ರಿಲಯನ್ಸ್ ಜಿಯೋ ದೀಪಾವಳಿ ಪ್ರಯುಕ್ತ 10,000 ರೂ. ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ ಮೂಲಕ ಗ್ರಾಹಕರು ಸತತ ಮೂರು ವರ್ಷಗಳವರೆಗೆ ಅನ್‌ಲಿಮಿಟೆಡ್ ಕರೆ, 2.5GB ಡೇಟಾ ಮತ್ತು ಒಟಿಟಿ ಪ್ರಯೋಜನಗಳನ್ನು ಪಡೆಯಬಹುದು. ಪದೇ ಪದೇ ರಿಚಾರ್ಜ್ ಮಾಡುವ ಚಿಂತೆ ಇನ್ನು ಮುಂದೆ ಇರುವುದಿಲ್ಲ.

Reliance Jio ದೀಪಾವಳಿಗೆ ಒಂದು ದಿನ ಮೊದಲೇ ಜಿಯೋ ಬಳಕೆದಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. ಇದೇ ಮೊದಲ ಬಾರಿಗೆ ಬರೋಬ್ಬರಿ 10,000 ರೂ. ಬೆಲೆಯ ಮೂರು ವರ್ಷಗಳ ಅನ್‌ಲಿಮಿಟೆಡ್ ಪ್ಲಾನ್ ಲಾಂಚ್ ಮಾಡಿದೆ. ಅಂದರೆ ಗ್ರಾಹಕರು ಒಮ್ಮೆ ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಮುಂದಿನ ಮೂರು ವರ್ಷಗಳವರೆಗೆ ಮತ್ತೆ ರಿಚಾರ್ಜ್ ಮಾಡಿಸುವ ಗೊಡವೆಯೇ ಬರೋಲ್ಲ. ನಿರಂತರ ಫೋನ್ ಕಾಲ್, ಮನರಂಜನೆ, ಓಟಿಟಿ ಸ್ಟ್ರೀಮಿಂಗ್, ಸಾಫ್ಟ್‌ವೇರ್ ಅಪ್ಡೇಟ್, ಕ್ಲೌಡ್ ಸ್ಟೋರೇಜ್ ಇನ್ನು ಅನೇಕ ಪ್ರಯೋಜನಗಳನ್ನು ಒಂದೇ ರಿಚಾರ್ಜ್ ಪ್ಲಾನ್‌ನಲ್ಲಿ ಪಡೆಯಬಹುದು.

ಪದೇ ಪದೆ ರಿಚಾರ್ಜ್ ಮಾಡಿಸುವ ಬದಲು ಒಮ್ಮೆ ರಿಚಾರ್ಜ್ ಮಾಡಿಸುವುದರಿಂದ ಮುಂದಿನ ಮೂರು ವರ್ಷಗಳವರೆಗೆ ಮೊಬೈಲ್ ವ್ಯಾಲಿಡಿಟಿ ಮುಗಿತಾ, ಡಾಟಾ ಖಾಲಿ ಆಯ್ತಾ ಅಂತಾ ಚೆಕ್ ಮಾಡುವ ಪ್ರಮೇಯವೇ ಬರುವುವದಿಲ್ಲ. ದೀರ್ಘಾವಧಿಯವರೆಗೆ ವ್ಯಾಲಿಡಿಟಿಗಾಗಿ ಈ ರಿಚಾರ್ಜ್ ಪ್ಲಾನ್ ವಿನ್ಯಾಸಗೊಳಿಸಲಾಗಿದೆ ಎಂದು ಜಿಯೋ ಹೇಳಿದೆ. ಈಗ ರಿಚಾರ್ಜ್ ಮಾಡಿಸುವುದರಿಂದ ಪ್ರಸ್ತುತ ಸುಂಕದ ಬೆಲೆ(Tariff price), ಆಫರ್‌ಗಳನ್ನು ಮುಂದಿನ 36 ತಿಂಗಳವರೆಗೆ ಪಡೆಯಬಹುದು.

ರಿಲಯನ್ಸ್ ಜಿಯೋ 10,000 ರೂ. ಪ್ಲಾನ್ ಹೇಗಿದೆ?

