Published : Apr 07, 2026, 06:57 AM ISTUpdated : Apr 07, 2026, 09:30 PM IST

India Latest News Live: ಅಮೆರಿಕ ದಾಳಿ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ

ಸಾರಾಂಶ

ಕೋಲ್ಕತಾ: ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್ ತೃಣಮೂಲ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆಯು ಅವರಿಗೆ ಎಕ್ಸ್ ಕೆಟಗರಿಯ ಭದ್ರತೆ ಒದಗಿಸಿದೆ. ಈ ಪ್ರಕಾರ ಅವರನ್ನು ಸಿಐಎಸ್‌ಎಫ್‌ ಸಿಬ್ಬಂದಿ ಕಾಯಲಿದ್ದಾರೆ.

ಪಂಚ ರಾಜ್ಯ ಚುನಾವಣಾ ಹೊಸ್ತಿಲಿನಲ್ಲಿ ಬಿಜೆಪಿ ಸೇರಿದ್ದ ಲಿಯಾಂಡರ್‌ ಪಶ್ಚಿಮ ಬಂಗಾಳ ಮತಕಣದಲ್ಲಿ ಸಕ್ರಿಯವಾಗುವ ಸಾಧ್ಯತೆಗಳಿವೆ. ಈ ಹೊತ್ತಲ್ಲಿಯೇ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ. ಇದರ ನಡುವೆ ಬಿಜೆಪಿ ಅವರನ್ನು ಸ್ಟಾರ್ ಪ್ರಚಾರಕ ಪಟ್ಟಿಗೂ ಸೇರಿಸಿದೆ.

09:30 PM (IST) Apr 07

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ, ಡೀಲ್ ಒಪ್ಪದಿದ್ದರೆ ಇರಾನ್ ನಾಗರೀಕತೆಯನ್ನೇ ಮುಗಿಸುತ್ತೇವೆ ಎಂದು ವಾರ್ನಿಂಗ್ ನೀಡಿದ ಬೆನ್ನಲ್ಲೇ ಭಾರತ ಮಹತ್ವದ ಮಾರ್ಗಸೂಚಿ ನೀಡಿದೆ.

 

Read Full Story

08:22 PM (IST) Apr 07

ಸಾತಂಕುಲ ತಂದೆ ಮಗನ ಲಾಕಪ್‌ಡೆತ್ ಪ್ರಕರಣ - ಖಾಕಿ ಪಡೆಯ ಕ್ರೌರ್ಯ ಬಯಲಿಗೆಳೆದ ರೇವತಿಗೆ 24*7 ಭಾರಿ ಬಿಗಿ ಭದ್ರತೆ

ತಮಿಳುನಾಡಿನ ಸಾತಂಕುಲಂ ಲಾಕಪ್ ಡೆತ್ ಪ್ರಕರಣದಲ್ಲಿ, ತಂದೆ-ಮಗನ ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣದಂಡನೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ, ಸಹೋದ್ಯೋಗಿಗಳ ಬೆದರಿಕೆಯ ನಡುವೆಯೂ ಧೈರ್ಯವಾಗಿ ಸಾಕ್ಷಿ ಹೇಳಿದ ಮಹಿಳಾ ಕಾನ್ಸ್‌ಟೇಬಲ್ ರೇವತಿ ಅವರಿಗೆ ನ್ಯಾಯಾಲಯವು ಭಾರಿ ಭದ್ರತೆ ಒದಗಿಸಿದೆ.

Read Full Story

07:52 PM (IST) Apr 07

ಹುಡುಗಿಯರೇ ಹುಷಾರ್​ - ನಿಮ್ಮನ್ನು ಟ್ರ್ಯಾಪ್​ ಮಾಡೋ ಹೊಸ ವಿಧಾನವಿದು, ಅರಿಯದೇ ಬಲೆಗೆ ಬೀಳೋದು ಹೇಗೆ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಬೇಗ ಫೇಮಸ್ ಆಗಬೇಕೆಂಬ ಯುವತಿಯರ ಆಸೆಯನ್ನೇ ಬಂಡವಾಳವಾಗಿಸಿಕೊಂಡು ಹೊಸ ರೀತಿಯ ಮೋಸದ ಜಾಲವೊಂದು ಸಕ್ರಿಯವಾಗಿದೆ. ಪ್ರ್ಯಾಂಕ್ ವಿಡಿಯೋಗಳ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು, ಅವರನ್ನು ಪ್ರೀತಿಯ ಬಲೆಗೆ ಬೀಳಿಸಿ ಲವ್ ಜಿಹಾದ್ ಅಥವಾ ದೈಹಿಕ ದೌರ್ಜನ್ಯದಂತಹ ಕೃತ್ಯಗಳಿಗೆ ದೂಡಲಾಗುತ್ತಿದೆ.

Read Full Story

07:29 PM (IST) Apr 07

ಭಾರಿ ಕುತೂಹಲ ಕೆರಳಿಸಿದ ಆರ್‌ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್

ಭಾರಿ ಕುತೂಹಲ ಕೆರಳಿಸಿದ ಆರ್‌ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್, ಸ್ಟೈಲೀಶ್ ಮಾತ್ರವಲ್ಲ, ಅತ್ಯಂತ ಆಕರ್ಷಕ ಜರ್ಸಿ ಡಿಸೈನ್ ಮಾಡಲಾಗಿದೆ. ಇದಕ್ಕೆ ಫ್ಯಾನ್ಸ್ ಕಮೆಂಟ್ ಮತ್ತೂ ಸೂಪರ್.

 

Read Full Story

07:29 PM (IST) Apr 07

ಮದುವೆ ಮಾಡಿಸುವಂತೆ ಹೈಟೆನ್ಷನ್ ಟವರ್ ಏರಿ 9 ಗಂಟೆ ಹೈಡ್ರಾಮಾ - ಯುವತಿಯ ಪ್ರೇಮ ಹಠಕ್ಕೆ ಪೊಲೀಸರು ಸುಸ್ತೋ ಸುಸ್ತು!

Love drama of woman: ಬಿಹಾರದ ವೈಶಾಲಿಯಲ್ಲಿ, ಪ್ರೇಮಿ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಹೈಟೆನ್ಷನ್ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಸುಮಾರು 9 ಗಂಟೆಗಳ ಕಾಲ ಪೊಲೀಸರನ್ನು ಕಾಡಿದ ಆಕೆಯನ್ನು, ಕೊನೆಗೆ ಪ್ರೇಮಿಯನ್ನು ಸ್ಥಳಕ್ಕೆ ಕರೆಸಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

Read Full Story

07:18 PM (IST) Apr 07

ಯಾರೂ ಊಹಿಸದ ಕೆಲಸ ಮಾಡಿದ ಸಚಿನ್​ ತೆಂಡೂಲ್ಕರ್​ ಪುತ್ರ! ಸ್ಟಾರ್​ ಕಿಡ್​ ಅರ್ಜುನ್​ಗೆ ಶ್ಲಾಘನೆಗಳ ಮಹಾಪೂರ

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಐಪಿಎಲ್ ಪಂದ್ಯದ ವೇಳೆ ಸಹ ಆಟಗಾರರಿಗೆ ನೀರು ಹೊತ್ತು ತಂದಿದ್ದಾರೆ. ರಾಜಕೀಯದಲ್ಲಿನ ಸ್ವಜನಪಕ್ಷಪಾತಕ್ಕೆ ವ್ಯತಿರಿಕ್ತವಾಗಿ, 'ಭಾರತ ರತ್ನ' ಪುತ್ರನ ಈ ಸರಳತೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

07:01 PM (IST) Apr 07

ರಾಜಮೌಳಿ ನಿರ್ಧಾರಕ್ಕೆ ಅನುಷ್ಕಾ ಶೆಟ್ಟಿ ಕಣ್ಣೀರು - ಅಷ್ಟಕ್ಕೂ ಆ ಯುವ ನಟ ಹೀಗಾ ಮಾಡೋದು?

ಅನುಷ್ಕಾ ಶೆಟ್ಟಿ ನಟಿಸಿದ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ 'ಬಾಹುಬಲಿ' ಕೂಡ ಒಂದು. ಈ ಸಿನಿಮಾ ಶೂಟಿಂಗ್ ವೇಳೆ ನಡೆದ ಒಂದು ಘಟನೆ ಈಗ ವೈರಲ್ ಆಗಿದೆ. ರಾಜಮೌಳಿ ನಿರ್ಧಾರದಿಂದ, ಯುವ ನಟ ಮಾಡಿದ ಕೆಲಸಕ್ಕೆ ಅನುಷ್ಕಾಗೆ ಗಾಯವಾಗಿತ್ತು.

Read Full Story

06:11 PM (IST) Apr 07

ಟಾಟಾ ಗ್ರೂಪ್‌ನಲ್ಲಿ ಚಂದ್ರಶೇಖರನ್‌ ಸ್ಥಾನಕ್ಕೆ ಸಂಕಷ್ಟ? ಎರಡನೇ ಇನ್ನಿಂಗ್ಸ್‌ಗೆ ನೋಯೆಲ್ ಟಾಟಾ ಬ್ರೇಕ್!

ಟಾಟಾ ಗ್ರೂಪ್‌ನ ಚೇರ್ಮನ್ ಎನ್. ಚಂದ್ರಶೇಖರನ್ ಅವರ ಅಧಿಕಾರಾವಧಿ ವಿಸ್ತರಣೆ ಅನಿಶ್ಚಿತತೆಯಲ್ಲಿದೆ. ಟಾಟಾ ಟ್ರಸ್ಟ್‌ನ ಚೇರ್ಮನ್ ನೋಯೆಲ್ ಟಾಟಾ ಅವರು ಏರ್ ಇಂಡಿಯಾ ಸೇರಿದಂತೆ ಹೊಸ ಯೋಜನೆಗಳ ನಷ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ, ಅವರ ಅಧಿಕಾರಾವಧಿ ವಿಸ್ತರಣೆ ನಿರ್ಧಾರವನ್ನು ಮುಂದೂಡಲಾಗಿದೆ. ಜೂನ್‌ನಲ್ಲಿ ನಡೆಯಲಿರುವ ಮುಂದಿನ ಬೋರ್ಡ್ ಸಭೆಯು ಚಂದ್ರಶೇಖರನ್ ಅವರ ಭವಿಷ್ಯವನ್ನು ನಿರ್ಧರಿಸಲಿದೆ.
Read Full Story

06:09 PM (IST) Apr 07

ಡಿಗ್ರಿ ಇಲ್ಲದಿದ್ದರೂ ಕೈತುಂಬಾ ಸಂಪಾದನೆ - 45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್‌ಪೆಂಟರ್‌

high demand blue collar jobs: ಕೃತಕ ಬುದ್ಧಿಮತ್ತೆಯಿಂದಾಗಿ (ಎಐ) ಸಾಫ್ಟ್‌ವೇರ್ ಉದ್ಯೋಗಗಳು ಅಪಾಯದಲ್ಲಿರುವಾಗ, ಕಾರ್ಪೆಂಟರ್‌, ಪ್ಲಂಬರ್‌ಗಳಂತಹ ಬ್ಲೂ ಕಾಲರ್ ಉದ್ಯೋಗಗಳಿಗೆ ನಗರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಇವರು ಗಂಟೆಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.

Read Full Story

06:08 PM (IST) Apr 07

ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್‌ಗೆ ಟ್ರಂಪ್ ವಾರ್ನಿಂಗ್

ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್‌ಗೆ ಟ್ರಂಪ್ ವಾರ್ನಿಂಗ್, ಮತ್ತೆಂದು ಈ ನಾಗರೀಕರತೆ ಮರಳವುದಿಲ್ಲ. ಯೋಚನೆ ಮಾಡಿ, ಡೀಲ್ ಒಪ್ಪಿಕೊಳ್ಳಿ ಇದು ಲಾಸ್ಟ್ ಎಚ್ಚರಿಕೆ ಎಂದಿದ್ದಾರೆ.

 

Read Full Story

06:03 PM (IST) Apr 07

ರಾಮ್ ಚರಣ್ ಸೂಪರ್ ಹಿಟ್ ಚಿತ್ರವನ್ನು 'ಆವರೇಜ್' ಎಂದ ರಾಜಮೌಳಿ! ಕಾರಣ ಏನು ಗೊತ್ತಾ?

ರಾಮ್ ಚರಣ್ ನಟನೆಯ ಸೂಪರ್ ಹಿಟ್ ಚಿತ್ರವೊಂದನ್ನು ನಿರ್ದೇಶಕ ರಾಜಮೌಳಿ 'ಆವರೇಜ್ ಸಿನಿಮಾ' ಎಂದು ಕರೆದಿದ್ದರು. ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಆ ಚಿತ್ರದ ಬಗ್ಗೆ ಜಕ್ಕಣ್ಣ ಯಾಕೆ ಹಾಗೆ ಹೇಳಿದರು?

Read Full Story

05:33 PM (IST) Apr 07

ನಮ್ಮಪ್ಪ ಮೋಹನ್ ಬಾಬು ಯಾಕೆ ಬದುಕಿದ್ರು, ಬೇರೆಯವ್ರು ಯಾಕೆ ಸತ್ರು? ನಟಿ ಮಂಚು ಲಕ್ಷ್ಮಿ ಭಾವುಕ ಮಾತು

ನಟಿ ಮಂಚು ಲಕ್ಷ್ಮಿ ತಮ್ಮ ತಂದೆ ಮೋಹನ್ ಬಾಬು ಅವರ ಮೇಲಾದ ಬಾಂಬ್ ಬ್ಲಾಸ್ಟ್ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಆಘಾತಕಾರಿ ಘಟನೆಯನ್ನು ನೆನೆದು, ಅವರು ನಟ ರಾಜಾ ರವೀಂದರ್ ಅವರ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಭಾವುಕರಾದರು.

Read Full Story

05:26 PM (IST) Apr 07

ಎಣ್ಣೆಯೂ ಬೇಡ, ಕುದಿಸೋದು ಬೇಡ - ಬಿರಿಯಾನಿ, ಸಾಂಬಾರ್​ ಸೇರಿ ಘಮಘಮಿಸುವ ಸಾವಿರಾರು ಖಾದ್ಯ ಮಾಡೋದು ಹೀಗೆ

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪದಯಾಲ್ ಶಿವಕುಮಾರ್ ಅವರ ರೆಸ್ಟೋರೆಂಟ್‌ನಲ್ಲಿ 'ಎಣ್ಣೆ ಇಲ್ಲ, ಕುದಿಸುವಿಕೆಯೂ ಇಲ್ಲ' ಎಂಬ ವಿಶಿಷ್ಟ ಸೂತ್ರ ಪಾಲಿಸಲಾಗುತ್ತದೆ. ಎಣ್ಣೆ ಮತ್ತು ಕುದಿಸುವಿಕೆಯು ಆಹಾರದ ಪೋಷಕಾಂಶಗಳನ್ನು ನಾಶಪಡಿಸುತ್ತದೆ ಎಂದು ನಂಬುವ ಇವರು, ಉಗಿ, ಗ್ರಿಲ್ ಮತ್ತು ಬೇಕಿಂಗ್ ವಿಧಾನ ಬಳಸಿ ಬಿರಿಯಾನಿ, ಸಾಂಬಾರ್‌ನಂತಹ 2500ಕ್ಕೂ ಹೆಚ್ಚು ಸಸ್ಯಾಹಾರಿ ಖಾದ್ಯಗಳನ್ನು ತಯಾರಿಸುತ್ತಾರೆ.
Read Full Story

05:01 PM (IST) Apr 07

Dhanush-Vignesh Fallout - ಧನುಷ್ ಜೊತೆಗಿನ ಮುನಿಸಿನ ಬಗ್ಗೆ ವಿಘ್ನೇಶ್ ಶಿವನ್ ಭಾವುಕ ಮಾತು - ಕಾರಣ ನಯನತಾರಾನಾ?

