ ಅನುಭವದ ನಂತರವೂ, ಇಲ್ಲಿನ ರಾಜಕೀಯ ತನಗೆ ವಿಚಿತ್ರವೆನಿಸಿದೆ ಎಂದು ಅವರು ಹೇಳಿದ್ದಾರೆ.
Read Full Story

07:00 AM (IST) Jun 08

3000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ; 400 KG ಪುಠಾಣಿ, 500 KG ಈರುಳ್ಳಿ, 300 KG ಎಣ್ಣೆ

ವಿಶ್ವ ಅವಲಕ್ಕಿ ದಿನದ ಅಂಗವಾಗಿ, ಪ್ರಸಿದ್ಧ ಪಾಕತಜ್ಞ ವಿಷ್ಣು ಮನೋಹರ್‌ ಅವರು 3,000 ಕೆಜಿ 'ತರ್ರಿ ಪೋಹಾ' ತಯಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ನಾಗ್ಪುರದ ಅವಲಕ್ಕಿ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವುದು ಈ ಬೃಹತ್ ಸಾಹಸದ ಮುಖ್ಯ ಉದ್ದೇಶವಾಗಿತ್ತು.
Read Full Story

06:49 AM (IST) Jun 08

ಇರಾನ್‌ ನಾಯಕರು ಬಲಿಷ್ಠರು, ಅದಕ್ಕೇ ಒಪ್ಪಂದಕ್ಕೆ ಬರ್ತಿಲ್ಲ - ಟ್ರಂಪ್ ಮೆಚ್ಚುಗೆಯ ರಹಸ್ಯವೇನು?

ಇರಾನ್‌ನ ನಾಯಕರು ಬಲಿಷ್ಠರು ಮತ್ತು ಹೆಮ್ಮೆಯುಳ್ಳವರು, ಆದರೆ ಅಂತಿಮವಾಗಿ ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರಲೇಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸತ್ಯವನ್ನು ಒಪ್ಪಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

Read Full Story

06:21 AM (IST) Jun 08

ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ; ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಹೊಸ ಅಧ್ಯಾಯ

ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಜೋಜಿಲಾ ರಸ್ತೆ ಸುರಂಗ ಯೋಜನೆ ಅಂತಿಮ ಹಂತದಲ್ಲಿದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಸುರಂಗವು, ವಿಶ್ವದ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗವಾಗಿದೆ.

Read Full Story

More Trending News