LIVE NOW
Published : Oct 07, 2026, 06:52 AM ISTUpdated : Oct 07, 2026, 07:50 AM IST

India Latest News Live: ರಾಹುಲ್ ಗಾಂಧಿ ಜೊತೆಗಿನ ಸಂಘರ್ಷದಿಂದ ಬೇಸತ್ತ ಶಶಿ ತರೂರ್ ಬರ್ಲಿನ್‌ನಿಂದಲೇ ಸ್ಫೋಟಕ ಹೇಳಿಕೆ!

ಸಾರಾಂಶ

ನವದೆಹಲಿ: ನೀಟ್‌ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ವೇಳೆ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಿದ್ದರೂ ಸಿಜೆಪಿ ಸದಸ್ಯರು ಪರಸ್ಪರ ಸಂಭಾಷಿಸಲು ಬಳಸಿದ್ದ ಬ್ಲೂಟೂತ್ ಮೆಸೇಜಿಂಗ್‌ ಆ್ಯಪ್‌ ‘ಬಿಟ್‌ಚಾಟ್‌’ ಅನ್ನು ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವವಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇಂಟರ್ನೆಟ್, ಸರ್ವರ್‌, ಫೋನ್ ನಂಬರ್‌ಇಲ್ಲದಿದ್ದರೂ ಎರಡು ಫೋನ್‌ಗಳನ್ನು ಬ್ಲೂಟುತ್‌ ಮೂಲಕ ಕನೆಕ್ಟ್‌ ಮಾಡಿ ಸಂವಹನ ನಡೆಸಲು, ಟ್ವೀಟರ್‌ನ ಸಹಸಂಸ್ಥಾಪಕನಾಗಿದ್ದ ಜ್ಯಾಕ್‌ ಡೋರ್ಸಿ ಸ್ಥಾಪಿಸಿದ ಬಿಟ್‌ಚಾಟ್‌ ವೇದಿಕೆ ಕಲ್ಪಿಸುತ್ತದೆ. ಇದನ್ನೀಗ ಆಪಲ್‌ ಆ್ಯಪ್‌ಸ್ಟೋರ್‌ ಹಾಗೂ ಗೂಗಲ್‌ ಪ್ಲೇಸ್ಟೋರ್‌ನಿಂದ ತೆಗೆದುಹಾಕಲಾಗಿದೆ.

ಜುಲೈನಲ್ಲಿ ಸಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಿಂದ ಸರ್ಕಾರ ಬಿಟ್‌ಚಾಟ್‌ ಮೇಲೆ ಕಣ್ಣಿಟ್ಟಿತ್ತು. ಇದೀಗ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಸಿಜೆಪಿ ಪ್ರತಿಭಟನೆಗಿಳಿದಿರುವ ಹೊತ್ತಿನಲ್ಲೇ ಆ್ಯಪ್‌ ಅಲಭ್ಯವಾಗಿದೆ ಎಂಬುದು ಗಮನಾರ್ಹ.

07:50 AM (IST) Oct 07

ರಾಹುಲ್ ಗಾಂಧಿ ಜೊತೆಗಿನ ಸಂಘರ್ಷದಿಂದ ಬೇಸತ್ತ ಶಶಿ ತರೂರ್ ಬರ್ಲಿನ್‌ನಿಂದಲೇ ಸ್ಫೋಟಕ ಹೇಳಿಕೆ!

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯನ್ನು ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

More Trending News