Published : Jul 25, 2026, 06:58 AM ISTUpdated : Jul 25, 2026, 11:51 PM IST

India Latest News Live: ವಾರಣಾಸಿ ಸಿನಿಮಾ ಕಲೆಕ್ಷನ್ 1000 ಅಲ್ಲ, 10,000 ಕೋಟಿ - ರಾಜಮೌಳಿ ಪ್ಲ್ಯಾನ್ ಇದೇ ಅಂತೆ!

ಸಾರಾಂಶ

ಮುಂಬೈ: ಪ್ರತಿಭಟನೆಯಲ್ಲಿ ಭಾಗಿಯಾದರೆ ಬ್ಯಾಗ್‌ನಲ್ಲಿ ಡ್ರಗ್ಸ್‌ ಇಟ್ಟು ಜೀವನ ಹಾಳು ಮಾಡುವುದಾಗಿ ಪೊಲೀಸ್‌ ಒಬ್ಬರು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದ ಪ್ರಕರಣದ ಬೆನ್ನಲ್ಲೇ, ಮಫ್ತಿಯಲ್ಲಿದ್ದ ಪೊಲೀಸರೊಬ್ಬರು ನೀಟ್‌ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಅನುಚಿತವಾಗಿ ನಿಯಂತ್ರಿಸಲು ಯತ್ನಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಇದು, ಮುಂಬೈ ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಹಿಳೆಯರನ್ನೂ ನಿಯಂತ್ರಿಸಲು ಪೊಲೀಸರೊಬ್ಬರು ಯತ್ನಿಸಿದ ವಿಡಿಯೋವನ್ನು ಹಂಚಿಕೊಂಡ ವಿಪಕ್ಷ ನಾಯಕರು, ಆ ಪೊಲೀಸ್‌ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅತ್ತ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಮುಂಬೈ ಪೊಲೀಸರು, ‘ವಿಡಿಯೋವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಪುರುಷರನ್ನು ನಿಯಂತ್ರಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ನಡುವೆ ಬಂದಿದ್ದರಷ್ಟೇ’ ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.

11:51 PM (IST) Jul 25

ವಾರಣಾಸಿ ಸಿನಿಮಾ ಕಲೆಕ್ಷನ್ 1000 ಅಲ್ಲ, 10,000 ಕೋಟಿ - ರಾಜಮೌಳಿ ಪ್ಲ್ಯಾನ್ ಇದೇ ಅಂತೆ!

ವಾರಣಾಸಿ ಸಿನಿಮಾ ಬಗ್ಗೆ ಖ್ಯಾತ ನಿರ್ಮಾಪಕರೊಬ್ಬರು ಭವಿಷ್ಯ ನುಡಿದಿದ್ದಾರೆ. ಈ ಚಿತ್ರ ಬರೋಬ್ಬರಿ ಹತ್ತು ಸಾವಿರ ಕೋಟಿ ಕಲೆಕ್ಷನ್ ಮಾಡುತ್ತೆ, ಅಷ್ಟೇ ಅಲ್ಲ, ವಿಶ್ವದ ಟಾಪ್ 10 ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್‌ಗೆ ಸೇರುತ್ತೆ ಎಂದಿದ್ದಾರೆ.

Read Full Story

10:42 PM (IST) Jul 25

ಮೋದಿಯ ಔಟ್ ಆಫ್ ದಿ ಸಿಲೆಬಸ್ ಪ್ಲಾನ್, ಶಿಕ್ಷಣ ಸಚಿವಾಲಯ ಜವಾಬ್ದಾರಿ ಪ್ರಲ್ಹಾದ್ ಜೋಶಿಗೆ ನೀಡಿದ್ದೇಕೆ?

ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿಗೆ ನೀಡಿದ ಹಿಂದೆ ಕಾರಣವಿದೆಯಾ? ದಿಢೀರ್ ಪ್ರಧಾನಿ ನರೇಂದ್ರ ಮೋದಿ ಔಟ್ ಆಫ್ ಸಿಲೆಬಸ್ ಆಯ್ಕೆ ಮಾಡಿ ಕೊಟ್ಟ ಸಂದೇಶವೇನು? ಪ್ರಧಾನ್ ರಾಜೀನಾಮೆ, ಜೋಶಿ ಜವಾಬ್ದಾರಿ ಸುತ್ತ ಮುತ್ತ.

Read Full Story

10:38 PM (IST) Jul 25

ರೈಲಿನ ಚೈನ್ ಎಳೆದ ತಕ್ಷಣ ಚಾಲಕನಿಗೆ ಕೋಚ್ ಯಾವುದೆಂದು ತಿಳಿಯುವುದು ಹೇಗೆ? ಇಲ್ಲಿದೆ ಟ್ರೇನ್‌ ಸಿಗ್ನಲ್‌ ರಹಸ್ಯ

ರೈಲಿನ ಆಲಾರಾಂ ಚೈನ್ ಎಳೆದಾಗ, ಬ್ರೇಕ್ ಪೈಪ್‌ನಲ್ಲಿನ ಗಾಳಿಯ ಒತ್ತಡ ಕುಸಿದು ರೈಲು ನಿಲ್ಲುತ್ತದೆ. ಚೈನ್ ಎಳೆದ ನಿರ್ದಿಷ್ಟ ಕೋಚ್ ಅನ್ನು ಅದರ ಹೊರಗಿನ 'ಎಸಿಪಿ' ಇಂಡಿಕೇಟರ್ ಮೂಲಕ ರೈಲ್ವೆ ಸಿಬ್ಬಂದಿ ಗುರುತಿಸುತ್ತಾರೆ.

Read Full Story

10:10 PM (IST) Jul 25

ಮಾರುತಿ ಫ್ರಾಂಕ್ಸ್ ಫೇಸ್‌ಲಿಫ್ಟ್‌ನಿಂದ ಕ್ರೇಟಾಗೆ ಶುರುವಾಯ್ತು ನಡುಕ! - 35 ಕಿ.ಮೀ ಮೈಲೇಜ್, ADAS ಫೀಚರ್ಸ್‌ನೊಂದಿಗೆ ಭರ್ಜರಿ ಎಂಟ್ರಿ!

ಮಾರುತಿ ಸುಜುಕಿ ತನ್ನ ಜನಪ್ರಿಯ 'ಫ್ರಾಂಕ್ಸ್' ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು 2026ರಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಮಾದರಿಯು ಲೆವೆಲ್-2 ADAS ಸುರಕ್ಷತಾ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರಲಿದೆ.

Read Full Story

09:57 PM (IST) Jul 25

ದಳಪತಿ ವಿಜಯ್ ಜನ ನಾಯಗನ್ ಚಿತ್ರದಿಂದ ಆ ದೃಶ್ಯ ಕಟ್ - ಕಣ್ಣೀರಿಟ್ಟ ನಟಿ ಆನಂದಿ ಅಜಯ್ ಯಾರು?

ನಟಿ ಆನಂದಿ ಅಜಯ್ ಅವರು 'ಜನ ನಾಯಗನ್' ಚಿತ್ರದಿಂದ ತಮ್ಮ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ ನಂತರ ವೈರಲ್ ಆಗಿದ್ದಾರೆ. ಈ ಕಿರುತೆರೆ ತಾರೆ, ನೃತ್ಯಗಾರ್ತಿ ಮತ್ತು ಅವರ ವೃತ್ತಿಜೀವನದ ಬಗ್ಗೆ ಇಲ್ಲಿದೆ ಮಾಹಿತಿ. 

Read Full Story

09:44 PM (IST) Jul 25

ಮಕ್ಕಳ ಅಡ್ಮೀಷನ್‌ ಕ್ಯಾನ್ಸಲ್‌ ಮಾಡಿದ ತಾಯಿಗೆ ರೀಫಂಡ್‌ ನೀಡದ ಸ್ಕೂಲ್‌, ಭಾರೀ ದಂಡ ವಿಧಿಸಿದ ಕೋರ್ಟ್‌

ಯಾವುದೇ ಸೇವೆ ನೀಡದಿದ್ದಾಗ 'ಶುಲ್ಕ ವಾಪಸ್ ನೀಡುವ ನೀತಿ ಇಲ್ಲ' ಎಂದು ಹೇಳಿ ಹಣ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಗುರುಗ್ರಾಮದ ಗ್ರಾಹಕ ಆಯೋಗವು ಖಡಕ್ ತೀರ್ಪು ನೀಡಿದೆ. ಜಿಡಿ ಗೋಯೆಂಕಾ ಶಾಲೆಗೆ, ಪೋಷಕರಿಗೆ ₹90,000 ಶುಲ್ಕ ಹಾಗೂ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

Read Full Story

08:28 PM (IST) Jul 25

ಪ್ರಹ್ಲಾದ್ ಜೋಶಿಗೆ ಶಿಕ್ಷಣ ಸಚಿವ ಜವಾಬ್ದಾರಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಕೇಂದ್ರದ ಘೋಷಣೆ

ಪ್ರಹ್ಲಾದ್ ಜೋಶಿಗೆ ಶಿಕ್ಷಣ ಸಚಿವ ಜವಾಬ್ದಾರಿ ನೀಡಲಾಗಿದೆ. ಧರ್ಮೇಂದ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಜೋಶಿಗ ಹೆಚ್ಚುವರಿ ಹೊಣೆ ನೀಡಲಾಗಿದೆ.

Read Full Story

08:23 PM (IST) Jul 25

ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಗೇರಿದ ಟೀಮ್‌ ಇಂಡಿಯಾ ಪ್ಲೇಯರ್ಸ್‌

ಭಾರತೀಯ ಕ್ರಿಕೆಟಿಗರಾದ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ ಅವರನ್ನು ಬಿಹಾರ ಸರ್ಕಾರವು 'ಮೆಡಲ್ ಲಾವೋ, ನೌಕರಿ ಪಾವೋ' ಯೋಜನೆಯಡಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ಡಿಎಸ್‌ಪಿ) ನೇಮಿಸಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದಾರೆ.

Read Full Story

07:07 PM (IST) Jul 25

ಪೇಪರ್​ ಲೀಕ್​ ಹಗರಣದ ದೊಡ್ಡ ಪಟ್ಟಿಯೇ ಬಿಡುಗಡೆಯಾಯ್ತು - ರಾಜೀನಾಮೆ ಕೊಟ್ಟವರೆಷ್ಟು ಮಂದಿ

ನೀಟ್-ಯುಜಿ ಪೇಪರ್ ಲೀಕ್ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ, ಈ ಘಟನೆಯು ಕಾಂಗ್ರೆಸ್ ಮತ್ತು ಯುಪಿಎ ಆಡಳಿತಾವಧಿಯಲ್ಲಿ ನಡೆದಿದ್ದ ಹಲವಾರು ಪೇಪರ್ ಲೀಕ್ ಹಗರಣಗಳನ್ನು ಮುನ್ನೆಲೆಗೆ ತಂದಿದೆ, ಆ ಸಮಯದಲ್ಲಿ ಯಾವುದೇ ಸಚಿವರು ರಾಜೀನಾಮೆ ನೀಡಿರಲಿಲ್ಲ ಎಂಬ ಚರ್ಚೆ ಶುರುವಾಗಿದೆ.
Read Full Story

06:31 PM (IST) Jul 25

ಧರ್ಮೇಂದ್ರ ಪ್ರಧಾನ್​ ಉತ್ತರಾಧಿಕಾರಿ ಇವರೆ? ಮುಂದಿನ ಶಿಕ್ಷಣ ಸಚಿವರ ಸ್ಥಾನದ ಬಿಸಿಬಿಸಿ ಚರ್ಚೆ ಶುರು

ನೀಟ್-ಯುಜಿ ಪರೀಕ್ಷೆಯ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಜಯಂತ್ ಚೌಧರಿ, ಸುಕಾಂತ ಮಜುಂದಾರ್ ಸೇರಿದಂತೆ ಹಲವು ಹೆಸರುಗಳು ಚರ್ಚೆಯಲ್ಲಿದ್ದರೂ, ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
Read Full Story

06:26 PM (IST) Jul 25

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿದ ಗೌತಮ್ ಗಂಭೀರ್! ಕೋಚ್ ಹುದ್ದೆಯಿಂದ ಕೆಳಗಿಳಿಯುವಂತೆ ಜೋರಾಯ್ತು ಆಗ್ರಹ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ಟೀಂ ಇಂಡಿಯಾದ ಸರಣಿ ಸೋಲುಗಳಿಗೆ ನೈತಿಕ ಹೊಣೆ ಹೊತ್ತು ಹೆಡ್‌ ಕೋಚ್ ಗೌತಮ್ ಗಂಭೀರ್ ಕೂಡ ರಾಜೀನಾಮೆ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ಹೆಚ್ಚಾಗಿದೆ.
Read Full Story

06:17 PM (IST) Jul 25

CJP ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ತಡೆದು ನಿಂತ ನಟಿ ರಿಯಾ ಅಹಿರ್ - ಮಾಡೆಲ್‌ನ ಗ್ಲಾಮರಸ್ ಫೋಟೋಸ್ ವೈರಲ್!

ದೆಹಲಿಯ ಜಂತರ್ ಮಂತರ್‌ನಿಂದ ಆರಂಭವಾದ ವಿದ್ಯಾರ್ಥಿ ಹೋರಾಟ ಮುಂಬೈಗೆ ತಲುಪಿದ್ದು, ಇದರಲ್ಲಿ ನಟಿ ಮತ್ತು ಮಾಡೆಲ್ ರಿಯಾ ಅಹಿರ್ ಭಾಗವಹಿಸಿದ್ದರು. ಪೊಲೀಸರು ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳನ್ನು ಬಿಡಿಸಲು ಮಳೆಯಲ್ಲಿಯೇ ಪೊಲೀಸ್ ವ್ಯಾನ್‌ಗೆ ಅಡ್ಡ ನಿಂತು ದಿಟ್ಟತನ ಮೆರೆದಿದ್ದರು.

Read Full Story

06:16 PM (IST) Jul 25

ವಿದೇಶಿ ದುಬಾರಿ ಫೇಸ್​ವಾಷ್​ಗೆ ಸೆಡ್ಡು ಹೊಡೆದ ಭಾರತ - ಅತ್ಯಂತ ಕಡಿಮೆ ದರದಲ್ಲಿ ಕೇಂದ್ರದಿಂದಲೇ ಬಿಡುಗಡೆ

ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ' ಅಡಿಯಲ್ಲಿ ಆತ್ಮನಿರ್ಭರತೆ ಸಾಧಿಸಲು ಮುಂದಾಗಿದ್ದು, ಅತ್ಯಂತ ಕಡಿಮೆ ದರದಲ್ಲಿ ಸ್ಯಾಲಿಸಿಲಿಕ್ ಆಮ್ಲದ ಫೇಸ್ ವಾಷ್ ಅನ್ನು ಬಿಡುಗಡೆ ಮಾಡಿದೆ. ಮೊಡವೆ ಮತ್ತು ಎಣ್ಣೆಯುಕ್ತ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುವ ಈ ಉತ್ಪನ್ನವು, ದುಬಾರಿ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆ ಬೆಲೆಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ.
Read Full Story

05:56 PM (IST) Jul 25

850 ವರ್ಷಗಳ ಬಳಿಕ ಅಪರೂಪದ ಘಟನೆ, ಖಗೋಳ ಕೌತುಕ ನೋಡಲು 2 ವರ್ಷ ಮುನ್ನವೇ ಈ ನಗರದಲ್ಲಿ ಹೋಟೆಲ್‌ಗಳು ಸೋಲ್ಡ್ ಔಟ್!

2028ರ ಜುಲೈ 22 ರಂದು ನ್ಯೂಜಿಲೆಂಡ್‌ನಲ್ಲಿ ಶತಮಾನಗಳಲ್ಲೇ ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಈ ಐತಿಹಾಸಿಕ ಖಗೋಳ ವಿಸ್ಮಯವನ್ನು ವೀಕ್ಷಿಸಲು ಡ್ಯುನೆಡಿನ್ ನಗರಕ್ಕೆ ಪ್ರವಾಸಿಗರು ದೌಡಾಯಿಸುತ್ತಿದ್ದು, ಎರಡು ವರ್ಷಗಳ ಮುಂಚಿತವಾಗಿಯೇ ಹೋಟೆಲ್‌ಗಳು ಭರ್ತಿಯಾಗಿವೆ.
Read Full Story

05:44 PM (IST) Jul 25

Breaking - ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ, ಅಧಿಕೃತವಾಗಿ ಪ್ರತಿಭಟನೆ ಕೈಬಿಟ್ಟ CJP

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್‌ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಂದ ರಾಜೀನಾಮೆ ಪಡೆದುಕೊಂಡಿದೆ.

Read Full Story

05:24 PM (IST) Jul 25

ಬಾಲಿವುಡ್‌ ಖ್ಯಾತ ನಟಿ 75ರ ಶಬಾನಾ ಅಜ್ಮಿಗೆ H1N1 ದೃಢ, 102 ಡಿಗ್ರಿ ಜ್ವರ, ಅನಿರೀಕ್ಷಿತ ಸಂಕಷ್ಟ!

ಹಿರಿಯ ನಟಿ ಮತ್ತು ಹೋರಾಟಗಾರ್ತಿ ಶಬಾನಾ ಅಜ್ಮಿ ಅವರಿಗೆ H1N1 (ಹಂದಿ ಜ್ವರ) ಸೋಂಕು ತಗುಲಿದೆ. ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದಾಗ ತೀವ್ರ ಜ್ವರದಿಂದ ಬಳಲಿದ ಅವರು, ಸದ್ಯ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಅನಾರೋಗ್ಯದ ನಡುವೆಯೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
Read Full Story

05:12 PM (IST) Jul 25

'ಇದೇ ನನ್ನ ಯಶಸ್ಸಿನ ರಹಸ್ಯ'.. ಸ್ವಂತ ಸೀಕ್ರೆಟ್ ಬಿಚ್ಚಿಟ್ಟು ಶಾಕ್ ಮೂಡಿಸಿದ 'ನ್ಯಾಷನಲ್ ಕ್ರಶ್'..!

ಚಿತ್ರರಂಗಕ್ಕೆ ಕಾಲಿಟ್ಟಾಗ ಅಲ್ಲಿನ ಯಾವುದೇ ಸಂಪ್ರದಾಯ ಅಥವಾ ಹಳೆಯ ಪದ್ಧತಿಗಳಿಗೆ ನಾನು ಹೊಂದಿಕೊಳ್ಳಲು ಪ್ರಯತ್ನಿಸಲಿಲ್ಲ. ಅದು ನನಗೆ ಆರಂಭದಲ್ಲಿ ಸ್ವಲ್ಪ ಆತಂಕ ತಂದಿತ್ತು. ಏಕೆಂದರೆ ನನ್ನ ಸುತ್ತಮುತ್ತಲಿನವರೆಲ್ಲರೂ ಒಂದು ಪಕ್ಕಾ ಪ್ಲಾನ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು.

Read Full Story

04:53 PM (IST) Jul 25

"ಅವನನ್ನ ಏನೂ ಇಲ್ಲದವನನ್ನಾಗಿ ಮಾಡಿಬಿಟ್ರು!" - ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಮಾಜಿ ನಾಯಕ ಶ್ರೀಕಾಂತ್ ಗರಂ!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್, ಮೊಹಮ್ಮದ್ ಶಮಿಯನ್ನು ತಂಡದಿಂದ ಸಂಪೂರ್ಣವಾಗಿ ಹೊರಗಿಟ್ಟಿದ್ದಕ್ಕೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2027ರ ವಿಶ್ವಕಪ್‌ಗೆ ಜಸ್ಪ್ರೀತ್ ಬುಮ್ರಾ ಅತ್ಯಗತ್ಯ ಎಂದಿರುವ ಅವರು, ಅರ್ಶದೀಪ್ ಸಿಂಗ್ ಏಕದಿನ ಮಾದರಿಗೆ ಸರಿಹೊಂದುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Read Full Story

04:45 PM (IST) Jul 25

Kanhaiya Kumar ಕೇರಳ ಹೌಸ್ ರಹಸ್ಯ - ದೆಹಲಿ ಪೊಲೀಸರಿಂದ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಬಂಧನ

ದೆಹಲಿಯ ಕೇರಳ ಹೌಸ್‌ನಲ್ಲಿ ಕೊಠಡಿ ವಿಚಾರವಾಗಿ ನಡೆದ ವಾಗ್ವಾದದ ನಂತರ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯಪಾಲರ ಆಗಮನದ ನೆಪವೊಡ್ಡಿ ಕೊಠಡಿ ನಿರಾಕರಿಸಲಾಗಿದೆ ಎಂದು ಕನ್ಹಯ್ಯಾ ಆರೋಪಿಸಿದರೆ, ವಿದ್ಯಾರ್ಥಿ ಹೋರಾಟ ಹತ್ತಿಕ್ಕಲು ಈ ಬಂಧನ ನಡೆದಿದೆ ಎಂದು ಎನ್‌ಎಸ್‌ಯುಐ ದೂರಿದೆ.
Read Full Story

04:10 PM (IST) Jul 25

ಜಾಗತಿಕ ಮಟ್ಟದಲ್ಲಿ ChatGPT ಸ್ಥಗಿತ, ಪರದಾಡಿದ ಕೋಟ್ಯಂತರ ಬಳಕೆದಾರು, ಸಮಸ್ಯೆ ಒಪ್ಪಿಕೊಂಡ ಕಂಪೆನಿ!

