MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 'ನಾನು ಯಾರ ನೆರಳಲ್ಲೂ ಇರಲ್ಲ..': ಭಾರತ ಟಿ20 ತಂಡದ ನಾಯಕನಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ!

'ನಾನು ಯಾರ ನೆರಳಲ್ಲೂ ಇರಲ್ಲ..': ಭಾರತ ಟಿ20 ತಂಡದ ನಾಯಕನಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ!

ಬೆಂಗಳೂರು: ಭಾರತ ಟಿ20 ತಂಡದ ನೂತನ ನಾಯಕರಾಗಿ ಮುಂಬೈ ಮೂಲದ ಶ್ರೇಯಸ್ ಅಯ್ಯರ್ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನ್ನ ಆಟದ ಶೈಲಿಯನ್ನು ಬದಲಿಸಿಕೊಳ್ಳುವುದು ಇಲ್ಲ ಹಾಗೆಯೇ ಯಾರ ನೆರಳಿನಲ್ಲಿಯೂ ಇರಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. 

1 Min read
Author : Naveen Kodase
Published : Jun 08 2026, 10:40 AM IST
Share this Photo Gallery
  • FB
  • TW
  • Linkdin
  • Whatsapp
16
ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್
Image Credit : Getty

ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್

ಮುಂಬರುವ ಐರ್ಲೆಂಡ್ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಬಿಸಿಸಿಐ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. 2023ರ ಡಿಸೆಂಬರ್ ನಂತರ ಇದೇ ಮೊದಲ ಬಾರಿಗೆ ಶ್ರೇಯಸ್ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಾಯಕರಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ
Image Credit : Getty

ನಾಯಕರಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ

ಭಾರತ ಟಿ20 ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಒಂದು ಖಡಕ್ ಹೇಳಿಕೆ ನೀಡಿದ್ದಾರೆ. ಕ್ಯಾಪ್ಟನ್ಸಿ ಅನ್ನೋದು ದೊಡ್ಡ ಜವಾಬ್ದಾರಿ, ಆದರೆ ಅದಕ್ಕಾಗಿ ನನ್ನ ವ್ಯಕ್ತಿತ್ವ ಅಥವಾ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧನಿಲ್ಲ ಎಂದು ಮುಂಬೈ ಬ್ಯಾಟರ್ ಸ್ಪಷ್ಟಪಡಿಸಿದ್ದಾರೆ.

Related Articles

Related image1
ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
Related image2
ಸೂರ್ಯಕುಮಾರ್ ಯಾದವ್‌ಗೆ ಭಾರತ ಟಿ20 ತಂಡದಿಂದ ಗೇಟ್‌ಪಾಸ್ ಬೆನ್ನಲ್ಲೇ ರೋಹಿತ್ ಶರ್ಮಾ ದಿಟ್ಟ ಮಾತು!
36
ಸವಾಲು ಎದುರಿಸೋದು ಅಂದ್ರೆ ಇಷ್ಟ
Image Credit : X/@DeccanChronicle

ಸವಾಲು ಎದುರಿಸೋದು ಅಂದ್ರೆ ಇಷ್ಟ

"ಚಿಕ್ಕ ವಯಸ್ಸಿನಿಂದಲೇ ನನಗೆ ಸವಾಲುಗಳನ್ನು ಎದುರಿಸುವುದು ಅಂದರೆ ಇಷ್ಟ. ಅದರಲ್ಲೂ ಮುಂಬೈ ಕ್ರಿಕೆಟ್‌ನ ಕಠಿಣ ಸ್ಪರ್ಧೆಯಿಂದ ಬಂದ ಮೇಲೆ ಅದು ಅಭ್ಯಾಸವಾಗಿಬಿಡುತ್ತೆ. ಮುಂಬೈನ ಬೀದಿಗಳಲ್ಲಿರುವ ಪ್ರತಿಯೊಬ್ಬ ಹುಡುಗನೂ ಕ್ರಿಕೆಟ್‌ನಲ್ಲಿ ಮುಂಬೈಯನ್ನು ಪ್ರತಿನಿಧಿಸಬೇಕು ಎಂದು ಬಯಸುತ್ತಾನೆ. ಹಾಗಾಗಿ, ನನ್ನ ವೃತ್ತಿಜೀವನದ ಎಲ್ಲಾ ಸವಾಲುಗಳನ್ನು ಗೆಲ್ಲಲೇಬೇಕು ಎನ್ನುವ ಮನಸ್ಥಿತಿ ನನ್ನದಾಗಿತ್ತು," ಎಂದು ಹೇಳಿದರು.

