ಮಮತಾ ಬ್ಯಾನರ್ಜಿ ಇಂಡಿ ಒಕ್ಕೂಟ ಸಭೆಯಲ್ಲಿ ಪಾಲಿಗೊಂಡ ಬೆನ್ನಲ್ಲೇ ಇತ್ತ ಟಿಎಂಸಿಯ 10 ಬಂಡಾಯ ಸಂಸದರು ನೇರವಾಗಿ ಬಿಜೆಪಿ ನಾಯಕರ ಭೇಟಿಯಾಗಿ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಟಿಎಂಸಿಯ 10 ವಿಕೆಟ್ ಪತನವಾಗುವ ಸಾಧ್ಯತೆ ಇದೆ.

ದೆಹಲಿ (ಜೂ.08) ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಟಿಎಂಸಿ ಸೋತು ಸುಣ್ಣವಾಗಿದ್ದು ಮಾತ್ರವಲ್ಲ, ಇದೀಗ ಪಕ್ಷವೇ ಒಡೆದು ಹೋಳಾಗಿದೆ. ಬಂಡಾಯಕ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಮಮತಾ ಬ್ಯಾನರ್ಜಿ ಜೊತೆ ನಾಯಕರೇ ಇಲ್ಲದಾಗಿದೆ. ಇದೀಗ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ 10 ಟಿಎಂಸಿ ಬಂಡಾಯ ಸಂಸದರು ನೇರವಾಗಿ ದೆಹಲಿಗೆ ಆಗಮಿಸಿ ಬಿಜೆಪಿ ನಾಯಕರ ಭೇಟಿಯಾಗಿದ್ದಾರೆ. ಮಮತಾ ಬ್ಯಾನರ್ಜಿ ದೆಹಲಿಯಲ್ಲಿರುವಾಗಲೇ ಟಿಎಂಸಿ ನಾಯಕರು ಬಿಜೆಪಿ ನಾಯಕರ ಭೇಟಿ ಮಾಡಿರುವುದು ಮಮತಾ ಕೆರಳಿಸಿದ್ದು ಮಾತ್ರವಲ್ಲ, ಪಾರ್ಟಿಯಲ್ಲಿ ಯಾರು ಉಳಿದಿಕೊಳ್ಳುತ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10 ನಾಯಕರು ಯಾರು?

ಟಿಎಂಸಿ ಸಂಸದರಾದ ಶತಾಬ್ದಿ ರಾಯ್, ಕಕೋಲಿ ಘೋಷ್ ದಾಸ್ತಿದಾರ್, ಅಬು ತೆಹರ್ ಖಾನ್, ಖಲಿಯೂರ್ ರೆಹಮಾನ್, ಅಸಿತ್ ಕುಮಾರ್ ಮಲ್, ಅರೂಪ್ ಚಕ್ರಬೊರ್ತಿ, ಕಲಿಪಜ ಸೊರೆನ್, ಜಗದೀಶ್ ಚಂದ್ರ ಬುಮ್ರಾ ಬಸುನಿಯಾ, ಪ್ರಸೂನ್ ಬ್ಯಾನರ್ಜಿ, ಶರ್ಮಲಿ ಸರ್ಕಾರ್ ಸೇರಿದಂತೆ 10 ಸಂಸದರು ಬಿಜೆಪಿ ನಾಯಕರ ಭೇಟಿಯಾಗಿದ್ದಾರೆ.

ಸುಕೇಂದು ಶೆಖರ್ ರೇ ಉಪಸ್ಥಿತಿ

ಟಿಎಂಸಿ ಪಕ್ಷದಿಂದ ಹೊರಬಂದ ಶಾಸಕ ಸುಕೇಂದ್ ಶೇಖರ್ ಕೂಡ ಉಪಸ್ಥಿತರಿದ್ದರು. 10 ಸಂಸದರ ಜೊತೆ ಅಕ್ರಝಮಾನ್ ಕ್ಷೇತ್ರದ ಶಾಸಕನ ನಡೆ ತೀವ್ರ ಕುತೂಹಲ ಕೆರಳಿಸಿದೆ. 10 ಸಂಸದರು ಹಾಗೂ ಟಿಎಂಸಿ ಬಂಡಾಯ ನಾಯಕರಿಂದ ಬಿಜೆಪಿ ಸಂಪರ್ಕಿಸಿದ ನಾಯಕರ ಪೈಕಿ ಮುಸ್ಲಿಮ್ ಸಮುದಾಯದ ನಾಯಕರು ಸೇರಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಮುಸ್ಲಿಮ್ ನಾಯಕರು ತಮ್ಮ ಜೊತೆ ನಿಲ್ಲುತ್ತಾರೆ ಎಂದು ಮಮತಾ ಬ್ಯಾನರ್ಜಿ ಎಂದುಕೊಂಡಿದ್ದರು. ಆದರೆ ಮುಸ್ಲಿಮ್ ನಾಯಕರು ಮಮತಾಗೆ ಕೈಕೊಡುತ್ತಿರುವ ಬೆಳವಣಿಗೆ ನಡೆಯುತ್ತಿದೆ.

20 ಸಂಸದರ ನಮ್ಮ ಘಟಕ ಬೇರೆಯಾಗುತ್ತೇವೆ. ಬಳಿಕ ಎನ್‌ಡಿಎಗೆ ಬೆಂಬಲ ನೀಡುತ್ತೇವೆ. ನಮ್ಮ ಮುಖ್ಯ ಸಚೇತಕ ಶತಾಬ್ದಿ ರಾಯ್ ನಮ್ಮ ಉಪ ನಾಯಕ ಎಂದು ಕಕೋಲಿ ಘೋಷ್ ದಸ್ತಿದಾರ್ ಹೇಳಿದ್ದಾರೆ. ಟಿಎಂಸಿ ಕೆಲವೇ ದಿನಗಳಲ್ಲಿ ಖಾಲಿಯಾಗುವ ಸಾಧ್ಯತೆ ಕಾಣಿಸುತ್ತಿದೆ. ಮಮತಾ ಜೊತೆ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಹೊರತು ಇನ್ಯಾರುವ ಉಳಿಯುವ ಸಾಧ್ಯತೆ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇತ್ತ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯಾ ಒಕ್ಕೂಟದಿಂದಲೂ ಹಲವು ಪಕ್ಷಗಳು ದೂರ ಉಳಿದಿದೆ. ಡಿಎಂಕೆ, ಟಿವಿಕೆ ಸೇರಿದಂತೆ ಹಲವು ಮಿತ್ರ ಪಕ್ಷಗಳು ಇಂಡಿಯಾ ಒಕ್ಕೂಟ ಸಭೆಗೆ ಗೈರಾಗಿದೆ.