MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • Ayodhya ರಾಮಮಂದಿರಕ್ಕೆ ದೇಣಿಗೆ ಬಂದ ಕೋಟ್ಯಂತರ ಹಣ ಕಾಣೆ: ಅಖಿಲೇಶ್‌ ಯಾದವ್ ಗಂಭೀರ ಆರೋಪ

Ayodhya ರಾಮಮಂದಿರಕ್ಕೆ ದೇಣಿಗೆ ಬಂದ ಕೋಟ್ಯಂತರ ಹಣ ಕಾಣೆ: ಅಖಿಲೇಶ್‌ ಯಾದವ್ ಗಂಭೀರ ಆರೋಪ

ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ಕಾಣೆಯಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಮತ್ತೊಂದೆಡೆ, ಸ್ವಚ್ಛತೆಯ ಕಾರಣ ನೀಡಿ ಕಾಶಿ ನಗರದೊಳಗಿನ ಎಲ್ಲಾ ಮಾಂಸದಂಗಡಿಗಳನ್ನು ಹೊರಗೆ ಸ್ಥಳಾಂತರಿಸಲು ವಾರಾಣಸಿ ಪಾಲಿಕೆ ನಿರ್ಧರಿಸಿದೆ.

1 Min read
Author : Kannadaprabha News
Published : Jun 08 2026, 07:24 AM IST
Share this Photo Gallery
  • FB
  • TW
  • Linkdin
  • Whatsapp
15
ಭಕ್ತಾದಿಗಳ ದೇಣಿಗೆ
Image Credit : Social media

ಭಕ್ತಾದಿಗಳ ದೇಣಿಗೆ

‘ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತಾದಿಗಳ ದೇಣಿಗೆಯಿಂದ ಬಂದ ಕೋಟ್ಯಂತರ ರು.ಗಳು ಕಾಣೆಯಾಗಿವೆ ಎಂಬ ವರದಿಗಳಿವೆ. ದೇವಾಲಯದ ಆಡಳಿತ ಮಂಡಳಿ ಮತ್ತು ಸರ್ಕಾರದ ಮೌನ ಶಂಕಾಸ್ಪದವಾಗಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಭಾನುವಾರ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದೇವಾಲಯದ ಟ್ರಸ್ಟ್‌ಗೆ ಅತ್ಯಂತ ನಾಚಿಕೆಗೇಡಿನ ಪರಿಸ್ಥಿತಿ
Image Credit : Akhilesh Yadav Fb

ದೇವಾಲಯದ ಟ್ರಸ್ಟ್‌ಗೆ ಅತ್ಯಂತ ನಾಚಿಕೆಗೇಡಿನ ಪರಿಸ್ಥಿತಿ

ಟ್ವೀಟ್ ಮಾಡಿರುವ ಅವರು, ‘ರಾಮ ಮಂದಿರಕ್ಕೆ ದೇಣಿಗೆಯಿಂದ ಬಂದ ಕೋಟ್ಯಂತರ ರು.ಗಳು ನಾಪತ್ತೆಯಾಗಿವೆ. ಇದು ಪ್ರಪಂಚದಾದ್ಯಂತದ ಶ್ರೀರಾಮನ ಭಕ್ತರಿಗೆ ಬಹಳ ಸೂಕ್ಷ್ಮ ಸುದ್ದಿಯಾಗಿದೆ. ಇದು ದೇವಾಲಯದ ಟ್ರಸ್ಟ್‌ಗೆ ಅತ್ಯಂತ ನಾಚಿಕೆಗೇಡಿನ ಪರಿಸ್ಥಿತಿ. ಯಾರೂ ಮುಂದೆ ಬಂದು ವಿವರಣೆ ನೀಡಲು ಸಿದ್ಧರಿಲ್ಲ. ಟ್ರಸ್ಟ್‌ ಮತ್ತು ಸರ್ಕಾರದ ಮೌನ ಶಂಕಾಸ್ಪದವಾಗಿದೆ. ಹೀಗಾಗಿ ಕೋರ್ಟ್‌ ಇದನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಯಾದವ್ ಹೇಳಿಕೆಗೆ ಟ್ರಸ್ಟ್ ಅಥವಾ ಉತ್ತರ ಪ್ರದೇಶ ಸರ್ಕಾರದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

Related Articles

Related image1
ಐಆರ್‌ಸಿಟಿಸಿ ಬಿಗ್ ಆಫರ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ! ಕರ್ನಾಟಕದ ಭಕ್ತರಿಗೂ ಸುವರ್ಣಾವಕಾಶ
Related image2
ಅಯೋಧ್ಯೆ ರಾಮನಿಗಿಂತ ವಾಲ್ಮೀಕಿಗೆ ಮೊದಲ ಪೂಜೆ ಸಲ್ಲಬೇಕು, ಸಂಸದ ಸುನೀಲ್ ಬೋಸ್ ವಿವಾದಾತ್ಮಕ ಹೇಳಿಕೆ
35
ಕಾಶಿಯಿಂದ ಎಲ್ಲ ಮಾಂಸದಂಗಡಿ ಎತ್ತಂಗಡಿ
Image Credit : Asianet News