46
ನನ್ನ ವ್ಯಕ್ತಿತ್ವ ಬದಲಿಸಿಕೊಳ್ಳಲ್ಲವೆಂದ ಅಯ್ಯರ್
Image Credit : Getty

ನನ್ನ ವ್ಯಕ್ತಿತ್ವ ಬದಲಿಸಿಕೊಳ್ಳಲ್ಲವೆಂದ ಅಯ್ಯರ್

"ನಾಯಕನಾಗಿ ಈ ಹೊಸ ಜವಾಬ್ದಾರಿ ಒಂದು ದೊಡ್ಡ ಸವಾಲು. ಆದರೆ ಇದಕ್ಕಾಗಿ ನನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ನಾನು ಮೊದಲು ಹೇಗಿದ್ದೆನೋ, ಮುಂದೆಯೂ ಹಾಗೆಯೇ ಇರುತ್ತೇನೆ. ಬೇರೆಯವರಂತೆ ಆಗಲು ಅಥವಾ ಯಾರೊಬ್ಬರ ನೆರಳಿನ ಕೆಳಗೆ ನಿಲ್ಲಲು ನಾನು ಪ್ರಯತ್ನಿಸುವುದಿಲ್ಲ," ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ

56
ಚರ್ಚೆಗೆ ಗ್ರಾಸವಾದ ಶ್ರೇಯಸ್ ಅಯ್ಯರ್ ಮಾತು
Image Credit : AFP

ಚರ್ಚೆಗೆ ಗ್ರಾಸವಾದ ಶ್ರೇಯಸ್ ಅಯ್ಯರ್ ಮಾತು

ಇನ್ನು ಇದೇ ವೇಳೆ ಶ್ರೇಯಸ್ ಅಯ್ಯರ್ ನಾನು ಯಾರ ನೆರಳಲ್ಲೂ ಬದುಕಲು ಇಷ್ಟವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. 'ಬೇರೆಯವರ ನೆರಳಲ್ಲಿ ನಿಲ್ಲುವುದಿಲ್ಲ' ಎಂಬ ಶ್ರೇಯಸ್ ಹೇಳಿಕೆ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

66
ಗೌತಮ್ ಗಂಭೀರ್ ವಿರುದ್ಧ ಪರೋಕ್ಷ ಟೀಕೆ?
Image Credit : X/@KnightsVibe

ಗೌತಮ್ ಗಂಭೀರ್ ವಿರುದ್ಧ ಪರೋಕ್ಷ ಟೀಕೆ?

2024ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಕಪ್ ಗೆದ್ದಾಗ, ಅದರ ಸಂಪೂರ್ಣ ಕ್ರೆಡಿಟ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್‌ಗೆ ಸಿಕ್ಕಿತ್ತು. ಇದರಿಂದ ಶ್ರೇಯಸ್‌ಗೆ ಅಸಮಾಧಾನವಿತ್ತು, ಇದೇ ಕಾರಣಕ್ಕೆ ಅವರು ಕೆಕೆಆರ್ ತೊರೆದು ಪಂಜಾಬ್ ಕಿಂಗ್ಸ್‌ಗೆ ಸೇರಿದ್ದಾರೆ ಎಂಬ ವರದಿಗಳೂ ಇದ್ದವು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಶ್ರೇಯಸ್ ಅಯ್ಯರ್
ಟೀಮ್ ಇಂಡಿಯಾ
ಬಿಸಿಸಿಐ
Latest Videos
Recommended Stories
Recommended image1
ಮಾನವ್ ಸ್ಪಿನ್ ಜಾದೂವಿಗೆ ಆಫ್ಘಾನಿಸ್ತಾನ ಕಂಗಾಲು! ಭಾರತದ ಹಿಡಿತದಲ್ಲಿ ಏಕೈಕ ಟೆಸ್ಟ್
Recommended image2
ಅಯ್ಯರ್ ಟಿ20 ನಾಯಕನಾದ ಹಿಂದೆ ರಿಕಿ ಪಾಂಟಿಂಗ್ ಮ್ಯಾಜಿಕ್, ಆಯ್ಕೆ ಸಮಿತಿ ಜೊತೆಗಿನ ಚಾಟ್ ಬಹಿರಂಗ
Recommended image3
ರಾಜಸ್ಥಾನ ರಾಯಲ್ಸ್‌ನಲ್ಲಿದ್ದರೂ ವೈಭವ್ ಆರ್‌ಸಿಬಿ, ಕೊಹ್ಲಿ ಅಭಿಮಾನಿ, ಅಂತರಂಗ ಬಹಿರಂಗಪಡಿಸಿದ ಕ್ರಿಕಟರ್
Related Stories
Recommended image1
ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
Recommended image2
ಸೂರ್ಯಕುಮಾರ್ ಯಾದವ್‌ಗೆ ಭಾರತ ಟಿ20 ತಂಡದಿಂದ ಗೇಟ್‌ಪಾಸ್ ಬೆನ್ನಲ್ಲೇ ರೋಹಿತ್ ಶರ್ಮಾ ದಿಟ್ಟ ಮಾತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved