ಫಿಫಾ ವಿಶ್ವಕಪ್‌ಗಾಗಿ ಸ್ಪೇನ್ ತಂಡವನ್ನು ಪ್ರಕಟಿಸಲಾಗಿದ್ದು, 92 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಿಯಲ್ ಮ್ಯಾಡ್ರಿಡ್‌ನ ಯಾವುದೇ ಆಟಗಾರನಿಗೆ ಸ್ಥಾನ ನೀಡಿಲ್ಲ. ಕೋಚ್ ಲೂಯಿಸ್ ಫ್ಯುವೆಂಟೆ ಅವರ ಈ ನಿರ್ಧಾರವು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ತಂಡದಲ್ಲಿ ಬಾರ್ಸಿಲೋನಾದ 7 ಆಟಗಾರರು ಸ್ಥಾನ ಪಡೆದಿದ್ದಾರೆ.

ಬಾರ್ಸಿಲೋನಾ: ಫಿಫಾ ವಿಶ್ವಕಪ್‌ಗೆ ಸ್ಪೇನ್ ತಂಡವನ್ನು ಪ್ರಕಟಿಸಲಾಗಿದ್ದು, ರಿಯಲ್ ಮ್ಯಾಡ್ರಿಡ್‌ನ ಒಬ್ಬೇಒಬ್ಬ ಆಟಗಾರನಿಗೂ ಸ್ಥಾನ ನೀಡಿಲ್ಲ. ಕಳೆದ 92 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಿಯಲ್ ಮ್ಯಾಡ್ರಿಡ್ ಆಟಗಾರರಿಲ್ಲದೆ ಸ್ಪೇನ್ ವಿಶ್ವಕಪ್ ಆಡಲಿದೆ. ಸ್ಪೇನ್ ಕೋಚ್ ಲೂಯಿಸ್ ಫ್ಯುವೆಂಟೆ ಅವರ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾರ್ಸಿಲೋನಾ ಕ್ಲಬ್‌ನ 7 ಆಟಗಾರರಿಗೆ ಸ್ಥಾನ

ಕೋಚ್ ಲೂಯಿಸ್ ಫ್ಯುವೆಂಟೆ ಪ್ರಕಟಿಸಿರುವ 26 ಸದಸ್ಯರ ತಂಡದಲ್ಲಿ ಬಾರ್ಸಿಲೋನಾದ ಏಳು ಆಟಗಾರರಿಗೆ ಸ್ಥಾನ ಸಿಕ್ಕಿದೆ. ಆರ್ಸೆನಲ್, ಅಥ್ಲೆಟಿಕ್ ಕ್ಲಬ್ ಮತ್ತು ಅಥ್ಲೆಟಿಕೊ ಮ್ಯಾಡ್ರಿಡ್ ಕ್ಲಬ್‌ಗಳಿಂದ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಗಾಯದಿಂದ ಇನ್ನೂ ಪೂರ್ತಿ ಚೇತರಿಸಿಕೊಳ್ಳದ ಯುವ ಆಟಗಾರ ಲಮೀನ್ ಯಮಾಲ್‌ಗೂ ತಂಡದಲ್ಲಿ ಅವಕಾಶ ನೀಡಲಾಗಿದೆ.

ತಂಡದಲ್ಲಿ ಸ್ಥಾನ ಪಡೆದ ಪ್ರಮುಖ ಆಟಗಾರರು

2024ರ ಯೂರೋ ಕಪ್ ಗೆದ್ದ ತಂಡದ ನಾಯಕನಾಗಿದ್ದ ಅಲ್ವಾರೊ ಮೊರಾಟಾ ಅವರನ್ನು ಈ ಬಾರಿ ಪರಿಗಣಿಸಿಲ್ಲ. ಪೆಡ್ರಿ, ಗಾವಿ, ಪೌ ಕುಬಾರ್ಸಿ, ಎರಿಕ್ ಗಾರ್ಸಿಯಾ, ಫೆರಾನ್ ಟೊರೆಸ್, ರೋಡ್ರಿ, ಮಿಕೆಲ್ ಮೆರಿನೊ, ಮಾರ್ಟಿನ್ ಜುಬಿಮೆಂಡಿ, ನಿಕೊ ವಿಲಿಯಮ್ಸ್, ಡ್ಯಾನಿ ಓಲ್ಮೊ ಮುಂತಾದ ಪ್ರಮುಖರು ತಂಡದಲ್ಲಿದ್ದಾರೆ.

Scroll to load tweet…

'ಗ್ರೂಪ್ ಎಚ್'ನಲ್ಲಿರುವ ಸ್ಪೇನ್, ಕೇಪ್ ವರ್ಡೆ, ಸೌದಿ ಅರೇಬಿಯಾ ಮತ್ತು ಉರುಗ್ವೆ ತಂಡಗಳನ್ನು ಎದುರಿಸಲಿದೆ. ಜೂನ್ 14 ರಂದು ಕೇಪ್ ವರ್ಡೆ ವಿರುದ್ಧ ಸ್ಪೇನ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದಕ್ಕೂ ಮುನ್ನ ಇರಾಕ್ ಮತ್ತು ಪೆರು ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.