LIVE NOW
Published : Oct 26, 2026, 05:21 AM ISTUpdated : Oct 26, 2026, 05:59 AM IST

India Latest News Live: ಬಂಗಾಳಕೊಲ್ಲಿಯಲ್ಲಿ ಭೀಕರ ವಾಯುಭಾರ ಕುಸಿತ; ಅ. 28ರಂದು ಕರಾವಳಿಗೆ ಚಂಡಮಾರುತ ಎಂಟ್ರಿ

ಸಾರಾಂಶ

ನವದೆಹಲಿ: ’ಎಸ್‌ಐಆರ್‌ ವಿರುದ್ಧ ವಿಪಕ್ಷಗಳ ಹೋರಾಟ ಮುಂದುವರೆದಿದ್ದು ನ.1ಕ್ಕೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಕೂಟ ಬೃಹತ್‌ ಪ್ರತಿಭಟನೆ ಆಯೋಜಿಸಿದೆ. ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟಿಸಿರುವ ರಾಹುಲ್‌, ‘ಮತ ಉಳಿಸಿ- ದೇಶ ಉಳಿಸಿ ಬೃಹತ್‌ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ನ.1ಕ್ಕೆ ಎಲ್ಲರೂ ದೆಹಲಿಗೆ ಹೋಗೋಣ. ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ನಾಯಕರು ಹೀಗೆ ಯಾರೇ ಆಗಿರಲಿ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿಯುಳ್ಳವರು ಬನ್ನಿ’ ಎಂದಿದ್ದಾರೆ.

ಇದೇ ವೇಳೆ ರಾಹುಲ್‌, ‘ಈ ಸಭೆ ಬಗ್ಗೆ ಅತ್ಯಂತ ಉತ್ಸಾಹದಿಂದ ಪ್ರಚಾರ ಮಾಡುತ್ತಾ ಹೆಚ್ಚು ಹೆಚ್ಚು ಜನರಿಗೆ ತಲುಪಿಸುತ್ತಿರುವ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಹೃತ್ಪೂರ್ವಕ ಧನ್ಯವಾದಗಳು’ ಎಂದು ವ್ಯಂಗ್ಯವಾಡಿದ್ದಾರೆ.

05:59 AM (IST) Oct 26

ಬಂಗಾಳಕೊಲ್ಲಿಯಲ್ಲಿ ಭೀಕರ ವಾಯುಭಾರ ಕುಸಿತ; ಅ. 28ರಂದು ಕರಾವಳಿಗೆ ಚಂಡಮಾರುತ ಎಂಟ್ರಿ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅಕ್ಟೋಬರ್ 28ರಂದು ಭೀಕರ ಚಂಡಮಾರುತವಾಗಿ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಆಂಧ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗಲಿದ್ದು, ಕೇರಳದಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story

05:28 AM (IST) Oct 26

ಯುರೋಪ್‌ನ 5 ದೇಶಗಳಲ್ಲಿ ವೀಕೆಂಡ್‌ ದಂಗೆ; ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಅಂಗಡಿ ಲೂಟಿ

ಬೆಲೆ ಏರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಯುರೋಪ್‌ನಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ ಹಲವು ದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸಾವಿರಾರು ಜನರನ್ನು ವಶಕ್ಕೆ ಪಡೆಯಲಾಗಿದೆ. ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿ, ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ.
Read Full Story

More Trending News