MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಆರ್‌ಸಿಬಿ ಸೇರುವುದು ನನ್ಗೆ ಇಷ್ಟವಿರಲಿಲ್ಲ, 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟಿದಾರ್ ಸ್ಫೋಟಕ ಹೇಳಿಕೆ

ಆರ್‌ಸಿಬಿ ಸೇರುವುದು ನನ್ಗೆ ಇಷ್ಟವಿರಲಿಲ್ಲ, 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟಿದಾರ್ ಸ್ಫೋಟಕ ಹೇಳಿಕೆ

ಆರ್‌ಸಿಬಿ ತಂಡ ಸೇರಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ ಎಂದು ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ. ತಂಡಕ್ಕೆ 2 ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡಿರುವ ರಜತ್ ಪಾಟಿದಾರ್ ಯಾವ ತಂಡ ಸೇರಿಕೊಳ್ಳಲು ಬಯಸಿದ್ದರು.

2 Min read
Author : Chethan Kumar
Published : Jun 08 2026, 04:52 PM IST
Share this Photo Gallery
  • FB
  • TW
  • Linkdin
  • Whatsapp
16
ಆರ್‌ಸಿಬಿ ನೋ ನೋ ಎಂದಿದ್ದ ರಜತ್ ಪಾಟಿದಾರ್
Image Credit : ANI

ಆರ್‌ಸಿಬಿ ನೋ ನೋ ಎಂದಿದ್ದ ರಜತ್ ಪಾಟಿದಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ, ಡೆನಿಯಲ್ ವೆಟೋರಿ, ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮುುನ್ನಡೆಸಿದ್ದಾರೆ. ಆದರೆ ಯಾರಿಗೂ ಟ್ರೋಫಿ ಅದೃಷ್ಠ ಒಲಿದಿರಲಿಲ್ಲ. ಟ್ರೋಫಿ ಗೆಲ್ಲಲು ರಜತ್ ಪಾಟಿದಾರ್ ಬರಬೇಕಾಯಿತು. ಆರ್‌ಸಿಬಿ ಯಶಸ್ವಿ ನಾಯಕ ರಜತ್ ಪಾಟಿದಾರ್‌ಗೆ ಆರ್‌ಸಿಬಿ ತಂಡ ಸೇರಿಕೊಳ್ಳುವುದು ಇಷ್ಟವಿರಲಿಲ್ಲ ಎಂದು ಖುದ್ದು ಪಾಟಿದಾರ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹೌದು ನನಗೆ ಇಷ್ಟವಿರಲಿಲ್ಲ
Image Credit : ANI

ಹೌದು ನನಗೆ ಇಷ್ಟವಿರಲಿಲ್ಲ

ಸಂದರ್ಶನದಲ್ಲಿ ಮಾತನಾಡಿದ ರಜತ್ ಪಾಟಿದಾರ್, ನನಗೆ ಆರ್‌ಸಿಬಿ ತಂಡ ಸೇರಿಕೊಳ್ಳುವುದು ಇಷ್ಟವರಿಲ್ಲ ನಿಜ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಬಹಿರಂಗ ಮಾಡಿದ್ದಾರೆ. ಪ್ರಮುಖವಾಗಿ ನಾನು ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದೆ. ಬಳಿಕ ಆರ್‌ಸಿಬಿ ರಿಪ್ಲೇಸ್‌ಮೆಂಟ್ ಆಗಿ ನನಗೆ ಕರೆ ಮಾಡಿದ್ದರು. ನನಗೆ ಆರ್‌ಸಿಬಿ ಸೇರಿಕೊಳ್ಳುವುದು ಇಷ್ಟವೇ ಇರಲಿಲ್ಲ. ಕಾರಣ ನಾನು ರಿಪ್ಲೇಸ್‌ಮೆಂಟ್ ಆಗಿರೋ ಕಾರಣ ನನಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ನಾನು ಆರ್‌ಸಿಬಿ ತಂಡ ಸೇರಿಕೊಳ್ಳುವುದು ಬೇಡ ಎಂದಿದ್ದರು.

Related Articles

Related image1
'ಬೇಕಿದ್ರೆ ಆಯ್ಕೆ ಮಾಡಲಿ...': BCCI ಆಯ್ಕೆ ಸಮಿತಿಗೆ ನೇರವಾಗಿ ಟಾಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್..!
Related image2
ಆರ್‌ಸಿಬಿಗೆ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ಮೂರೇ ದಿನಕ್ಕೆ ಟಿ20 ತಂಡದ ನಾಯಕನಾದ ರಜತ್ ಪಾಟಿದಾರ್
36
ನನಗೆ ಸ್ಪಷ್ಟವಾಗಿ ಹೇಳಿದ್ದರು
Image Credit : Instagram/Rajat Patidar

ನನಗೆ ಸ್ಪಷ್ಟವಾಗಿ ಹೇಳಿದ್ದರು

2022ರಲ್ಲಿ ಆರ್‌ಸಿಬಿಗೆ ರಿಪ್ಲೇಸ್ ಆಗಿ ಬಂದಾಗ ಸ್ಪಷ್ಟವಾಗಿ ನನಗೆ ಅವಕಾಶ ಕುರಿತು ಹೇಳಿದ್ದರು. ಯಾರಾದರು ಇಂಜುರಿಯಾದರೆ ಅವಕಾಶ ಸಿಗಲಿದೆ. ಹೀಗಾಗಿ ಚಿಲ್ ಆಗಿರು ಎಂದಿದ್ದರು. ತಂಡ ಸೇರಿಕೊಂಡು ಬೆಂಚ್ ಕಾಯುವ ಬದಲು ಬೇರೆ ತಂಡ ಸೇರಿಕೊಂಡರೆ ಕನಿಷ್ಟ ಅವಕಾಶ ಸಿಗಬಹುದು ಎಂದುಕೊಂಡಿದ್ದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

