LIVE NOW
Published : Nov 07, 2026, 07:13 AM ISTUpdated : Nov 07, 2026, 09:39 AM IST

India Latest News Live: ನಮ್ಮ ತಲೆಗೆ ಕಿರೀಟ ಹಾಕಿ 'ಇವರೇ ನಮ್ಮ ರಾಮ-ಲಕ್ಷ್ಮಣ' ಎಂದರು; ಅದನ್ನು ನೋಡಿ ಆ ಸಿನಿಮಾವನ್ನೇ ಕೈಬಿಟ್ಟೆವು'

ಸಾರಾಂಶ

ನವದೆಹಲಿ: ಏಳು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತಪಟ್ಟಿಯಿಂದ ವಿವಿಧ ಕಾರಣಗಳಿಂದಾಗಿ ಹೊರಗುಳಿದ ಅರ್ಹ ಮತದಾರರ ಹೆಸರು ಗಳನ್ನು ಮರುಸೇರ್ಪಡೆ ಮಾಡಲು ಮತ್ತೊಂದು ಅವಕಾಶವನ್ನು ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ.

ಎಸ್‌ಐಆ‌ರ್ ವೇಳೆ ಗೈರು, ಬೇರೆಡೆ ಸ್ಥಳಾಂತರ, ಸಾವು, ನಕಲು (ಎಸ್‌ಡಿಡಿ) ಮತ್ತು ಚುನಾವಣಾ ಆಯೋಗದಿಂದ ಫಾರಂ ವಿತರಿಸಲಾಗಿದ್ದರೂ ಭರ್ತಿ ಮಾಡಿಕೊಡದವರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಒಂದು ವೇಳೆ ಇಂಥವರಲ್ಲಿ ಅರ್ಹ ಮತದಾರರು ಇದ್ದರೆ ಅವರನ್ನು ಮತ್ತೆ ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ. ದೆಹಲಿ, ಮಹಾರಾಷ್ಟ್ರ, ಹರ್ಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್‌ನ ಮತದಾರರಿಗೆ ಇದು ಅನ್ವಯ ಆಗಲಿದೆ.

09:39 AM (IST) Nov 07

ನಮ್ಮ ತಲೆಗೆ ಕಿರೀಟ ಹಾಕಿ 'ಇವರೇ ನಮ್ಮ ರಾಮ-ಲಕ್ಷ್ಮಣ' ಎಂದರು; ಅದನ್ನು ನೋಡಿ ಆ ಸಿನಿಮಾವನ್ನೇ ಕೈಬಿಟ್ಟೆವು'

ರಾಮಾಯಣ ಚಿತ್ರದ ಬಜೆಟ್ ಕುರಿತ ಚರ್ಚೆಯ ನಡುವೆ ಸಲ್ಮಾನ್ ಖಾನ್ ನೀಡಿರುವ ಹೇಳಿಕೆ ಹೊಸ ಸಂಚಲನ ಮೂಡಿಸಿದೆ. ಸಲ್ಮಾನ್ ಅವರ ಈ ಹೇಳಿಕೆ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ರಾಮಾಯಣದಂತಹ ಮಹಾಕಾವ್ಯವನ್ನು, ಜೊತೆಗೆ ತಮ್ಮ ಹಳೆಯ ಅನುಭವದ ಬಗ್ಗೆಯೂ ಸಲ್ಲೂ ಆಡಿರುವ ಮಾತೀಗ ವೈರಲ್ ಆಗುತ್ತಿದೆ. ಏನದು ನೋಡಿ..

Read Full Story

09:04 AM (IST) Nov 07

ಬೆಲೆ ಇಳಿಕೆ; ಒಂದೇ ದಿನ ಮಾರಾಟವಾಯ್ತು 60 ಸಾವಿರ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ Dhan Trayodashi

ಚಿನ್ನದ ಬೆಲೆ ಏರಿಕೆಯಾಗಿದ್ದರೂ, ಇತ್ತೀಚಿನ ದರ ಇಳಿಕೆಯಿಂದಾಗಿ ಧನ ತ್ರಯೋದಶಿಯಂದು ದೇಶಾದ್ಯಂತ 60 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ ಮಾರಾಟವಾಗಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
Read Full Story

08:34 AM (IST) Nov 07

ವೇದಿಕೆಯಲ್ಲೇ ಕುಸಿದುಬಿದ್ದು ಖ್ಯಾತ ಮೃದಂಗ ವಾದಕ ಶ್ರೀಧರ್ ಪಾರ್ಥಸಾರಥಿ ನಿಧನ! ಕಳಚಿತು ಕರ್ನಾಟಕ ಶಾಸ್ತ್ರೀಯ ಸಂಗೀತದ ಕೊಂಡಿ

ಪುಣೆಯಲ್ಲಿ ನಡೆದ ದೀಪಾವಳಿ ಪಹತ್ ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಖ್ಯಾತ ಮೃದಂಗ ವಾದಕ ಶ್ರೀಧರ್ ಪಾರ್ಥಸಾರಥಿ (54) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಜಾಗತಿಕ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಲಯ ಪರಂಪರೆಯನ್ನು ಪಸರಿಸಿದ್ದರು

Read Full Story

08:28 AM (IST) Nov 07

Reliance Jio ಉದ್ಯಮದಲ್ಲೇ ಇದೇ ಮೊದಲು, ಒಂದೇ ಒಂದು ರಿಚಾರ್ಜ್, ಭರ್ಜರಿ ಆಫರ್ಸ್, 3 ವರ್ಷಗಳವರೆಗೆ ಟೆನ್ಷನ್ ಫ್ರೀ!

ರಿಲಯನ್ಸ್ ಜಿಯೋ ದೀಪಾವಳಿ ಪ್ರಯುಕ್ತ 10,000 ರೂ. ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ ಮೂಲಕ ಗ್ರಾಹಕರು ಸತತ ಮೂರು ವರ್ಷಗಳವರೆಗೆ ಅನ್‌ಲಿಮಿಟೆಡ್ ಕರೆ, 2.5GB ಡೇಟಾ ಮತ್ತು ಒಟಿಟಿ ಪ್ರಯೋಜನಗಳನ್ನು ಪಡೆಯಬಹುದು. ಪದೇ ಪದೇ ರಿಚಾರ್ಜ್ ಮಾಡುವ ಚಿಂತೆ ಇನ್ನು ಮುಂದೆ ಇರುವುದಿಲ್ಲ.
Read Full Story

More Trending News