ಹಬ್ಬದ ಸೀಸನ್ ಪ್ರಯುಕ್ತ ರಿಲಯನ್ಸ್ ಡಿಜಿಟಲ್ ತನ್ನ 'ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್' ಸೇಲ್‌ನಲ್ಲಿ ಐಫೋನ್ 15, 16 ಮತ್ತು 17 ಸರಣಿಯ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಬಳಸಿಕೊಂಡು ಗ್ರಾಹಕರು ಈ ಫೋನ್‌ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಆದರೆ, ಈ ಅಂತಿಮ ಬೆಲೆಗಳು ಹಳೆಯ ಫೋನ್‌ನ ಕಂಡೀಷನ್ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ.
Reliance Digital iPhone festive offers: ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ಐಫೋನ್ ಖರೀದಿಸುವವರಿಗೆ ಪ್ರಮುಖ ರಿಟೇಲ್ ಸ್ಟೋರ್‌ಗಳು ಭರ್ಜರಿ ಆಫರ್ ನೀಡುತ್ತಿವೆ. ಆಪಲ್‌ನ ವಿವಿಧ ಐಫೋನ್ ಮಾಡೆಲ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತಿವೆ. ರಿಲಯನ್ಸ್ ಡಿಜಿಟಲ್ ತನ್ನ 'ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್' ಸೇಲ್‌ನಲ್ಲಿ ಐಫೋನ್ ಮಾಡೆಲ್‌ಗಳ ಮೇಲೆ ವಿಶೇಷ ಆಫರ್ ಘೋಷಿಸಿದೆ. ಅಕ್ಟೋಬರ್ 9ರಂದು ಬೆಳಗ್ಗೆ 9 ಗಂಟೆಯಿಂದ ಈ ಸೇಲ್ ಶುರುವಾಗಲಿದೆ. ಐಫೋನ್ 15, ಐಫೋನ್ 16, ಐಫೋನ್ 17 ಜೊತೆಗೆ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾಡೆಲ್‌ಗಳಿಗೂ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
ಐಫೋನ್ 17 ಈಗ ಕೇವಲ 68,899 ರೂಪಾಯಿಗೆ?
ರಿಲಯನ್ಸ್ ಡಿಜಿಟಲ್‌ನಲ್ಲಿ 256 ಜಿಬಿ ಸ್ಟೋರೇಜ್‌ನ ಐಫೋನ್ 17 ಮೇಲೆ ಬೊಂಬಾಟ್ ಆಫರ್ ಇದೆ. ಸೇಲ್ ಟೈಮ್‌ನಲ್ಲಿ ಈ ಫೋನ್ 79,899 ರೂಪಾಯಿಗೆ ಸಿಗಲಿದೆ. ಇದರ ಜೊತೆಗೆ 3,000 ರೂಪಾಯಿ ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು 8,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಕೂಡ ಸಿಗಲಿದೆ. ಇವೆರಡೂ ಆಫರ್ ಬಳಸಿಕೊಂಡರೆ ಫೋನ್‌ನ ಅಂತಿಮ ಬೆಲೆ 68,899 ರೂಪಾಯಿಗೆ ಇಳಿಯಲಿದೆ.
ಐಫೋನ್ 15, ಐಫೋನ್ 16 ಬೆಲೆಯೂ ಕಡಿತ
128 ಜಿಬಿ ಐಫೋನ್ 15 ಫೋನ್ 59,899 ರೂಪಾಯಿಗೆ ಸೇಲ್ ಆಗುತ್ತಿದೆ. 1,500 ರೂಪಾಯಿ ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು 3,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಸೇರಿಸಿದರೆ, ಇದರ ಬೆಲೆ 55,399 ರೂಪಾಯಿಗೆ ಇಳಿಯುತ್ತದೆ. 128 ಜಿಬಿ ಐಫೋನ್ 16 ಮೇಲೂ ಆಫರ್ ಇದೆ. ಇದರ ಸೇಲ್ ಬೆಲೆ 69,899 ರೂಪಾಯಿ. 1,500 ರೂಪಾಯಿ ಬ್ಯಾಂಕ್ ಕ್ಯಾಶ್‌ಬ್ಯಾಕ್ ಹಾಗೂ 3,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಪಡೆದರೆ, ಫೋನ್ ಕೇವಲ 65,399 ರೂಪಾಯಿಗೆ ನಿಮ್ಮದಾಗಲಿದೆ.
