ಒಂದೆಡೆ ರಾಜಕೀಯ ಬಿಕ್ಕಟ್ಟು, ಮತ್ತೊಂದೆಡೆ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ರಾಷ್ಟ್ರದ ಅಧ್ಯಕ್ಷರು ಅರೆಸ್ಟ್ ಆಗಿದ್ದಾರೆ. ಪರಾಗ್ವೇನಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಹಲವರ ಬಂಧನವಾಗಿದೆ.
ಪರಾಗ್ವೆ (ನ.07) ರಾಜಕೀಯ ಬಿಕ್ಕಟ್ಟು, ಬ್ಯಾಂಕ್ ದಿವಾಳಿಯಿಂದ ದಕ್ಷಿಣ ಅಮರಿಕದ ದೇಶ ಪರಾಗ್ವೇನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಮಾತ್ರವಲ್ಲ, ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಪರಾಗ್ವೇ ಡಿಜಿಟಲ್ ಬ್ಯಾಂಕ್ ದಿಢೀರ್ ಪತನಗೊಂಡಿದೆ. ದೇಶದ ಅಧ್ಯಕ್ಷರನ್ನು ವಜಾಗೊಳಿಸಿದ ಬೆನ್ನಲ್ಲೇ ಬಂಧಿಸಲಾಗಿದೆ. ಪಿಂಚಣಿದಾರರು, ವೇತನ ಪಡೆಯುವ ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದಾರೆ. ಇತ್ತ ಸರ್ಕಾರ ಪತನಗೊಂಡರೆ, ದೇಶದಲ್ಲಿ ಎಮರ್ಜೆನ್ಸಿ ಜಾರಿಯಾಗಿದೆ.
ಭ್ರಷ್ಟಾಚಾರ, ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಸಂಸ್ಥೆ, ತಮ್ಮವರಿಗೆ ಅನುಕೂಲ ಮಾಡಿಕೊಟ್ಟ ಪರಿಣಾಮ ಪರಾಗ್ವೇ ದೇಶದ ಅತೀ ದೊಡ್ಡ ಬ್ಯಾಂಕ್ ಉಯೆನೊ ಬ್ಯಾಂಕ್ (Ueno Bank) ದಿವಾಳಿಯಾಗಿದೆ.ದೇಶದ ಜನಸಂಖ್ಯೆಯಲ್ಲಿ ಶೇಕಡಾ 50ರಷ್ಟು ಅಂದರೆ 30 ಲಕ್ಷ ಮಂದಿಗೆ ಈ ಬ್ಯಾಂಕ್ ಸೇವೆ ನೀಡುತ್ತಿದೆ. ಆದರೆ ನಿಯಮಗಳ ಉಲ್ಲಂಘನೆ, ಸಾಲ ಹೆಚ್ಚಳ ಸೇರಿದಂತೆ ಹಲವು ಅಕ್ರಮಗಳಿಂದ ಬ್ಯಾಂಕ್ ಪತನಗೊಂಡಿದೆ. ಬ್ಯಾಂಕ್ ಪತನದ ಬೆನ್ನಲ್ಲೇ ಪರಾಗ್ವೇ ಅಧ್ಯಕ್ಷ ಸ್ಯಾಂಟಿಯಾಗೋ ಪೆನಾ ಇಂಪೀಚ್ಮೆಂಟ್ ಸಂಕಷ್ಟ ಎದುರಿಸಿ ವಜಾಗೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಟಿಯಾಗೋ ಪೆನಾ ಅವರನ್ನು ಹೌಸ್ ಅರೆಸ್ಟ್ ಮಾಡಲಾಗಿದೆ.
ವಿಶೇಷ ಅಂದರೆ ಪೆರಾಗ್ವೇ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮಾಜಿ ಅರ್ಥಶಾಸ್ತ್ರರಾಗಿದ್ದಾರೆ. ಆದರೆ ತಮ್ಮದೇ ದೇಶದಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. ಅತ್ಯಂತ ಪ್ರಬಲ ನಾಯಕರಾಗಿ, ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದ ಪೆನಾ ಅಧಿಕಾರ ದಿಢೀರ್ ಅಂತ್ಯಗೊಂಡಿದೆ. ಇಷ್ಟೇ ಅಲ್ಲ ದೇಶವನ್ನು ಆರ್ಥಿಕ ತುರ್ತು ಪರಿಸ್ಥಿತಿಗೆ ತಳ್ಳಿದ್ದಾರೆ.
