ಇದಪ್ಪಾ ನೋಡಿ, ದೀಪಾವಳಿ ಗಿಫ್ಟ್; ದುಬಾರಿ ಕಾಣಿಕೆ ನೀಡಿದ ಉದ್ಯಮಿ ಹಸೀನಾ ನಿಶಾದ್
ಯುಎಇ ಮೂಲದ ವರ್ಲ್ಡ್ ಸ್ಟಾರ್ ಹೋಲ್ಡಿಂಗ್ನ ಎಂಡಿ ಹಸೀನಾ ನಿಶಾದ್ ತಮ್ಮ ಮಹಿಳಾ ಸಿಬ್ಬಂದಿಗೆ ದುಬಾರಿ Foldable iPhone Duo ಉಡುಗೊರೆಯಾಗಿ ನೀಡಿದ್ದಾರೆ. ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉದ್ಯೋಗಿಗಳ ಶ್ರಮವನ್ನು ಗುರುತಿಸಿ ಗೌರವಿಸಲಾಗಿದೆ.

UAE ಉದ್ಯಮಿ ಹಸೀನಾ ನಿಶಾದ್
ದೀಪಾವಳಿ ಬಂದ್ರೆ ಕಂಪನಿಯಿಂದ ಒಂದೊಳ್ಳೆ ಉಡುಗೊರೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಉದ್ಯೋಗಿಗಳು ಇರ್ತಾರೆ. ಆದ್ರೆ ಕೆಲವು ಕಂಪನಿಗಳು ಸ್ವೀಟ್ ಬಾಕ್ಸ್ ಅಥವಾ ಕಡಿಮೆ ಮೌಲ್ಯದ ಗಿಫ್ಟ್ ವೋಚರ್ ನೀಡಿ ಕೈತೊಳೆದುಕೊಳ್ಳುತ್ತವೆ. ಒಳ್ಳೆಯ ಗಿಫ್ಟ್ ಪಡೆದುಕೊಂಡ ಉದ್ಯೋಗಿಗಳು, ಉಡುಗೊರೆಯ ವಿಡಿಯೋ ಮತ್ತು ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ UAE ಉದ್ಯಮಿ ಹಸೀನಾ ನಿಶಾದ್ ಫೋಟೋ ಹೆಚ್ಚು ವೈರಲ್ ಆಗುತ್ತಿದೆ.
ಯಾಕೆ ವೈರಲ್!
ಯುಎಇ ಮೂಲದ ವರ್ಲ್ಡ್ ಸ್ಟಾರ್ ಹೋಲ್ಡಿಂಗ್ನ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಹಸೀನಾ ನಿಶಾದ್ ತಮ್ಮ ಮಹಿಳಾ ಉದ್ಯೋಗಿಗಳಿಗೆ Foldable iPhone Duo ಉಡುಗೊರೆಯಾಗಿ ನೀಡಿದ್ದಾರೆ. ಮಹಿಳಾ ಸಿಬ್ಬಂದಿಗೆ ಫೋನ್ ನೀಡುತ್ತಿರುವ ವಿಡಿಯೋಗಳನ್ನು ಹಸೀನಾ ನಿಶಾದ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪರಿಶ್ರಮ, ಸಮರ್ಪಣೆಗೆ ಧನ್ಯವಾದ ಸಲ್ಲಿಸುವಿಕೆ
ತಮ್ಮ ಕಂಪನಿಯಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಮ್ಯಾನೇಜಿಂಗ್ ಡೈರೆಕ್ಟರ್ ಕೆಲಸ ಮಾಡುತ್ತಿರೋದು ಅತ್ಯಂತ ತೃಪ್ತಿದಾಯಕವಾಗಿದೆ. ಸಿಬ್ಬಂದಿಯ ಪ್ರತಿದಿನದ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸಕಾರಾತ್ಮಕ ಶಕ್ತಿಗೆ ಚಿಕ್ಕದಾದ ಉಡುಗೊರೆಯೊಂದನ್ನು ನೀಡುವ ಮೂಲಕ ಧನ್ಯವಾದ ಅರ್ಪಿಸುವ ಕೆಲಸ ಇದಾಗಿದೆ ಎಂದು ಹಸೀನಾ ನಿಶಾದ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ಕಣ್ಣೀರಿಟ್ಟ ಸಿಬ್ಬಂದಿ
ದುಬಾರಿ ಮೌಲ್ಯದ ಗಿಫ್ಟ್ ಕೇವಲ ಟಾಪ್ ಲೆವೆಲ್ ಸಿಬ್ಬಂದಿಗೆ ಮಾತ್ರ ನೀಡಿಲ್ಲ. ಕಂಪನಿಯಲ್ಲಿ ತಮಗೆ ಜ್ಯೂಸ್ ನೀಡುವ ಮಹಿಳಾ ಸಿಬ್ಬಂದಿಗೂ Foldable iPhone ನೀಡಿದ್ದಾರೆ. ದೊಡ್ಡ ಮೊತ್ತದ ಗಿಫ್ಟ್ ನೋಡಿ ಸಿಬ್ಬಂದಿ ಆಶ್ಚರ್ಯಚಕಿತರಾದ್ರೆ, ಕೆಲವರು ಸಂತೋಷದಿಂದ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ನೋಡಿದ ಜನರು, ನಮಗೂ ಇಂತಹ ಬಾಸ್ ಸಿಗಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸೆಪ್ಟೆಂಬರ್ನಲ್ಲಿ ಈ ಕಂಪನಿ ತನ್ನ ಬೆಸ್ಟ್ ಉದ್ಯೋಗಿಗಳಿಗೆ ಐಫೋನ್ ಕಾಣಿಕೆಯಾಗಿ ನೀಡಿತ್ತು.
ಯಾರು ಈ ಹಸೀನಾ ನಿಶಾದ್?
ಹಸೀನಾ ನಿಶಾದ್ ಅವರು ಕೇರಳ ಮೂಲದವರಾಗಿದ್ದು, 2008ರಲ್ಲಿ ಮದುವೆಯಾದ ನಂತರ ಯುಎಇನಲ್ಲಿ ಸೆಟೆಲ್ ಆಗಿದ್ದು, World Star Holding ಕಂಪನಿಯ ಎಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಸೀನಾ ಅವರ ಪತಿ ನಿಶಾದ್ ಹುಸೇನ್ ಕಂಪನಿಯ ಸ್ಥಾಪಕರಾಗಿದ್ದು, ಮಾನವ ಸಂಪನ್ಮೂಲ ಪೂರೈಕೆದಾರರು, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ತಮ್ಮ ಕಂಪನಿ ಮೂಲಕ ಹಲವರಿಗೆ ನಿಶಾದ್ ಹುಸೇನ್ ಉದ್ಯೋಗ ಕೊಡಿಸಿದ್ದಾರೆ ಎಂದು ವರದಿಯಾಗಿದೆ.
ದುಬಾರಿ ಗಿಫ್ಟ್
2024ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಗುರುತಿಸಲು, ಸಂಸ್ಥೆಯು 16 ಉದ್ಯೋಗಿಗಳಿಗೆ ಪಂಚತಾರಾ ಹೋಟೆಲ್ಗಳಲ್ಲಿ ವಾಸ್ತವ್ಯ ಸೇರಿದಂತೆ ಇನ್ನಿತರ ಐಷಾರಾಮಿ ಸೌಲಭ್ಯಗಳನ್ನು ಆನಂದಿಸುವ ಅವಕಾಶವನ್ನು ಈ ಕಂಪನಿ ನೀಡಿತ್ತು. ಈ ಕಂಪನಿಯ ಮೊದಲಿನಿಂದಲೂ ತನ್ನ ಉದ್ಯೋಗಿಗಳಿಗೆ ದುಬಾರಿ ಮೌಲ್ಯದ ಗಿಫ್ಟ್ ನೀಡುವ ಮೂಲಕ ಹೆಚ್ಚು ಜನಪ್ರಿಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ













