Published : May 26, 2026, 07:50 AM ISTUpdated : May 26, 2026, 11:49 PM IST

India Latest News Live: RCB vs GT Qualifier 1 - ಪ್ಲೇ ಆಫ್‌ ಇತಿಹಾಸದಲ್ಲೇ ಗರಿಷ್ಠ ಸ್ಕೋರ್‌ ದಾಖಲಿಸಿ, ಭರ್ಜರಿ ಗೆಲುವಿನೊಂದಿಗೆ ಫೈನಲ್‌ಗೇರಿದ ಆರ್‌ಸಿಬಿ

ಸಾರಾಂಶ

ಅತ್ತ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆಗೆ ಜಾರಿಗೆ ಚುರುಕು ನೀಡಿರುವ ಹೊತ್ತಿನಲ್ಲೇ, ಇತ್ತ ಯೋಜನೆ ವಿರುದ್ಧ ಕಾನೂನು ಹೋರಾಟ ತೀವ್ರಗೊಳಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌, ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಸರ್ಕಾರ ಯಾವುದೇ ಆಕ್ಷೇಪ ಎತ್ತುವಂತಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಡಿಎಂಕೆ ನಾಯಕ ಕೆ.ಎನ್. ನೆಹರು ‘ಡಿಕೆಶಿ ನೀಡಿರುವ ಹೇಳಿಕೆ ಅವರ ದುರಂಹಕಾರದ ಮನೋಭಾವ ತೋರಿಸುತ್ತದೆ. ತಮಿಳುನಾಡಿನಲ್ಲಿ ದುರ್ಬಲ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಭಾವಿಸಿ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಕೂಡ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದರಿಂದ ಯಾವುದೇ ವಿರೋಧ ಇರುವುದಿಲ್ಲ ಎಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

RCB vs GT IPL 2026 Qualifier 1

11:49 PM (IST) May 26

RCB vs GT Qualifier 1 - ಪ್ಲೇ ಆಫ್‌ ಇತಿಹಾಸದಲ್ಲೇ ಗರಿಷ್ಠ ಸ್ಕೋರ್‌ ದಾಖಲಿಸಿ, ಭರ್ಜರಿ ಗೆಲುವಿನೊಂದಿಗೆ ಫೈನಲ್‌ಗೇರಿದ ಆರ್‌ಸಿಬಿ

ಐಪಿಎಲ್‌ 2026 ರ ಕ್ವಾಲಿಫೈಯರ್‌ 1 ಪಂದ್ಯದಲ್ಲಿ, ರಜತ್ ಪಾಟೀದಾರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 254 ರನ್‌ಗಳ ದಾಖಲೆಯ ಮೊತ್ತ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ.
Read Full Story

10:46 PM (IST) May 26

ಅಬ್ಬಬ್ಬಾ! ಶಿವಣ್ಣ ಕಣ್ಣುಗಳು ಎಷ್ಟು ಫವರ್‌ಫುಲ್‌ ಡೇಂಜರ್‌ ಗೊತ್ತಾ? - ಜಾನ್ವಿ ಕಪೂರ್‌ ಮಾತು ವೈರಲ್

ರಾಮ್‌ಚರಣ್‌ ತೇಜ ನಟನೆಯ ‘ಪೆದ್ದಿ’ ಚಿತ್ರಕ್ಕೆ ನಾಯಕಿಯಾಗಿರುವ ಜಾನ್ವಿ ಚಿತ್ರತಂಡದ ಜೊತೆಗೆ ಬೆಂಗಳೂರಿಗೆ ಬಂದಿದ್ದರು. ನೂರಾರು ಮಂದಿ ಅಭಿಮಾನಿಗಳ ಸಮ್ಮುಖದಲ್ಲಿ ಜಾನ್ವಿ ಕಪೂರ್‌, ಶಿವಣ್ಣ ಬಗ್ಗೆ ಮಾತನಾಡಿದರು.

Read Full Story

10:09 PM (IST) May 26

ಮದುವೆ ಮಂಟಪದಲ್ಲೇ ವಧು-ವರರ ರೊಮಾನ್ಸ್​ - ದಂಗಾದ ಪುರೋಹಿತರು- ವಿಡಿಯೋ ವೈರಲ್

ಮದುವೆ ಮಂಟಪದಲ್ಲಿ ವಧು-ವರರು ರೊಮ್ಯಾಂಟಿಕ್ ಆಗಿ ಕಿಸ್ ಮಾಡಲು ಮುಂದಾದಾಗ, ಪುರೋಹಿತರು ಮಧ್ಯ ಪ್ರವೇಶಿಸಿ ಅವರನ್ನು ತಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುರೋಹಿತರ ನಡೆ ಸರಿ-ತಪ್ಪಿನ ಚರ್ಚೆಗೆ ಕಾರಣವಾಗಿದೆ.
Read Full Story

09:39 PM (IST) May 26

Karna Serial - ನಿತ್ಯಾ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ - ತೇಜಸ್​ಗೆ ಮದ್ವೆ ಆಗೋಯ್ತು- ನಿತ್ಯಾ ಇನ್ನು ವಿಲನ್​?

