- Home
- Entertainment
- ಅಬ್ಬಬ್ಬಾ! ಶಿವಣ್ಣ ಕಣ್ಣುಗಳು ಎಷ್ಟು ಫವರ್‌ಫುಲ್ ಡೇಂಜರ್ ಗೊತ್ತಾ?: ಜಾನ್ವಿ ಕಪೂರ್ ಮಾತು ವೈರಲ್
ಅಬ್ಬಬ್ಬಾ! ಶಿವಣ್ಣ ಕಣ್ಣುಗಳು ಎಷ್ಟು ಫವರ್‌ಫುಲ್ ಡೇಂಜರ್ ಗೊತ್ತಾ?: ಜಾನ್ವಿ ಕಪೂರ್ ಮಾತು ವೈರಲ್
ರಾಮ್‌ಚರಣ್ ತೇಜ ನಟನೆಯ ‘ಪೆದ್ದಿ’ ಚಿತ್ರಕ್ಕೆ ನಾಯಕಿಯಾಗಿರುವ ಜಾನ್ವಿ ಚಿತ್ರತಂಡದ ಜೊತೆಗೆ ಬೆಂಗಳೂರಿಗೆ ಬಂದಿದ್ದರು. ನೂರಾರು ಮಂದಿ ಅಭಿಮಾನಿಗಳ ಸಮ್ಮುಖದಲ್ಲಿ ಜಾನ್ವಿ ಕಪೂರ್, ಶಿವಣ್ಣ ಬಗ್ಗೆ ಮಾತನಾಡಿದರು.

ಅವರ ಕಣ್ಣುಗಳು ಫವರ್‌ಫುಲ್
‘ಶಿವಣ್ಣ ಕಣ್ಣಲ್ಲೇ ಆ್ಯಕ್ಟ್ ಮಾಡುತ್ತಾರೆ. ಅವರ ಕಣ್ಣುಗಳು ಫವರ್‌ಫುಲ್, ಡೇಂಜರ್ ಅಂತ ಕೇಳಿದ್ದೆ. ಅದು ನಿಜ ಎಂದು ‘ಪೆದ್ದಿ’ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ಗೊತ್ತಾಯಿತು’.- ಹೀಗೆ ಹೇಳಿದ್ದು ಬಾಲಿವುಡ್ ನಟಿ ಜಾನ್ವಿ ಕಪೂರ್.

ಬೆಂಗಳೂರಿಗೆ ಬಂದಿದ್ದ ಜಾನ್ವಿ
ರಾಮ್‌ಚರಣ್ ತೇಜ ನಟನೆಯ ‘ಪೆದ್ದಿ’ ಚಿತ್ರಕ್ಕೆ ನಾಯಕಿಯಾಗಿರುವ ಜಾನ್ವಿ ಚಿತ್ರತಂಡದ ಜೊತೆಗೆ ಬೆಂಗಳೂರಿಗೆ ಬಂದಿದ್ದರು. ಶಿವಣ್ಣ, ರಾಮ್‌ಚರಣ್ ತೇಜ ಹಾಗೂ ನೂರಾರು ಮಂದಿ ಅಭಿಮಾನಿಗಳ ಸಮ್ಮುಖದಲ್ಲಿ ಜಾನ್ವಿ, ಶಿವಣ್ಣ ಬಗ್ಗೆ ಮಾತನಾಡಿದರು.
ಅವಕಾಶಗಳು ಸಿಗಲಿ
‘ಶಿವರಾಜ್ ಕುಮಾರ್ ‘ಪೆದ್ದಿ’ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಕಾಂಬಿನೇಶನ್‌ನಲ್ಲಿ ನನಗೆ ಒಂದು ದೃಶ್ಯ ಮಾತ್ರ ಇತ್ತಷ್ಟೆ. ಆ ಒಂದು ದೃಶ್ಯದಲ್ಲೇ ಅವರು ಎಂಥ ನಟರು, ಎಷ್ಟು ಗಾಢವಾಗಿ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ, ಅವರ ಕಣ್ಣುಗಳು ಎಷ್ಟು ಪವರ್‌ಫುಲ್ ಆಗಿರುತ್ತವೆ ಎಂಬುದನ್ನು ತಿಳಿದುಕೊಂಡೆ. ಮುಂದಿನ ದಿನಗಳಲ್ಲಿ ಶಿವಣ್ಣ ಜೊತೆಗೆ ಹೆಚ್ಚು ನಟಿಸುವ ಅವಕಾಶಗಳು ಸಿಗಲಿ’ ಎಂದರು.
ಅವಿನಾಭಾವ ಸಂಬಂಧ
ಶಿವಣ್ಣ, ‘ನಾನು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ರಾಮ್‌ಚರಣ್ ತೇಜಗಾಗಿ. ಚಿರಂಜೀವಿ ಅವರ ಕುಟುಂಬಕ್ಕೂ ನಮ್ಮ ಕುಟುಂಬ ಅವಿನಾಭಾವ ಸಂಬಂಧ ಇದೆ. ಪುನೀತ್ ನಂತರ ರಾಮ್‌ಚರಣ್ ನನ್ನ ಸೋದರನಂತೆ. ಈ ಚಿತ್ರಕ್ಕೆ ರಾಮ್ ಚರಣ್ ಹಾಕಿರುವ ಶ್ರಮ ನೋಡಿದರೆ ರಾಷ್ಟ್ರ ಪ್ರಶಸ್ತಿ ಬರಬೇಕು’ ಎಂದರು.
ಬೇರೆಯವರು ಸರಿಹೊಂದುತ್ತಿರಲಿಲ್ಲ
ರಾಮ್‌ಚರಣ್ ತೇಜ, ‘ಪೆದ್ದಿ ಸಿನಿಮಾದಲ್ಲಿ ಶಿವಣ್ಣ ನನ್ನ ಗುರು ಪಾತ್ರ ಮಾಡಿದ್ದಾರೆ. ಈ ಪಾತ್ರಕ್ಕೆಅವರ ಹೊರತಾಗಿ ಬೇರೆಯವರು ಸರಿಹೊಂದುತ್ತಿರಲಿಲ್ಲ’ ಎಂದರು. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರ ಜೂನ್ 4ಕ್ಕೆ ಬಿಡುಗಡೆ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

