Kiara Advani pregnant news: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾವು ಗರ್ಭಿಣಿ ಎಂಬ ವಿಚಾರ ತಿಳಿದಾಗ 'ಟಾಕ್ಸಿಕ್' ಸಿನಿಮಾ ಸೆಟ್‌ನಲ್ಲಿ ನಟ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ತೋರಿದ ಪ್ರೀತಿ ಮತ್ತು ಕಾಳಜಿಯನ್ನು ಕಿಯಾರಾ ಭಾವುಕರಾಗಿ ಸ್ಮರಿಸಿಕೊಂಡಿದ್ದಾರೆ.
ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Kiara Advani and Sidharth Malhotra) ಜೋಡಿ ಎರಡನೇ ಮಗುವಿಗೆ ಪೋಷಕರಾಗುತ್ತಿರುವ ಬಗ್ಗೆ ಅಕ್ಟೋಬರ್ 7 ರಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಸಾರ್ವಜನಿಕವಾಗಿ ಗುಡ್‌ನ್ಯೂಸ್ ಹಂಚಿಕೊಳ್ಳುವ ಸಂದರ್ಭದಲ್ಲಿ ಕಿಯಾರಾ ತಮ್ಮ ವಿಶೇಷ ಅನುಭವ ಹಂಚಿಕೊಂಡಿದ್ದಾರೆ.
ಹೌದು, ಕಿಯಾರಾ ಅಡ್ವಾಣಿ ಅವರ ಇತ್ತೀಚೆಗಿನ ಸಿನಿಮಾ ಅಂದ್ರೆ Toxic: A Fairy Tale for Grown-Ups. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರೀಕರಣದ ವೇಳೆ ತಮಗೆ ಆಗಿರುವ ಹೃದಯಸ್ಪರ್ಷಿ ಅನುಭವವನ್ನು ಅಡ್ವಾಣಿ ಸ್ಮರಿಸಿಕೊಂಡಿದ್ದಾರೆ. ಅದು ಬೇರೆ ಯಾವುದೇ ವಿಚಾರ ಅಲ್ಲ. ತಾವು ಗರ್ಭಿಣಿ ಎಂದು ಶೂಟಿಂಗ್ ಸೆಟ್‌ಗೆ ಗೊತ್ತಾದಾಗ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಹೇಗೆ ಸ್ಪಂದಿಸಿದ್ದರು ಅನ್ನೋದ್ರ ಬಗ್ಗೆ..
ಶೂಟಿಂಗ್ ಶೆಟ್‌ನಲ್ಲಿ ಚಿತ್ರತಂಡ ತಮ್ಮನ್ನು ನಡೆಸಿಕೊಂಡಿರುವ ಪ್ರೀತಿ ಮತ್ತು ಕಾಳಜಿ ಬಗ್ಗೆ ಕಿಯಾರಾ ಅಡ್ವಾಣಿ ಸ್ಮರಿಸಿ ತುಂಬಾ ಭಾವುಕರಾಗಿದ್ದಾರೆ.
ಏನು ಹೇಳಿದ್ದಾರೆ?
ನಾನು ಗರ್ಭಿಣಿ ಎಂದು ಗೊತ್ತಾದಾಗ.. ನನ್ನ ಕುಟುಂಬದವರನ್ನು ಬಿಟ್ಟರೆ ಆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದು ನಿಮ್ಮಿಬ್ಬರ ಜೊತೆಯಲ್ಲೇ (ಯಶ್ ಮತ್ತು ಗೀತು ಮೋಹನ್‌ದಾಸ್).