ಕರ್ಣ ಮತ್ತು ನಿಧಿ ಮದುವೆಯಾಗಿ ಒಂದಾಗಿದ್ದಾರೆ. ಆದರೆ, ಅತ್ತ ತೇಜಸ್ ಬೇರೊಬ್ಬಳನ್ನು ಮದುವೆಯಾಗಿ ನಿತ್ಯಾಳಿಗೆ ಕೈಕೊಟ್ಟಿದ್ದಾನೆ. ಇದರಿಂದ ಒಂಟಿಯಾದ ನಿತ್ಯಾ, ಕರ್ಣ-ನಿಧಿ ಬಾಳಲ್ಲಿ ವಿಲನ್ ಆಗಿ ಎಂಟ್ರಿ ಕೊಡುತ್ತಾಳಾ ಎಂಬ ಕುತೂಹಲ ಮೂಡಿದೆ.
Read Full Story

09:01 PM (IST) May 26

ಫಾರ್ಚೂನರ್‌ಗೆ ನಡುಕ ಹುಟ್ಟಿಸಲು ಬಂತು ಎಂಜಿ ‘ಮೆಜೆಸ್ಟರ್’ - ಭಾರತದಲ್ಲೇ ಉತ್ಪಾದನೆ ಆರಂಭ, ಬುಕಿಂಗ್ ಕೂಡ ಓಪನ್!

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ, ಟೊಯೋಟಾ ಫಾರ್ಚೂನರ್‌ಗೆ ಪ್ರತಿಸ್ಪರ್ಧಿಯಾಗಿ ತನ್ನ ಅತಿದೊಡ್ಡ ಮತ್ತು ಶಕ್ತಿಶಾಲಿ ಎಸ್‌ಯುವಿ 'ಎಂಜಿ ಮೆಜೆಸ್ಟರ್' ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗುಜರಾತ್‌ನಲ್ಲಿ ಉತ್ಪಾದನೆ ಆರಂಭವಾಗಿದ್ದು, ಪ್ರೀ-ಬುಕಿಂಗ್ ಪ್ರಕ್ರಿಯೆ ಶುರುವಾಗಿದೆ. 

Read Full Story

07:45 PM (IST) May 26

ವಿಂಡ್ ಫ್ಯಾನ್, ಸೋಲಾರ್ ಆದಾಯ ರೈತರಿಗೆ ಸಿಕ್ಕರೆ ಗದಗ ದೇಶದಲ್ಲೇ ನಂ.1 - ಸಚಿವ ಎಚ್.ಕೆ.ಪಾಟೀಲ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಜಿಲ್ಲೆಗಳ ನೈಸರ್ಗಿಕ ಸಂಪನ್ಮೂಲಗಳಿಂದ ಸಿಗುವ ಆದಾಯ ಸ್ಥಳೀಯ ರೈತರಿಗೆ ದೊರೆತಿಲ್ಲ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Read Full Story

07:27 PM (IST) May 26

ಕ್ವಾಲಿಫೈಯರ್ 1, ಗುಜರಾತ್ ಟೈಟಾನ್ಸ್ ವಿರುದ್ಧ ಟಾಸ್ ಸೋತ ಆರ್‌ಸಿಬಿ, ತಂಡದ ಬದಲಾವಣೆ ಏನು?

ಐಪಿಎಲ್ 2026 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿನ ಬದಲಾವಣೆ ಏನು? ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಯಾರಿದ್ದಾರೆ.

 

Read Full Story

06:27 PM (IST) May 26

Ope. Safed sagar - ಆಗಸದಿಂದ ಭಾರತದ ಬೆಂಕಿ ಮಳೆ- ಪಾಕಿಗಳ ಹುಟ್ಟಡಗಿಸಿದ್ದ ಯೋಧರು

1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಪಾಕಿಸ್ತಾನಿ ಪಡೆಗಳು ದುರ್ಗಮ ಶಿಖರಗಳನ್ನು ಆಕ್ರಮಿಸಿಕೊಂಡಿದ್ದವು. ಆರಂಭಿಕ ಹಿಂಜರಿಕೆಯ ನಂತರ, ಭಾರತೀಯ ವಾಯುಪಡೆಯು 'ಆಪರೇಷನ್ ಸಫೇದ್ ಸಾಗರ್' ಅನ್ನು ಪ್ರಾರಂಭಿಸಿ, ಅತಿ ಎತ್ತರದಲ್ಲಿ ವೈಮಾನಿಕ ದಾಳಿ ನಡೆಸಿ ಶತ್ರು ನೆಲೆಗಳನ್ನು ಧ್ವಂಸಗೊಳಿಸಿತು. ಈ ಕಾರ್ಯಾಚರಣೆಯು ಭಾರತದ ಅಂತಿಮ ವಿಜಯಕ್ಕೆ ನಿರ್ಣಾಯಕವಾಯಿತು.
Read Full Story

06:04 PM (IST) May 26

ಇನ್‌ಸ್ಟಾಗ್ರಾಂ ಮೆಸೇಜ್‌ನಿಂದ ಶುರುವಾದ ಕಥೆ - ಕೊನೆಗೆ ಆರ್ಥಿಕ ವಂಚನೆ? ಆ ಗಾಯಕಿ ಹೇಳಿದಿಷ್ಟು..

ಬ್ಯುಸಿನೆಸ್ ಪ್ರಪೋಸಲ್ ಅಂತ ಮೊದಲು ನನ್ನನ್ನು ಸಂಪರ್ಕಿಸಿದ್ದು ಇನ್‌ಸ್ಟಾಗ್ರಾಂ ಮೂಲಕ. ಆಮೇಲೆ ನಡೆದಿದ್ದೇ ಬೇರೆ  ಎಂದು ಗಾಯಕಿ ಮತ್ತು ಉದ್ಯಮಿ ಅಭಿರಾಮಿ ಸುರೇಶ್ ಹೇಳಿಕೊಂಡಿದ್ದಾರೆ.

Read Full Story

05:44 PM (IST) May 26

ಕರೆಂಟ್ ಬಿಲ್ ಏಕಾಏಕಿ ಜಾಸ್ತಿಯಾಗಿದೆಯಾ? ಫ್ರಿಡ್ಜ್ ಬಳಕೆಯಲ್ಲಿ ಈ ತಪ್ಪುಗಳಿದೆಯೇ ನೋಡಿ!

ನಿಮ್ಮ ಮನೆಯ ಫ್ರಿಡ್ಜ್ ಸರಿಯಾಗಿ ಕೂಲ್ ಆಗ್ತಿಲ್ವಾ? ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಹಾಗಿದ್ರೆ ನೀವು ತಿಳಿಯದೆ ಮಾಡುವ ಈ ತಪ್ಪುಗಳೇ ಕಾರಣವಿರಬಹುದು. ಬಿಸಿ ಆಹಾರವನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಡುವುದರಿಂದ ಕಂಪ್ರೆಸರ್‌ಗೆ ಹೆಚ್ಚು ಒತ್ತಡ ಬೀಳುತ್ತದೆ.

Read Full Story

05:43 PM (IST) May 26

ಕೊಹ್ಲಿ ಜೊತೆಗಿನ ವೈರಲ್‌ ವಿಡಿಯೋ ಸೇರಿದಂತೆ 200 Instagram ಪೋಸ್ಟ್‌ ಡಿಲೀಟ್‌ ಮಾಡಿದ ಟೀಮ್‌ ಇಂಡಿಯಾ ಕ್ರಿಕೆಟಿಗ

ಪಂಜಾಬ್ ಕಿಂಗ್ಸ್ ವೇಗಿ ಅರ್ಶ್‌ದೀಪ್ ಸಿಂಗ್, ಐಪಿಎಲ್ 2026ರ ಕಳಪೆ ಪ್ರದರ್ಶನದ ನಂತರ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ವಿರಾಟ್ ಕೊಹ್ಲಿ ಜೊತೆಗಿನ ವೈರಲ್ ವಿಡಿಯೋ ಸೇರಿದಂತೆ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ದಿಢೀರ್ ಅಳಿಸಿಹಾಕಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.

Read Full Story

05:32 PM (IST) May 26

ಪದ್ಮಶ್ರೀ ಪುರಸ್ಕೃತೆಯಿಂದ ಐಶ್ಚರ್ಯ ರೈ ಬಾಡಿ ಶೇಮಿಂಗ್ - ಯಾರೀ ಮೃಣಾಲ್​? ಪ್ರಶಸ್ತಿ ಸಿಕ್ಕಿದ್ದು ಹೇಗೆ

ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಐಶ್ವರ್ಯ ರೈ ಅವರ ದೇಹದ ತೂಕದ ಬಗ್ಗೆ ಪದ್ಮಶ್ರೀ ಪುರಸ್ಕೃತೆ ಮೃಣಾಲ್ ಪಾಂಡೆ ಟೀಕಿಸಿದ್ದಾರೆ. ಈ ಬಾಡಿ ಶೇಮಿಂಗ್​ ಹೇಳಿಕೆಯಿಂದಾಗಿ ಪಾಂಡೆ ತೀವ್ರ ಟೀಕೆಗೆ ಗುರಿಯಾಗಿದ್ದು, ನಟಿ ಕಂಗನಾ ರಣಾವತ್ ಐಶ್ವರ್ಯಾ ಪರವಾಗಿ ಧ್ವನಿ ಎತ್ತಿದ್ದಾರೆ.
Read Full Story

05:26 PM (IST) May 26

'ಪೆದ್ದಿ' ಚಿತ್ರಕ್ಕೆ ರಾಮ್ ಚರಣ್‌ಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತಾ? ಶಿವಣ್ಣ ಹೇಳಿದ ಮಾತು ವೈರಲ್

ಮೆಗಾ ಪವರ್ ಸ್ಟಾರ್ ರಾಮ್ ಚರಣ್‌ ನಟನೆಯ 'ಪೆದ್ದಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಶಿವರಾಜ್‌ಕುಮಾರ್, ಈ ಚಿತ್ರದ ನಟನೆಗೆ ರಾಮ್ ಚರಣ್‌ಗೆ ರಾಷ್ಟ್ರ ಪ್ರಶಸ್ತಿ ಸಿಗುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ.

Read Full Story

04:56 PM (IST) May 26

Viral Video - ಗಂಡು ಮಗು ಬೇಕೆಂದು 6ನೇ ಬಾರಿಗೆ ಗರ್ಭಿಣಿಯಾದ 22ರ ಯುವತಿ - ಆದ್ರೆ ವೈದ್ಯರು ಹೇಳಿದ್ದೇ ಬೇರೆ!

22 ವರ್ಷದ ಯುವತಿಯೊಬ್ಬಳು ಈಗಾಗಲೇ ಐದು ಮಕ್ಕಳ ತಾಯಿ. ನಾಲ್ವರು ಹೆಣ್ಣು ಮತ್ತು ಒಬ್ಬ ಮಗನಿದ್ದರೂ, ಮತ್ತೊಬ್ಬ ಗಂಡು ಮಗುವಿಗಾಗಿ 6ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ.

Read Full Story

04:52 PM (IST) May 26

FIFA ವಿಶ್ವಕಪ್ ಟೂರ್ನಿಗೆ ಸ್ಪೇನ್ ತಂಡ ಪ್ರಕಟ - ಬರೋಬ್ಬರಿ 92 ವರ್ಷಗಳ ದಾಖಲೆ ಮುರಿದ ಕೋಚ್!

ಫಿಫಾ ವಿಶ್ವಕಪ್‌ಗಾಗಿ ಸ್ಪೇನ್ ತಂಡವನ್ನು ಪ್ರಕಟಿಸಲಾಗಿದ್ದು, 92 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಿಯಲ್ ಮ್ಯಾಡ್ರಿಡ್‌ನ ಯಾವುದೇ ಆಟಗಾರನಿಗೆ ಸ್ಥಾನ ನೀಡಿಲ್ಲ. ಕೋಚ್ ಲೂಯಿಸ್ ಫ್ಯುವೆಂಟೆ ಅವರ ಈ ನಿರ್ಧಾರವು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ತಂಡದಲ್ಲಿ ಬಾರ್ಸಿಲೋನಾದ 7 ಆಟಗಾರರು ಸ್ಥಾನ ಪಡೆದಿದ್ದಾರೆ.
Read Full Story

04:51 PM (IST) May 26

41ನೇ ವಯಸ್ಸಿಗೆ ನೈಜವಾಗಿ ಇಬ್ಬರು ಮಕ್ಕಳಿಗೆ ಜನ್ಮಕೊಟ್ಟ ಖ್ಯಾತ ಧಾರಾವಾಹಿ ನಟಿ!

Actor vivek dahiya and divyanka tripathi: ಯೇ ಹೈ ಮೊಹಬತೇ ಧಾರಾವಾಹಿ ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ದಿವ್ಯಾಂಕಾ ಮನೆಗೆ ಅವಳಿ ಗಂಡು ಮಕ್ಕಳು ಬಂದಿದ್ದಾರೆ.

 

Read Full Story

04:32 PM (IST) May 26

ಕೇರಳ ಲಾಟರಿ ಫಲಿತಾಂಶ - 1 ಕೋಟಿ ಜಾಕ್‌ಪಾಟ್ ಹೊಡೆದ ಅದೃಷ್ಟವಂತ ಯಾರು? ಇಲ್ಲಿದೆ ವಿನ್ನರ್ಸ್ ಲಿಸ್ಟ್

ಕೇರಳ ರಾಜ್ಯ ಲಾಟರಿ ಇಲಾಖೆಯು, ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಸ್ತ್ರೀ ಶಕ್ತಿ SS-521 ಲಾಟರಿ ಫಲಿತಾಂಶವನ್ನು ಇಂದು, ಅಂದರೆ ಮೇ 26, 2026ರಂದು ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯದ ಸಾವಿರಾರು ಜನರು ವಿಜೇತ..

Read Full Story

04:27 PM (IST) May 26

ಹಿಂದೂಗಳಿಗೆ ನೀರಿಲ್ಲದೆ ಹೋಳಿ ಆಚರಿಸಿ ಅಂತೀರಲ್ಲ, ಮುಸ್ಲಿಮರು ಬಕ್ರೀದ್‌ಗೆ ವರ್ಚುವಲ್‌ ಆಗಿ ಕುರಿ ಬಲಿ ಕೊಡಿ - ನಿತೇಶ್‌ ರಾಣೆ

ಬಕ್ರೀದ್ ಹಬ್ಬದಂದು ಪ್ರಾಣಿ ಬಲಿ ಬದಲು ಎಐ ಬಳಸಿ ವರ್ಚುವಲ್ ಬಲಿ ನೀಡಿ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಸಲಹೆ ನೀಡಿದ್ದಾರೆ. ಹಿಂದೂ ಹಬ್ಬಗಳಿಗೆ ಪರಿಸರಸ್ನೇಹಿ ಸಲಹೆ ನೀಡುವಂತೆ ಬಕ್ರೀದ್‌ಗೂ ನೀಡಿದ್ದು, ಈ ಹೇಳಿಕೆಯು ಮುಸ್ಲಿಂ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿ ರಾಜಕೀಯ ವಿವಾದ ಸೃಷ್ಟಿಸಿದೆ.
Read Full Story

04:27 PM (IST) May 26

ಕೇವಲ 5 ರೂಗೆ ಮೀನೂಟ, ಮಹಿಳೆಯರಿಗೆ ತಿಂಗಳಿಗೆ 3000 ರೂ, ಬಂಗಾಳದಲ್ಲಿ ಬಿಜೆಪಿ ಬಂಪರ್

ಭರ್ಜರಿ ಮೀನೂಟಕ್ಕೆ ಕೇವಲ 5 ರೂಪಾಯಿ ಮಾತ್ರ. ಇನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ 3000 ರೂಪಾಯಿ ಜಮೆ ಆಗಲಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಬಂಪರ್ ಕೊಡುಗೆ ಘೋಷಿಸಿದ್ದಾರೆ.