46
2021ರಲ್ಲಿ ಆರ್‌ಸಿಬಿ, 2022ರಲ್ಲಿ ರಿಪ್ಲೇಸ್‌ಮೆಂಟ್
Image Credit : ANI

2021ರಲ್ಲಿ ಆರ್‌ಸಿಬಿ, 2022ರಲ್ಲಿ ರಿಪ್ಲೇಸ್‌ಮೆಂಟ್

2021ರಲ್ಲಿ ರಜತ್ ಪಾಟಿದಾರ್ ಆರ್‌ಸಿಬಿ ತಂಡ ಸೇರಿಕೊಂಡಿದ್ದರು. 20 ಲಕ್ಷ ರೂ ಮೂಲ ಬೆಲೆಯಲ್ಲಿ ರಜತ್ ಪಾಟಿದಾರ್ ತಂಡ ಸೇರಿಕೊಂಡಿದ್ದರು. 2022ರಲ್ಲಿ ಅನ್‌ಸೋಲ್ಡ್ ಆಗಿ ಮನೆಯಲ್ಲಿದ್ದರು. ಇದರ ನಡುವೆ ಆರ್‌ಸಿಬಿಯಲ್ಲಿ ಆಟಗಾರ ಇಂಜುರಿಗೊಂಡ ಕಾರಣ ರಜತ್ ಪಾಟಿದಾರ್‌ಗೆ ಕರೆ ಮಾಡಿದ್ದರು. ಹೀಗೆ ರಜತ್ ಪಾಟಿದಾರ್ ಆರ್‌ಸಿಬಿ ಪಯಣ ಆರಂಭಗೊಂಡಿತ್ತು.

56
2 ಟ್ರೋಫಿ ಗೆಲ್ಲಿಸಿದ ನಾಯಕ
Image Credit : Muffatball vikrant @Vikrant_1589 · x

2 ಟ್ರೋಫಿ ಗೆಲ್ಲಿಸಿದ ನಾಯಕ

ಆರ್‌ಸಿಬಿ ತಂಡದ ಟ್ರೋಫಿ ಬರ ನೀಗಿಸಿದ ನಾಯಕ ರಜತ್ ಪಾಟಿದಾರ್, ನಾಯಕನಾಗಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ತಂಡಕ್ಕೆ ಕೊಡುಗೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ದಿಗ್ಗಜ ಆಟಗಾರರ ತಂಡವನ್ನು ಮುನ್ನಡೆಸಿ ಸತತ 2ನೇ ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಐಪಿಎಲ್‌ನ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

66
ಟೀಂ ಇಂಡಿಯಾದಲ್ಲಿ ಸಿಗುತ್ತಾ ಅವಕಾಶ
Image Credit : ANI

ಟೀಂ ಇಂಡಿಯಾದಲ್ಲಿ ಸಿಗುತ್ತಾ ಅವಕಾಶ

ವಿರಾಟ್ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿದ ಬಳಿಕ ರಜತ್ ಪಾಟಿದಾರ್‌ಗೆ ನಾಯಕತ್ವ ನೀಡಲಾಗಿತ್ತು. ವಿಶೇಷ ಅಂದರೆ ಮೊದಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಸದ್ಯ ಮಧ್ಯಪ್ರದೇಶ ಟಿ20 ಲೀಗ್ ಟೂರ್ನಿ ಆಡುತ್ತಿರುವ ರಜತ್ ಪಾಟಿದಾರ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕು ಅನ್ನೋ ಕೂಗು ಜೋರಾಗಿ ಕೇಳಿಬರುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆರ್‌ಸಿಬಿ
ಐಪಿಎಲ್
ಕ್ರಿಕೆಟ್
ಬಿಸಿಸಿಐ
Latest Videos
Recommended Stories
Recommended image1
ಮುಂಬೈ ಇಂಡಿಯನ್ಸ್‌ನಲ್ಲಿ ಮಹಾ ಸಂಚಲನ; ಫ್ರಾಂಚೈಸಿ ಮಾತು ಕೇಳಿ ಮುಂಬೈ ತಂಡವನ್ನು ಅನ್‌ಫಾಲೋ ಮಾಡಿದ್ರಾ ಸ್ಟಾರ್ ಕ್ರಿಕೆಟಿಗ?
Recommended image2
ವೈಭವ್ ಸೂರ್ಯವಂಶಿ ಜಾತಕದಲ್ಲಿದೆ ‘ನೀಚಭಂಗ ರಾಜಯೋಗ’: ವಿಶ್ವ ಕ್ರಿಕೆಟ್‌ನ ಮುಂದಿನ ಮಹಾರಾಜನಾಗೋದು ಪಕ್ಕಾ: ಭವಿಷ್ಯ ನುಡಿದ ಜ್ಯೋತಿಷಿ
Recommended image3
'ಬೇಕಿದ್ರೆ ಆಯ್ಕೆ ಮಾಡಲಿ...': BCCI ಆಯ್ಕೆ ಸಮಿತಿಗೆ ನೇರವಾಗಿ ಟಾಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್..!
Related Stories
Recommended image1
'ಬೇಕಿದ್ರೆ ಆಯ್ಕೆ ಮಾಡಲಿ...': BCCI ಆಯ್ಕೆ ಸಮಿತಿಗೆ ನೇರವಾಗಿ ಟಾಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್..!
Recommended image2
ಆರ್‌ಸಿಬಿಗೆ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ಮೂರೇ ದಿನಕ್ಕೆ ಟಿ20 ತಂಡದ ನಾಯಕನಾದ ರಜತ್ ಪಾಟಿದಾರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved