- Home
- Entertainment
- TV Talk
- Karna Serial: ನಿತ್ಯಾ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ: ತೇಜಸ್ಗೆ ಮದ್ವೆ ಆಗೋಯ್ತು- ನಿತ್ಯಾ ಇನ್ನು ವಿಲನ್?
Karna Serial: ನಿತ್ಯಾ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ: ತೇಜಸ್ಗೆ ಮದ್ವೆ ಆಗೋಯ್ತು- ನಿತ್ಯಾ ಇನ್ನು ವಿಲನ್?
ಕರ್ಣ ಮತ್ತು ನಿಧಿ ಮದುವೆಯಾಗಿ ಒಂದಾಗಿದ್ದಾರೆ. ಆದರೆ, ಅತ್ತ ತೇಜಸ್ ಬೇರೊಬ್ಬಳನ್ನು ಮದುವೆಯಾಗಿ ನಿತ್ಯಾಳಿಗೆ ಕೈಕೊಟ್ಟಿದ್ದಾನೆ. ಇದರಿಂದ ಒಂಟಿಯಾದ ನಿತ್ಯಾ, ಕರ್ಣ-ನಿಧಿ ಬಾಳಲ್ಲಿ ವಿಲನ್ ಆಗಿ ಎಂಟ್ರಿ ಕೊಡುತ್ತಾಳಾ ಎಂಬ ಕುತೂಹಲ ಮೂಡಿದೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್
ಕರ್ಣ ಸೀರಿಯಲ್ (Karna Serial) ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಾಣುತ್ತಿದೆ. ನಿಧಿ ಮತ್ತು ಕರ್ಣನ ಮದುವೆ ಆಗಿದೆ. ಅವರು ಮೊದಲ ರಾತ್ರಿಯ ಸಂಭ್ರಮದಲ್ಲಿ ಇದ್ದಾರೆ. ಇವರಿಬ್ಬರ ಮದುವೆಯಾಗಿರುವುದು ಅಭಿಮಾನಿಗಳಲ್ಲಿ ಭಾರಿ ಖುಷಿ ತಂದಿದೆ.

ತೇಜಸ್ ಎಂಟ್ರಿ
ಅತ್ತ ತೇಜಸ್ ಎಂಟ್ರಿ ಕೊಟ್ಟಿದ್ದರಿಂದ ಇನ್ನೇನು ಸೀರಿಯಲ್ ಮುಗಿದೇ ಹೋಯ್ತಲ್ಲ. ತೇಜಸ್ ಮತ್ತು ನಿತ್ಯಾ ಮದುವೆಯಾಗಿಬಿಡುತ್ತಾರೆ. ಅಲ್ಲಿಗೆ ಎಲ್ಲವೂ ಸುಸೂತ್ರವಾಗಿದೆ ಎನ್ನಲಾಗಿತ್ತು.
ಕಾಲು ಹಿಡಿದು ಕ್ಷಮೆ
ಆದರೆ, ಆಗಿದ್ದೇ ಬೇರೆ. ತಾನು ಮಾಡಿದ ತಪ್ಪಿಗೆ ನಿತ್ಯಾಳ ಕಾಲು ಹಿಡಿದು ಕ್ಷಮೆ ಕೋರಿದ್ದಾನೆ ತೇಜಸ್. ಆದರೆ ಮದುವೆ ಮಾತ್ರ ಆಗಲು ಸಾಧ್ಯವಿಲ್ಲ ಎಂದಿದ್ದಾನೆ.
ತೇಜಸ್ ಇನ್ನೊಂದು ಮದುವೆ
ಇದಕ್ಕೆ ಕಾರಣ, ಇದಾಗಲೇ ನಿತ್ಯಾ ಮೇಲಿನ ಸಿಟ್ಟಿನಲ್ಲಿ ತೇಜಸ್ ಬೇರೆ ಮದುವೆಯಾಗಿದ್ದಾನೆ. ರಮೇಶ್ ಮಾಡಿದ ಕುತಂತ್ರದಿಂದ ನಿತ್ಯಾಳ ಮಗು ತನ್ನದಲ್ಲ ಎಂದು ಹೇಳಿದ್ದ ತೇಜಸ್, ನಿತ್ಯಾ ಕರ್ಣನನ್ನು ಮದುವೆಯಾದ ಕಾರಣದಿಂದ ಕೋಪದಿಂದ ಮತ್ತೊಂದು ಮದುವೆಯಾಗಿದ್ದಾನೆ.
ನಿಧಿನೆ ವಿಲನ್ ಆಗ್ತಾಳಾ?
ಈಗ ನಿತ್ಯಾ ಅಕ್ಷರಶಃ ತತ್ತರಿಸಿ ಹೋಗಿದ್ದಾಳೆ. ತೇಜಸ್ ಕೈಕೊಟ್ಟಾಯ್ತು. ಪ್ರೀತಿಸಿದ ಕರ್ಣನ ಮದುವೆಯಾಯಿತು. ಇನ್ನು ಅವಳು ಒಂಟಿ. ಈ ರೀತಿ ಪ್ರೀತಿ ಕಳೆದುಕೊಂಡ ಒಂಟಿ ಹೆಣ್ಣು ಭಾರಿ ಅಪಾಯ. ಈಕೆಯೇ ನಿಧಿ ಮತ್ತು ಕರ್ಣನ ಪಾಲಿಗೆ ವಿಲನ್ ಆಗುವಳಾ ಎನ್ನುವ ಸಂದೇಹ ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

