ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಧರ್ಮನ್’ ಸಿನಿಮಾಗೆ ಲೇಡಿ ಸೂಪರ್ಸ್ಟಾರ್ ನಯನತಾರಾ ಸೇರ್ಪಡೆಯಾಗಿದ್ದಾರೆ. ‘ಅಣ್ಣಾತ್ತೆ’ ಬಳಿಕ ಐದು ವರ್ಷಗಳ ನಂತರ ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ.
ರಜನಿಕಾಂತ್ ನಟನೆಯ ಬಹುನಿರೀಕ್ಷಿತ 'ಧರ್ಮನ್' ಚಿತ್ರಕ್ಕೆ ನಯನತಾರಾ ಸೇರ್ಪಡೆಯಾಗಿದ್ದಾರೆ. 'ಅಣ್ಣಾತ್ತೆ' ಬಳಿಕ ಐದು ವರ್ಷಗಳ ನಂತರ ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರಕ್ಕೆ ಅಶ್ವಥ್ ಮಾರಿಮುತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಧರ್ಮನ್' ಬಳಗ ಸೇರಿದ ನಯನತಾರಾ
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಧರ್ಮನ್' ಸಿನಿಮಾಗೆ ಈಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಎಂಟ್ರಿ ಕೊಟ್ಟಿದ್ದಾರೆ. 2021ರಲ್ಲಿ ಬಂದ 'ಅಣ್ಣಾತ್ತೆ' ಚಿತ್ರದ ನಂತರ, ಬರೋಬ್ಬರಿ ಐದು ವರ್ಷಗಳ ಗ್ಯಾಪ್ ಬಳಿಕ ಈ ಹಿಟ್ ಜೋಡಿ ಮತ್ತೆ ತೆರೆಮೇಲೆ ಒಂದಾಗುತ್ತಿದೆ. ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಎಕ್ಸ್ (X) ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ. "ದಿ ಆರಾ ಈಸ್ ಡಬಲ್... ಧರ್ಮನ್ ಚಿತ್ರಕ್ಕೆ ನಯನತಾರಾ ಅವರನ್ನು ಸ್ವಾಗತಿಸುತ್ತಿದ್ದೇವೆ" ಎಂದು ಬರೆದುಕೊಂಡಿದೆ.
ಹಿಂದಿನ ಸಿನಿಮಾಗಳು ಮತ್ತು ಪಾತ್ರದ ಗುಟ್ಟು
ನಯನತಾರಾ ಮತ್ತು ರಜನಿಕಾಂತ್ ಕಾಂಬಿನೇಷನ್ ಪ್ರೇಕ್ಷಕರಿಗೆ ಹೊಸದೇನಲ್ಲ. 'ಚಂದ್ರಮುಖಿ' (2005), 'ಕುಚೇಲನ್' (2008), 'ದರ್ಬಾರ್' (2020) ಹಾಗೂ 'ಅಣ್ಣಾತ್ತೆ' (2021) ಚಿತ್ರಗಳಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ, ಹೊಸ ಚಿತ್ರದಲ್ಲಿ ನಯನತಾರಾ ಪಾತ್ರವೇನು ಮತ್ತು ಕಥೆ ಹೇಗಿರಲಿದೆ ಎಂಬ ಗುಟ್ಟನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.
ಚಿತ್ರತಂಡ ಮತ್ತು ರಿಲೀಸ್ ಪ್ಲಾನ್
ನಟ, ನಿರ್ದೇಶಕ ಕಮಲ್ ಹಾಸನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅಶ್ವಥ್ ಮಾರಿಮುತ್ತು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲೇ ಶೂಟಿಂಗ್ ಶುರುವಾಗಿದ್ದು, ಈಗಾಗಲೇ ಹಲವು ಹಂತದ ಚಿತ್ರೀಕರಣ ಮುಗಿದಿದೆ. ರಿಲೀಸ್ ಡೇಟ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, 2027ರ ಪೊಂಗಲ್ ಹಬ್ಬದ ಹೊತ್ತಿಗೆ ಸಿನಿಮಾ ಥಿಯೇಟರ್ಗೆ ಬರುವ ಸಾಧ್ಯತೆ ಇದೆ. ಸಿಮ್ರಾನ್, ರಾಶಿ ಖನ್ನಾ ಮತ್ತು ಶ್ರೀಲೀಲಾ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಖಳನಾಯಕನ ಪಾತ್ರಕ್ಕೆ ರಾಮ್ ಪೋತಿನೇನಿ ಅವರನ್ನು ಕೇಳಲಾಗಿದೆಯಂತೆ, ಆದರೆ ಅಧಿಕೃತವಾಗಿ ಕನ್ಫರ್ಮ್ ಆಗಿಲ್ಲ.
ತಾಂತ್ರಿಕ ವರ್ಗ
ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡುತ್ತಿದ್ದಾರೆ. ನಿಕೇತ್ ಬೊಮ್ಮಿರೆಡ್ಡಿ ಕ್ಯಾಮೆರಾ ವರ್ಕ್, ಪ್ರದೀಪ್ ಇ ರಾಘವ್ ಎಡಿಟಿಂಗ್ ಹಾಗೂ ಅನ್ಬರಿವ್ ಜೋಡಿ ಸ್ಟಂಟ್ಸ್ ಜವಾಬ್ದಾರಿ ಹೊತ್ತಿದ್ದಾರೆ. ನಿರ್ದೇಶಕ ಅಶ್ವಥ್ ಮಾರಿಮುತ್ತು ಈ ಹಿಂದೆ 'ಓ ಮೈ ಕಡವುಳೆ' (2020) ಮತ್ತು 'ಡ್ರ್ಯಾಗನ್' ನಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.