ಜಿಯೋ 10,000 ಬೆಲೆಯ ರಿಚಾರ್ಜ್ ಪ್ಲಾನ್ ಹೇಗಿದೆ, ಆಫರ್‌ಗಳೇನು ಎಂದರೆ ಒಮ್ಮೆ 10,000 ರೂಪಾಯಿ ಬೆಲೆ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಮೂರು ವರ್ಷಗಳವರೆಗೆ ಅನ್‌ಲಿಮಿಟೆಡ್ ಪ್ರಯೋಜನ ಪಡೆಯಬಹುದು. ಇದು ಇಂದಿನಿಂದ ಅಂದರೆ(ನವೆಂಬರ್ 7) ದೇಶಾದ್ಯಂತ ಬಿಡುಗಡೆಯಾಗಿದೆ. Myjio ಅಪ್ಲಿಕೇಶನ್ ಅಥವಾ ಅಧಿಕೃತ jio.com ಪೋರ್ಟಲ್ ಮೂಲಕ ರೀಚಾರ್ಜ್ ಮಾಡಿಸಬಹುದು. ನಿಮಗೆ ಆನ್‌ಲೈನ್ ರೀಚಾರ್ಜ್ ತಿಳಿಯದಿದ್ದರೆ ಸಮೀಪದ ಜಿಯೋ ರಿಚಾರ್ಜ್ ಸೌಲಭ್ಯವಿರುವ ಅಂಗಡಿಗಳು, ಮೊಬೈಲ್ ಸರ್ವಿಸ್, ರಿಚಾರ್ಜ್ ಮಾಡುವ ಅಂಗಡಿಗಳಲ್ಲೂ ಈ ಪ್ಲಾನ್ ರಿಚಾರ್ಜ್ ಮಾಡಿಸಬಹುದು

ಜಿಯೋ 10,000 ರೂಪಾಯಿ ರಿಚಾರ್ಜ್ ಪ್ಲಾನ್ ಆಫರ್‌ಗಳೇನು?

ರಿಲಯನ್ಸ್ ಜಿಯೋ ಹೊಸ ಪ್ಲಾನ್ 10,000 ರೂಪಾಯಿ ಬೆಲೆ ರಿಚಾರ್ಜ್ ಮಾಡಿಸುವುದರಿಂದ ನೀವು ಮೂರು ವರ್ಷಗಳವರೆಗೆ ವ್ಯಾಲಿಡಿಟಿ ಪಡೆಯುವಿರಿ, ಈ ವ್ಯಾಲಿಡಿಟಿ ಮುಗಿಯುವವರಿಗೆ ಅನಿಯಮಿತ ಕರೆ ಅಷ್ಟೇ ಅಲ್ಲದೆ ಹಲವು ಸೌಲಭ್ಯಗಳನ್ನು ಇದರಲ್ಲಿ ಪಡೆಯಬಹುದು. ಅವುಗಳು ಯಾವ್ಯಾವು ಎಂದು ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ.

  • ವಾಯ್ಸ್ ಕಾಲ್: ಎಲ್ಲ ನೆಟ್‌ವರ್ಕ್‌ಗಳಲ್ಲೂ ಮೂರು ವರ್ಷಗಳವರೆಗೆ ನಿಜವಾಗಲೂ ಅನ್‌ಲಿಮಿಟೆಡ್ ಕಾಲ್ ಮಾಡಬಹುದು.
  • ದಿನಕ್ಕೆ 2.5 GB ಹೈ-ಸ್ಪೀಡ್ ಡೇಟಾ ಸಿಗಲಿದೆ.
  • 5G ಡೇಟಾ ಸಿಗಲಿದೆ.
  • ದಿನಕ್ಕೆ 100 SMS ಫ್ರೀ.
  • ವ್ಯಾಲಿಡಿಟಿ ಮೂರು ವರ್ಷಗಳವರೆಗೆ ಇರುತ್ತದೆ.
  • ಜಿಯೋ ಹಾಟ್‌ಸ್ಪಾಟ್ ಮೊಬೈಲ್+ ಹಾಲಿವುಡ್ ಲೈವ್ ಸ್ಪೋರ್ಟ್ಸ್, ಹಾಟ್ ಸ್ಟಾರ್, ಒರಿಜಿನಲ್ಸ್ ಪ್ರಿಮಿಯಂ ಶೋಗಳು, ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳನ್ನು ಸ್ಕ್ರೀಮ್ ಮಾಡಬಹದು.
  • ಕ್ಯಾನ್ವಾ ಪ್ರೋ ಲೈಟ್(Canva pro) ಫ್ರೀ. ಇದರಿಂದ ಟೆಂಪ್ಲೆಟ್‌ಗಳು, ಇಮೇಜ್, ವಿಡಿಯೋ ಎಡಿಟ್ ಟೂಲ್ಸ್ 12 ತಿಂಗಳು ಉಚಿತವಾಗಿ ಸಿಗಲಿದೆ.
  • ಜಿಯೋ ಎಐ 50GB ಸಾಮರ್ಥ್ಯದ ಕ್ಲೌಡ್(Jio AI Cloud) ಫ್ರೀ. ಇದರಿಂದಾಗಿ ಫೋಟೋಗಳು, ಡಾಕ್ಯುಮೆಂಟ್ ಅಥವಾ ಫೈಲ್‌ಗಳು ಸುರಕ್ಷಿತವಾಗಿ ಸೇವ್ ಮಾಡಿಟ್ಟುಕೊಳ್ಳಲು ಅನುಕೂಲ.