Read Full Story

04:17 PM (IST) May 26

ಶಬರಿಮಲೆ ಚಿನ್ನ ಕಳವು ಪ್ರಕರಣ - ತನಿಖಾ ತಂಡಕ್ಕೆ ಹೈಕೋರ್ಟ್ ತರಾಟೆ, ತಂತ್ರಿ ಜಾಮೀನು ರದ್ದು ಮಾಡಲು ನಕಾರ

ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ತನಿಖಾ ತಂಡವನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ತಂತ್ರಿ ಕಂಠರರ್ ರಾಜೀವರರ ಜಾಮೀನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ತಿಳಿಸಿದೆ.

Read Full Story

04:13 PM (IST) May 26

10 ವರ್ಷ ಬಾಲೆಯ ಗ್ಯಾಂಗ್​ರೇ*ಪ್​, ಮರ್ಡರ್​ ಸುದ್ದಿಗೋಷ್ಠಿಯಲ್ಲಿ ಬಿದ್ದೂ ಬಿದ್ದೂ ನಕ್ಕ ಪೊಲೀಸ್​ ಅಧಿಕಾರಿ

ಕೊಯಮತ್ತೂರಿನಲ್ಲಿ ಹತ್ತು ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅ*ತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ನಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಧಿಕಾರಿ ಕೀರ್ತನಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Read Full Story

04:11 PM (IST) May 26

ಗುಜರಾತ್ ಟೈಟಾನ್ಸ್ ಎದುರಿನ ಹೈವೋಲ್ಟೇಜ್‌ ಮ್ಯಾಚ್‌ಗೂ ಮೊದಲು ಕೊಹ್ಲಿ ವಿಚಾರವಾಗಿ ಶುರುವಾಯ್ತು ಆರ್‌ಸಿಬಿಗೆ ಹೊಸ ಟೆನ್ಶನ್!

Virat Kohli Playoff Stats: 2026ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅತ್ಯದ್ಭುತವಾಗಿದೆ. ಇದೀಗ ಆರ್‌ಸಿಬಿ ತಂಡವಿಂದು ಕ್ವಾಲಿಫೈಯರ್-1 ಪಂದ್ಯಕ್ಕೆ ಸಜ್ಜಾಗಿದೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ವಿಚಾರವಾಗಿ ಆರ್‌ಸಿಬಿ ತಂಡಕ್ಕೆ ಹೊಸ ತಲೆನೋವು ಶುರುವಾಗಿದೆ.

 

Read Full Story

04:04 PM (IST) May 26

ಓಲಾ, ಉಬರ್‌ಗೆ ಇವಿ ದೈತ್ಯ ವಿನ್‌ಫಾಸ್ಟ್ ಟಕ್ಕರ್ - ಭಾರತದಲ್ಲಿ ಲಾಂಚ್ ಆಗ್ತಿದೆ ‘ಗ್ರೀನ್ ಎಸ್‌ಎಂ’ ಎಲೆಕ್ಟ್ರಿಕ್ ಟ್ಯಾಕ್ಸಿ!

ವಿಯೆಟ್ನಾಂನ 'ವಿನ್‌ಫಾಸ್ಟ್' ಕಂಪನಿಯು 'ಗ್ರೀನ್ ಎಸ್‌ಎಂ' ಹೆಸರಿನಲ್ಲಿ ಭಾರತದಲ್ಲಿ ತನ್ನದೇ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸುತ್ತಿದೆ. ಕಂಪನಿಯೇ ನಿರ್ವಹಿಸುವ ಈ ಸೇವೆಯು ದೆಹಲಿ-ಎನ್‌ಸಿಆರ್‌ನಿಂದ ಆರಂಭವಾಗಿ, ಓಲಾ-ಉಬರ್‌ಗೆ ಪೈಪೋಟಿ ನೀಡಲು ಆಕ್ರಮಣಕಾರಿ ದರ ನಿಗದಿಪಡಿಸುವ ಗುರಿ ಹೊಂದಿದೆ.
Read Full Story

03:16 PM (IST) May 26

IPL ಕ್ವಾಲಿಫೈಯರ್-1 ಪಂದ್ಯಕ್ಕೂ ಗುಜರಾತ್ ಟೈಟಾನ್ಸ್‌ ತಂಡಕ್ಕೆ ಖಡಕ್ ವಾರ್ನಿಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್

ಐಪಿಎಲ್ 2026ರ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಸೆಣಸಾಡಲಿವೆ. ಪಂದ್ಯಕ್ಕೂ ಮುನ್ನ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ತಮ್ಮ ತಂಡ ಒತ್ತಡವನ್ನು ಮೆಟ್ಟಿ ನಿಲ್ಲಲು ಸಿದ್ಧವಾಗಿದೆ ಎಂದು ಗುಜರಾತ್‌ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೌಲಿಂಗ್ ವಿಭಾಗವೇ ತಂಡದ ಪ್ರಮುಖ ಅಸ್ತ್ರ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read Full Story

02:40 PM (IST) May 26

ಕಡಿಮೆ ಟೈಮ್‌ನಲ್ಲೇ ಸಿಎಂ ವಿಜಯ್‌ ದಳಪತಿ ಸರ್ಕಾರದ ಹಗರಣ ಬಯಲಿಗೆಳೆದ ನಟ ಉದಯನಿಧಿ ಸ್ಟಾಲಿನ್!‌

Actor thalapathy vijay News: ಬೆಳೆ ಸಾಲ ಮನ್ನಾ ವಿಚಾರದಲ್ಲಿ ಟಿವಿ‌ಕೆ ಸರ್ಕಾರ ರೈತರಿಗೆ ಮೋಸ ಮಾಡಿದೆ ಎಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

01:47 PM (IST) May 26

ಗುಜರಾತ್ ಟೈಟಾನ್ಸ್ ಎದುರಿನ ಕ್ವಾಲಿಫೈಯರ್-1 ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಮೇಜರ್ ಚೇಂಜ್..! ಈ ಸ್ಟಾರ್ ಕ್ರಿಕೆಟಿಗ ಔಟ್

ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯದಲ್ಲಿ ಗೆದ್ದು ಫೈನಲ್‌ಗೇರಲು ಆರ್‌ಸಿಬಿ ತಂಡದಲ್ಲಿ ಒಂದು ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಆರ್‌ಸಿಬಿ ಸಂಭಾವ್ಯ ತಂಡ ಹೇಗಿರಲಿದೆ ನೋಡೋಣ ಬನ್ನಿ.

Read Full Story

12:49 PM (IST) May 26

ಮನೆಬಿಟ್ಟು ಹೋಗಿದ್ದ ಯುವಕ 20 ವರ್ಷ ಬಳಿಕ ಗುಜರಾತ್‌ನ ಕಾಳಿಕದೇವಿ ಮಠದದ ಸ್ವಾಮೀಜಿಯಾಗಿ ಪತ್ತೆ!

ಬಳ್ಳಾರಿಯ ಕುರುಗೋಡು ಪಟ್ಟಣದಿಂದ ಸುಮಾರು 20 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಶಂಕರಾಚಾರಿ ಎಂಬ ಯುವಕ, ಇದೀಗ ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಕಾಳಿಕಾದೇವಿ ಮಠದ ಸ್ವಾಮೀಜಿಯಾಗಿ ಪತ್ತೆಯಾಗಿದ್ದಾರೆ. ಪೋಷಕರ ಕೋರಿಕೆಯ ಮೇರೆಗೆ ಹುಟ್ಟೂರಿಗೆ ಮರಳುತ್ತಿದ್ದಾರೆ.

Read Full Story

12:26 PM (IST) May 26

ಡಿವೋರ್ಸ್​ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್​ ಪ್ರಶ್ನೆ

ಭಾರತದಲ್ಲಿ ಪ್ರತಿ 90 ನಿಮಿಷಕ್ಕೆ ಒಂದರಂತೆ ವರದಕ್ಷಿಣೆ ಸಾವು ಸಂಭವಿಸುತ್ತಿದ್ದು, ನಟಿ ತ್ವಿಷಾ ಶರ್ಮಾ ಪ್ರಕರಣವು ಈ ಕರಾಳ ಸತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ದೌರ್ಜನ್ಯ ಸಹಿಸಿಕೊಳ್ಳುವ ಬದಲು ವಿಚ್ಛೇದನ ಪಡೆಯುವುದು ಉತ್ತಮವೇ ಎಂಬ ಬಗ್ಗೆ ನ್ಯಾಯಾಲಯಗಳು ಮತ್ತು ಸಮಾಜದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಈ ಲೇಖನ ವಿಶ್ಲೇಷಿಸುತ್ತದೆ.
Read Full Story

12:08 PM (IST) May 26

IPL 2026 - ಪ್ಲೇ ಆಫ್‌ ತಲುಪಿರುವ ತಂಡಗಳಿಗೆ ಬಿಸಿಸಿಐನಿಂದು ಸಿಗುವ ನಗದು ಹಣ ಇಷ್ಟೊಂದಾ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಐಪಿಎಲ್ 2026ರ ಪ್ಲೇ ಆಫ್‌ಗೆ ಆರ್‌ಸಿಬಿ, ಗುಜರಾತ್, ಹೈದರಾಬಾದ್ ಮತ್ತು ರಾಜಸ್ಥಾನ ತಂಡಗಳು ಲಗ್ಗೆಯಿಟ್ಟಿವೆ. ಈ ಹಂತ ಪ್ರವೇಶಿಸಿದ ತಂಡಗಳಿಗೆ ಸಿಗುವ ನಗದು ಬಹುಮಾನದ ಮೊತ್ತ, ಹಾಗೂ 2008ರಿಂದ ಪ್ರೈಜ್ ಮನಿ ಹೇಗೆ ಹೆಚ್ಚಾಗಿದೆ ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.
Read Full Story

12:05 PM (IST) May 26

ಇದು ದೇಶದಲ್ಲೇ ಮೊದಲು, ಪೊಲೀಸರಿಂದ AI ಭಾಷಾಂತರ ಮೊಬೈಲ್ ಆ್ಯಪ್ ಬಿಡುಗಡೆ, ಠಾಣೆಯಲ್ಲಿ ಇನ್ನು ಮಾತು ಮೌನವಾಗದು!