ಐಫೋನ್ 17 ಪ್ರೊ ಮೇಲೂ ಭರ್ಜರಿ ಡಿಸ್ಕೌಂಟ್
ದುಬಾರಿ ಬೆಲೆಯ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾಡೆಲ್‌ಗಳಿಗೂ ರಿಲಯನ್ಸ್ ಡಿಜಿಟಲ್ ವಿಶೇಷ ಆಫರ್ ನೀಡುತ್ತಿದೆ. 256 ಜಿಬಿ ಐಫೋನ್ 17 ಪ್ರೊ ಅಸಲಿ ಬೆಲೆ 1,34,900 ರೂಪಾಯಿ. 9,910 ರೂಪಾಯಿ ಇನ್-ಸ್ಟೋರ್ ಡಿಸ್ಕೌಂಟ್ ಬಳಿಕ ಇದು 1,24,990 ರೂಪಾಯಿಗೆ ಸಿಗಲಿದೆ. ಹಳೆಯ ಐಫೋನ್‌ಗೆ 55,000 ರೂಪಾಯಿ ಎಕ್ಸ್‌ಚೇಂಜ್ ವ್ಯಾಲ್ಯೂ, 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಮತ್ತು 3,000 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆದರೆ, ಫೋನ್‌ನ ಅಂತಿಮ ಬೆಲೆ ಬರೋಬ್ಬರಿ 56,990 ರೂಪಾಯಿಗೆ ಇಳಿಯಲಿದೆ.
ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆಯಲ್ಲೂ ಇಳಿಕೆ
256 ಜಿಬಿ ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆ 1,49,900 ರೂಪಾಯಿಯಿಂದ 1,39,990 ರೂಪಾಯಿಗೆ ಇಳಿಕೆಯಾಗಲಿದೆ. ಎಕ್ಸ್‌ಚೇಂಜ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಎಲ್ಲವನ್ನೂ ಬಳಸಿಕೊಂಡರೆ, ಈ ಫೋನ್ ಕೇವಲ 71,990 ರೂಪಾಯಿಗೆ ಸಿಗಲಿದೆ ಎಂದು ರಿಲಯನ್ಸ್ ಡಿಜಿಟಲ್ ತಿಳಿಸಿದೆ.
ಆಫರ್ ಪಡೆಯಲು ಇವೆ ಷರತ್ತುಗಳು
ಗ್ರಾಹಕರು ಇವೆಲ್ಲವೂ ಆಫರ್ ಬಳಿಕ ಸಿಗುವ ಅಂತಿಮ ಬೆಲೆಗಳು ಎಂಬುದನ್ನು ಗಮನಿಸಬೇಕು. ಎಲ್ಲರಿಗೂ ಇದೇ ಬೆಲೆಗೆ ಫೋನ್ ಸಿಗುವುದಿಲ್ಲ. ಪ್ರೊ ಮಾಡೆಲ್‌ಗಳ ಲೆಕ್ಕಾಚಾರದಲ್ಲಿ, ಐಫೋನ್ 15 ಪ್ರೊ ಫೋನ್‌ಗೆ 55,000 ರೂಪಾಯಿ ಎಕ್ಸ್‌ಚೇಂಜ್ ವ್ಯಾಲ್ಯೂ ಸಿಗುತ್ತದೆ ಎಂದು ಅಂದಾಜಿಸಲಾಗಿದೆ. ಅಸಲಿ ಎಕ್ಸ್‌ಚೇಂಜ್ ಬೆಲೆಯು ನೀವು ಕೊಡುವ ಫೋನ್‌ನ ಮಾಡೆಲ್ ಮತ್ತು ಅದರ ಕಂಡೀಷನ್ ಮೇಲೆ ಡಿಪೆಂಡ್ ಆಗಿರುತ್ತದೆ. ಬ್ಯಾಂಕ್ ಕ್ಯಾಶ್‌ಬ್ಯಾಕ್‌ಗೂ ಷರತ್ತುಗಳು ಅನ್ವಯಿಸುತ್ತವೆ. ಹಾಗಾಗಿ ಫೋನ್ ಖರೀದಿಸುವ ಮುನ್ನ ಎಕ್ಸ್‌ಚೇಂಜ್ ವ್ಯಾಲ್ಯೂ, ಬ್ಯಾಂಕ್ ಆಫರ್ ಮತ್ತು ಎಲ್ಲಾ ಆಫರ್‌ಗಳನ್ನು ಒಟ್ಟಿಗೆ ಬಳಸಬಹುದಾ ಎಂದು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.