ವಿಘ್ನೇಶ್ ಶಿವನ್ ಮತ್ತು ಧನುಷ್ ನಡುವಿನ ಸಂಘರ್ಷ 2024ರ ಆರಂಭದಲ್ಲಿ ಶುರುವಾಯ್ತು. ವಿಘ್ನೇಶ್ ನಿರ್ದೇಶಿಸಿ, ನಯನತಾರಾ ನಟಿಸಿದ್ದ 'ನಾನುಂ ರೌಡಿದಾನ್' ಚಿತ್ರವನ್ನು ಧನುಷ್ ನಿರ್ಮಿಸಿದ್ದರು.

Read Full Story

04:57 PM (IST) Apr 07

ಮನೆಗೆಲಸದಿಂದ ಏರ್‌ಲೈನ್ಸ್‌ವರೆಗೆ - 21ನೇ ವಯಸ್ಸಿಗೆ ಅಕ್ಷರ ಕಲಿತಾ ಅರ್ಚನಾ ಇಂದು ವಿಮಾನಯಾನ ಸಂಸ್ಥೆ ಉದ್ಯೋಗಿ

from housemaid to airline staff: ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ. 

Read Full Story

04:33 PM (IST) Apr 07

ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ಕೊಟ್ಟ ಅಲ್ಲು ಅರ್ಜುನ್ - ಪ್ರೀ-ಲುಕ್‌ನಲ್ಲೇ ಗೂಸ್‌ಬಂಪ್ಸ್!

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಬನ್ನಿ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಅಪ್‌ಡೇಟ್ ಒಂದು ಹೊರಬೀಳಲಿದೆ. ಸದ್ಯ ಅಟ್ಲಿ ಜೊತೆ ಐಕಾನ್ ಸ್ಟಾರ್ ಮಾಡುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ.

Read Full Story

04:21 PM (IST) Apr 07

ಇಬ್ಬರು ಮಕ್ಕಳ ಸಾವಿನ ಬೆನಲ್ಲೇ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂಟರ್ನೆಟ್ ಕಡಿತ

ಇಬ್ಬರು ಮಕ್ಕಳ ಸಾವಿನ ಬೆನಲ್ಲೇ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂಟರ್ನೆಟ್ ಕಡಿತ, ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳ ಸಾವಿನಿಂದ ಮಣಿಪುರದ 5 ಜಿಲ್ಲೆಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದೆ.

 

Read Full Story

04:20 PM (IST) Apr 07

'ಬಂಗಾಳದ ಮೇಲೆ ಕಣ್ಣಿಟ್ಟರೆ ಪಾಕ್‌ ಎಷ್ಟು ಹೋಳಾಗುತ್ತೆ ಅನ್ನೋದು ದೇವರಿಗೆ ಮಾತ್ರ ಗೊತ್ತು..' ಖವಾಜಾ ಆಸಿಫ್‌ಗೆ ತಿರುಗೇಟು ನೀಡಿದ ರಾಜನಾಥ್‌ ಸಿಂಗ್‌

ಭಾರತದ ಮೇಲೆ ಮತ್ತೆ ಭಯೋತ್ಪಾದಕ ದಾಳಿ ನಡೆದರೆ ತಕ್ಕ ಉತ್ತರ ನೀಡುವುದಾಗಿ ರಾಜನಾಥ್ ಸಿಂಗ್ ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಸಚಿವರು ಕೋಲ್ಕತ್ತಾ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದಕ್ಕೆ ರಾಜನಾಥ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Read Full Story

03:58 PM (IST) Apr 07

Money Vastu - ಹಣದ ಈ ದಿಕ್ಕಿನಲ್ಲಿ ಇಟ್ಟರೆ ಸಾಕು, ಮನೆಯಲ್ಲಿ ದುಡ್ಡಿಗೆ ಬರವೇ ಇರಲ್ಲ! ಆದ್ರೆ ಆ ಒಂದು ತಪ್ಪು ಮಾಡ್ಬೇಡಿ

ವಾಸ್ತು ಪ್ರಕಾರ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೇ ನಮ್ಮ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅದರಲ್ಲೂ, ಮನೆಯಲ್ಲಿ ಹಣವನ್ನು ಎಲ್ಲಿಡುತ್ತೇವೆ ಅನ್ನೋದು ನಮ್ಮ ಆರ್ಥಿಕ ಸ್ಥಿತಿಯನ್ನೇ ನಿರ್ಧರಿಸುತ್ತೆ ಅಂದ್ರೆ ನೀವು ನಂಬಲೇಬೇಕು.
Read Full Story

