ದೆಹಲಿಯಿಂದ ಮರಳಿದ ಕಾಂಗ್ರೆಸ್ ಶಾಸಕರು ಸರ್ಕಾರಿ ವಿಶ್ರಾಂತಿ ಗೃಹಕ್ಕೆ ತೆರಳಿದಾಗ ಅಚ್ಚರಿ ಘಟನೆ ನಡೆದಿದೆ. ತನಗೆ ನೀಡಿದ ಕೋಣೆಯಲ್ಲಿ ಅಪರಿಚಿತ ಜೋಡಿ ಠಿಕಾಣಿ ಹೂಡಿರುವುದು ಪತ್ತೆಯಾಗಿದೆ. ಈ ಘಟನೆ ಇದೀಗ ಕೋಲಾಹಲ ಸೃಷ್ಟಿಯಾಗಿದೆ.
ಭೋಪಾಲ್ (ನ.07) ದೆಹಲಿಯಲ್ಲಿ ಪ್ರತಿಭಟನಾ ರ್ಯಾಲಿ, ಮಹತ್ವದ ಸಭೆ ಮುಗಿಸಿ ಮರಳಿದ ಕಾಂಗ್ರೆಸ್ ಶಾಸಕರಿಗೆ ಆತಂಕಕ್ಕೀಡಾದ ಘಟನೆ ನಡೆದಿದೆ. ಸುದೀರ್ಘ ಪ್ರಯಾಣದ ಬಳಿಕ ಶಾಸಕರ ವಿಶ್ರಾಂತಿಗೆ ಗೃಹಕ್ಕೆ ತೆರಳಿದ ಕಾಂಗ್ರೆಸ್ ಶಾಸಕ ತನ್ನ ವಿಶ್ರಾಂತಿ ಗೃಹದ ಕೀ ಪಡೆದು ಕೋಣೆಗೆ ತೆರಳುತ್ತಿದ್ದಂತೆ ಆಘಾತ ಎದುರಾಗಿದೆ. ಕೋಣೆಯಲ್ಲಿ ಅಪರಿಚಿತ ಜೋಡಿಯಿಂದ ಠಿಕಾಣಿ ಹೂಡಿರುವುದು ಬೆಳಕಿಗೆ ಬಂದಿದೆ. ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ತನಗೆ ನೀಡಿರುವ ವಿಶ್ರಾಂತಿ ಗೃಹದಲ್ಲಿ ಅಪರಿಚಿತ ಜೋಡಿ ಒಳ ಹೊಕ್ಕಿರುವುದು ಹೇಗೆ ಎಂದು ಶಾಸಕರು ಪ್ರಶ್ನಿಸಿದ ಘಟನೆ ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿದೆ.
15ರ ಬದಲು 14ನೇ ಕೊಠಡಿ ನೀಡಿದ ಸಿಬ್ಬಂದಿ
ಮಹಿದ್ಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ದಿನೇಶ್ ಜೈನ್ ಬೊಸ್ ಈ ಘಟನೆ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ದೆಹಲಿಯಿಂದ ಮರಳಿದ ದಿನೇಶ್ ಜೈನ್ ಬೋಸ್ ಮಧ್ಯಾಹ್ನ 2 ಗಂಟೆಗೆ ಶಾಸಕರ ವಿಶ್ರಾಂತಿ ಗೃಹಕ್ಕೆ ತೆರಳಿದ್ದಾರೆ. 14 ಹಾಗೂ 15ನೇ ಕೊಠಡಿ ಶಾಸಕ ದಿನೇಶ್ ಜೈನ್ ಬೋಸ್ ಅವರಿಗೆ ಅಲಾಟ್ ಮಾಡಲಾಗಿತ್ತು. ವಿಶ್ರಾಂತಿ ಗೃಹಕ್ಕೆ ಆಗಮಿಸಿದ ಶಾಸಕ ದಿನೇಶ್ ಜೈನ್ ಬೋಸ್ಗ 15ನೇ ಕೊಠಡಿ ಸದ್ಯಕ್ಕೆ ಲಭ್ಯವಿಲ್ಲ, ಹೀಗಾಗಿ ಕೊಠಡಿ 14ರಲ್ಲಿ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.