ಹೈದರಾಬಾದ್ ನಗರ ಪೊಲೀಸರು 'AI-CopWriter' ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್, ದೂರುದಾರರು ಮತ್ತು ಪೊಲೀಸರ ನಡುವಿನ ಭಾಷೆಯ ಅಡೆತಡೆಗಳನ್ನು ನಿವಾರಿಸಿ, ವಿವಿಧ ಭಾಷೆಗಳಲ್ಲಿನ ದೂರುಗಳನ್ನು ನೈಜ ಸಮಯದಲ್ಲಿ ಅನುವಾದಿಸಿ, ದಾಖಲಾತಿ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕವಾಗಿಸುತ್ತದೆ.
Read Full Story

11:58 AM (IST) May 26

ಕಳ್ಳರ ಎದೆ ನಡುಗಿಸಿದ ಈ 'ಲೇಡಿ ಸಿಸಿಟಿವಿ'! ಇವಳ ಗುರಾಯಿಸಿದ್ರೆ ಮುಗೀತು ನಿಮ್​ ಕಥೆ

ಕಳ್ಳರನ್ನು ಸುಲಭವಾಗಿ ಪತ್ತೆಹಚ್ಚಲು ಮಹಿಳೆಯ ಆಕೃತಿಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸುವ ಹೊಸ ತಂತ್ರವನ್ನು ಪರಿಚಯಿಸಲಾಗಿದೆ. 'ನವೀನ ಸ್ಥಿರೀಕರಣ' ಎಂಬ ಮಾನಸಿಕ ತತ್ವವನ್ನು ಬಳಸಿ, ಈ ಅಸಾಮಾನ್ಯ ವಿನ್ಯಾಸವು ಕಳ್ಳರ ಗಮನವನ್ನು ಸೆಳೆದು, ಅವರ ಮುಖವನ್ನು ಸ್ಪಷ್ಟವಾಗಿ ಸೆರೆಹಿಡಿಯಲು ಸಹಾಯ ಮಾಡುತ್ತದೆ.
Read Full Story

11:23 AM (IST) May 26

ಕನ್ನಡದಲ್ಲಿ ಮಾತನಾಡಿ ಕರುನಾಡಿಗರ ಮನಗೆದ್ದ ಜಾಹ್ನವಿ ಕಪೂರ್​ - ಶ್ರೀದೇವಿ ಪುತ್ರಿಗೆ ಕನ್ನಡಿಗರು ಫಿದಾ

'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ನಟಿ ಜಾಹ್ನವಿ ಕಪೂರ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಅವರು, ರಾಮ್ ಚರಣ್ ಮತ್ತು ಶಿವರಾಜ್‌ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡರು 

Read Full Story

11:21 AM (IST) May 26

ಪತ್ನಿ ಜತೆ ತಾಜ್‌ಮಹಲ್‌ಗೆ ಅಮೆರಿಕ ವಿದೇಶಾಂಗ ಸಚಿವ ರುಬಿಯೋ ಭೇಟಿ, ಭಾರತದ ಇರಾನ್‌ ರಾಯಭಾರಿ ಕಚೇರಿ ವ್ಯಂಗ್ಯ!

ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ  ತಾಜ್ ಮಹಲ್ ಭೇಟಿಗೆ ಇರಾನ್ ವ್ಯಂಗ್ಯವಾಡಿದೆ, ತಾಜ್‌ಗೆ ಇರುವ ಇರಾನಿನ ನಂಟನ್ನು ನೆನಪಿಸಿ ಟ್ರಂಪ್ ಆಡಳಿತಕ್ಕೆ ತಿರುಗೇಟು ನೀಡಿದೆ.  ಇರಾನ್‌ನ ಇತಿಹಾಸ ಅಳಿಸಿಹಾಕುತ್ತೀವಿ ಎಂದವರೇ ಇದೀಗ ಅದೇ ಇತಿಹಾಸದ ಮುಂದೆ ನಿಂತಿದ್ದಾರೆ ಎಂದು ವ್ಯಂಗ್ಯ

Read Full Story

11:07 AM (IST) May 26

ಸಿಎಂ ಸಿದ್ದರಾಮಯ್ಯ ಜೊತೆ ಪರಂ ಒಟ್ಟಿಗೆ ದೆಹಲಿ ಪ್ರಯಾಣ; ದಲಿತ ಸಿಎಂ ಕಾರ್ಡ್ ಪ್ಲೇ ಆಗುತ್ತದಾ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ!

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಒಟ್ಟಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆ 'ಸಿಎಂ ಸ್ಥಾನಕ್ಕೆ ನಾನೂ ಸಿದ್ಧ' ಎಂದಿದ್ದ ಪರಮೇಶ್ವರ್, ಈಗ ಸಿಎಂ ಜೊತೆ ಹೈಕಮಾಂಡ್ ಭೇಟಿಗೆ ತೆರಳಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ತಂದಿದೆ.

Read Full Story

10:18 AM (IST) May 26

ಟೀಂ ಇಂಡಿಯಾದಲ್ಲಿನ ಆ ಬದಲಾವಣೆಗೆ ದ್ರಾವಿಡ್ ಕಾರಣ! ಗುಟ್ಟು ಬಿಚ್ಚಿಟ್ಟ ಮಾಜಿ ಕೋಚ್

ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಶೈಲಿಯನ್ನು ಬೌಲಿಂಗ್ ಕೋಚ್ ಆಗಿದ್ದ ಪರಸ್ ಮಾಂಬ್ರೆ ವಿವರಿಸಿದ್ದಾರೆ. ದ್ರಾವಿಡ್ ಅವರ ಪಾರದರ್ಶಕ ಸಂವಹನ, ನಾಯಕನಿಗೆ ನೀಡುತ್ತಿದ್ದ ಸ್ವಾತಂತ್ರ್ಯ ಮತ್ತು ತೆರೆಮರೆಯಲ್ಲಿನ ಪಾತ್ರವು ತಂಡದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಿ, 2024ರ ಟಿ20 ವಿಶ್ವಕಪ್ ಗೆಲುವಿಗೆ ಹೇಗೆ ಕಾರಣವಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

