2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಆರಂಭವಾಗಿದ್ದು, ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ, ಇಂಗ್ಲೆಂಡ್ ಸರಣಿಯಲ್ಲಿನ ಕಳಪೆ ಪ್ರದರ್ಶನ, ಗಾಯದ ಸಮಸ್ಯೆ ಹಾಗೂ ಹೆಚ್ಚಿದ ಸ್ಪರ್ಧೆಯಿಂದಾಗಿ ಇಶಾನ್ ಕಿಶನ್, ಶಿವಂ ದುಬೆ ಸೇರಿದಂತೆ ಐವರು ಪ್ರಮುಖ ಆಟಗಾರರು ಮುಂಬರುವ ವಿಶ್ವಕಪ್ ತಂಡದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.
ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಿನಿಂದಲೇ ಸಿದ್ದತೆ ಆರಂಭವಾಗಿದೆ. ಇಂಗ್ಲೆಂಡ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಅದರೆ ಈ ಐವರು ಆಟಗಾರರು ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.
ಇಂಗ್ಲೆಂಡ್ ಎದುರು ಭಾರತ ತಂಡಕ್ಕೆ ಏಕದಿನ ಸರಣಿಯಲ್ಲಿ 2-1 ಅಂತರದ ಸೋಲಾಗಿದೆ. ಇನ್ನು ಲಾರ್ಡ್ಸ್ ಪಂದ್ಯ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎನ್ನಲಾಗಿತ್ತು. ಆದರೆ ರೋಹಿತ್ ಶರ್ಮಾ ಲಾರ್ಡ್ಸ್ ಮೈದಾನದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ತಾವು ಮುಂಬರುವ ಏಕದಿನ ವಿಶ್ವಕಪ್ ಆಡಲು ರೆಡಿಯಿದ್ದೇನೆ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದರು. ಇನ್ನು ರೋಹಿತ್ ಶರ್ಮಾ ಹೊರತಾಗಿಯೂ ಈ ಐವರು ಆಟಗಾರರು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ನೋಡೋಣ ಬನ್ನಿ.
1. ಇಶಾನ್ ಕಿಶನ್:

ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್‌ಗೆ ಎರಡು ಪಂದ್ಯಗಳನ್ನಾಡುವ ಅವಕಾಶ ಸಿಕ್ಕಿತ್ತು. ಆದರೆ ಈ ಎರಡು ಪಂದ್ಯಗಳಿಂದ ಇಶಾನ್ ಕಿಶನ್ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಕಿಶನ್ ತಲೆಯ ಮೇಲೆ ತೂಗುಗತ್ತಿ ನೇತಾಡಲಾರಂಭಿಸಿದೆ. ಇಶಾನ್ ಕಿಶನ್ ಸ್ಥಾನ ತುಂಬಲು ರಿಷಭ್ ಪಂತ್ ಹಾಗೂ ಧ್ರುವ್ ಜುರೆಲ್ ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಮುಂಬರುವ ದಿನಗಳಲ್ಲಿ ಭಾರತ ಏಕದಿನ ತಂಡದಿಂದ ಹೊರಬಿದ್ದರೇ ಅಚ್ಚರಿಯೇನಿಲ್ಲ.
2. ಗುರ್ನೂರ್ ಬ್ರಾರ್:

ಯುವ ವೇಗಿ ಗುರ್ನೂರ್ ಬ್ರಾರ್‌ಗೆ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಬ್ರಾರ್ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದರು. ಇಂಗ್ಲೆಂಡ್ ಎದುರಿನ ಮೊದಲೆರಡು ಪಂದ್ಯಗಳಲ್ಲಿ ಗುರ್ನೂರ್ ಬ್ರಾರ್, 6ಕ್ಕಿಂತ ಹೆಚ್ಚಿನ ಎಕನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದರು. ಅದರಲ್ಲೂ ಕೊನೆಯ ಏಕದಿನ ಪಂದ್ಯದಲ್ಲಿ ಬ್ರಾರ್ 97 ರನ್ ಚಚ್ಚಿಸಿಕೊಂಡಿದ್ದರು. ಹೀಗಾಗಿ ಬ್ರಾರ್ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯೋದು ಅನುಮಾನ.
3. ಶಿವಂ ದುಬೆ:

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಪಾಂಡ್ಯ ಬ್ಯಾಕ್‌ಅಪ್ ಆಟಗಾರನಾಗಿ ನಿತೀಶ್ ಕುಮಾರ್ ರೆಡ್ಡಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ರೆಡ್ಡಿ ಗಾಯಗೊಂಡಿದ್ದರಿಂದ ಶಿವಂ ದುಬೆಗೆ ಅವಕಾಶ ನೀಡಲಾಗಿತ್ತು. ದುಬೆಗೆ ಟಿ20 ಬಳಿಕ ಏಕದಿನ ಮಾದರಿಯಲ್ಲೂ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಒಳ್ಳೆಯ ಅವಕಾಶವಿತ್ತು. ಆದರೆ ಆ ಚಾನ್ಸ್ ಹಾಳು ಮಾಡಿಕೊಂಡಿದ್ದಾರೆ.
4. ವಾಷಿಂಗ್ಟನ್ ಸುಂದರ್:

ತಮಿಳುನಾಡು ಮೂಲದ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಭಾರತದ ಭವಿಷ್ಯದ ಸ್ಪಿನ್ ಆಲ್ರೌಂಡರ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಸುಂದರ್ ಪದೇ ಪದೇ ಗಾಯಗೊಳ್ಳುತ್ತಲೇ ಬಂದಿದ್ದಾರೆ. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಪದೇ ಪದೇ ತನ್ನ ಕಾಂಬಿನೇಷನ್ ಬದಲಿಸುವ ಒತ್ತಡಕ್ಕೆ ಸಿಲುಕುತ್ತಿದೆ. ಇದೇ ಕಾರಣಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ವಾಷಿಂಗ್ಟನ್ ಸುಂದರ್ ಅವರನ್ನು ಏಕದಿನ ವಿಶ್ವಕಪ್ ತಂಡದಿಂದ ಹೊರಬಿಡಲು ಚಿಂತನೆ ನಡೆಸುತ್ತಿದೆ.
5. ಹರ್ಷ್ ದುಬೆ:

ಹರ್ಷ್ ದುಬೆ ಅವರನ್ನು ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್‌ಗೆ ಬ್ಯಾಕ್‌ಅಪ್ ರೂಪದಲ್ಲಿ ಕರೆತರಲಾಗಿತ್ತು. ಆದರೆ ಹರ್ಷ್ ದುಬೆಗೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹರ್ಷ್ ದುಬೆ ಭಾರತದ ಆಯ್ಕೆ ಸಮಿತಿಯ ನಿಗದಲ್ಲಿ ಇದ್ದಾರೆ. ಆದರೆ ಸದ್ಯ ತಂಡದಲ್ಲಿ ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಅವರಂತಹ ಆಟಗಾರರು ಇರುವುದರಿಂದ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರ್ಷ್ ದುಬೆಗೆ ಸ್ಥಾನ ಸಿಗೋದು ಕಷ್ಟಸಾಧ್ಯ.