ಜುಲೈ 25, 2026 ರಂದು ಚಾಟ್‌ಜಿಪಿಟಿ ಜಾಗತಿಕ ಮಟ್ಟದಲ್ಲಿ ದೊಡ್ಡ ತಾಂತ್ರಿಕ ಅಡಚಣೆಯನ್ನು ಎದುರಿಸಿತು, ಇದರಿಂದಾಗಿ ವಿಶ್ವದಾದ್ಯಂತ ಬಳಕೆದಾರರು ಲಾಗಿನ್ ಮಾಡಲು ಮತ್ತು ಸಂದೇಶ ಕಳುಹಿಸಲು ವಿಫಲರಾದರು. ಓಪನ್‌ಎಐ ಈ ಸಮಸ್ಯೆಯನ್ನು "ಹೆಚ್ಚಿದ ದೋಷದ ಪ್ರಮಾಣ" ಎಂದು ದೃಢಪಡಿಸಿ, ತಾಂತ್ರಿಕ ದೋಷವನ್ನು ಸರಿಪಡಿಸಲು ತನ್ನ ಇಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿತು.
Read Full Story

03:51 PM (IST) Jul 25

ತಿರುಮಲ ಲಡ್ಡು ತುಪ್ಪ ಕಲಬೆರಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ! ಆ ಡೈರಿ ಬಿಚ್ಚಿಡ್ತು ಸರ್ಕಾರಿ ಅಧಿಕಾರಿಗಳ ಬಂಡವಾಳ!

ತಿರುಮಲ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರವು ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಇಲಾಖೆಯ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿದೆ. ಲಂಚದ ವಿವರಗಳಿದ್ದ ಡೈರಿಯೊಂದು ತನಿಖೆಯಲ್ಲಿ ಬಯಲಾಗಿದೆ.

Read Full Story

03:45 PM (IST) Jul 25

ಡ್ರೆಸ್ಸಿಂಗ್ ರೂಮ್‌ನಲ್ಲಿ ಲಕ್ಷ್ಮಣ್ ಹೊಸ ಸಂಪ್ರದಾಯ.. ಈ ಸ್ಟಾರ್‍‌ಗೆ ಒಲಿದ ಮೊದಲ ಮೆಡಲ್!

ಟೀಮ್ ಇಂಡಿಯಾದ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಅವರು 'ಬೆಸ್ಟ್ ಆಟಿಟ್ಯೂಡ್ ಅವಾರ್ಡ್' ಎಂಬ ಹೊಸ ಪ್ರಶಸ್ತಿಯನ್ನು ಪರಿಚಯಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದ ನಂತರ, ಮೈದಾನದಲ್ಲಿ ಮತ್ತು ಹೊರಗೆ ತೋರಿದ ಬದ್ಧತೆ ಹಾಗೂ ಸಕಾರಾತ್ಮಕ ಮನೋಭಾವಕ್ಕಾಗಿ ಯುವ ಆಟಗಾರ ತಿಲಕ್ ವರ್ಮಾ ಈ ಪದಕವನ್ನು ಗೆದ್ದ ಮೊದಲ ಆಟಗಾರರಾಗಿದ್ದಾರೆ.
Read Full Story

03:31 PM (IST) Jul 25

ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಿಜೆಪಿ ಅಭಿಜಿತ್ ದೀಪ್ಕೆ ಮೊದಲ ಪ್ರತಿಕ್ರಿಯೆ, ಹೇಳಿದ್ದೇನು?

ವಿದ್ಯಾರ್ಥಿ ಹೋರಾಟಕ್ಕೆ ಮಣಿದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜಂತರ್ ಮಂತರ್‌ನಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ದೀಪ್ಕೆ ಹೇಳಿದ್ದೇನು?

Read Full Story

03:11 PM (IST) Jul 25

ರೋಹಿತ್ ಶರ್ಮಾ ಬಚಾವ್, ಆದ್ರೆ ಈ 5 ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು 2027ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಔಟ್! ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು

2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಆರಂಭವಾಗಿದ್ದು, ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ, ಇಂಗ್ಲೆಂಡ್ ಸರಣಿಯಲ್ಲಿನ ಕಳಪೆ ಪ್ರದರ್ಶನ, ಗಾಯದ ಸಮಸ್ಯೆ ಹಾಗೂ ಹೆಚ್ಚಿದ ಸ್ಪರ್ಧೆಯಿಂದಾಗಿ ಇಶಾನ್ ಕಿಶನ್, ಶಿವಂ ದುಬೆ ಸೇರಿದಂತೆ ಐವರು ಪ್ರಮುಖ ಆಟಗಾರರು ಮುಂಬರುವ ವಿಶ್ವಕಪ್ ತಂಡದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.
Read Full Story

02:48 PM (IST) Jul 25

ರಾಜೀನಾಮೆ ಜೊತೆ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಮೂರನೇ ಸುತ್ತಿನ ಮಾತುಕತೆಗೂ ಮೊದಲೇ ಧರ್ಮೇದ್ರ ಪ್ರಧಾನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ರಾಜೀನಾಮೆ ಪತ್ರದಲ್ಲಿ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.

