ದ್ವಾರಕಾತಿರುಮಲ ದೇವಸ್ಥಾನದಲ್ಲಿ ಎರಡು ಕೈಗಳಿಲ್ಲದ ದಿವ್ಯಾಂಗ ಭಕ್ತನಿಗೆ ಮಹಿಳಾ ಉದ್ಯೋಗಿ ಗಾಯತ್ರಿ ಅವರು ತಮ್ಮ ಕೈಯಿಂದಲೇ ಊಟ ಮಾಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಮಹಿಳೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಓರ್ವ ಸಾಮಾನ್ಯ ಮಹಿಳಾ ಉದ್ಯೋಗಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಹಬಾಸ್ ಗಾಯಿತ್ರಿ ಎಂದು ವಿಡಿಯೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಎಲೂರು ಜಿಲ್ಲೆಯ ದ್ವಾರಕಾತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಗಾಯತ್ರಿ ಕೆಲಸ ಮಾಡುತ್ತಿದ್ದಾರೆ. ತಿಮ್ಮಪ್ಪನ ದರ್ಶನಕ್ಕೆ ಬಂದ ದಿವ್ಯಾಂಗ ಭಕ್ತನಿಗೆ ಅನ್ನದಾನದ ವೇಳೆ ಊಟ ತಿನ್ನಿಸಿದ್ದರು. ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ತಿಂಗಳ 03ರಂದು ದಿವ್ಯಾಂಗ ವಾಡಪಲ್ಲಿ ರಾಂಬಾಬು ಎಂಬವರು ದೇವಾಲಯಕ್ಕೆ ಆಗಮಿಸಿದ್ದರು. ವೆಂಕಟೇಶ್ವರನ ದರ್ಶನ ಪಡೆದುಕೊಂಡು ಅನ್ನದಾನಕ್ಕೆ ತೆರಳಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!
ಆದರೆ, ರಾಂಬಾಬು ಅವರಿಗೆ ಎರಡು ಕೈಗಳು ಇಲ್ಲದ ಕಾರಣ ಊಟ ಮಾಡಲಾಗದೆ ಕುಳಿತಿದ್ದರು. ಇವರ ಸ್ಥಿತಿ ಗಮನಿಸಿದ ಅನ್ನದಾನ ಕೇಂದ್ರದಲ್ಲಿ ಕೆಲಸ ಮಾಡುವ ಗಾಯತ್ರಿ ಎಂಬ ಉದ್ಯೋಗಿ, ಕೂಡಲೇ ಅವರ ಬಳಿ ಹೋಗಿದ್ದರು. ಅಲ್ಲದೇ ತಮ್ಮ ಕೈಯಿಂದಲೇ ಊಟ ಮಾಡಿಸಿ ಅವರ ಹಸಿವು ನೀಗಿಸಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದ ಭಕ್ತರು ವಿಡಿಯೋ ಮಾಡಿಕೊಂಡಿದ್ದು, ಸದ್ಯ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋಗೆ ಸ್ಪಂಧಿಸಿದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು, ಶಹಬ್ಬಾಸ್ ಗಾಯತ್ರಿ.. ಕೈ ಇಲ್ಲದ ದಿವ್ಯಾಂಗ ಭಕ್ತನಿಗೆ ಊಟ ಮಾಡಿಸಿ ಅವರ ಹಸಿವು ದೂರ ಮಾಡಿದ್ದೀರಿ. ನಿಮ್ಮ ಸಹೃದಯಕ್ಕೆ ಧನ್ಯವಾದ. ಮಾನವ ಸೇವೆಯೇ ಮಾಧವ ಸೇವೆ ಎಂದು ಹೇಳಿದ ಸ್ಪೂರ್ತಿ ಅಭಿನಂದನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಿಬ್ಬಂದಿಗೆ ಸನ್ಮಾನ ಮಾಡಿ ಗೌರವ
ಸಿಎಂ ತಮಗೆ ಮೆಚ್ಚುಗೆ ಸೂಚಿಸಿದ್ದು, ನನಗೆ ಬಹಳ ಸಂತೋಷ ತಂದಿದೆ. ಭಕ್ತರ ಸಮಸ್ಯೆ ಕಂಡು ಸಹಾಯ ಮಾಡುವುದು ನಮ್ಮ ಕೆಲಸ ಎಂದು ಹೇಳಿದ್ದಾರೆ. ಇನ್ನು, ಗಾಯತ್ರಿ ಅವರ ಮನಸ್ಸಿನ ಕಾರ್ಯಕ್ಕೆ ತಿರುಮಲ ಆಲಯ ಇವೋ ವೆಂಡ್ರ ತ್ರಿನಾಥರಾವು ಅಭಿನಂದನೆ ತಿಳಿಸಿದ್ದಾರೆ. ದ್ವಾರಕಾತಿರುಮಲ ಶ್ರೀವಾರಿ ನಿತ್ಯಾನದಾನದಲ್ಲಿ ಎರಡು ಕೈ ಇಲ್ಲದ ಭಕ್ತನನ್ನು ಗಮನಿಸಿ ಆತನ ನೆರವಿಗೆ ಬಂದು, ಊಟ ಮಾಡಿಸಿದ್ದಾರೆ. ಅವರ ಈ ಕಾರ್ಯ ಅಭಿನಂದನೆ ಅರ್ಹ ಎಂದಿದ್ದಾರೆ. ಅಲ್ಲದೇ, ಭಕ್ತರಿಗೆ ನೆರವು ನೀಡಿದ ಗಾಯಿತ್ರಿ ಅವರಿಗೆ ಅನ್ನದಾನ ಕೇಂದ್ರದಲ್ಲೇ ಸನ್ಮಾನ ಮಾಡಿ ಗೌರವಿಸಿದ್ದಾರೆ. ಗಾಯಿತ್ರಿ ಅವರು ತಮ್ಮ ನಿಸ್ವಾರ್ಥ ಸೇವೆ ಹಾಗೂ ಭಕ್ತರ ಮೇಲಿನ ಅಪ್ರತಿಮ ಉದಾರತೆಯೊಂದಿಗೆ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಇವೋ ಪ್ರಶಂಸೆ ವ್ಯಕ್ತಪಡಿಸಿದ್ದರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಿಎಂ ಚಂದ್ರಬಾಬು ಅವರು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಗಾಯತ್ರಿಯವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.