09:50 AM (IST) May 26

ಇರಾನ್‌ ಜತೆಗಿನ ಸಂಧಾನದ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ, ಒಬಾಮಾ ಮಾಡಿದಂತೆ ಮಾಡಲ್ಲ - ಟ್ರಂಪ್

ಇರಾನ್‌ ಜೊತೆಗಿನ ಮಾತುಕತೆ ಉತ್ತಮವಾಗಿ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಒಂದೋ ಅದ್ಭುತ ಒಪ್ಪಂದವಾಗಲಿದೆ ಅಥವಾ ಒಪ್ಪಂದವೇ ಆಗುವುದಿಲ್ಲ ಎಂದಿರುವ ಅವರು, ಅಬ್ರಹಾಂ ಅಕಾರ್ಡ್‌ಗೆ ಸಹಿ ಹಾಕುವಂತೆಯೂ ಒತ್ತಾಯಿಸಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಖಮೇನಿಯವರ ನಿರ್ಧಾರದಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.
Read Full Story

09:38 AM (IST) May 26

PHOTOS - ಅನೇಕ ವರ್ಷಗಳ ಬಳಿಕ ನಟ ಉಪೇಂದ್ರ ಮನೆಯಲ್ಲಿ ಮದುವೆ; ಎಂಗೇಜ್‌ ಆದ ನಟ ನಿರಂಜನ್‌ ಸುಧೀಂದ್ರ!

ನಟ ಉಪೇಂದ್ರ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದೆ. ಇವರ ಅಣ್ಣನ ಮಗ, ನಟ ನಿರಂಜನ್‌ ಸುಧೀಂದ್ರ ಅವರು ಎಂಗೇಜ್‌ ಆಗಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ನಡೆದ ಈ ನಿಶ್ಚಿತಾರ್ಥದ ಫೋಟೋಗಳು ಇಲ್ಲಿವೆ.

 

Read Full Story

09:34 AM (IST) May 26

ಮತ್ತೆ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ಖರೀದಿಗೆ ಭಾರತ ಸಜ್ಜು, ಭಾರತದಲ್ಲೇ 90 ವಿಮಾನ ನಿರ್ಮಾಣ

ಭಾರತೀಯ ವಾಯುಸೇನೆಯ ಬಲವರ್ಧನೆಗಾಗಿ, ಕೇಂದ್ರ ಸರ್ಕಾರವು ಫ್ರಾನ್ಸ್‌ನಿಂದ ಹೊಸದಾಗಿ 114 ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಈ ಪೈಕಿ ಹೆಚ್ಚಿನ ವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಮತ್ತು ಈ ವರ್ಷಾಂತ್ಯದೊಳಗೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ.
Read Full Story

09:28 AM (IST) May 26

West Asia conflict - ಭಾರತದ ಎಕಾನಮಿ ಉಳಿಸಲು 3F ಪ್ಲ್ಯಾನ್? ನಿರ್ಮಲಾ ಸೀತಾರಾಮನ್ ಹೇಳಿದ ಮಾತು ವೈರಲ್

ಪಶ್ಚಿಮ ಏಷ್ಯಾ ಸಂಘರ್ಷವು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಈ ಸವಾಲನ್ನು ಎದುರಿಸಲು ಸರ್ಕಾರವು ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ (3F) ಕ್ಷೇತ್ರಗಳ ಮೇಲೆ ಗಮನಹರಿಸಿದೆ. ನಾಗರಿಕರ ರಕ್ಷಿಸಲು ಮತ್ತು ಆರ್ಥಿಕ ಸ್ಥಿರತೆ ಕಾಪಾಡಲು 3F ಸೂತ್ರಗಳ ಬಗ್ಗೆ ಲೇಖನದಲ್ಲಿ ವಿವರಿಸಿದೆ.

Read Full Story

08:55 AM (IST) May 26

ವಿಜಯ್ 'ವಿಷಲ್‌' ಸದ್ದಿಗೆ ತಮಿಳುನಾಡು ರಾಜಕೀಯದಲ್ಲಿ ಕಂಪನ! ಅಣ್ಣಾಡಿಎಂಕೆ ಮತ್ತೊಂದು ಹೋಳು, 3 ಬಂಡಾಯ ಶಾಸಕರ ರಾಜೀನಾಮೆ

ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ 'ಆಪರೇಷನ್ ವಿಸಲ್' ಕಾರ್ಯಾಚರಣೆ ನಡೆಸಿ, ವಿರೋಧಿ ಬಣದ ಮೂವರು ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈ ಮೂವರು, ಟಿವಿಕೆ ಪಕ್ಷ ಸೇರಿ ಮರುಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯು ವಿಜಯ್ ಸರ್ಕಾರದ ಬಲವರ್ಧನೆಗೆ ಮತ್ತು ಅಣ್ಣಾಡಿಎಂಕೆ ಪಕ್ಷದ ಮತ್ತೊಂದು ಹೋಳಾಗುವಿಕೆಗೆ ಕಾರಣವಾಗಿದೆ.
Read Full Story

More Trending News