ಸೆನಾ ಸರ್ಕಾರ ಪತನ, ಅರೆಸ್ಟ್ಗೆ ಪ್ರಮುಖ ಕಾರಣ
ಪೆರುಗ್ವೆ ದೇಶದ ಅತೀ ದೊಡ್ಡ ಬ್ಯಾಂಕ್ ಉಯೆನೋ ಡಿಜಿಟಲ್ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಸಾರ್ವಜನಿಕರ ಉಳಿತಾಯ, ಪಿಂಚಣಿ ನಿಧಿ, ಸರ್ಕಾರಿ ಸಂಸ್ಥೆಗಳ ಹಣ ಸೇರಿದಂತೆ ಬರೋಬ್ಬರಿ 7100 ಕೋಟಿ ರೂಪಾಯಿ ಹೊಂದಿದ್ದ ಬ್ಯಾಂಕ್ ದಿಢೀರ್ ಪತನಗೊಂಡಿದೆ. ನಿಯಮಗಳನ್ನು ಗಾಳಿಗೆ ತೂರಿ ಬ್ಯಾಂಕ್ನ ಮಾಲೀಕ ಸಂಸ್ಥೆಯ ಅಂಗ ಸಂಸ್ಥೆಗಳಿಗೆ ಸಾಲ ನೀಡಲಾಗಿದೆ. ಹಲವು ಅಕ್ರಮಗಳನ್ನು ನಡೆಸಲಾಗಿದೆ. ಉಯೆನೋ ಬ್ಯಾಂಕ್ ಮಾಲೀಕ ಸಂಸ್ಥೆ 'ಗ್ರೂಪೋ ವಾಜ್ಕ್ವೆಜ್ದಲ್ಲಿ ಪೆರುಗ್ವೆ ಅಧ್ಯಕ್ಷ ಸೆಂಟಿಯಾಗೋ ಸೆನಾ ಪಾಲು ಹೊಂದಿದ್ದಾರೆ. ಪೆನಾ ತಮ್ಮ ಅಧಿಕಾರ ಬಳಸಿಕೊಂಡು ಹಲವು ಅಕ್ರಮ ನಡೆಸಿದ್ದಾರೆ. ಇದು ಸರ್ಕಾರವನ್ನೇ ಪತನ ಮಾಡುವಂತೆ ಮಾಡಿದೆ. ಇಷ್ಟೇ ಅಲ್ಲ ದೇಶವನ್ನು ತುರ್ತು ಪರಿಸ್ಥಿತಿಗೆ ತಳ್ಳಿದ್ದಾರೆ.
ಪರಗ್ವೇ ಕೇಂದ್ರ ಬ್ಯಾಂಕ್ ನಡೆಸಿದ ತನಿಖೆಯಲ್ಲಿ ಅಕ್ರಮಗಳು ಬಯಲಾಗಿದೆ. ಹೀಗಾಗಿ ನವೆಂಬರ್ 3ರಂದು ಬ್ಯಾಂಕ್ ಕಾರ್ಯಾಚರಣೆಯನ್ನು ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಪರಗ್ವೇ ಲಕ್ಷಾಂತರ ಮಂದಿಗೆ ಬೀದಿ ಬಿದ್ದಿದ್ದಾರೆ. ತಮ್ಮ ಹಣ, ಪಿಂಚನಿ, ಸ್ಯಾಲರಿ ಪಡೆಯಲು ಸಾಧ್ಯವಾಗದೇ ಪರದಾಡುವ ಸ್ಥಿತಿ ಎದುರಾಗಿದೆ.
ಪ್ರತಿಭಟನೆ ಬೆನ್ನಲ್ಲೇ ರಾಜೀನಾಮೆ ಘೋಷಣೆ
ದೇಶದಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡಿದೆ. ಅಧ್ಯಕ್ಷ ಸೆಂಟಿಯಾಗೋ ಪೆನಾ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ನವೆಂಬರ್ 5ರಂದು ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ರಾಜೀನಾಮೆ ಘೋಷಿಸಿದ್ದರು. ಆದರೆ ಅಂಗೀಕಾರವಾಗುವ ಮೊದಲೇ ಇಂಪೀಚ್ಮೆಂಟ್ ಮೂಲಕ ಪೆನಾರನ್ನು ವಜಾ ಮಾಡಲಾಗಿದೆ. ಪೆನಾ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ ಬೆನ್ನಲ್ಲೇ ಗೃಹ ಬಂಧನದಲ್ಲಿ ಇರಿಸಲಾಗಿದೆ. ಇತ್ತ ಪ್ರಕರಣಕ್ಕೆ ಸಂಬಂಧ 27ಕ್ಕೂ ಹೆಚ್ಚು ಅಧಿಕಾರಿಗಳು, ನಾಯಕರನ್ನು ಬಂಧಿಸಲಾಗಿದೆ. ಇದೀಗ ಉಪಾಧ್ಯಕ್ಷ ಪೆಡ್ರೊ ಅಲೈಯನಾ ಪರಗ್ವೇ ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.