Read Full Story

02:38 PM (IST) Jul 25

'ಗಡಿ ಆತಿಕ್ರಮಣ ಮಾಡಿದ್ದು ನೀವು, ಪ್ರಶ್ನಿಸುತ್ತಿರುವುದು ನಾವು' ಚೀನಾ ಉದ್ಧಟತನಕ್ಕೆ ಭಾರತದ ಖಡಕ್ ತಿರುಗೇಟು

ಚೀನಾದ ಏಕಪಕ್ಷೀಯ ವರದಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಚೀನಾವೇ ಭಾರತೀಯ ಭೂಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದೆ. ದ್ವಿಪಕ್ಷೀಯ ಸಂಬಂಧಗಳು ಸಹಜ ಸ್ಥಿತಿಗೆ ಮರಳಲು ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವುದು ಅನಿವಾರ್ಯ ಎಂದು ಭಾರತ ಪುನರುಚ್ಚರಿಸಿದೆ.
Read Full Story

02:27 PM (IST) Jul 25

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ಜಿರಳೆ ಪ್ರತಿಭಟನೆಗೆ ಕೊನೆಗೂ ಮಣಿದ ಕೇಂದ್ರ ಸರ್ಕಾರ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಜಿರಳೆ ಜನತಾ ಪಕ್ಷ (ಸಿಜೆಪಿ) ಬಿಗಿಪಟ್ಟು ಹಿಡಿದಿತ್ತು.

Read Full Story

01:49 PM (IST) Jul 25

ಮಾನವನ ಬೇಜವಾಬ್ದಾರಿಗೆ ಬಲಿಯಾದ ಮೂಕಪ್ರಾಣಿ - ನ್ಯೂ ಮೆಕ್ಸಿಕೋದಲ್ಲಿ ವಿದ್ಯುತ್ ಕಂಬ ಏರಿ ಪ್ರಾಣಬಿಟ್ಟ ಕಪ್ಪು ಕರಡಿ!

ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ವಿದ್ಯುತ್ ಕಂಬವೇರಿದ ಕಪ್ಪು ಕರಡಿಯೊಂದು ವಿದ್ಯುತ್ ಸ್ಪರ್ಶಿಸಿ ಧಾರುಣವಾಗಿ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸ್ಥಳದಲ್ಲಿ ಜಮಾಯಿಸಿದ ಜನರ ಗದ್ದಲದಿಂದಾಗಿ ಭಯಭೀತಗೊಂಡ ಕರಡಿ, ಕೆಳಗೆ ಇಳಿಯಲಾಗದೆ ಪ್ರಾಣ ಕಳೆದುಕೊಂಡಿದ್ದು, ಈ ಘಟನೆ ಮಾನವ-ವನ್ಯಜೀವಿ ಸಂಘರ್ಷದ ಕರಾಳ ಮುಖವನ್ನು ತೆರೆದಿಟ್ಟಿದೆ.
Read Full Story

01:03 PM (IST) Jul 25

ಜೋಸ್ ಬಟ್ಲರ್ ಫೇವರೇಟ್ ಕ್ರಿಕೆಟಿಗ ಧೋನಿಯು ಅಲ್ಲ, ಕೊಹ್ಲಿಯೂ ಅಲ್ಲ..! ಇಂಗ್ಲೆಂಡ್ ಆಟಗಾರನಿಗೆ ಕಾಸ್ಟ್ಲಿ ಗಿಫ್ಟ್ ಕೊಟ್ಟ ಟೀಂ ಇಂಡಿಯಾ ಲೆಜೆಂಡ್

ಇಂಗ್ಲೆಂಡ್ ಕ್ರಿಕೆಟಿಗ ಜೋಸ್ ಬಟ್ಲರ್, ಭಾರತದ ರೋಹಿತ್ ಶರ್ಮಾ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಹೊಗಳಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಅವರಿಂದ ಆಟೋಗ್ರಾಫ್ ಸಹಿತ ಜೆರ್ಸಿಯನ್ನು ಉಡುಗೊರೆಯಾಗಿ ಪಡೆದ ಬಟ್ಲರ್, ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಇಬ್ಬರೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಟ್ಟಿಗೆ ಆಡಿದ್ದರು.
Read Full Story

01:02 PM (IST) Jul 25

60 ವರ್ಷಗಳಿಂದ ಒಂದು ರೂ.ಗೆ ಊಟ ನೀಡ್ತಿರೋ 80ರ ವೃದ್ಧ - ಬಡತನದಲ್ಲಿಯೂ ಹೃದಯ ಶ್ರೀಮಂತಿಕೆ

ಪಶ್ಚಿಮ ಬಂಗಾಳದ 80 ವರ್ಷದ ಗೋಪಾಲ್ ಡೇ ಅವರು ಕಳೆದ 60 ವರ್ಷಗಳಿಂದ ಕೇವಲ ಒಂದು ರೂಪಾಯಿಗೆ ಊಟ ನೀಡುತ್ತಾ ಬಂದಿದ್ದಾರೆ. ಹಣದುಬ್ಬರದ ನಡುವೆಯೂ, ದಿನಗೂಲಿ ಕಾರ್ಮಿಕರು ಮತ್ತು ಬಡವರಿಗಾಗಿ ತಮ್ಮ ಈ ನಿಸ್ವಾರ್ಥ ಸೇವೆಯನ್ನು ಅವರು ಮುಂದುವರಿಸಿದ್ದಾರೆ. ಇವರ ಈ ಹೃದಯ ಶ್ರೀಮಂತಿಕೆಯ ಕಾಯಕವು ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.
Read Full Story

