ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಒಟ್ಟಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆ 'ಸಿಎಂ ಸ್ಥಾನಕ್ಕೆ ನಾನೂ ಸಿದ್ಧ' ಎಂದಿದ್ದ ಪರಮೇಶ್ವರ್, ಈಗ ಸಿಎಂ ಜೊತೆ ಹೈಕಮಾಂಡ್ ಭೇಟಿಗೆ ತೆರಳಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ತಂದಿದೆ.

ಬೆಂಗಳೂರು (ಮೇ.26): ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಟ್ಟಿಗೇ ದೆಹಲಿಗೆ ತೆರಳಿದ್ದಾರೆ. ಸಿಎಂ ಗೃಹಸಚಿವರು ಜೊತೆಗೂಡಿ ದೆಹಲಿ ಪ್ರಯಾಣಿಸಿರುವುದು ಕಾಂಗ್ರೆಸ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಮೇಶ್ವರ್ ನಡೆ ಅಚ್ಚರಿ ಮೂಡಿಸಿದೆ

ಸರ್ಕಾರ ರಚನೆಯಾದ ಬಳಿಕ ಇದುವರೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಪರಮೇಶ್ವರ್ ದೆಹಲಿಗೆ ಹೋಗಿರಲೇ ಇಲ್ಲ, ಇದುವರೆಗೂ 'ನನಗೆ ದೆಹಲಿಗೆ ಹೋಗುವ ಅಗತ್ಯ ಇಲ್ಲ, ಸಮಯ ಬಂದಾಗ ಹೋಗ್ತೇನೆ” ಎಂದು ಹೇಳುತ್ತಿದ್ದ ಪರಮೇಶ್ವರ್, ಇದೀಗ ಹೈವೋಲ್ಟೇಜ್ ಮೀಟಿಂಗ್ ನಡುವೆಯೇ ಸಿಎಂ ಜೊತೆ ದೆಹಲಿ ತಲುಪಿರುವುದು ಕುತೂಹಲ ಹೆಚ್ಚಿಸಿದೆ.

ಸಿಎಂ ಸ್ಥಾನ ನಿಭಾಯಿಸಲು ನಾನು ಸಿದ್ಧ

ಇತ್ತೀಚೆಗೆ 'ಸಿಎಂ ಸ್ಥಾನ ನಿಭಾಯಿಸಲು ನಾನೂ ಸಿದ್ಧ' ಎಂದು ಹೇಳಿದ್ದ ಪರಮೇಶ್ವರ್, ಇದೀಗ ದೆಹಲಿ ರಾಜಕೀಯ ಅಂಗಳಕ್ಕೆ ಎಂಟ್ರಿ ಕೊಟ್ಟಿರುವುದು ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತೆ ಮಹತ್ವ ಪಡೆದುಕೊಂಡಿದೆ.

ದಲಿತ ಸಿಎಂ ಕಾರ್ಡ್ ಮುಂದಾಗುತ್ತದಾ?

ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾದರೆ ದಲಿತ ಸಿಎಂ ಅಸ್ತ್ರ ಬಳಸಬಹುದು ಎಂಬ ಚರ್ಚೆ ಕಾಂಗ್ರೆಸ್ ಒಳಗಲ್ಲಿ ಕೇಳಿಬರುತ್ತಿದೆ. ಈ ಹಿನ್ನೆಲೆ ಪರಮೇಶ್ವರ್ ಪರವಾಗಿ ಸಿದ್ದರಾಮಯ್ಯ ಮಾತಾಡಲಿದಾರಾ ಎಂಬ ಪ್ರಶ್ನೆಯೂ ಎದ್ದಿದೆ.

ಸಿಎಂ ಜೊತೆಯಲ್ಲೇ ಕರೆದುಕೊಂಡು ಹೋದದ್ದು ಏನು ಸಂದೇಶ ಕೊಡ್ತಿದೆ?

ಪರಮೇಶ್ವರ್ ಅವರನ್ನು ಸಿಎಂ ಸಿದ್ದರಾಮಯ್ಯ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿರುವುದು ಸಾಮಾನ್ಯವಲ್ಲ, ಈ ಭೇಟಿಯ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ, ಇದಕ್ಕೊಂದು ರಾಜಕೀಯ ಸಂದೇಶ ಇದೆ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಹರಿದಾಡುತ್ತಿದೆ.