03:53 PM (IST) Apr 07

ಕ್ಯಾಸಿನೊ ಮಜಾಕ್ಕಾಗಿ ಕಾರಿನಲ್ಲೇ ನಾಯಿ ಲಾಕ್ - 4 ಗಂಟೆ ನರಳಾಡಿ ಪ್ರಾಣಬಿಟ್ಟ ಮೂಕಜೀವಿ; ಮಾಲೀಕ ಅರೆಸ್ಟ್

ಗೋವಾದ ಪಣಜಿಯಲ್ಲಿ, ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕಾರಿನಲ್ಲಿ ನಾಲ್ಕು ಗಂಟೆಗಳ ಕಾಲ ಲಾಕ್ ಮಾಡಿ ಕ್ಯಾಸಿನೊಗೆ ಹೋಗಿದ್ದನು. ಬಿಸಿಲಿನ ತಾಪ ಮತ್ತು ಉಸಿರುಗಟ್ಟುವಿಕೆಯಿಂದ 'ಗೋಲ್ಡನ್ ರಿಟ್ರೈವರ್' ತಳಿಯ ನಾಯಿ ಸಾವನ್ನಪ್ಪಿದೆ.

Read Full Story

03:39 PM (IST) Apr 07

MS Dhoni - ಬೌಲರ್‌ಗಳ ಬೆವರಿಳಿಸೋ ಧೋನಿಗೆ ಇದನ್ನು ಕಂಡ್ರೆ ಅಂದ್ರೆ ಸಿಕ್ಕಾಪಟ್ಟೆ ಭಯವಂತೆ!

ಭಾರತ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಎಂ.ಎಸ್. ಧೋನಿ ಕೂಡ ಒಬ್ಬರು. ಅವರ ನಾಯಕತ್ವದಲ್ಲಿ ಭಾರತ ತಂಡವು ಅನೇಕ ಗೆಲುವುಗಳನ್ನು ಕಂಡಿದೆ. ಆದರೆ, ಬೌಲರ್‌ಗಳಿಗೆ ತಮ್ಮ ಬ್ಯಾಟಿಂಗ್‌ನಿಂದ ನಡುಕ ಹುಟ್ಟಿಸುವ ಧೋನಿಗೆ ಒಂದು ಸಣ್ಣ ವಿಷಯಕ್ಕೆ ಭಯವಿದೆ ಎಂಬುದು ನಿಮಗೆ ಗೊತ್ತೇ?

Read Full Story

03:29 PM (IST) Apr 07

ಶಾರ್ಟ್‌ಕಟ್ ಸಾವು, ಮಾರ್ಗ ಬದಲಿಸಿ ಒಂದೇ ಕುಟುಂಬ 6 ಮಕ್ಕಳು ಸೇರಿ 9 ಮಂದಿ ಅಪಘಾತಕ್ಕೆ ಬಲಿ

ಶಾರ್ಟ್‌ಕಟ್ ಸಾವು, ಮಾರ್ಗ ಬದಲಿಸಿ ಒಂದೇ ಕುಟುಂಬ 6 ಮಕ್ಕಳು ಸೇರಿ 9 ಮಂದಿ ಅಪಘಾತಕ್ಕೆ ಬಲಿ, ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುತ್ತೆ ಎಂದು ಶಾರ್ಟ್‌ಕಟ್ ರಸ್ತೆಯಲ್ಲಿ ಸಾಗಿದ ಕುಟುಂಬ ದುರಂತ ಅಂತ್ಯಕಂಡಿದೆ.

Read Full Story

03:21 PM (IST) Apr 07

ಉದ್ಯಮಿ ಪುತ್ರನ ಹೊಸ ಕಾರು ಶೋಕಿಗೆ ಬಲಿಯಾದ ಯುವತಿ - ಮಿನಿ ಕೂಪರ್ ಕಾರ್ ಡಿಕ್ಕಿಯಾಗಿ ಕರ್ನಾಟಕದ ಹುಡುಗಿ ಸಾವು

ಗೋವಾದ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ದೀಕ್ಷಾ ಪರ್ವಾಡ್ಕರ್ (23) ಸಾವನ್ನಪ್ಪಿದ್ದಾರೆ. ಉದ್ಯಮಿಯೊಬ್ಬರ ಪುತ್ರ ಚಲಾಯಿಸುತ್ತಿದ್ದ ನೋಂದಣಿಯಾಗದ ಹೊಸ ಮಿನಿ ಕೂಪರ್ ಕಾರು, ಕೆಲಸ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ದೀಕ್ಷಾ ಮತ್ತು ಆಕೆಯ ಸಹೋದ್ಯೋಗಿಗೆ ಡಿಕ್ಕಿ ಹೊಡೆದಿದೆ.

