ಫಿಲಿಪೈನ್ಸ್‌ನ ಮಿಂಡಾನಾವೊದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಒಂದು ಗಂಟೆಯೊಳಗೆ ಮೂರು ಬಾರಿ ಭೂಮಿ ಕಂಪಿಸಿದೆ. ಈ ಭೂಕಂಪದ ಪರಿಣಾಮವಾಗಿ, ಫಿಲಿಪೈನ್ಸ್, ಇಂಡೋನೇಷ್ಯಾ ಮತ್ತು ಜಪಾನ್‌ನ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಫಿಲಿಪೈನ್ಸ್: ಇಂದು ಬೆಳಗಿನ ಜಾವ ಫಿಲಿಪೈನ್ಸ್‌ನ ಹಲವು ಪ್ರದೇಶಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ತೀವ್ರತೆ 7.7 ರಷ್ಟಿತ್ತು. ಫಿಲಿಪೈನ್ಸ್ ದ್ವೀಪದ ಮಿಂಡಾನಾವೊ ಎಂಬ ಪ್ರದೇಶದಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯ ಸರ್ಕಾರ ಸುನಾಮಿಯ ಎಚ್ಚರಿಕೆಯನ್ನು ನೀಡಿದೆ. ಫಿಲಿಪೈನ್ಸ್‌ನಲ್ಲಿ ಒಂದು ಗಂಟೆಯೊಳಗೆ ಮೂರು ಬಾರಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂರು ಬಾರಿ ಕಂಪನ

ಬೆಳಗ್ಗೆ 5 ಗಂಟೆ 7 ನಿಮಿಷ: 7.7 ತೀವ್ರತೆ ದಾಖಲು

ಬೆಳಗ್ಗೆ 5 ಗಂಟೆ 18 ನಿಮಿಷ: 6.4 ತೀವ್ರತೆ ದಾಖಲು

ಬೆಳಗ್ಗೆ 6 ಗಂಟೆ 25 ನಿಮಿಷ: 6.6 ತೀವ್ರತೆ ದಾಖಲು

ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಿಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಇತ್ತ ಫಿಲಿಫೈನ್ಸ್‌ ಭೂಕಂಪದ ಬೆನ್ನಲ್ಲೇ ಅಲರ್ಟ್ ಆಗಿರುವ ಜಪಾನ್, ಪೆಸಿಫಿಕ್ ಕರಾವಳಿಯ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ ಎಂದು ಅಲ್ ಜಜೀರಾ ವರದಿ ಪ್ರಕಟಿಸಿದೆ. ಸಮುದ್ರ ತೀರಕ್ಕೆ ತೆರಳದಂತೆ, ಕಡಲದಡಿಯಲ್ಲಿರುವ ಜನರನ್ನು ತ್ವರಿತವಾಗಿ ಸ್ಥಳಾಂತರಿಸುವ ಕೆಲಸ ಸಹ ನಡೆಯುತ್ತಿದೆ. ಸುಮಾರು 1 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಹವಾಮಾನ ಇಲಾಖೆ ಅಂದಾಜಿಸಿದೆ.

Scroll to load tweet…

ಹಲವು ದೇಶಗಳಲ್ಲಿ ಭೂಮಿ ಕಂಪನ

ಸಾಮಾನ್ಯವಾಗಿ ಪ್ರಬಲ ಭೂಕಂಪ ಉಂಟಾದ್ರೆ ಸುನಾಮಿ ಭೀತಿ ಎದುರಾಗುತ್ತದೆ. ಈ ಹಿನ್ನೆಲೆ ಅಪಾಯಕಾರಿ ಅಲೆಗಳು ಕಡಲಾಚೆಯ ದ್ವೀಪಗಳಿಗೆ ಹಾನಿ ಮಾಡಬಹುದು ಎಂದು ಅಂದಾಜಿಸಲಾಗುತ್ತದೆ. ಮುಂದಿನ ಕೆಲವು ಗಂಟೆಗಳಲ್ಲಿ ಅಪಾಯಲಕಾರಿ ಅಲೆಗಳು ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಕರಾವಳಿ ಪ್ರದೇಶದ ಜನರು ಎಚ್ಚರಿಕೆಯಿಂದಿರಬೇಕು ಮತ್ತು ಸರ್ಕಾರ ನೀಡುವ ಸಲಹೆಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗಿದೆ. ಭಾನುವಾರವಷ್ಟೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭೂಮಿ ಕಂಪಿಸಿತ್ತು. ಭಾರತ, ನೇಪಾಳ, ಚೀನಾ ಮತ್ತು ಭೂತಾನ್‌ನಲ್ಲಿ ಸಂಭವಿಸಿದ ಭೂಕಂಪವು ರಿಕ್ಟರ್ ಮಾಪಕದಲ್ಲಿ 5.3 ರಷ್ಟಿತ್ತು. ಕೇಂದ್ರಬಿಂದು ಭೂತಾನ್ ಆಗಿತ್ತು.

Scroll to load tweet…

Scroll to load tweet…