ಆ ಕ್ಷಣದಲ್ಲಿ ನೀವಿಬ್ಬರೂ 'ಸಿನಿಮಾವನ್ನು ಹೇಗೆ ಮುಗಿಸುವುದು?', 'ಶೂಟಿಂಗ್ ಶೆಡ್ಯೂಲ್ ಏನು ಮಾಡುವುದು?' ಎಂದು ಯೋಚಿಸಲಿಲ್ಲ. ಬದಲಿಗೆ, ನಿಮ್ಮಿಬ್ಬರ ಕಣ್ಣಲ್ಲಿ ನೀರು ತುಂಬಿಕೊಂಡು ಇತ್ತು, ಮೊಗದಲ್ಲಿ ಮಂದಹಾಸ ಬೀರುತ್ತಾ ಅಭಿನಂದನೆ ತಿಳಿಸಿದ್ರಿ. 'ಕಿಯಾರಾ, ಈಗ ನಾವು ನಮ್ಮ ಜೀವನದ ಅತ್ಯುತ್ತಮ ಸಮಯವನ್ನು ಒಟ್ಟಿಗೆ ಕಳೆಯಲಿದ್ದೇವೆ' ಎಂದಿದ್ರಿ.
ನನ್ನ ಸಂತೋಷವನ್ನು ನೋಡಿ ಅಷ್ಟೊಂದು ಭಾವುಕರಾದ ನಿಮ್ಮನ್ನು ಕಂಡು ಮನಸ್ಸು ತುಂಬಿ ಬಂತು. ಆ ಕ್ಷಣವನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ನೀವು ನನಗೆ, 'ಸೆಟ್‌ಗೆ ಬಾ, ಆರಾಮಾಗಿರು, ನಿನಗಿಷ್ಟ ಬಂದಿದ್ದನ್ನು ತಿನ್ನು, ನಾವೆಲ್ಲರೂ ಸೇರಿ ಅತ್ಯುತ್ತಮ ಸಿನಿಮಾ ಮಾಡೋಣ' ಅಂತ ಧೈರ್ಯ ತುಂಬಿದ್ರಿ. ನಾವು ನಿಜವಾಗಿಯೂ ಅದನ್ನೇ ಮಾಡಿದೆವು.
ಆ ಸಮಯದಲ್ಲಿ ನನ್ನಿಂದ ಎಲ್ಲವನ್ನೂ ಮಾಡಲು ಸಾಧ್ಯ ಎನ್ನುವ ಭಾವನೆಯನ್ನು ನೀವು ನನ್ನಲ್ಲಿ ಮೂಡಿಸಿದ್ರಿ. ನಿಮ್ಮಂತಹ ಅದ್ಭುತ ವ್ಯಕ್ತಿತ್ವ ಮತ್ತು ಇಷ್ಟು ಪ್ರೀತಿ ತೋರಿದ ಬೆಸ್ಟ್ ತಂಡಕ್ಕೆ ನಾನು ಸದಾ ಆಭಾರಿ.
ಕಿಯಾರಾ ಅಡ್ವಾಣಿ, ನಟಿ
ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ ನಾಡಿಯಾ ಎಂಬ ಪಾತ್ರವನ್ನು ಮಾಡಿದ್ದಾರೆ. ಕಿಯಾರಾ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆಯೇ ಇಡೀ ಚಿತ್ರತಂಡ ಅವರನ್ನು ನಡೆಸಿಕೊಂಡಿದ್ದ ರೀತಿಯನ್ನ ನಟಿ ತಿಳಿಸಿದ್ದಾರೆ. ಈ ವೇಳೆ ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಸ್ಪಂದಿಸಿದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇವತ್ತು ಅಡ್ವಾಣಿ ಹಾಗೂ ಮಲ್ಹೋತ್ರಾ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಗುಡ್‌ನ್ಯೂಸ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಶೇಷ ಪೋಸ್ಟ್‌ನಲ್ಲಿ ನಮಗೆ ಮತ್ತೊಂದು ಉಡುಗೊರೆ ಆರ್ಶೀವಾದ ಆಗಿದೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃಜ್ಞತೆಯಿಂದ ತುಂಬಿವೆ ಎಂದು ಬರೆದುಕೊಂಡಿದ್ದಾರೆ.