Read Full Story

03:05 PM (IST) Apr 07

ಕೆಲಸಕ್ಕೆ ಸೇರಿದ ಒಂದೇ ದಿನಕ್ಕೆ ಯುವ ಡಾಕ್ಟರ್ ರಾಜೀನಾಮೆ! ರೋಗಿ ಬಂದ್ರೆ ಸಾಕು, ಐಸಿಯುಗೆ ಹಾಕಿ ಅಂತಾರೆ! ವಿಡಿಯೋ ವೈರಲ್

ಚಂಡಿಗಢದಲ್ಲಿ, ಯುವ ವೈದ್ಯೆಯೊಬ್ಬರು ಕೆಲಸಕ್ಕೆ ಸೇರಿದ ಮೊದಲ ದಿನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯು ಲಾಭಕ್ಕಾಗಿ ರೋಗಿಗಳನ್ನು ಅನಗತ್ಯವಾಗಿ ದಾಖಲಿಸಿ, ಐಸಿಯುಗೆ ಸೇರಿಸುವ ಮೂಲಕ ಸುಲಿಗೆ ಮಾಡುತ್ತಿರುವುದನ್ನು ವಿರೋಧಿಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಅವರು ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

02:58 PM (IST) Apr 07

ಗತಕಾಲಕ್ಕೆ ಮರಳುತ್ತಿದೆ ಭಾರತದ ಜೆನ್‌ಝಿ, ಅಸ್ಸಾಂ ರೈಸ್ ಬಿಯರ್ ಈಗ ಟ್ರೆಂಡ್

ಗತಕಾಲಕ್ಕೆ ಮರಳುತ್ತಿದೆ ಭಾರತದ ಜೆನ್‌ಝಿ, ಅಸ್ಸಾಂ ರೈಸ್ ಬಿಯರ್ ಈಗ ಟ್ರೆಂಡ್, ಜೆನ್‌ಝಿ ಯುವ ಸಮೂಹದಲ್ಲಿ ಕುಡಿತ ಕಡಿಮೆ. ವಿಸ್ಕಿರ್, ರಮ್, ಬಿಯರ್ ದೂರ ದೂರ. ಕುಡಿದರೂ ಭಾರತೀಯ ಪೂರ್ವಜರು ಬಳಸುತ್ತಿದ್ದ ನೈಸರ್ಗಿಕ ಮದ್ಯ ಪಾನಿಯದತ್ತ ವಾಲುತ್ತಿದ್ದಾರೆ.

Read Full Story

02:35 PM (IST) Apr 07

ಕೇರಳದ ಪುಣ್ಯಕ್ಷೇತ್ರಗಳಿಗೆ ಅನಂತ್ ಅಂಬಾನಿ ಭೇಟಿ - ದೇವಸ್ಥಾನಗಳ ಅಭಿವೃದ್ಧಿಗೆ ಭಾರೀ ಹಣ ದೇಣಿಗೆ!

ರಿಲಯನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ರಾಜರಾಜೇಶ್ವರಂ ಮತ್ತು ಗುರುವಾಯೂರು ದೇವಾಲಯಗಳಿಗೆ ಭೇಟಿ ನೀಡಿ, 18 ಕೋಟಿ ರೂಪಾಯಿಗೂ ಅಧಿಕ ದೇಣಿಗೆಯನ್ನು ಘೋಷಿಸಿದ್ದಾರೆ. 

Read Full Story

02:21 PM (IST) Apr 07

ಮದುವೆಯಾಗಿ 4 ಮಕ್ಕಳಾಗಿವೆ, ಸಿನಿಮಾ ಬಿಟ್ಟಿದ್ದೇನೆ, ಇನ್ನೇನು ಬೇಕು? ಖಡಕ್ ಪೋಸ್ಟ್ ಹಾಕಿದ ನಟಿ ತ್ರಿಷಾ

ನಟಿ ತ್ರಿಷಾ ಕೃಷ್ಣನ್ ಸಿನಿಮಾ ರಂಗದಿಂದ ದೂರ ಸರಿಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ತ್ರಿಷಾ ಅವರೇ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ.

Read Full Story

01:47 PM (IST) Apr 07

ಈ ಸಿನಿಮಾ ನಂತರ ಡಿಪ್ರೆಶನ್‌ಗೆ ಹೋಗಿದ್ದೆ, ಜನ ನನ್ನನ್ನು ದ್ವೇಷಿಸ್ತಾರೆ ಅನ್ಕೊಂಡಿದ್ದೆ - ಜಾನ್ವಿ ಕಪೂರ್

ಬಾಲಿವುಡ್‌ನ ಜನಪ್ರಿಯ ನಟಿ ಜಾನ್ವಿ ಕಪೂರ್ ತಮ್ಮ ವೃತ್ತಿಜೀವನದ ಆರಂಭದ ದಿನಗಳು ಸುಲಭವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾ ಬಳಿಕ ಖಿನ್ನತೆಗೆ ಜಾರಿದ್ದೆ ಎಂದು ಸಂದರ್ಶನವೊಂದರಲ್ಲಿ ಅವರು ಬಹಿರಂಗಪಡಿಸಿದ್ದಾರೆ.

Read Full Story

01:32 PM (IST) Apr 07

Priyanka Chopra - ವಾರಣಾಸಿ ಶೂಟಿಂಗ್ ಬ್ರೇಕ್‌ನಲ್ಲಿ ಸ್ವಿಮ್ಮಿಂಗ್ ಪೂಲ್ ಬಳಿ ಮಾವಿನಕಾಯಿ ಸವಿದ ದೇಸಿ ಗರ್ಲ್!