ಕಾಶಿಯಿಂದ ಎಲ್ಲ ಮಾಂಸದಂಗಡಿ ಎತ್ತಂಗಡಿ

ದೇಶದ ಪ್ರಸಿದ್ಧ ಪುಣ್ಯಕ್ಷೇತ್ರ, ಶ್ರೀ ಕಾಶಿ ವಿಶ್ವನಾಥನ ಧಾಮವಾದ ವಾರಾಣಸಿಯಿಂದ ಎಲ್ಲ ಮಾಂಸದಂಗಡಿಗಳನ್ನು ನಗರದ ಹೊರಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮಾಂಸದಂಗಡಿ ಮಾಲೀಕರ ವಿರೋಧದ ನಡುವೆಯೂ ಈ ನಿರ್ಣಯ ಕೈಗೊಳ್ಳಲಾಗಿದೆ.

45
ನಗರದ ಸ್ವಚ್ಛತೆ
Image Credit : Asianet News

ನಗರದ ಸ್ವಚ್ಛತೆ

‘ನಗರದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ, ವಾರಾಣಸಿಯ (ಕಾಶಿ) ಒಳಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಂಸ ಮತ್ತು ಮೀನಿನ ಅಂಗಡಿಗಳನ್ನು ನಗರದ ಆಚೆಗಿನ ನಿರ್ದಿಷ್ಟ ಸ್ಥಳಗಳಿಗೆ ಸ್ಥಳಾಂತರಿಸಲು ವಾರಾಣಸಿ ಮಹಾನಗರ ಪಾಲಿಕೆ ನಿರ್ಧರಿಸಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

55
350-400 ಮಾಂಸ ಮತ್ತು ಮೀನಿನ ಅಂಗಡಿಗಳು
Image Credit : ANI

350-400 ಮಾಂಸ ಮತ್ತು ಮೀನಿನ ಅಂಗಡಿಗಳು

‘ಶನಿವಾರ ನಡೆದ ಸಭೆಯಲ್ಲಿ ಪಾಲಿಕೆ ಈ ಪ್ರಸ್ತಾವವನ್ನು ಅನುಮೋದಿಸಿದೆ. ಯೋಜನೆಯ ಮೊದಲ ಹಂತದಲ್ಲಿ 5 ಜಾಗಗಳನ್ನು ಗುರುತಿಸಲಾಗಿದೆ. ಪ್ರಸ್ತುತ ನಗರದೊಳಗೆ ಕಾರ್ಯಾಚರಿಸುತ್ತಿರುವ 350-400 ಮಾಂಸ ಮತ್ತು ಮೀನಿನ ಅಂಗಡಿಗಳನ್ನು ಮುಂದಿನ ದಿನಗಳಲ್ಲಿ ರಾಮನಗರ, ಸುಜಾಬಾದ್, ಗಣೇಶಪುರ, ಅವ್ಲೇಶಪುರ ಮತ್ತು ಶಿವಪುರಕ್ಕೆ ಸ್ಥಳಾಂತರಿಸಲಾಗುವುದು. ನಗರದ ಸೂಕ್ತ ನಿರ್ವಹಣೆ ಮತ್ತು ನೈರ್ಮಲ್ಯವನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಈ ನಿರ್ಧಾರದಿಂದ ತಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎಂದು ಮಾಂಸ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಅಯೋಧ್ಯೆ
ರಾಮ ಮಂದಿರ
ಅಖಿಲೇಶ್ ಯಾದವ್
ಉತ್ತರ ಪ್ರದೇಶ
ಉತ್ತರ ಪ್ರದೇಶ ಸರ್ಕಾರ
Latest Videos
Recommended Stories
Recommended image1
ಕೇರಳದ ರಾಜಕೀಯವೇ ವಿಚಿತ್ರ: ಶಾಸಕ ರಾಜೀವ್‌ ಚಂದ್ರಶೇಖರ್‌ ಬಣ್ಣನೆ
Recommended image2
3000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ; 400 KG ಪುಠಾಣಿ, 500 KG ಈರುಳ್ಳಿ, 300 KG ಎಣ್ಣೆ
Recommended image3
ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ; ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಹೊಸ ಅಧ್ಯಾಯ
Related Stories
Recommended image1
ಐಆರ್‌ಸಿಟಿಸಿ ಬಿಗ್ ಆಫರ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ! ಕರ್ನಾಟಕದ ಭಕ್ತರಿಗೂ ಸುವರ್ಣಾವಕಾಶ
Recommended image2
ಅಯೋಧ್ಯೆ ರಾಮನಿಗಿಂತ ವಾಲ್ಮೀಕಿಗೆ ಮೊದಲ ಪೂಜೆ ಸಲ್ಲಬೇಕು, ಸಂಸದ ಸುನೀಲ್ ಬೋಸ್ ವಿವಾದಾತ್ಮಕ ಹೇಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved