ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯ ಕಚಲಿಯಾ ಗ್ರಾಮದಲ್ಲಿ ಕಳೆದ 400 ವರ್ಷಗಳಿಂದ ಮನೆಗಳಿಗೆ ಬಣ್ಣ ಬಳಿಯುವಂತಿಲ್ಲ. ಇಲ್ಲಿ ಕಪ್ಪು ಬಟ್ಟೆ, ಚಪ್ಪಲಿ ಧರಿಸುವುದು ಮತ್ತು ಕುದುರೆ ಏರುವುದು ಸಂಪೂರ್ಣ ನಿಷಿದ್ಧವಾಗಿದೆ. ಬಾಬಾ ಕಾಳೇಶ್ವರ ಮತ್ತು ಭೈರವ ಬಾಬಾ ಮೇಲಿನ ನಂಬಿಕೆಯಿಂದ ಈ ವಿಚಿತ್ರ ಸಂಪ್ರದಾಯಗಳನ್ನು ಪಾಲಿಸಲಾಗುತ್ತಿದೆ.
ಮದ್ಯಪ್ರದೇಶದಲ್ಲಿ ಒಂದು ಗ್ರಾಮವಿದೆ. ಅಲ್ಲಿ ನಿನ್ನೆ ಮೊನ್ನೆಯಿಂದಲ್ಲ ಬರೋಬ್ಬರಿ ನಾಲ್ಕು ನೂರು ವರ್ಷಗಳಿಂದಲೂ ವಿಚಿತ್ರ ಸಂಪ್ರದಾಯವೊಂದು ಆಚರಿಸಲಾಗುತ್ತಿದೆ. ಇಲ್ಲಿನ ಮನೆಗಳಿಗೆ ಯಾವ ಹಬ್ಬ ಹರಿದಿನಗಳಿಗೂ ಮನೆಗಳಿಗೆ ಬಣ್ಣ ಬಳಿಯುವುದಿಲ್ಲ. ಕಪ್ಪು ಬಟ್ಟೆ ಧರಿಸುವಂತಿಲ್ಲ, ಚಪ್ಪಲಿ ಹಾಕುವಂತಿಲ್ಲ. ಅದರ ಹಿನ್ನೆಲೆ, ಕಾರಣಗಳು ಕೂಡ ವಿಚಿತ್ರವಾಗಿವೆ. ಅದೇನೆಂಬುದು ಇಲ್ಲಿ ತಿಳಿಯೋಣ.
ಈ ಊರಲ್ಲಿ 400 ವರ್ಷಗಳಿಂದ ಮನೆಗಳಿಗೆ ಬಣ್ಣ ಬಳಿದಿಲ್ಲ!
ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿರುವ ಈ ವಿಚಿತ್ರ ಗ್ರಾಮದಲ್ಲಿ ಕಳೆದ ನಾಲ್ಕು ನೂರು ವರ್ಷಗಳಿಂದಲೂ ಮನೆಗಳಿಗೆ ಬಣ್ಣ ಬಳಿದಿಲ್ಲ, ಹಾಗೆ ಬಣ್ಣ ಬಳಿಯುವಂತೆಯೂ ಇಲ್ಲ. ಕಪ್ಪು ಬಟ್ಟೆ, ಶೂ, ಚಪ್ಪಲಿ ಸಂಪೂರ್ಣ ನಿಷಿದ್ಧ. ಕುಡಿಯುವ ನೀರು ಕೂಡ ಬಟ್ಟೆಯಲ್ಲಿ ಸೋಸಿ ಕುಡಿಯುವದಕ್ಕೂ ಅವಕಾಶವಿಲ್ಲ. ಇನ್ನು ವಿಚಿತ್ರವೆಂದರೆ ಇಲ್ಲಿನ ದೇವಸ್ಥಾನದ ಮುಂಭಾಗದಿಂದ ಕುದುರೆ ಏರಿ ಮಧುಮಗ ಹೋಗುವಂತಿಲ್ಲ.
ಮಧ್ಯಪ್ರದೇಶದ ಕಚಲಿಯ ಗ್ರಾಮದಲ್ಲಿನ ವಿಚಿತ್ರ ಆಚರಣೆಗಳು!
ಹಿಂದಿನ ಆಚರಣೆಯ ಕಾರಣ ಏನಿತ್ತೋ. ಆದರೆ ಈಗ ಕಾಲ ಬದಲಾಗಿದೆ. ಜಗತ್ತು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿದ್ದರೆ ಈ ಗ್ರಾಮದಲ್ಲಿ ಮಾತ್ರ ಕಳೆದ ನಾಲ್ಕು ನೂರು ವರ್ಷಗಳಿಂದಲೂ ಸಂಪ್ರದಾಯಗಳನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಹೀಗೆ ವಿಚಿತ್ರ ಆಚರಣೆಯಿಂದ ಸುದ್ದಿಯಲ್ಲಿರುವ ಸ್ಥಳವೇ ಮಧ್ಯಪ್ರದೇಶದ ಕಚಲಿಯಾ (Kachhaliya) ಗ್ರಾಮ.
ಈ ಹಳ್ಳಿ ರತ್ಲಾಂ ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ತಾಲ್ ಮತ್ತು ಅಲೋಟ್ ಪಟ್ಟಣಗಳ ನಡುವೆ ಇದೆ. ಈ ಊರಲ್ಲಿ ಸುಮಾರು 700 ಮನೆಗಳಿದ್ದು, 1,200ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮದ ಜನರ ಧಾರ್ಮಿಕ ನಂಬಿಕೆಗಳು ಇಲ್ಲಿನ ಬಾಬಾ ಕಾಳೇಶ್ವರ ಮತ್ತು ಭೈರವ ಬಾಬಾ ಅವರೊಂದಿಗೆ ಬೆಸೆದುಕೊಂಡಿವೆ. ಇಲ್ಲಿನ ವಿಚಿತ್ರ ಆಚರಣೆಗಳಿಗೂ ಇದೇ ಕಾರಣ ಎನ್ನಲಾಗಿದೆ.
ಮುಂದುವರಿಯುತ್ತದೆ…