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರ ಇನ್ನೊಂದು ಮುಖ ಅನಾವರಣಗೊಂಡಿದೆ. ಕುಟುಂಬದ ಜೊತೆ ಸಮಯ, ಬಿಸಿಲಿಗೆ ಮೈಯೊಡ್ಡಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

Read Full Story

01:12 PM (IST) Apr 07

ಹಿಮಂತ ಬಿಸ್ವಾ ಶರ್ಮಾ ಪತ್ನಿ ಬಳಿ ಮೂರು ಪಾಸ್‌ಪೋರ್ಟ್‌; ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕನ ಮನೆ ಬಾಗಿಲಿಗೆ ಅಸ್ಸಾಂ ಪೊಲೀಸರು!

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ದೆಹಲಿ ನಿವಾಸಕ್ಕೆ ಅಸ್ಸಾಂ ಪೊಲೀಸರು ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಪತ್ನಿ ರಿಂಕಿ ಭೂಯಾನ್ ಶರ್ಮಾ ನೀಡಿದ ಮಾನನಷ್ಟ ದೂರಿನನ್ವಯ ವಿಚಾರಣೆ.

Read Full Story

12:20 PM (IST) Apr 07

ಭೌತಿಕ ಸುಖ ಮುಖ್ಯವಲ್ಲ ಎಂದು 36 ಲಕ್ಷ ಸಂಬಳ ಬಿಟ್ಟಿದ್ದ IIT Babaಗೆ ಲವ್​ ಶುರುವಾದದ್ದು ಹೇಗೆ? ಇಲ್ಲಿದೆ ಸ್ಟೋರಿ

35 ಲಕ್ಷ ರೂಪಾಯಿ ಸಂಬಳ ತ್ಯಜಿಸಿ ಆಧ್ಯಾತ್ಮದ ಹಾದಿ ಹಿಡಿದು ವೈರಲ್ ಆಗಿದ್ದ ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಬೆಂಗಳೂರಿನ ಇಂಜಿನಿಯರ್ ಪ್ರತೀಕಾ ಅವರನ್ನು ವಿವಾಹವಾಗಿದ್ದಾರೆ. ಇವರ ಲವ್​ ಸ್ಟೋರಿ ಶುರುವಾಗಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್​

Read Full Story

12:18 PM (IST) Apr 07

ವಾಂಚೋ ಬುಡಕಟ್ಟು - ಭಾರತದ ಈ ಸಮುದಾಯದಲ್ಲಿ ಮದುವೆಗೂ ಮೊದಲೇ ಯುವತಿ ಗರ್ಭಿಣಿ ಆದರಷ್ಟೇ ಮದುವೆ

ಮದುವೆಗೂ ಮೊದಲು ಯುವತಿಯೊಬ್ಬಳು ಗರ್ಭಿಣಿಯಾದರೆ ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡುವವರೆ ಹೆಚ್ಚು, ಜಾರಿಣಿ, ಮಾನಗೆಟ್ಟವಳು ಎಂದೆಲ್ಲಾ ನಮ್ಮ ನಾಗರಿಕ ಸಮಾಜದ ಜನ ದೂರುತ್ತಾರೆ. ಆದರೆ ಇಲ್ಲೊಂದು ಬುಡಕಟ್ಟು ಸಮುದಾಯದಲ್ಲಿ ಹೆಣ್ಣು ಮದುವೆಗೂ ಮೊದಲೇ ಗರ್ಭಿಣಿಯಾದರಷ್ಟೇ ಆಕೆಗೆ ಮಾನ ಸಮ್ಮಾನ…

Read Full Story

12:16 PM (IST) Apr 07

Butta Bomma Song - 93 ಕೋಟಿ ವೀವ್ಸ್! ಯೂಟ್ಯೂಬ್ ಶೇಕ್ ಮಾಡಿದ ಹಾಡಿದು, ಕೇಳಿದ್ರೆ ನೀವು ಕುಣೀತೀರಾ!

ಅಲ್ಲು ಅರ್ಜುನ್ ಚಿತ್ರದ ಹಾಡೊಂದು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ತೆಲುಗು ಸಿನಿಮಾ ಹಾಡುಗಳಲ್ಲೇ ಅತಿ ಹೆಚ್ಚು ವೀವ್ಸ್ ಪಡೆದಿರುವುದು ಇದರ ವಿಶೇಷ. ಈ ಹಾಡು ಕೇಳಿದರೆ ನೀವೂ ಕುಣಿಯುವುದು ಗ್ಯಾರಂಟಿ.