ಅಪರಿಚಿತ ಜೋಡಿ ಠಿಕಾಣಿ
ನಿರ್ವಹಣೆ ಕಾರಣ 15ನೇ ಕೊಠಡಿ ಲಭ್ಯವಿಲ್ಲ ಎಂದಿದ್ದಾರೆ. ಈ ಮಾತು ಕೇಳಿಸಿಕೊಂಡ 14ನೇ ಕೊಠಡಿಯತ್ತ ತೆರಳಿದ ಶಾಸಕರು ಬೆಚ್ಚಿ ಬಿದ್ದಿದ್ದಾರೆ. ಕಾರಣ 15ನೇ ಕೊಠಡಿಯಲ್ಲಿ ಯಾವುದೇ ನಿರ್ವಹಣೆ, ಕ್ಲೀನಿಂಗ್ ಇರಲಿಲ್ಲ. ಆದರೆ ಕೊಠಡಿಯಲ್ಲಿ ಅಪರಿಚಿತ ಜೋಡಿಯೊಂದು ಮಲಗಿತ್ತು. ತನಗೆ ಸರ್ಕಾರ ಮೊದಲೇ ನಿಗದಿಪಡಿಸಿ ನೀಡಿದ ಕೊಠಡಿಯಲ್ಲಿ ಅಪರಿಚಿತ ಜೋಡಿ ಒಳಹೊಕ್ಕಿದ್ದು ಹೇಗೆ ಎಂಬು ಪ್ರಶ್ನೆ ಎದುರಾಗಿದೆ.
ವಿಶ್ರಾಂತಿ ಗೃಹದ ಸಿಬ್ಬಂಧಿಗೆ ಈ ಕುರಿತು ಪ್ರಶ್ನಿಸಿದ್ದಾರೆ. ಶಾಸಕರ ಕೋಣೆಯಲ್ಲಿ ಅವರ ಅನುಮತಿ ಇಲ್ಲದೆ ಅಪರಿಚಿತರು ಒಳ ಹೊಕ್ಕಿದ್ದು ಹೇಗೆ? ಭದ್ರತಾ ಉಲ್ಲಂಘನೆ ಸೇರಿದಂತೆ ಗಂಭೀರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಶಾಸಕ ದಿನೇಶ್ ಆಕ್ರೋಶ ಹೊರಹಾಕಿದ್ದಾರೆ. ಘಟನೆ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
ಕೋಲಾಹಲ ಸೃಷ್ಟಿಸಿದ ಘಚನೆ
ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ ಕೋಲಾಹಲ ಸೃಷ್ಟಿಸಿದೆ. ಪ್ರಕರಣ ಸಂಬಂಧ ಶಾಸಕ ದಿನೇಶ್ ಜೈನ್ ಬೋಸ್ ಮಧ್ಯಪ್ರದೇಶ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಘಟನೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಶಾಸಕರಿಗೆ ನೀಡುವ ವಿಶ್ರಾಂತಿ ಗೃಹದಲ್ಲಿ ಅಪರಿಚಿತರು ಪ್ರವೇಶಿಸುತ್ತಿದ್ದಾರೆ ಎಂದರೆ ಭದ್ರತಾ ನಿಯಮ ಏಲ್ಲಿದೆ. ಘಟನೆ ಗಂಭೀರವಾಗಿದೆ. ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ವಿಶ್ರಾಂತಿ ಗೃಹದ ಸಿಬ್ಬಂದಿಗಳು, ನಿರ್ವಹಣೆ ವಹಿಸುತ್ತಿರುವ ಎಲ್ಲಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.