12:50 PM (IST) Jul 25

ಆ ಸ್ಟಾರ್ ಆಲ್‌ರೌಂಡರ್‍‌ನ‌ ತ್ಯಾಗದ ಜೊತೆಗೆ 10 ಕೋಟಿ ಆಫರ್! ಆದ್ರೂ ಚೆನ್ನೈ ಪ್ಲಾನ್‌ಗೆ ಶಾಕ್ ಕೊಟ್ಟ ಮುಂಬೈ

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಟ್ರೇಡ್‌ಗಾಗಿ ಮುಂಬೈ ತಂಡವು ಶಿವಂ ದುಬೆ ಮತ್ತು ಆಯುಷ್ ಮ್ಹತ್ರೆಯನ್ನು ಕೇಳಿದ್ದು, ಇದಕ್ಕೆ ಒಪ್ಪದ ಸಿಎಸ್‌ಕೆ, ದುಬೆ ಜೊತೆಗೆ ₹10 ಕೋಟಿ ನಗದು ನೀಡುವ ಆಫರ್ ಇಟ್ಟಿದೆ. ಈ ರೇಸ್‌ನಲ್ಲಿ ಕೆಕೆಆರ್ ಕೂಡ ಆಸಕ್ತಿ ತೋರಿದೆ.
Read Full Story

12:49 PM (IST) Jul 25

Jio - ಎದುರಾಳಿಗಳ ಬುಡವನ್ನೇ ಅಲ್ಲಾಡಿಸಿದ ಜಿಯೋ ಫ್ರೀಡಂ ಪ್ಲಾನ್; ಏರ್‌ಟೆಲ್ ತತ್ತರ!

ರಿಲಯನ್ಸ್ ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್' ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ 100Mbps ವೇಗದ ಅನ್‌ಲಿಮಿಟೆಡ್ ಇಂಟರ್‌ನೆಟ್, ಹಲವು OTT ಪ್ಲಾಟ್‌ಫಾರಂಗಳ ಚಂದಾದಾರಿಕೆ ಲಭ್ಯವಿದೆ.

Read Full Story

12:23 PM (IST) Jul 25

ಮಧ್ಯರಾತ್ರಿಯೂ ವಿಶ್ವ ದಾಖಲೆ ಬರೆದ ಮೋದಿ - ಜಾಗತಿಕ ಸೆಲೆಬ್ರಿಟಿಯನ್ನೇ ಮೀರಿಸಿದ ಪ್ರಧಾನಿ- ವಿದೇಶದಲ್ಲಿಯೂ ಹವಾ ಸೃಷ್ಟಿ

ಪ್ರಧಾನಿ ನರೇಂದ್ರ ಮೋದಿಯವರ ಇನ್‌ಸ್ಟಾಗ್ರಾಮ್ ರೀಲ್, ಪರೀಕ್ಷಾ ವಿವಾದಗಳ ಕುರಿತು ಮಾತನಾಡಿದ್ದು, 24 ಗಂಟೆಗಳಲ್ಲಿ 303 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ ಅಮೆರಿಕನ್ ಯೂಟ್ಯೂಬರ್ ಐಶೋ ಸ್ಪೀಡ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ವಿಡಿಯೋದ ಯಶಸ್ಸಿನ ಹಿಂದೆ ಪ್ರಧಾನಿಯವರ ತಡರಾತ್ರಿಯ ಸಮಯದ ಆಯ್ಕೆ ಮತ್ತು ಯುವಜನರ ನೆಚ್ಚಿನ ವೇದಿಕೆಯನ್ನು ಬಳಸಿಕೊಂಡ ತಂತ್ರ ಅಡಗಿದೆ.
Read Full Story

12:12 PM (IST) Jul 25

IND vs ZIM 2nd T20I - ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ, ಆದ್ರೆ ಭಾರತ-ಜಿಂಬಾಬ್ವೆ ಮ್ಯಾಚ್ ಫ್ರೀ ಆಗಿ ವೀಕ್ಷಿಸೋದು ಹೇಗೆ? ಇಲ್ಲಿದೆ ಡೀಟೈಲ್ಸ್

ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇಂದು ನಡೆಯಲಿರುವ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವತ್ತ ಭಾರತ ಚಿತ್ತ ನೆಟ್ಟಿದ್ದು, ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
Read Full Story

12:02 PM (IST) Jul 25

ಕ್ಯಾರಾವ್ಯಾನ್ ಒಳಗೆ ನುಗ್ಗಿದ ಅಭಿಮಾನಿ ನೀಚ ಕೃತ್ಯ; ಕಹಿ ಘಟನೆ ಬಿಚ್ಚಿಟ್ಟ 'ಮಂಡೋದರಿ' ಕಾಜಲ್ ಅಗರ್ವಾಲ್

ಶೂಟಿಂಗ್ ಸೆಟ್‌ಗಳಲ್ಲಿ ಮಹಿಳಾ ಕಲಾವಿದರ ಸುರಕ್ಷತೆಯ ಬಗ್ಗೆ ಕಾಜಲ್ ಧ್ವನಿ ಎತ್ತಿರುವುದು ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿತಾರೆಯರಿಗೂ ಸಾಮಾನ್ಯರಂತೆ ಗೌರವ ಮತ್ತು ಸುರಕ್ಷತೆ ಅತ್ಯಗತ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ಸ್ಟೋರಿ ನೋಡಿ ಶಾಕ್ ಆಗ್ಬೇಡಿ..!

Read Full Story

11:56 AM (IST) Jul 25

ಐಟಿ ಲೋಕದಲ್ಲಿ ಸಂಚಲನ - 142.57 ಶತಕೋಟಿ ರೂ. ವೆಚ್ಚದಲ್ಲಿ HCLTech ಬೃಹತ್ AI ಡೇಟಾ ಸೆಂಟರ್! ಎಲ್ಲಿ?