Read Full Story

11:46 AM (IST) Apr 07

ನಾನ್​ಸ್ಟಿಕ್​ ಪಾತ್ರೆಯ ಒಂದೇ ಒಂದು ಗೀರು, ಬದುಕನ್ನೇ ಶಾಶ್ವತ ನರಕ ಮಾಡ್ಬೋದು! FICCI ಎಚ್ಚರಿಕೆ ನೋಡಿ

ನಾನ್​ಸ್ಟಿಕ್​ ಪಾತ್ರೆಗಳ ಮೇಲಿನ ಗೀರುಗಳು PFAS ಎಂಬ "ಶಾಶ್ವತ ರಾಸಾಯನಿಕಗಳನ್ನು" ಬಿಡುಗಡೆ ಮಾಡುತ್ತವೆ. ಈ ವಿಷಕಾರಿ ಕಣಗಳು ದೇಹದಲ್ಲಿ ಕೊಳೆಯದೆ ಕ್ಯಾನ್ಸರ್, ಹಾರ್ಮೋನುಗಳ ಅಸಮತೋಲನ ಮತ್ತು ಬಂಜೆತನದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
Read Full Story

11:41 AM (IST) Apr 07

Manipur Attack - ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ; 6 ತಿಂಗಳ ಕಂದಮ್ಮ, 5 ವರ್ಷದ ಬಾಲಕ ಬಲಿ, ತಾಯಿ ಸ್ಥಿತಿ ಗಂಭೀರ

Manipur Attack ಮಣಿಪುರದಲ್ಲಿ ಮಂಗಳವಾರ ಮುಂಜಾನೆ ಮನೆಯೊಂದರ ಮೇಲೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ತಾಯಿ ಜೊತೆ ಮಲಗಿದ್ದ 5 ವರ್ಷದ ಬಾಲಕ ಮತ್ತು 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿವೆ. ತಾಯಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

11:29 AM (IST) Apr 07

ಮೂರನೇ ಜಯದ ಕಾತರದಲ್ಲಿರುವ ರಾಜಸ್ಥಾನ ರಾಯಲ್ಸ್‌ಗೆ ಮುಂಬೈ ಇಂಡಿಯನ್ಸ್ ಸವಾಲು!

ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ರಾಜಸ್ಥಾನ ರಾಯಲ್ಸ್, ಗೆಲುವಿನ ಹಳಿಗೆ ಮರಳಲು ಯತ್ನಿಸುತ್ತಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ಮುಖಾಮುಖಿಯಲ್ಲಿ ಮುಂಬೈ ಕೊಂಚ ಮೇಲುಗೈ ಸಾಧಿಸಿದ್ದು, ಯುವ ಆಟಗಾರ ವೈಭವ್‌ ಸೂರ್ಯವಂಶಿ ಮತ್ತು ಜಸ್‌ಪ್ರೀತ್‌ ಬೂಮ್ರಾ ನಡುವಿನ ಹಣಾಹಣಿ ಕುತೂಹಲ ಕೆರಳಿಸಿದೆ.
Read Full Story

10:36 AM (IST) Apr 07

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಎಲ್ಲವೂ ಸರಿ ಇಲ್ವಾ? ₹10 ಕೋಟಿ ಆಟಗಾರನ ದಿಢೀರ್ ನಿವೃತ್ತಿಗೆ ಇದೇ ಕಾರಣ!

ಬೆಂಗಳೂರು: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈಗ ಎಲ್ಲವೂ ಸರಿಯಿಲ್ವಾ ಎನ್ನುವ ಪ್ರಶ್ನೆ ಇದೀಗ ಕಾಡಲಾರಂಭಿಸಿದೆ. ಸಿಎಸ್‌ಕೆ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣದ ಬಗ್ಗೆ ರವಿಚಂದ್ರನ್ ಅಶ್ವಿನ್ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

09:34 AM (IST) Apr 07

Menaka Guruswamy - ಇದೇ ಮೊದಲ ಬಾರಿಗೆ ರಾಜ್ಯಸಭೆಗೆ ಸಲಿಂಗಿ ಎಂಟ್ರಿ!

ಎನ್‌ಸಿಪಿ ನಾಯಕ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದಂತೆ 19 ಮಂದಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ, ಹಲವು ಸದಸ್ಯರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಶಪಥ ಸ್ವೀಕರಿಸಿದ್ದು ಗಮನಾರ್ಹ.

Read Full Story

09:34 AM (IST) Apr 07

ರನ್ ಔಟ್ ವಿವಾದ, 21 ವರ್ಷದ ಅಂಪೈರ್ ಚಾಕುವಿನಿಂದ ಇರಿದು ಬರ್ಬರ ಹತ್ಯೆ!

ವಿಶಾಖಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ದುರಂತ ಸಂಭವಿಸಿದೆ. ರನ್ ಔಟ್ ವಿಚಾರಕ್ಕೆ ನಡೆದ ಜಗಳದಲ್ಲಿ 21 ವರ್ಷದ ಯುವ ಅಂಪೈರ್ ಅಜಿತ್ ಬಾಬು ಬರ್ಬರವಾಗಿ ಕೊಲೆಯಾಗಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Read Full Story

09:20 AM (IST) Apr 07

ಇರಾನ್‌ ಜತೆ ಸೇರಿ ಹೋರ್ಮುಜ್ ಮೇಲೆ ಚೀನಾ ನಿಯಂತ್ರಣ - ತಜ್ಞರ ಅಭಿಮತ

ಮಧ್ಯಪ್ರಾಚ್ಯ ಸಂಘರ್ಷದ ಲಾಭ ಪಡೆದು, ಇರಾನ್ ಜೊತೆಗೂಡಿ ಹೋರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಚೀನಾ ಯತ್ನಿಸುತ್ತಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಚೀನಾದ ವ್ಯೂಹಾತ್ಮಕ ಅಧಿಕಾರದ ಹೋರಾಟವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read Full Story

More Trending News