ಪ್ರಮುಖ ಐಟಿ ಸಂಸ್ಥೆ HCLTech, 'ಸರ್ವಮ್ AI' ಜೊತೆಗೂಡಿ ಒಡಿಶಾದಲ್ಲಿ ತನ್ನ ಮೊದಲ ಅತ್ಯಾಧುನಿಕ AI ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಗಾಗಿ ₹142.57 ಶತಕೋಟಿ ಹೂಡಿಕೆ ಮಾಡುತ್ತಿದ್ದು, ಇದು 2028ರ ವೇಳೆಗೆ 5,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಈ ಮೂಲಕ ಭಾರತವನ್ನು ಜಾಗತಿಕ AI ಭೂಪಟದಲ್ಲಿ ಮುಂಚೂಣಿಗೆ ತರಲು ಕಂಪನಿ ಸಜ್ಜಾಗಿದೆ.
Read Full Story

11:03 AM (IST) Jul 25

ಕಾರ್ಪೊರೇಟ್ ಜೀವನ, ಸುಖಭೋಗದ ಬದುಕು ತ್ಯಜಿಸಿ ಭಾರತದ ಸೇವೆಯಲ್ಲಿ ಮುಳುಗಿದ ಸ್ವಿಟ್ಜರ್ಲೆಂಡ್‌ನ ಯುವತಿ ಲಾವಿ ಕಥೆ!

ಸ್ವಿಟ್ಜರ್‌ಲ್ಯಾಂಡ್ ಮೂಲದ ಸಾಂಡ್ರಾ ಲಾವಿ ಗೊಜ್ಕೋವಿಕ್, ತಮ್ಮ ಯಶಸ್ವಿ ಕಾರ್ಪೊರೇಟ್ ಜೀವನವನ್ನು ತ್ಯಜಿಸಿ, ಭಾರತದ ಬಡ ಜನರ ಸೇವೆಗಾಗಿ ತಮ್ಮನ್ನು ಮುಡುಪಾಗಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ, ಅವರು ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುತ್ತಾ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ದುಡಿದ ಹಣವನ್ನು ಭಾರತದ ಸೇವಾ ಯೋಜನೆಗಳಿಗೆ ವಿನಿಯೋಗಿಸುತ್ತಿದ್ದಾರೆ.
Read Full Story

10:59 AM (IST) Jul 25

ಕೆನಡಾದಲ್ಲಿ ಮತ್ತೊಬ್ಬ ಭಾರತದ ವಿದ್ಯಾರ್ಥಿನಿಯ ಬರ್ಬರ ಕೊಲೆ.. ಓರ್ವ ಅರೆಸ್ಟ್, ಆಗಿದ್ದೇನು?

ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಪಂಜಾಬ್ ಮೂಲದ 23 ವರ್ಷದ ದಮನ್‌ಪ್ರೀತ್ ಕೌರ್ ಅವರನ್ನು ಅವರ ಲಿವ್-ಇನ್ ಪಾರ್ಟ್‌ನರ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಮಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ್ದ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಆರ್ಥಿಕ ನೆರವು ಸಂಗ್ರಹಿಸಲಾಗುತ್ತಿದೆ.
Read Full Story

10:30 AM (IST) Jul 25

ಭಾರತ vs ಜಿಂಬಾಬ್ವೆ 2ನೇ ಟಿ20 - ಸಮಯ ಬದಲಾವಣೆ! ನೇರ ಪ್ರಸಾರ, ಸಂಭಾವ್ಯ ತಂಡದ ವಿವರ ಇಲ್ಲಿದೆ

ನಾಯಕ ಶ್ರೇಯಸ್‌ ಅಯ್ಯರ್‌ ನೇತೃತ್ವದ ಭಾರತ ತಂಡವು ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಜಯದ ಲಯ ಮುಂದುವರಿಸುವ ಗುರಿ ಹೊಂದಿದೆ. ಮೊದಲ ಪಂದ್ಯದ ಹೀರೋಗಳಾದ ವೈಭವ್‌ ಸೂರ್ಯವಂಶಿ ಮತ್ತು ಮಯಾಂಕ್‌ ಅಗರ್‌ವಾಲ್‌ ಮೇಲೆ ನಿರೀಕ್ಷೆ ಹೆಚ್ಚಿದ್ದು, ಪಂದ್ಯದ ಸಮಯ ಹಾಗೂ ನೇರ ಪ್ರಸಾರದ ವಿವರಗಳನ್ನು ಇಲ್ಲಿ ನೀಡಲಾಗಿದೆ.
Read Full Story

10:30 AM (IST) Jul 25

Jyotika - ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲೇಬೇಕು! ವಿದ್ಯಾರ್ಥಿಗಳ ಹೋರಾಟಕ್ಕೆ ನಟಿ ಜ್ಯೋತಿಕಾ ಬೆಂಬಲ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಟಿ ಜ್ಯೋತಿಕಾ ಬೆಂಬಲ ಸೂಚಿಸಿದ್ದಾರೆ. ಸಚಿವರನ್ನು ಬದಲಿಸಲ್ಲ ಎಂದು ಸರ್ಕಾರ ಪಟ್ಟು ಹಿಡಿದಿದೆ. ಆದರೆ, ರಾಜೀನಾಮೆ ಪಡೆಯದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಎಚ್ಚರಿಕೆ

Read Full Story

More Trending News